Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎರಡು ವಾರಗಳಲ್ಲಿಯೇ ಹೊಟ್ಟೆಯ ಬೊಜ್ಜು ಕರಗಿಸುವ ಅದ್ಭುತ ಜ್ಯೂಸ್‌ಗಳು
ಸಪಾಟಾದ ಹೊಟ್ಟೆ, ಕಟ್ಟುಮಸ್ತಾದ ಶರೀರ ನಮಗೆಲ್ಲರಿಗೂ ಬೇಕು. ಅಲ್ಲವೇ ಇದು ಸೌಂದರ್ಯದ ಲಕ್ಷಣ ಮಾತ್ರವಲ್ಲ, ಆರೋಗ್ಯವಂತರಾಗಿರುವ ಲಕ್ಷಣವೂ ಹೌದು. ಆದರೆ ನಮ್ಮಲ್ಲಿ ಬಹುತೇಕ ಎಲ್ಲರ ತೊಂದರೆಯೂ ಒಂದೇ ತೆರನಾಗಿದೆ. ಅದೆಂದರೆ ಹೊಟ್ಟೆಯ ಕೊಬ್ಬು. ಇದನ್ನು ಕರಗಿಸಿ ಹೊಟ್ಟೆಯನ್ನು ಸಪಾಟಾಗಿಸುವ ಎಲ್ಲಾ ಪ್ರಯತ್ನಗಳು ಹೆಚ್ಚು ಫಲನೀಡುವುದಿಲ್ಲ ಹಾಗೂ ಒಮ್ಮೆ ಪಡೆದ ಕೊಬ್ಬನ್ನು ಕರಗಿಸಿ ಮತ್ತೆ ಮೊದಲಿನ ಹೊಟ್ಟೆಯನ್ನು ಪಡೆಯುವುದು ದುಃಸಾಧ್ಯವೇ ಸರಿ. ಆದರೆ ಈ ಪ್ರಯತ್ನಕ್ಕೆ ಬೆಂಬಲ ನೀಡಲು ಹೊಟ್ಟೆಯ ಕೊಬ್ಬನ್ನು ಕರಗಿಸುವ ಪೇಯವನ್ನು ಕುಡಿದರೆ ನಿಮ್ಮ ಪ್ರಯತ್ನಗಳು ಹೆಚ್ಚು ಫಲಕಾರಿಯಾಬಹುದು.
ಇಂತಹ ಅದ್ಭುತ ಜ್ಯೂಸ್ ಗಳಿದ್ದು ಇದನ್ನು ಸತತವಾಗಿ ಕುಡಿದರೆ ಹದಿನೈದೇ ದಿನಗಳಲ್ಲಿ ಇದರ ಪರಿಣಾಮವನ್ನು ಗಮನಿಸಬಹುದು. ಆದರೆ ಕೇವಲ ಈ ಪೇಯವನ್ನು ಕುಡಿದರೆ ಮಾತ್ರ ಸಾಕಾಗುವುದಿಲ್ಲ. ಬದಲಿಗೆ, ಆರೋಗ್ಯಕರ ಜೀವನಶೈಲಿ, ಸಾಕಷ್ಟು ವ್ಯಾಯಾಮ, ಕೊಬ್ಬು ಹೆಚ್ಚಿಸುವ ಆಹಾರಗಳ ವರ್ಜನೆ ಮೊದಲಾದ ಕೆಲವು ಕಟ್ಟುಪಾಡುಗಳನ್ನೂ ಅನುಸರಿಸಬೇಕು. ಅನಾರೋಗ್ಯಕರ ಆಹಾರ ವರ್ಜಿಸಿ ನಾರಿನಂಶ ಹೆಚ್ಚಿರುವ ಓಟ್ಸ್, ಹಸಿ ತರಕಾರಿ, ಹಣ್ಣುಗಳು ಮೊದಲಾದವುಗಳನ್ನು ಮಾತ್ರವೇ ಸೇವಿಸಬೇಕು.
ಅಷ್ಟೇ ಅಲ್ಲದೆ ಇದರೊಂದಿಗೆ ದಿನದ ಒಂದು ಹೊತ್ತಿನಲ್ಲಿ ಒಂದು ಗಂಟೆ ತೀವ್ರಗತಿಯ ನಡಿಗೆ ನಡೆಯಬೇಕು ಅಥವಾ ಇದಕ್ಕೆ ಸಮನಾದ ವ್ಯಾಯಾಮವನ್ನೂ ಕಡ್ಡಾಯವಾಗಿ ಮಾಡಬೇಕು. ಆಗ ಮಾತ್ರವೇ ಈ ಪೇಯಕ್ಕೆ ಕೊಬ್ಬನ್ನು ಕರಗಿಸಲು ಸಾಧ್ಯವಾಗುತ್ತದೆ. ಹೊಟ್ಟೆಯ ಕೊಬ್ಬು ಇವತ್ತಲ್ಲದಿದ್ದರೂ ನಾಳೆ ಎಂದಾದರೂ ಮಧುಮೇಹ, ಅಧಿಕ ರಕ್ತದೊತ್ತಡ, ಬೆನ್ನುನೋವು ಮೊದಲಾದ ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು. ಬನ್ನಿ, ಹೊಟ್ಟೆಯ ಕೊಬ್ಬನ್ನು ಕರಗಿಸುವ ಶಕ್ತಿ ಇರುವ ಕೆಲವು ಮಹತ್ವದ ಪೇಯಗಳ ಬಗ್ಗೆ ಅರಿಯೋಣ....

