ನಿಮಗೆ ಗೊತ್ತಾ? ತಿನ್ನುವ ಆಹಾರಗಳಿಂದಲೂ ಕೋಪವನ್ನು ನಿಯಂತ್ರಿಸಬಹುದು!

Posted By: Divya pandit
Subscribe to Boldsky

ಕೋಪ ಎನ್ನುವುದು ಮನುಷ್ಯನ ಶತ್ರು ಎನ್ನಬಹುದು. ವ್ಯಕ್ತಿಗೆ ಕೋಪವೇ ಬರುವುದಿಲ್ಲಾ ಎಂದಾಗಿದ್ದರೆ ಪ್ರಪಂಚದಲ್ಲಿ ದ್ವೇಷ ಮತ್ತು ಕಲಹಗಳೇ ಹುಟ್ಟಿಕೊಳ್ಳುತ್ತಿರಲಿಲ್ಲ. ಎಲ್ಲರಲ್ಲೂ ಪರಸ್ಪರ ಪ್ರೀತಿ ವಿಶ್ವಾಸಗಳು ಇರುತ್ತಿದ್ದವು. ಕೋಪದಿಂದ ವ್ಯಕ್ತಿಯ ಆಂತರಿಕ ಆರೋಗ್ಯವು ಹದಗೆಡುತ್ತದೆ. ಸಿಟ್ಟಿನ ಪರಿಣಾಮವಾಗಿ ಮನಸ್ಸಿನಲ್ಲಿ ಅನೇಕ ಕೊಂದಲಗಳು ಹಾಗೂ ತಳಮಳಗಳು ಉಂಟಾಗುತ್ತವೆ. ಭಾವನೆಗಳ ಒಂದು ಪರಿಯಾದ ಸಿಟ್ಟು ಕೇವಲ ಮನುಷ್ಯನಿಗಷ್ಟೇ ಅಲ್ಲ ಪ್ರಾಣಿ ಪಕ್ಷಿಗಳಿಗೂ ಬರುತ್ತದೆ.

ಇದರ ಮಿತಿ ಹೆಚ್ಚಾದಷ್ಟು ವ್ಯಕ್ತಿಗೆ ಹಾಗೂ ಸುತ್ತಲಿನ ಜನರ ಮೇಲೆ ಹಾನಿ ಉಂಟಾಗುವ ಸಾಧ್ಯತೆಗಳೇ ಹೆಚ್ಚು. ಬುದ್ಧಿವಂತ ಜೀವಿ ಎನಿಸಿಕೊಂಡ ಮನುಷ್ಯ ತನ್ನ ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಪರಿಯನ್ನು ಅರಿತಿದ್ದಾನೆ. ವೈದ್ಯಕೀಯ ಶಾಸ್ತ್ರದ ಪ್ರಕಾರ ನಮ್ಮ ಸಂವೇದನೆಗಳಲ್ಲಿ ಸಿಟ್ಟು ಅತಿಯಾಗುತ್ತಿದ್ದರೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹಾಳಾಗುತ್ತದೆ.

ಕೆಂಡದಂತಹ ಕೋಪ, ನಿಮ್ಮನ್ನೇ ಸುಟ್ಟು ಬಿಡಬಹುದು!

ಹಾಗಾಗಿ ನಮ್ಮ ಸಿಟ್ಟನ್ನು ಅಥವಾ ಸಿಟ್ಟಿನ ಭಾವನೆಯನ್ನು ಹಿಡಿತದಲ್ಲಿ ಇಟ್ಟುಕೊಂಡಿರಬೇಕು. ಸಿಟ್ಟನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಕೆಲವು ಆಹಾರ ಪದಾರ್ಥಗಳು ಸಹಾಯ ಮಾಡುತ್ತವೆ. ಅರೇ! ಹೌದಾ? ಎನ್ನುವ ಆಶ್ಚರ್ಯ ನಿಮ್ಮನ್ನು ಕಾಡುತ್ತಿರಬಹುದು. ಆದರೆ ಇದು ನಿಜ. ನಿಮಗೂ ನಿಮ್ಮ ಸಿಟ್ಟನ್ನು ನಿಯಂತ್ರಿಸಬೇಕು ಎನ್ನುವ ಬಯಕೆ ಇದ್ದರೆ ಈ ಮುಂದೆ ವಿವರಿಸಲಾಗಿರುವ ವಿಚಾರವನ್ನು ಅರಿಯಿರಿ. ಹಾಗೂ ನಿಮ್ಮ ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ...

