For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಕೊಬ್ಬು ಕರಗಿಸಲು ಪರಿಣಾಮಕಾರಿ ಸರಳ ಟಿಪ್ಸ್!

By Deepu
|

ಸ್ಥೂಲಕಾಯ ಇಂದು ವಿಶ್ವದಾದ್ಯಂತ ಕಾಡುತ್ತಿದ್ದು ವಿಶೇಷವಾಗಿ ಸೊಂಟದಲ್ಲಿ ತುಂಬಿರುವ ಹಾಗೂ ಹೊಟ್ಟೆಯ ಕೊಬ್ಬನ್ನು, ಕರಗಿಸುವುದೇ ಹೆಚ್ಚಿನವರ ಚಿಂತೆಯಾಗಿದೆ. ನಮ್ಮ ದೇಹದಲ್ಲಿ ಮೊದಲಾಗಿ ಸೊಂಟದ ಸುತ್ತ ಕೊಬ್ಬು ಸಂಗ್ರಹಿಸಲು ಪ್ರಾರಂಭವಾದರೂ ಬಳಸಿಕೊಳ್ಳುವಾಗ ಮಾತ್ರ ಈ ಕೊಬ್ಬನ್ನು ಕಟ್ಟ ಕಡೆಯದಾಗಿ ದೇಹ ಬಳಸುವ ಕಾರಣದಿಂದ ಇದನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ಕೊಂಚವೇ ಬಿಗಿಯಾದ ಬಟ್ಟೆಗಳನ್ನು ಧರಿಸಿದರೂ ಸ್ಪಷ್ಟವಾಗಿ ಕಾಣುವ ಹೊಟ್ಟೆಯ ಗಾತ್ರ ಸಹಜ ಸೌಂದರ್ಯವನ್ನು ಅಳಿಸುವುದರ ಜೊತೆಗೇ ಕೆಲವಾರು ಆರೋಗ್ಯಕರ ತೊಂದರೆಗಳ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ. ಈ ಕೊಬ್ಬನ್ನು visceral fat ಎಂದು ಕರೆಯುತ್ತಾರೆ.

ಈ ಕೊಬ್ಬು ಹೆಚ್ಚಿದ್ದಷ್ಟೂ ಹೃದಯ ಸ್ತಂಭನ, ಬುದ್ಧಿಮಾಂದ್ಯತೆ, ಪಾರ್ಶ್ವವಾಯು ಮೊದಲಾದ ಕೆಲವಾರು ತೊಂದರೆಗಳು ಆವರಿಸುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸಿ ಸೂಕ್ತವಾದ ದೇಹದ ತೂಕವನ್ನು ಪಡೆಯುವುದು ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಅನಿವಾರ್ಯ.

ನಮ್ಮಲ್ಲಿ ಹೆಚ್ಚಿನವರು ಹೊಟ್ಟೆ ಕರಗಬೇಕು ಎಂದು ಬಯಸುತ್ತಾರೆಯೇ ವಿನಃ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದಿಲ್ಲ. ಬೆರಳೆಣಿಕೆಯಷ್ಟು ಜನರು ಈ ಬಗ್ಗೆ ಕೊಂಚ ದಿನ ವ್ಯಾಯಾಮ, ಜಿಮ್, ಏರೋಬಿಕ್ಸ್, ಯೋಗ ಎಂದೆಲ್ಲಾ ಹಾರಾಡಿ ನಾಲ್ಕು ದಿನದ ಬಳಿಕ ಮತ್ತೆ ಎಲ್ಲಕ್ಕೂ ಚಕ್ಕರ್ ಹಾಕುವವರಾಗಿದ್ದಾರೆ. ಉಳಿದ ಕೆಲವು ಜನರು ಮಾತ್ರವೇ ತಮ್ಮ ತೂಕ ಇಳಿಸುವ ಪ್ರಯತ್ನಗಳನ್ನು ಸತತವಾಗಿಸುತ್ತಾರೆ. ಆದರೆ ಯಾವುದೇ ಪ್ರಯತ್ನದ ಜೊತೆಗೇ ಸೂಕ್ತ ಆಹಾರ ಹಾಗೂ ಆರೋಗ್ಯಕರ ಜೀವನಕ್ರಮವನ್ನು ಅಳವಡಿಸಿಕೊಂಡರೆ ಮಾತ್ರವೇ ಈ ಪ್ರಯತ್ನಗಳು ಸಫಲವಾಗುತ್ತವೆ.

