Latest Updates
-
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು
ಪುರುಷರ ಸೆಕ್ಸ್ ಲೈಫ್ ಹೆಚ್ಚಿಸುವ ನೈಸರ್ಗಿಕ ಆಹಾರಗಳು
ಲೈಂಗಿಕ ಸಾಮರ್ಥ್ಯವು ನೇರವಾಗಿ ನಾವು ಸೇವಿಸುವ ಆಹಾರ ಪದಾರ್ಥದ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದಲೇ ಆಹಾರವನ್ನು ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದು ಮೂರು ವಿಭಾಗಗಳಲ್ಲಿ ವಿಂಗಡಿಸಿರುತ್ತಾರೆ. ನಾವು ತಿನ್ನುವ ಆಹಾರವು ನಮ್ಮ ವರ್ತನೆಯನ್ನು ನಿರ್ಧರಿಸುತ್ತದೆ ಎಂದು ಆಯುರ್ವೇದದಲ್ಲಿಯೇ ಉಲ್ಲೇಖಗೊಂಡಿದ್ದು, ಆಧುನಿಕ ವೈದ್ಯ ಪದ್ಧತಿಯು ಸಹ ಇದನ್ನು ಅನುಮೋದಿಸುತ್ತದೆ.
ಆಧುನಿಕ ಜೀವನ ಶೈಲಿಯು ಪುರುಷರ ಲೈಂಗಿಕತೆಯ ಮೇಲೆ ನಕಾರಾತ್ಮಕವಾಗಿ ಪರಿಣಾಮವನ್ನು ಬೀರುತ್ತಿರುವುದನ್ನು ಪ್ರತಿಯೊಬ್ಬರೂ ಗಮನಿಸಬಹುದು. ನಿಮಿರುವಿಕೆಯ ದೋಷ ಹಾಗು ಶೀಘ್ರ ವೀರ್ಯ ಸ್ಖಲನವು ಪುರುಷರ ಲೈಂಗಿಕ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಇದಕ್ಕಾಗಿ ಪುರುಷರು ತಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ವಯಾಗ್ರ ಹಾಗು ಅದೇ ರೀತಿಯ ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ.
ಆದರೂ ಈ ಔಷಧಿಗಳು ತತ್‌ಕ್ಷಣಕ್ಕೆ ನೆರವಾದರೂ ಸಹ ಮುಂದಿನ ಜೀವನದಲ್ಲಿ ಹಲವಾರು ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತವೆ. ದೀರ್ಘಕಾಲದ ನಿಮಿರುವಿಕೆ ಸಮಸ್ಯೆಗಳು ಮತ್ತು ಇತರೆ ಅಡ್ಡಪರಿಣಾಮಗಳು ಈ ಔಷಧಿಗಳು ಉಂಟು ಮಾಡುತ್ತವೆ. ಆದರೆ ಈಗ ಈ ಔಷಧಿಗಳನ್ನು ನೀವು ಅವಲಂಬಿಸಿ ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿಲ್ಲ. ಈ ಔಷಧಿಗಳು ಮಾಡುವ ಕೆಲಸವನ್ನು ಕೆಲವೊಂದು ಸ್ವಾಭಾವಿಕ ಆಹಾರ ಪದಾರ್ಥಗಳು ಮಾಡುತ್ತವೆ. ಈ ಆಹಾರ ಪದಾರ್ಥಗಳು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತವೆ, ವೀರ್ಯದ ಗುಣಮಟ್ಟಗಳನ್ನು ಹೆಚ್ಚಿಸುತ್ತವೆ, ನಿಮಿರುವಿಕೆಯ ದೋಷಗಳನ್ನು ಸರಿಪಡಿಸುತ್ತವೆ ಮತ್ತು ಲೈಂಗಿಕ ಸಾಮರ್ಥ್ಯವನ್ನು ಸಹ ಹೆಚ್ಚಿಸುತ್ತವೆ. ಈ ಆಹಾರ ಪದಾರ್ಥಗಳು ವಯಾಗ್ರಕ್ಕೆ ಬದಲಿಯಾಗಿ ಪುರುಷರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ.. ಬನ್ನಿ ಇನ್ನು ತಡಮಾಡದೆ ಆ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.....

ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ಬಿಸಿ ಹಾಲು ಕುಡಿಯಿರಿ
ಹಾಲು ತಾಜಾ ಹಾಗೂ ಕೊಬ್ಬು ಸಹಿತ ಆಹಾರಗಳಾಡ ಹಾಲು, ಕ್ರೀಂ, ಬೆಣ್ಣೆ ಮೊದಲಾದವು ಲೈಂಗಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸುತ್ತವೆ. ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿನ ಸೇವನೆ ಈ ನಿಟ್ಟಿನಲ್ಲಿ ಅದ್ಭುತಗಳನ್ನೇ ಸಾಧಿಸುತ್ತದೆ.