ಸೌತೆ ಜ್ಯೂಸ್ ತಯಾರಿಸುವ ವಿಧಾನ
* ಒಂದು ಮಧ್ಯಮ ಗಾತ್ರದ ಸೌತೆಕಾಯಿಯ ಸಿಪ್ಪೆ ಸುಲಿದು ದೊಡ್ಡ ತುಂಡುಗಳನ್ನಾಗಿಸಿ ಮಿಕ್ಸಿಯಲ್ಲಿ ನುಣ್ಣಗೆ ಕಡೆಯಿರಿ.
* ಇದಕ್ಕೊಂದು ಲಿಂಬೆಯ ರಸವನ್ನು ಹಿಂಡಿ.
* ಈಗ ಪುದೀನಾ ಕುದಿಸಿದ್ದ ನೀರನ್ನು ಹಾಕಿ.
* ಇದಕ್ಕೆ ಒಂದೂವರೆ ಲೀಟರಿನಷ್ಟು ನೀರನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
* ಒಂದು ವೇಳೆ ನಿಮಗೆ ಇಷ್ಟವಾದರೆ ಒಂದು ಚಿಕ್ಕ ಚಮಚದಷ್ಟು ತುರಿದ ಹಸಿಶುಂಠಿಯನ್ನೂ ಬೆರೆಸಬಹುದು.
* ಈ ನೀರನ್ನು ದಿನವಿಡೀ ಕೊಂಚಕೊಂಚವಾಗಿ ಕುಡಿಯುತ್ತಿರಿ, ಅಥವಾ ಮೂರು ಹೊತ್ತಾದರೂ ತಪ್ಪದೇ ಕುಡಿದು ದಿನದ ಕೊನೆಯಲ್ಲಿ ಮುಗಿಸಬೇಕು.