ಆದ್ದರಿಂದ ವ್ಯಾಯಾಮದ ಜೊತೆಗೇ ಕೊಬ್ಬನ್ನು ಹೆಚ್ಚು ಬಳಸುವ ಆಹಾರಗಳನ್ನು ಸೇವಿಸುವುದು ಹಾಗೂ ಕೊಬ್ಬನ್ನು ಹೆಚ್ಚಿಸುವ ಆಹಾರಗಳನ್ನು ವರ್ಜಿಸುವುದು ಜಾಣತನದ ಕ್ರಮ. ಈ ಕಾರ್ಯದಲ್ಲಿ ನೆರವಾಗುವ ಕೆಲವು ಆಹಾರಗಳನ್ನು ಇಂದು ಸಂಗ್ರಹಿಸಲಾಗಿದ್ದು ಇವುಗಳನ್ನು ನಿಮ್ಮ ನಿತ್ಯದ ಆಹಾರಗಳನ್ನಾಗಿಸುವ ಮೂಲಕ ಕ್ಷಿಪ್ರ ಸಮಯದಲ್ಲಿಯೇ ಸೊಂಟದ ಕೊಬ್ಬನ್ನು ಇತಿಹಾಸವಾಗಿಸಬಹುದು...

ಲೋಳೆಸರ ಮತ್ತು ಜೇನಿನ ಪಾನೀಯ

ಲೋಳೆಸರ ಮತ್ತು ಜೇನಿನ ಪಾನೀಯ

ಹೊಟ್ಟೆಯ ಕೊಬ್ಬು ಕರಗಿಸಲು ಲೋಳೆಸರವೂ ಉತ್ತಮವಾಗಿದೆ. ಒಂದು ವೇಳೆ ಹೊಟ್ಟೆಯಲ್ಲಿ ಆಮ್ಲೀಯತೆ, ಅಜೀರ್ಣ, ಹೊಟ್ಟೆ ಉಬ್ಬರಿಕೆ ಮೊದಲಾದ ತೊಂದರೆಗಳಿದ್ದರೆ ಈ ವಿಧಾನ ಸೂಕ್ತವಾಗಿದೆ. ಇದಕ್ಕಾಗಿ ಎರಡು ದೊಡ್ಡಚಮಚ ಲೋಳೆಸರದ ರಸ ಮತ್ತು ಒಂದು ದೊಡ್ಡಚಮಚ ಜೇನು ಸೇರಿಸಿ ಮಿಶ್ರಣ ಮಾಡಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಕೊಂಚವೇ ಬಿಸಿ ಮಾಡಿಕೊಂಡು ಪ್ರಥಮ ಆಹಾರವಾಗಿ ಸೇವಿಸಿ. ಒಂದು ಗಂಟೆಯ ಬಳಿಕವೇ ಉಪಾಹಾರ ಸೇವಿಸಿ.