ಬಾಳೆ ಹಣ್ಣು

ಬಾಳೆ ಹಣ್ಣು

ಬಾಳೆ ಹಣ್ಣು ನಮ್ಮ ಮನಃಸ್ಥಿತಿಯನ್ನು ಹೆಚ್ಚಿಸುತ್ತದೆ. ನರಮಂಡಲಕ್ಕೆ ಸಹಾಯ ಮಾಡುವ ಎ,ಬಿ,ಸಿ ಮತ್ತು ಬಿ6 ಜೀವಸತ್ವವನ್ನು ಸಮೃದ್ಧವಾಗಿ ಹೊಂದಿರುತ್ತವೆ. ಇದರಲ್ಲಿ ಇರುವ ಡೊಪಮೈನ್ ಮತ್ತು ಮಗ್ನೀಸಿಯಂ ಸಕಾರಾತ್ಮಕವಾದ ಚಿತ್ತ ಸ್ಥಿತಿಯನ್ನು ಒದಗಿಸುತ್ತದೆ. ನಿಟ್ಟನ್ನು ನಿಯಂತ್ರಣದಲ್ಲಿ ಇಡಲು ಹಾಗೂ ಅದರ ಪ್ರಮಾಣವನ್ನು ಕಡಿಮೆಗೊಳಿಸಲು ಸಹಾಯ ಮಾಡುವುದು.

 ಡಾರ್ಕ್ ಚಾಕೋಲೇಟ್

ಡಾರ್ಕ್ ಚಾಕೋಲೇಟ್

ಡಾಕ್ ಚಾಕೋಲೇಟ್ ಸೇವಿಸುವುದರಿಂದ ಮೆದುಳು ಎಂಡಾರ್ಫಿನ್‌ಗಳನ್ನು ವಿಸರ್ಜಿಸಲು ಮತ್ತು ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕಡಿಮೆ ಮಟ್ಟದ ಹಾರ್ಮೋನ್‍ಗಳನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಆತಂಕದ ಮಟ್ಟವನ್ನು ಕಡಿಮೆ ಮಾಡುತ್ತದೆ.

ವಾಲ್ ನಟ್

ವಾಲ್ ನಟ್

ವಾಲ್ ನಟ್ ಒಮೆಗಾ-3 ಕೊಬ್ಬಿನಾಮ್ಲ, ವಿಟಮಿನ್ ಇ, ಮೆಲಟೋನಿನ್ ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ಒಳಗೊಂಡಿರುತ್ತದೆ. ಇವು ಮಾನವನ ಮೆದುಳಿಗೆ ಸಹಕರಿಸುತ್ತವೆ. ಒಮೆಗಾ 3ಕೊಬ್ಬಿನ ಆಮ್ಲಗಳು ಟ್ರಿಫ್ಟೋಫಾನ್ ಮತ್ತು ವಿಟಮಿನ್ ಬಿ6 ಮಿಶ್ರ ಚಿತ್ತವನ್ನು ಉತ್ತೇಜಿಸುತ್ತದೆ. ಹಾಗಾಗಿ ವಾಲ್ ನಟ್ಟ ವ್ಯಕ್ತಿಯ ಸಂತೋಷವನ್ನು ಹೆಚ್ಚಿಸಲು ಹಾಗೂ ಸಿಟ್ಟನ್ನು ತಗ್ಗಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ.