ಲೋಳೆಸರ ಮತ್ತು ಜೇನು
ಹೊಟ್ಟೆಯ ಕೊಬ್ಬನ್ನು ಶೀಘ್ರವಾಗಿ ಕರಗಿಸಲು ಲೋಳೆಸರವೂ ಉತ್ತಮ ಆಯ್ಕೆಯಾಗಿದೆ. ಇದರ ರಸ ಸಣ್ಣ ಕರುಳನ್ನು ಸ್ವಚ್ಛಗೊಳಿಸ್ತುತದೆ ಹಾಗೂ ಹೊಟ್ಟೆಯುಬ್ಬರಿಕೆಯನ್ನು ತಡೆಯುತ್ತದೆ. ಒಂದು ದೊಡ್ಡ ಲೋಟ ನೀರಿನಲ್ಲಿ ತಲಾ ಎರಡು ದೊಡ್ಡ ಚಮಚ ಲೋಳೆಸರದ ರಸ ಮತ್ತು ಜೇನನ್ನು ಬೆರೆಸಿ ಈ
ಪೇಯವನ್ನು ದಿನದ ಪ್ರಥಮ ಆಹಾರವಾಗಿ ಸೇವಿಸಿ. ಸುಮಾರು ಮುಕ್ಕಾಲು ಗಂಟೆಯ ಬಳಿಕ ಅಲ್ಪ ಉಪಾಹಾರ ಸೇವಿಸಿ. ಹೊಟ್ಟೆಯ ಕೊಬ್ಬು ಕರಗಿಸುವ ಪೇಯ ಸೇಬಿನ ಸಿರ್ಕಾ ಒಂದು ದೊಡ್ಡ ಲೋಟ ನೀರಿಗೆ ಎರಡು ದೊಡ್ಡಚಮಚ ಸೇಬಿನ ಶಿರ್ಕಾ (pple cider vinegar) ಬೆರೆಸಿ ಇದಕ್ಕೆ ಒಂದು ಮಧ್ಯಮಗಾತ್ರದ ಲಿಂಬೆಯರಸ, ಕೊಂಚ ದಾಲ್ಚಿನ್ನಿಪುಡಿ ಮತ್ತು ಕೊಂಚ ಜೇನನ್ನು ಬೆರೆಸಿ ಕಲಕಿ. ಈ ಪೇಯವನ್ನು ದಿನದ ಪ್ರಥಮ ಆಹಾರವಾಗಿ ಸೇವಿಸಿ. ಸುಮಾರು ಮುಕ್ಕಾಲು ಗಂಟೆಯ ಬಳಿಕ ಅಲ್ಪ ಉಪಾಹಾರ ಸೇವಿಸಿ.

ಬೆಳ್ಳುಳ್ಳಿ+ಲಿಂಬೆಯ ಜ್ಯೂಸ್
*ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ
*ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ.
*ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.
*ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.

ಜೀರಿಗೆ ನೀರು
ಇನ್ನೊಂದು ಪರ್ಯಾಯ ಪದ್ಧತಿಯೆಂದರೆ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದು. ಒಂದು ಟೀ ಚಮಚ ಜೀರಿಗೆಯನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ. ನಂತರ ಜೀರಿಗೆಯನ್ನು ಸೋಸಿ ತೆಗೆಯಿರಿ. ಬಿಸಿಯಿರುವಾಗಲೇ ಇದನ್ನು ಸೇವಿಸಿದರೆ ಹೆಚ್ಚು ಆರೋಗ್ಯ ಪೂರ್ಣವಾದದ್ದು. ಇದು ಕಿಬ್ಬೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಶೇಖರಣೆಗೊಂಡ ಕೊಬ್ಬನ್ನು ಕರಗಿಸುತ್ತದೆ.

ಮೆಂತೆ ನೀರು
ಮೆಂತೆಯು ತುಂಬಾ ಕಹಿಯಾಗಿರುವುದು. ಆದರೆ ಇದು ಕೊಬ್ಬು ಕರಗಿಸಲು ತುಂಬಾ ಪರಿಣಾಮಕಾರಿ. ಇದರಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶವಿದ್ದು, ಕಾರ್ಬ್ರ್ಸ್ ಮತ್ತು ಕೊಲೆಸ್ಟ್ರಾಲ್ ಕಡಿಮೆಯಿದೆ. ಇದು ಕೊಬ್ಬು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೊಟ್ಟೆಯ ಕೊಬ್ಬು ಕರಗಿಸಲು ಇದು ತುಂಬಾ ಪರಿಣಾಮಕಾರಿ. ಒಂದು ಚಮಚ ಮೆಂತೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದು ಈ ನೀರನ್ನು ಬಿಸಿ ಮಾಡಿಕೊಂಡು ಕುಡಿಯಿರಿ.

ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ
ಒಂದು ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ ಮತ್ತು ಒಂದು ಹಿಡಿ ಪಾಲಕ ಸೊಪ್ಪು ತೆಗೆದುಕೊಳ್ಳಿ. ಇದನ್ನು ರುಬ್ಬಿಕೊಂಡು ದಪ್ಪಗಿನ ಜ್ಯೂಸ್ ಮಾಡಿಕೊಳ್ಳಿ. ಈ ಜ್ಯೂಸ್ aನ್ನು ಮಲಗುವ ಮೊದಲು ಒಂದು ವಾರ ಕಾಲ ಕುಡಿಯಬೇಕು. ಇದನ್ನು ಕೆಲವು ದಿನ ಹೆಚ್ಚು ಕಾಲ ಸೇವನೆ ಮಾಡಬಹುದು. ಇದರಿಂದ ಹೊಟ್ಟೆಯಲ್ಲಿರುವ ಮತ್ತಷ್ಟು ಕೊಬ್ಬು ಕರಗುವುದು. ಇದು ಚಯಾಪಚಾಯ ಕ್ರಿಯೆ ಹೆಚ್ಚಿಸಿ, ಹಸಿವನ್ನು ಕಡಿಮೆ ಮಾಡಿ ಸಂಪೂರ್ಣ ದೇಹದಲ್ಲಿ ಕೊಬ್ಬಿನ ಕೋಶಗಳನ್ನು ವಿಘಟಿಸುವುದು. ಈ ಪಾನೀಯದಲ್ಲಿ ಇರುವ ಸಿಟ್ರಿಕ್ ಅಂಶವು ಹೊಟ್ಟೆಯಲ್ಲಿನ ಕೊಬ್ಬನ್ನು ಕರಗಿಸಲು ಪ್ರಮುಖ ಪಾತ್ರ ನಿರ್ವಹಿಸುವುದು. ಇದು ಯಕೃತ್ ಅನ್ನು ಶುದ್ಧೀಕರಿಸಿ ಜೀರ್ಣಕ್ರಿಯೆಗೆ ನೆರವಾಗುವುದು. ಕೊಬ್ಬು ಕಡಿಮೆ ಮಾಡಲು ದೇಹಕ್ಕೆ ಬೇಕಾಗುವ ನಾರಿನಾಂಶವು ಪಿಯರ್ನಲ್ಲಿ ಇರುವುದು. ಇದು ಆಗಾಗ ಹಸಿವಾಗುವುದನ್ನು ತಪ್ಪಿಸುವುದು. ಪಾಲಕವು ಉರಿಯೂತ ಮತ್ತು ರಕ್ತದ ಅಸಿಡಿಟಿ ಕಡಿಮೆ ಮಾಡುವುದು.