ಕಾಳುಮೆಣಸಿನ ಪುಡಿ ಬಳಸಿ

ಕಾಳುಮೆಣಸಿನ ಪುಡಿ ಬಳಸಿ

ಕಾಳುಮೆಣಸಿಗೆ ಖಾರದ ರುಚಿ ನೀಡುವ ಪೈಪರಿನ್ (piperine) ಎಂಬ ಪೋಷಕಾಂಶ ಆರೋಗ್ಯಕ್ಕೆ ಹಲವು ವಿಧದಲ್ಲಿ ಉಪಯೋಗಕಾರಿಯಾಗಿದೆ. ಉರಿಯೂತವನ್ನು ನಿವಾರಿಸುವ ಈ ಪೋಷಕಾಂಶವನ್ನು ಕರಗಿಸಲು ಹೆಚ್ಚಿನ ಪ್ರಮಾಣದ ಕೊಬ್ಬು ಬೇಕಾಗುತ್ತದೆ. ಇದು ಕೊಬ್ಬಿನ ಪ್ರಮಾಣವನ್ನು ಕಡಿಮೆಗೊಳಿಸಿ ಸೊಂಟದ ಸುತ್ತಳತೆಯನ್ನು ಕಡಿಮೆಮಾಡುತ್ತದೆ. ಅಲ್ಲದೇ ಕೊಲೆಸ್ಟ್ರಾಲ್ ಮಟ್ಟವನ್ನೂ ತಗ್ಗಿಸುತ್ತದೆ. ತಮ್ಮಲ್ಲಿರುವ ತೂಕ ಇಳಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಲಿಂಬೆ ಹಣ್ಣಿನ ರಸ

ಲಿಂಬೆ ಹಣ್ಣಿನ ರಸ

ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಪ್ರಥಮವಾಗಿ ಲಿಂಬೆ ಹಣ್ಣಿನ ರಸ ಸೇರಿಸಿದ ನೀರು ಕುಡಿಯಿರಿ. *ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಕ್ಕದಾದರೆ ಒಂದು, ದೊಡ್ಡದಾದರೆ ಅರ್ಧ ಲಿಂಬೆಯ ರಸವನ್ನು ಸೇರಿಸಿ. ಉಗುರು ಬೆಚ್ಚನೆಯ ನೀರು ಲಭ್ಯವಿಲ್ಲದಿದ್ದರೆ ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಸಹಾ ಬಳಸಬಹುದು. ಆದರೆ ಐಸ್ ಸೇರಿಸಿದ ಅಥವಾ ಫ್ರಿಜ್ಜಿನ ನೀರು ಬೇಡ.

*ನಂತರ ನಿಮ್ಮ ದೈನಂದಿನ ವ್ಯಾಯಾಮಗಳನ್ನು ಮಾಡಿ. ಕನಿಷ್ಠ ಮುಕ್ಕಾಲು ಗಂಟೆಯವರೆಗೆ ಬೇರೇನನ್ನೂ ಸೇವಿಸಬೇಡಿ.

*ಅತ್ಯಂತ ಆಯಾಸ ಅನ್ನಿಸಿದರೆ ಮಾತ್ರ ಅರ್ಧಗಂಟೆಯ ಬಳಿಕ ಕೊಂಚ ನೀರು ಕುಡಿಯಬಹುದು. ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಬಹುದು.

ಓಟ್ಸ್

ಓಟ್ಸ್

ಹೊಟ್ಟೆ ಕರಗಿಸುವ ಇರಾದೆಯುಳ್ಳವರಿಗೆ ಓಟ್ಸ್ ಉತ್ತಮ ಆಯ್ಕೆಯಾಗಿದೆ. ಬೆಳಗ್ಗಿನ ಉಪಾಹಾರಕ್ಕೆ ಓಟ್ಸ್ ಉತ್ತಮ ಆಯ್ಕೆಯಾಗಿದ್ದು ದಿನಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುವ ಜೊತೆಗೇ ಇದು ಜೀರ್ಣಗೊಳ್ಳಲು ಶರೀರದ ಕೊಬ್ಬನ್ನು ಬಳಸುವ ಮೂಲಕ ಕೊಬ್ಬು ಕರಗಲು ನೆರವಾಗುತ್ತದೆ. ಇದರಲ್ಲಿ ಕರಗದ ನಾರು ಅತಿ ಹೆಚ್ಚಾಗಿರುವ ಕಾರಣ ಇದನ್ನು ಜೀರ್ಣಿಸಿಕೊಳ್ಳುವ ಯತ್ನದಲ್ಲಿ ದೇಹ ಹೆಚ್ಚಿನ ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ. ಅಲ್ಲದೇ ಪದೇ ಪದೇ ಹಸಿವಾಗುವುದರಿಂದ ರಕ್ಷಿಸುತ್ತದೆ.

ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ನೀರು ಕುಡಿಯಿರಿ

ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ನೀರು ಕುಡಿಯಿರಿ

ದಿನಕ್ಕೆ ಎಂಟು ಲೋಟ ನೀರು ಕುಡಿಯಬೇಕು ಎಂಬ ಕಟ್ಟುಪಾಡುಗಳನ್ನೆಲ್ಲಬಿಟ್ಟುಬಿಡಿ. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಇಲ್ಲದ ಕಾರಣ ಹೊಟ್ಟೆಯಿಂದ "ಬೇಕೇ ಬೇಕು ಊಟ ಬೇಕು" ಎಂಬ ಘೋಷಣೆಗಳು ಬರುತ್ತಲೇ ಇರುತ್ತವೆ. ಹೀಗೆ ಬಂದಾಗಲೆಲ್ಲಾ ಒಂದು ಲೋಟ ತಣ್ಣೀರು ಕುಡಿಯಿರಿ, ಇಡಿಯ ದಿನ ಕುಡಿಯುತ್ತಿರಿ. ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ನೀರು ಕುಡಿಯಿರಿ.

ಜೇನು

ಜೇನು

ಅಗತ್ಯವಿರುವ ಸಾಮಾಗ್ರಿಗಳು ಜೇನು: ಎರಡು ಚಿಕ್ಕ ಚಮಚ

ಉಗುರುಬೆಚ್ಚನೆಯ ನೀರು - ಒಂದು ಲೋಟ.

ವಿಧಾನ: ಬೆಳಿಗ್ಗೆದ್ದ ಬಳಿಕ ದಿನದ ಪ್ರಥಮ ಆಹಾರವಾಗಿ ಇವೆರಡನ್ನೂ ಬೆರೆಸಿ ನಿಧಾನವಾಗಿ ಕುಡಿಯಿರಿ. ನಂತರದ ಕನಿಷ್ಠ ನಲವತ್ತೈದು ನಿಮಿಷ ಏನನ್ನೂ ಸೇವಿಸದಿರಿ.

ಶುಂಠಿ ಸೇರಿಸಿದ ಟೀ ಕುಡಿಯಿರಿ

ಶುಂಠಿ ಸೇರಿಸಿದ ಟೀ ಕುಡಿಯಿರಿ

ಹಸಿಶುಂಠಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದು ಸರಿ, ಆದರೆ ಇದು ದೇಹದ ಬಿಸಿಯನ್ನೂ ಹೆಚ್ಚಿಸುತ್ತದೆಂದು (thermogenic) ನಿಮಗೆ ಗೊತ್ತಿತ್ತೇ? ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ. ಸೊಂಟದ ಸುತ್ತ ಈಗಾಗಲೇ ಸಂಗ್ರಹವಾಗಿರುವ ಕೊಬ್ಬು ಎಷ್ಟೋ ವರ್ಷಗಳ ಹಿಂದಿನಿಂದ ಸಂಗ್ರಹವಾಗುತ್ತಾ ಬಂದಿರಬಹುದಾಗಿದ್ದು ಶುಂಠಿಯ ನಿಯಮಿತ ಸೇವನೆಯಿಂದ ನಿಧಾನವಾಗಿ ಕರಗತೊಡಗುತ್ತದೆ. ಜೊತೆಗೇ ಶುಂಠಿಯ ಸೇವನೆಯಿಂದ ದೇಹದಲ್ಲಿ ಒತ್ತಡದ ಕಾರಣ ಉತ್ಪತ್ತಿಯಾಗುವ ಕಾರ್ಟಿಸೋಲ್ (cortisol) ಎಂಬ ಹಾರ್ಮೋನು ಉತ್ಪತ್ತಿಯನ್ನು ತಡೆಯಬಹುದು. ಇದರಿಂದ ರಕ್ತದಲ್ಲಿ ಹೆಚ್ಚಬಹುದಾಗಿದ್ದ ಸಕ್ಕರೆಯ ಪ್ರಮಾಣವನ್ನು ಮಿತಿಗೊಳಿಸಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ.