ಮೊಟ್ಟೆಗಳು
ಮೊಟ್ಟೆಗಳು ಸಹಾ ಪುರುಷರ ಲೈಂಗಿಕ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಮೊಟ್ಟೆಗಳಲ್ಲಿ ವಿಟಮಿನ್ B5 ಹಾಗೂ B6 ಹೆಚ್ಚಿನ ಪ್ರಮಾಣದಲ್ಲಿವೆ. ಅಲ್ಲದೇ ಮೊಟ್ಟೆಯಲ್ಲಿರುವ ಪ್ರೋಟೀನುಗಳು, ವಿಟಮಿನ್ನುಗಳು ಒಟ್ಟಾರೆ ಆರೋಗ್ಯದ ಜೊತೆಗೇ ಲೈಂಗಿಕ ಆರೋಗ್ಯವನ್ನೂ ಉತ್ತಮವಾಗಿರಿಸಲು ನೆರವಾಗುತ್ತವೆ.

ಚಾಕಲೇಟು
ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಲ್ಲಿ ನೆಚ್ಚಿನ ಚಾಕಲೇಟು ಸಹಾ ಒಂದು ಇದರಲ್ಲಿರುವ ಥಿಯೋಬ್ರೋಮೈನ್ ಎಂಬ ಪೋಷಕಾಂಶ ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತದೆ.

ಮೀನು
ಸಾಮಾನ್ಯವಾಗಿ ಎಲ್ಲಾ ಮೀನುಗಳಲ್ಲಿಯೂ ಒಮೆಗಾ ೩ ಕೊಬ್ಬಿನ ಆಮ್ಲಗಳಿರುತ್ತವೆ. ಮೀನಿನ ಸೇವನೆ ಹಾಗೂ ಮೀನೆಣ್ಣೆಯ ಗುಳಿಗೆಗಳನ್ನು ಹೆಚ್ಚುವರಿಯಾಗಿ ಸೇವಿಸುವ ಮೂಲಕ ಲೈಂಗಿಕ ಆರೋಗ್ಯ ಉತ್ತಮವಾಗುತ್ತದೆ.

ಕುರಿಮಾಂಸ
ಈ ಮಾಂಸದಲ್ಲಿಯೂ ಸತು ಉತ್ತಮ ಪ್ರಮಾಣದಲ್ಲಿದೆ. ಈ ಮಾಂಸದಿಂದ ತಯಾರಿಸುವ ಯಾವುದೇ ಖಾದ್ಯವನ್ನು ಆಗಾಗ ಸೇವಿಸುವ ಮೂಲಕ ಲೈಂಗಿಕ ಶಕ್ತಿ ಉತ್ತಮವಾಗಿರುತ್ತದೆ.

ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣಿನಲ್ಲಿ ಸಮೃದ್ಧವಾಗಿರುವ ಎಲ್-ಸಿಟ್ರಲ್ಲೈನ್ ಎಂಬ ಅಮೈನೊ ಆಮ್ಲವು ನಿಮಿರುವಿಕೆಯನ್ನು ಗಟ್ಟಿಗೊಳಿಸುತ್ತದೆಯಂತೆ. ಈ ಅಮೈಒ ಆಮ್ಲವು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಹಾಗು ದೇಹದಲ್ಲಿ ನೈಟ್ರಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ಕಲ್ಲಂಗಡಿಯು ನಿಮ್ಮ ಶಿಶ್ನದ ಆರೋಗ್ಯವನ್ನು ಹೆಚ್ಚಿಸಲು ಇರುವ ಅತ್ಯುತ್ತಮ ಆಹಾರ ಪದಾರ್ಥವಾಗಿರುತ್ತದೆ.

ಶುಂಠಿ
ಈ ಮಸಾಲೆ ಪದಾರ್ಥವು ನಿಮ್ಮ ಲೈಂಗಿಕ ಜೀವನವನ್ನು ಗಣನೀಯವಾಗಿ ಸುಧಾರಿಸುತ್ತದೆ. ಅದರಲ್ಲಿಯೂ ಇದು ನಿಮಿರುವಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಶುಂಠಿಯು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ, ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ನಿಮಿರುವಿಕೆಯ ದೋಷವನ್ನು ಸರಿಪಡಿಸುತ್ತದೆ. ಒಂದು ಟೀಸ್ಪೂನ್ ಶುಂಠಿಯನ್ನು ಪ್ರತಿದಿನ ಕೆಲವು ವಾರಗಳವರೆಗೆ ಸೇವಿಸಿ. ಇದರಿಂದ ಟೆಸ್ಟೋಸ್ಟಿರೋನ್ ಮಟ್ಟಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.