ಕಾಫಿ

ಕಾಫಿ

ಕಾಫಿ ಸೇವನೆಯಿಂದ ನಮ್ಮ ಭಾವನೆಯಲ್ಲಿ ಬದಲಾವಣೆ ಕಾಣಬಹುದು. ಇದು ಮೂಡ್‍ಗೆ ಸಂಬಂಧಿಸಿದ ಹಲವಾರು ನರ ಸಂವಾಹಕಗಳನ್ನು ಹೊಂದಿದೆ. ಅಲ್ಲದೆ ಆತಂಕ ಮತ್ತು ಅಪಾಯವನ್ನು ಕಡಿಮೆಮಾಡುತ್ತದೆ. ಒಂದು ಕಪ್ ಕಾಫಿ ಕುಡಿಯುವುದರಿಂದ ನಿಮ್ಮ ಕೋಪವನ್ನು ನಿಯಂತ್ರಿಸಬಹುದು. ಹೊಸ ನರಕೋಶಗಳನ್ನು ಉತ್ಪಾದಿಸಲು ಮೆದುಳಿನ ಕೋಶಗಳನ್ನು ಸಕ್ರಿಯಗೊಳಿಸುತ್ತದೆ.

ಚಿಕನ್

ಚಿಕನ್

ಚಿಕನ್ ಎಂಬುದು ಟ್ರಿಫ್ಟೋಫಾನ್ ಎಂಬ ಅಮೈನೊ ಆಮ್ಲದ ಒಂದು ಸಮೃದ್ಧ ಮೂಲವಾಗಿದೆ. ಇದು ಚಿತ್ತವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಚಿಕನ್ ಟೈರೋಸಿನ್ ಎಂಬ ಅಮೈನೋ ಆಮ್ಲವನ್ನು ಹೊಂದಿರುತ್ತದೆ. ಇದು ಕಿನ್ನತೆಯ ರೋಗ ಲಕ್ಷಣವನ್ನು ಕಡಿಮೆ ಮಾಡುತ್ತದೆ. ನಿಮಗೆ ಕೋಪವನ್ನು ನಿಯಂತ್ರಣದಲ್ಲಿ ಇಡಬೇಕು ಎಂದಾಗಿದ್ದರೆ ಚಿಕನ್ ಸೇವನೆ ಮಾಡಿ.

ಬೀಜಗಳು

ಬೀಜಗಳು

ಬೀಜಗಳು ವಿಟಮಿನ್ ಇ, ವಿಟಮಿನ್ ಬಿ ಮತ್ತು ಸತುಗಳನ್ನು ಹೊಂದಿರುತ್ತವೆ. ಇವು ನಿಮ್ಮ ಕೋಪವನ್ನು ನಿವಾರಿಸಲು ಸಹಾಯ ಮಾಡುತ್ತವೆ. ಜೊತೆಗೆ ಬೀಜಗಳು ಮೆದುಳಿನ ಕೋಶದ ಕಾರ್ಯಾಚರಣೆಯನ್ನು ಸರಿಪಡಿಸುತ್ತವೆ. ಜೊತೆಗೆ ಉತ್ತಮ ರೀತಿಯಲ್ಲಿ ಬೆಂಬಲಿಸುತ್ತವೆ. ಬೀಜಗಳನ್ನು ನಿಮ್ಮ ಸಲಾಡ್‍ಗಳಲ್ಲಿ ಸೇರಿಸಿ ಸೇವಿಸಬಹುದು.

ಕ್ಯಾಮೊಮೈಲ್ ಚಹಾ

ಕ್ಯಾಮೊಮೈಲ್ ಚಹಾ

ಕ್ಯಾಮೊಮೈಲ್ ಚಹಾದ ಒಂದು ಗುಟುಕನ್ನು ಕುಡಿದರೂ ಸಾಕು ನರಮಂಡಲವನ್ನು ವಿಶ್ರಾಂತ ಮತ್ತು ಶಾಂತಗೊಳಿಸುತ್ತದೆ. ಮನಸ್ಸನ್ನು ಶಾಂತವಾಗಿರಿಸುವಂತಹ ಆಂಟಿ ಆಕ್ಸಿಡೆಂಟ್ ಗಳನ್ನು ಮತ್ತು ಫ್ಲೇವೊನೈಡ್ ಗಳನ್ನು ಒಳಗೊಂಡಿದೆ. ನಿಮ್ಮ ಕೋಪವನ್ನು ನಿಯಂತ್ರಿಸಲು ದಿನಕ್ಕೆ ಮೂರು ಬಾರಿ ಕ್ಯಾಮೊಮೈಲ್ ಚಹಾವನ್ನು ಸವಿಯಿರಿ.