ಬಳಕೆಯ ವಿಧಾನ

ಬಳಕೆಯ ವಿಧಾನ

*ಒಂದು ಲೋಟಕ್ಕಿಂತ ಕೊಂಚ ಹೆಚ್ಚು ನೀರನ್ನು ಕುದಿಸಿ. *ಈ ನೀರಿನಲ್ಲಿ ಒಂದು ಇಂಚು ಹಸಿಶುಂಠಿಯನ್ನು ಜಜ್ಜಿ ಸುಮಾರು ಹತ್ತು ನಿಮಿಷಗಳವೆರೆಗೆ ಚಿಕ್ಕ ಉರಿಯಲ್ಲಿ ಕುದಿಸಿ.

*ಈಗ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ ಒಂದು ಚಮಚ ಈಗತಾನೇ ಹಿಂಡಿದ

*ಲಿಂಬೆರಸ ಮತ್ತು ಒಂದು ಚಮಚ ಜೇನು ಸೇರಿಸಿ.

*ಈ ಚಹಾ ಅನ್ನು ಸೋಸಿ ಬಿಸಿಬಿಸಿ ಇರುವಂತೆಯೇ ಸೇವಿಸಿ. ಒಂದು ದಿನಕ್ಕೆ ಕನಿಷ್ಠ ಎರಡು ಕಪ್ ಈ ಟೀ ಸೇವಿಸಿ ಕೊಬ್ಬಿನಿಂದ ಮುಕ್ತಿಪಡೆಯಿರಿ.

ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ಬಳಸಿ

ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ಬಳಸಿ

ಬೆಳ್ಳುಳ್ಳಿಯನ್ನು ನಿಮ್ಮ ಆಹಾರದ ಮೂಲಕ ಸೇವಿಸುವುದರಿಂದ ಜೀರ್ಣಾಂಗಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ವಿಶೇಷವಾಗಿ ಕರುಳಿನ ಹುಣ್ಣು, ಅಜೀರ್ಣತೆ, ಹೊಟ್ಟೆಯ ಉರಿ ಮೊದಲಾದ ವುಗಳನ್ನು ತಡೆಯುವ ಬೆಳ್ಳುಳ್ಳಿ ಅಧಿಕ ಮತ್ತು ಕಡಿಮೆ ರಕ್ತದೊತ್ತಡವನ್ನು ತಹಬಂದಿಗೆ ತರುವ ಗುಣವಿದೆ. ಬೆಳ್ಳುಳ್ಳಿಯ ನಿಯಮಿತ ಸೇವನೆಯಿಂದ ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ (HDL-High density Lipoprotein) ಹೆಚ್ಚುತ್ತದೆ ಹಾಗೂ ನರಗಳ ಗೋಡೆಗಳ ದಪ್ಪವನ್ನು ಕಡಿಮೆಗೊಳಿಸುವ atherosclerosis, ಹೃದಯ ಸ್ತಂಭನಕ್ಕೆ ಕಾರಣವಾಗುವ ಟ್ರೈಗ್ಲಿಸರೈಡ್ ಎಂಬ ಕಣಗಳನ್ನು ನಿಯಂತ್ರಿಸಲೂ ನೆರವಾಗುತ್ತದೆ.

ಈ ಪುಟ್ಟ ಬೆಳ್ಳುಳ್ಳಿಗೆ ಸ್ಥೂಲಕಾಯವನ್ನು ನಿಯಂತ್ರಿಸುವ ಶಕ್ತಿಯೂ ಇದೆ. ಪಚನಕ್ರಿಯೆಯನ್ನು ಶೀಘ್ರಗೊಳಿಸಲು ಕರಗಿದ್ದ ಕೊಬ್ಬನ್ನು ಬಳಸುವುದರಿಂದ ಸೊಂಟದ ಸುತ್ತಳತೆ ಶೀಘ್ರವೇ ಕಡಿಮೆಯಾಗುತ್ತಾ ಹೋಗುತ್ತದೆ.