ದಾಳಿಂಬೆ
ದಾಳಿಂಬೆಯು ತನ್ನಲ್ಲಿರುವ ಆಂಟಿಆಕ್ಸಿಡೆಂಟ್ ಕಾರಣವಾಗಿ ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ದಾಳಿಂಬೆಯನ್ನು ಸೇವಿಸುವುದರಿಂದ ನಿಮಿರುವಿಕೆಯ ದೋಷವನ್ನು ಸರಿಪಡಿಸಿಕೊಳ್ಳಬಹುದು ಮತ್ತು ನಿಮ್ಮ ಶಿಶ್ನವನ್ನು ಗಟ್ಟಿಗೊಳಿಸಬಹುದು. ದಾಳಿಂಬೆಯು ರಕ್ತವನ್ನು ಶುದ್ಧಿಗೊಳಿಸುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದೆ. ಜೊತೆಗೆ ಇದು ಅನಿಮಿಯಾಗೂ ಸಹ ಒಳ್ಳೆಯದು.

ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಪೊಟಾಶಿಯಂ ಪ್ರಮಾಣ ಸಮೃದ್ಧವಾಗಿರುತ್ತದೆ. ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿವಾರಿಸುತದೆ. ಎರಡು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ಶಿಶ್ನದ ಆರೋಗ್ಯ ಸುಧಾರಿಸುತ್ತದೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಮತ್ತಷ್ಟು ಆನಂದ ದೊರೆಯುತ್ತದೆ.

ಕಾಫಿ
ಒಂದು ಅಧ್ಯಯನದ ಪ್ರಕಾರ ಯಾರು ಒಂದು ದಿನಕ್ಕೆ ಎರಡು ಅಥವಾ ಮೂರು ಕಪ್ ಸೇವಿಸುತ್ತಾರೋ ಅವರಿಗೆ ನಿಮಿರುವಿಕೆಯ ದೋಷ ಬರುವ ಸಾಧ್ಯತೆಯು ಕಾಫಿ ಸೇವಿಸದೆ ಇರುವ ಪುರುಷರಿಗೆ ಹೋಲಿಸಿದರೆ ಕಡಿಮೆ ಇರುತ್ತದೆಯಂತೆ. ಕಾಫಿಯಲ್ಲಿರುವ ಉದ್ದೀಪನಕಾರಕಗಳು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತವೆಯಂತೆ ಹಾಗು ಆ ಮೂಲಕ ಶಿಶ್ನವನ್ನು ಸದೃಢವಾಗಿ ಇರಿಸುತ್ತವೆಯಂತೆ.

ಬಿಸಿ ಮಸಾಲೆ ಪದಾರ್ಥಗಳು
ಒಂದು ಅಧ್ಯಯನದ ಪ್ರಕಾರ ಬಿಸಿ ಸಾಸ್ ಮತ್ತು ಮಸಾಲೆ ಪದಾರ್ಥಗಳನ್ನು ಸೇವಿಸುವ ಪುರುಷರಲ್ಲಿ ಪುರುಷರ ಹಾರ್ಮೋನ್ ಆದ ಟೆಸ್ಟೋಸ್ಟಿರೋನ್ ಅಧಿಕವಾಗಿರುವುದು ಕಂಡು ಬರುತ್ತದೆಯಂತೆ. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ಅಂಶವು ಶಿಶ್ನದ ಗಾತ್ರವನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆಯ ಸುತ್ತ ಇರುವ ಕೊಬ್ಬನ್ನು ಸಹ ಕರಗಿಸುತ್ತದೆಯಂತೆ.

ಪಾಲಕ್ ಸೊಪ್ಪು
ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಪಾಲಕ್‌ನಲ್ಲಿ ಮೆಗ್ನಿಷಿಯಂ ಪ್ರಮಾಣ ಅಧಿಕವಾಗಿರುತ್ತದೆ ಮತ್ತು ಇದು ರಕ್ತ ನಾಳಗಳ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಪಾಲಕ್ ಅನ್ನು ಪ್ರತಿದಿನ ಸೇವಿಸುವ ಮೂಲಕ ವಯಾಗ್ರ ನೀಡುವಂತಹ ಶಕ್ತಿಯನ್ನು ನಾವು ಸ್ವಾಭಾವಿಕವಾಗಿ ಪಡೆಯಬಹುದು. ಇದರಲ್ಲಿ ಉದ್ದೀಪನಗೊಳಿಸುವ ಅಂಶ ಹಾಗು ಲೈಂಗಿಕ ಕ್ರಿಯೆ ನಡೆಸುವಾಗ ಅಧಿಕ ಆನಂದವನ್ನು ಸಹ ನೀಡಲು ಸಹಾಯ ಮಾಡುತ್ತದೆ.