ಬೇಯಿಸಿದ ಆಲೂಗಡ್ಡೆ

ಬೇಯಿಸಿದ ಆಲೂಗಡ್ಡೆ

ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ ಮತ್ತು ವಿಟಮಿನ್ ಬಿ ಸಮೃದ್ಧವಾಗಿರುತ್ತದೆ. ಇದು ರಕ್ತದೊತ್ತಡವನ್ನು ತಗ್ಗಿಸಲು ಮತ್ತು ನಿಮ್ಮ ಒತ್ತಡದ ಮಟ್ಟವನ್ನು ಕಡಿಮೆಮಾಡಲು ಸಹಾಯ ಮಾಡುತ್ತದೆ. ಮಾನಸಿಕ ಆರೋಗ್ಯವನ್ನು ಕಾಪಾಡಲು ಮತ್ತು ಕೋಪವನ್ನು ನಿಯಂತ್ರಿಸಲು ಆಲೂಗಡ್ಡೆ ಬಹಳ ಸಹಕಾರಿ.

ಸೆಲೆರಿ

ಸೆಲೆರಿ

ಸೆಲೆರಿ ಸಿಹಿ ಮತ್ತು ಕಹಿಯಾದ ಸುವಾಸನೆಯೊಂದಿಗೆ ಕೂಡಿರುತ್ತದೆ. ಇದು ಮನಃಸ್ಥಿತಿಯನ್ನು ಸಮತೋಲನದಲ್ಲಿ ಇರಿಸುತ್ತದೆ. ಮನಸ್ಸನ್ನು ಮುಕ್ತಗೊಳಿಸಿ, ಕೋಪವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವುದು. ಇದನ್ನು ಆಹಾರ ಪದಾರ್ಥಗಳಿಗೆ ಸೇರಿಸುವುದರ ಮೂಲಕ ಅಥವಾ ಸಲಾಡ್ ಜೊತೆ ಸೇರಿಸಿ ಸವಿಯಬಹುದು.

ಸ್ಪಿನಾಚ್ ಸೂಪ್

ಸ್ಪಿನಾಚ್ ಸೂಪ್

ಸ್ಟಿನಾಚ್/ಬಸಳೆ ಸಿರೋಟೊನಿನ್ ಗುಣವನ್ನು ಹೊಂದಿರುತ್ತದೆ. ಇದು ನರಗಳಿಗೆ ಉತ್ತಮ ಆರೈಕೆಯನ್ನು ನೀಡುತ್ತವೆ. ಇದು ನಿಮ್ಮ ಚಿತ್ತವನ್ನು ಸ್ಥಿರವಾದ ಸ್ಥಿತಿಯಲ್ಲಿ ಇಡುವಂತೆ ಮಾಡುತ್ತದೆ. ಸ್ಪಿನಾಚ್ ಸೂಪ್ ಕುಡಿಯುವುದರಿಂದ ಮನಸ್ಸಿಗೆ ವಿಶ್ರಾಂತಿ ನೀಡಿ, ಕೋಪವನ್ನು ನಿಯಂತ್ರಣದಲ್ಲಿಡಬಹುದು.

English summary

Foods That Help Manage Anger

Anger also leads to emotional outbursts and hostile behaviours. Ayurveda has suggested practices to calm down anger which you can implement if you become angry unnecessarily. You can also choose certain foods that can tame your anger. So, here is a list of foods that help manage anger.
Story first published: Thursday, February 1, 2018, 10:16 [IST]