ಬಳಕೆಯ ವಿಧಾನ

*ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ

*ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ.

*ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.

*ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.

ಗ್ರೀನ್ ಟೀ

ಗ್ರೀನ್ ಟೀ

ಅಗತ್ಯವಿರುವ ಸಾಮಾಗ್ರಿಗಳು

ಗ್ರೀನ್ ಟೀ - ಒಂದು ಚಿಕ್ಕ ಚಮಚ ದಾಲ್ಚಿನ್ನಿ ಚೆಕ್ಕೆ: ಅರ್ಧ ಇಂಚು ಲಿಂಬೆ : ಕಾಲುಭಾಗ ಜೇನು: ಎರಡು ಚಿಕ್ಕ ಚಮಚ ನೀರು- ಒಂದು ಲೋಟ.

ವಿಧಾನ: ಮೊದಲು ನೀರನ್ನು ಕುದಿಸಿ ಇದಕ್ಕೆ ಉಳಿದೆಲ್ಲಾ ಸಾಮಾಗ್ರಿಗಳನ್ನು ಬೆರೆಸಿ ಸುಮಾರು ಮೂರು ನಿಮಿಷ ಹಾಗೇ ಬಿಡಿ. ಉತ್ತಮ ಫಲಿತಾಂಶ ಪಡೆಯಲು ಈ ನೀರನ್ನು ದಿನದಲ್ಲಿ ಕನಿಷ್ಟ ಎರಡು ಬಾರಿ ಕುಡಿಯಿರಿ.

ಕ್ರ್ಯಾನ್ಬೆರಿ ಹಣ್ಣಿನ ರಸ

ಕ್ರ್ಯಾನ್ಬೆರಿ ಹಣ್ಣಿನ ರಸ

ಅಗತ್ಯವಿರುವ ಸಾಮಾಗ್ರಿಗಳು:

ಸಕ್ಕರೆ ಬೆರೆಸದ ಕ್ರ್ಯಾನ್ಬೆರಿ ಹಣ್ಣಿನ ರಸ

ಉಗುರುಬೆಚ್ಚನೆಯ ನೀರು- ಒಂದು ಲೋಟ.

ವಿಧಾನ

ಒಂದು ಲೋಟ ನೀರಿಗೆ ಎರಡೂವರೆ ದೊಡ್ಡ ಚಮಚದಷ್ಟು ಹಣ್ಣಿನ ರಸವನ್ನು ಬೆರೆಸಿ ನಿಮ್ಮ ದಿನದ ಆಹಾರ ಸೇವನೆಗೆ ಕೊಂಚ ಹೊತ್ತು ಮುಂಚೆ ಸೇವಿಸಿ. ಅಂತೆಯೇ ದಿನದ ಇತರ ಹೊತ್ತಿನಲ್ಲಿಯೂ ಕೊಂಚಕೊಂಚವಾಗಿ ಸೇವಿಸುತ್ತಾ ಬನ್ನಿ.

English summary

Effective Tips and Tricks to Lose Belly Fat Quickly

Belly fat is the cause of embarrassment for a number of people around the globe. It is the stubborn fat around the abdomen which is very easily visible whenever you wear tight-fitted clothes. Unfortunately, it is not very easy to get rid of; in fact, it is considered to be the most difficult area to lose flab and is considered to be a health hazard as well. Belly fat, also known as the visceral fat is one of the major reasons behind certain health issues like heart diseases, blood pressure and diabetes. It also increases the risk of stroke, dementia, heart attack etc. Hence, losing belly fat is not just a fashion requirement but it is more of a necessity for a healthy body.
X
Desktop Bottom Promotion