ನಿಂಬೆಯ ಜೊತೆ ಬೆಚ್ಚಗಿನ ನೀರು
ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ನಿಂಬೆ ರಸ, ಉಪ್ಪು ಅಥವಾ ಜೇನುತುಪ್ಪವನ್ನು ಸೇರಿಸಿ ಕುಡಿಯಬೇಕು. ಹೀಗೆ ನಿತ್ಯವೂ ಮಾಡುವುದರಿಂದ ಬಹು ಬೇಗ ಹೊಟ್ಟೆ ಭಾಗದ ಕೊಬ್ಬು ಹಾಗೂ ದೇಹದ ಇನ್ನಿತ ಭಾಗದಲ್ಲಿ ಶೇಖರಣೆಗೊಂಡ ಕೊಬ್ಬಿನಂಶವು ಕರಗುವುದು.
ಇನ್ನೊಂದು ಟಿಪ್ಸ್
ಬೆಚ್ಚಗಿನ ನೀರಿಗೆ ಲಿಂಬೆ ರಸವನ್ನು ಹಿಂಡಿಕೊಂಡು ಪ್ರಾತಃ ಕಾಲದಲ್ಲಿ ನಿತ್ಯವೂ ಸೇವಿಸಿದರೆ ನಿಮ್ಮ ಕೊಬ್ಬು ಕರಗಿ ಸುಂದರ ಆಕಾರ ನಿಮ್ಮದಾಗುತ್ತದೆ. ಹೊಟ್ಟೆಯ
ಕೊಬ್ಬು ವಾರದೊಳಗೆ ಖಂಡಿತ ಕರಗುತ್ತದೆ. ಆದರೆ ಲಿಂಬೆ ಬೆರೆಸಿದ ಬೆಚ್ಚಗಿನ ನೀರಿನ ಸೇವನೆಯನ್ನು ನಿತ್ಯವೂ ನೀವು ಮಾಡಬೇಕು ಆದರೆ ಮಾತ್ರ ಉತ್ತಮ
ಫಲಿತಾಂಶ ನಿಮ್ಮದಾಗುತ್ತದೆ.

ಹಸಿಶುಂಠಿ+ಸೌತೆಕಾಯಿ+ಲಿಂಬೆ
*ಫಿಲ್ಟರ್ ಮೂಲಕ ಸ್ವಚ್ಛಗೊಳಿಸಿದ ಕುಡಿಯುವ ನೀರು -8 ½ ಕಪ್
*ಚಿಕ್ಕದಾಗಿ ಹೆಚ್ಚಿದ ಹಸಿಶುಂಠಿ - ಒಂದು ಚಿಕ್ಕ ಚಮಚ (ಅಥವಾ ಒಂದು ದೊಡ್ಡ ಚಮಚ ಸಾವಯವ ವಿಧಾನದಲ್ಲಿ ಬೆಳೆಸಿದ ಶುಂಠಿಯ ಪುಡಿ)
*ಮಧ್ಯಮ ಗಾತ್ರದ ಸೌತೆಕಾಯಿ - ಒಂದು - ತೆಳುವಾದ ಬಿಲ್ಲೆಗಳಂತೆ ಅಡ್ಡಲಾಗಿ ಕತ್ತರಿಸಿದ್ದು
*ಮಧ್ಯಮ ಗಾತ್ರದ ಲಿಂಬೆ - ಒಂದು (ಚಿಕ್ಕದಾಗಿ ಹೋಳು ಮಾಡಿದ್ದು)
*ಪುದೀನಾ ಎಲೆಗಳು - ಹನ್ನೆರಡು (ಅಂಗೈಯಲ್ಲಿ ಹಿಚುಕಿದ್ದು)
ತಯಾರಿಸುವ ವಿಧಾನ
ಒಂದು ದೊಡ್ಡ ಜಗ್ ಅಥವ ಪಾತ್ರೆಯಲ್ಲಿ ಮೇಲಿನ ಎಲ್ಲಾ ಪರಿಕರಗಳನ್ನು ಸೇರಿಸಿ ಚಮಚದಿಂದ ಕಲಕಿ ಇಡಿಯ ರಾತ್ರಿ ಮುಚ್ಚಿಡಿ. ಮರುದಿನ ಬೆಳಿಗೆ ಲಿಂಬೆಯ ಹೋಳುಗಳು, ಶುಂಠಿ ಮತ್ತು ಪುದಿನಾ ಎಲೆಗಳನ್ನು ನಿವಾರಿಸಿ ಉಳಿದ ಎಲ್ಲಾ ದ್ರವವನ್ನು ಒಂದು ಲೋಟದಲ್ಲಿ ಸುರುವಿಕೊಂಡು ಬೆಳಗಿನ ಪ್ರಥಮ ಪೇಯವಾಗಿ ಕುಡಿಯಿರಿ.



Click it and Unblock the Notifications