ಟೊಮೇಟೊ ಹಣ್ಣುಗಳು
ಟೊಮೇಟೊಗಳನ್ನು ಸೇವಿಸುವ ಪುರುಷರಲ್ಲಿ ವೀರ್ಯದ ಗುಣಮಟ್ಟವು ಉತ್ತಮವಾಗಿರುತ್ತದೆ ಹಾಗು ಇವರಲ್ಲಿ ಪ್ರೋಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ತಿಳಿದು ಬಂದಿದೆ. ಇದಕ್ಕೆ ಟೊಮಾಟೊದಲ್ಲಿರುವ "ಲೈಕೊಪೀನ್" ಎಂಬ ಆಂಟಿಆಕ್ಸಿಡೆಂಟ್ ಕಾರಣ. ಇದು ಪುರುಷರ ಜನನಾಂಗದ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಸಹ ನಿವಾರಿಸುತ್ತದೆ.

ಕೆಂಪು ವೈನ್
ಮದ್ಯದ ವ್ಯಸನಿಗಳಿಗೆ ಇದೊಂದು ಉತ್ತಮ ಪರ್ಯಾಯವಾಗಿದೆ. ದಿನಕ್ಕೆ ಒಂದು ಅಥವಾ ಎರಡು ಲೋಟ ಕೆಂಪು ವೈನ್ ಕುಡಿಯುವ ಮೂಲಕ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ.

ಬೆಣ್ಣೆ ಹಣ್ಣು
ಬೆಣ್ಣೆಹಣ್ಣಿನಲ್ಲಿರುವ ಪೋಷಕಾಂಶಗಳು ಈ ಹಣ್ಣನ್ನು ಅತ್ಯುತ್ತಮ ಹಣ್ಣುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಿಸಿವೆ. ಇದರಲ್ಲಿ ಆರೋಗ್ಯಕರ ಕೊಬ್ಬು ಹಾಗೂ ವಿಟಮಿನ್ B6 ಸಹಿತ ಹಲವಾರು ಪೋಷಕಾಂಶಗಳಿದ್ದು ದೇಹದ ಚೈತನ್ಯವನ್ನು ಹೆಚ್ಚಿಸುತ್ತವೆ. ವಿಶೇಷವಾಗಿ ಪುರುಷರಲ್ಲಿ ಬೆಣ್ಣೆಹಣ್ಣಿನ ಪೋಷಕಾಂಶಗಳು ವೀರ್ಯಾಣುಗಳ ಸಂಖ್ಯೆಯಲ್ಲಿ ವೃದ್ಧಿ ಹಾಗೂ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ.

ಬೆಣ್ಣೆ ಹಣ್ಣು
ಪುರುಷರಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿ ಏಲಕ್ಕಿಯೂ ಪ್ರಮುಖ ಸ್ಥಾನವನ್ನು ಪಡೆದಿದೆ. ಇದರಲ್ಲಿ ಸಿನೆಯೋಲ್ ಎಂಬ ಪೋಷಕಾಂಶವಿದ್ದು ಇದು ವಿಶೇಷವಾಗಿ ಪುರುಷರ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಉತ್ತಮ ನಿಮಿರುವಿಕೆಗೂ ಏಲಕ್ಕಿ ಅದ್ಭುತವಾದ ಆಹಾರವಾಗಿದೆ.

ಶತಾವರಿ
ಶತಾವರಿಯಲ್ಲಿ ಹೆಚ್ಚಿನ ಪ್ರಮಾಣದ ಫೋಲೇಟ್ ಹಾಗೂ ವಿಟಮಿನ್ ಇ ಮಹಿಳೆಯರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ ಹಾಗೂ ಪುರುಷರಲ್ಲಿ ನೈಸರ್ಗಿಕ ವಯಾಗ್ರಾದಂತೆ ಕಾರ್ಯನಿರ್ವಹಿಸುತ್ತದೆ. ಶತಾವರಿಯಲ್ಲಿರುವ ಇತರ ಪೋಷಕಾಂಶಗಳು ಲೈಂಗಿಕ ಆರೋಗ್ಯದ ಸಹಿತ ಇತರ ಆರೋಗ್ಯಕರ ಪ್ರಯೋಜನಗಳನ್ನೂ ಹೊಂದಿದೆ.



Click it and Unblock the Notifications











