Latest Updates
-
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ
ತೆಂಗಿನೆಣ್ಣೆ ಬಿಸಿ ಮಾಡಿದರೆ ಅದರ ಶಕ್ತಿ ಕಡಿಮೆಯಾಗುತ್ತದೆಯೇ?
ಅತ್ಯುತ್ತಮವಾದ ನೈಸರ್ಗಿಕ ತೈಲವೆಂದರೆ ತೆಂಗಿನ ಎಣ್ಣೆ. ಕರ್ನಾಟಕದ ಕರಾವಳಿ ತೀರದ ಜನರು ತೆಂಗಿನೆಣ್ಣೆಯನ್ನೇ ತಮ್ಮ ನಿತ್ಯದ ಬಳಕೆಗೆ ಹಾಗೂ ಔಷಧೋಪಚಾರಕ್ಕೂ ಬಳಸಿಕೊಳ್ಳುತ್ತಾರೆ. ತೆಂಗಿನೆಣ್ಣೆಯನ್ನು ಅಡುಗೆ ತಯಾರಿಸಲು ಬಳಸುವುದು ಸಾಂಪ್ರದಾಯಿಕ ಪದ್ಧತಿಯೂ ಹೌದು. ವಿಟಮಿನ್ ಇ ಅನ್ನು ಸಮೃದ್ಧವಾಗಿ ಪಡೆದುಕೊಂಡಿರುವ ಈ ಎಣ್ಣೆಯನ್ನು ವಿವಿಧ ಬಗೆಯ ಅನಾರೋಗ್ಯಗಳಿಗೆ ಔಷಧವಾಗಿಯೂ ಬಳಸುತ್ತಾರೆ. ತೆಂಗಿನ ಎಣ್ಣೆ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗಾಗಿಯೇ ಶಿಶು ಮಕ್ಕಳಿಗೆ ಮಸಾಜ್ ಮಾಡಲು ಹಾಗೂ ಚರ್ಮವನ್ನು ತಾಜಾತನದಿಂದ ಕೂಡಿರುವಂತೆ ಮಾಡಲು ಇದನ್ನು ಬಳಸುತ್ತಾರೆ.
ಸೋಂಕುಗಳನ್ನು ನಿವಾರಿಸುವುದು, ನಂಜನ್ನು ತೆಗೆಯುವುದು, ಗಾಯವನ್ನು ಬಹುಬೇಗ ಗುಣಪಡಿಸುವುದು, ಉರಿಯೂತವನ್ನು ಶಮನಗೊಳಿಸುವುದು, ಸ್ನಾಯು ಮತ್ತು ದೇಹದ ನೋವು ನಿವಾರಣೆಗೆ ತೆಂಗಿನೆಣ್ಣೆ ದಿವ್ಯ ಔಷಧ. ಇದರಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನಂಶ ಇರುವುದರಿಂದ ಅಡುಗೆ ಪದಾರ್ಥದಲ್ಲಿ ಧಾರಾಳವಾಗಿ ಬಳಸಬಹುದು. ತೆಂಗಿನೆಣ್ಣೆಯಿಂದ ತಯಾರಿಸಿದ ಅಡುಗೆ ಪದಾರ್ಥಗಳು ದೇಹದಲ್ಲಿ ಯಾವುದೇ ರೀತಿಯ ಕೆಟ್ಟ ಕೊಬ್ಬನ್ನು ಉತ್ತೇಜಿಸದು. ಅಲ್ಲದೆ ಹೃದಯ ಸಂಬಂಧಿ ಸಮಸ್ಯೆ ಇರುವವರು ಈ ಎಣ್ಣೆಯಿಂದ ತಯಾರಿಸಿದ ಅಡುಗೆ ಸೇವಿಸುವುದು ಸೂಕ್ತ ಎಂದು ವೈದ್ಯರು ಸಹ ಸಲಹೆ ನೀಡುತ್ತಾರೆ....

ಈ ಎಣ್ಣೆಯನ್ನು ಬಿಸಿ ಮಾಡಿದಾಗ ಇದರ ಶಕ್ತಿ ಕಡಿಮೆಯಾಗುವುದೇ?
ಸಾಮಾನ್ಯವಾಗಿ ಎಣ್ಣೆಯನ್ನು ಬಿಸಿ ಮಾಡಿದಾಗ ಅದರಲ್ಲಿರುವ ಕೊಬ್ಬಿನಂಶವು ನಾಶವಾಗುವುದು. ಹಾಗಾಗಿ ಅಡುಗೆ ತಯಾರಿಸಲು ನಾವು ಬಳಸುವ ಎಣ್ಣೆಯನ್ನು ಸರಿಯಾಗಿ ಆಯ್ಕೆಮಾಡಿಕೊಳ್ಳಬೇಕು. ಪಾಲಿಅನ್‍ಚ್ಯುರೇಟೆಡ್ ಕೊಬ್ಬನ್ನು ಹೊಂದಿರುವ ಎಣ್ಣೆಯನ್ನು ಅಡುಗೆಯಲ್ಲಿ ಬಳಸಬಾರದು. ಇದು ದುರ್ಬಲವಾಗಿರುವ ಕಾರಣ ಇದು ಬಿಸಿಯಾದಾಗ ಸೇವಿಸುವುದಕ್ಕೆ ಸೂಕ್ತವಾಗಿರುವುದಿಲ್ಲ. ಹಾಗಾಗಿ ಅಡುಗೆ ತಯಾರಿಸಲು ಅಥವಾ ಇನ್ನಿತರ ಆಹಾರ ಉತ್ಪನ್ನಗಳಿಗೆ ತೆಂಗಿನೆಣ್ಣೆಯನ್ನು ಬಳಸುವುದು. ಅತ್ಯುತ್ತಮವಾದ ಮಾರ್ಗವಾಗಿದೆ. ತೆಂಗಿನೆಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬು ಇರುವುದರಿಂದ ಬಿಸಿಮಾಡಿರುವಾಗಲೂ ಯಾವುದೇ ಶಕ್ತಿಯನ್ನು ಕಳೆದುಕೊಳ್ಳದು. ಜೊತೆಗೆ ಇದರಲ್ಲಿರುವ ಯಾವುದೇ ಪೋಷಕಾಂಶದ ಗುಣಗಳು ನಾಶವಾಗದು ಎಂದು ಹೇಳಲಾಗುತ್ತದೆ.

ಬಿಸಿ ಮಾಡಿದ ತೆಂಗಿನೆಣ್ಣೆ ಏಕೆ ಹಾನಿಕಾರಕವಲ್ಲ?
ತೆಂಗಿನೆಣ್ಣೆಯನ್ನು ಬಿಸಿಮಾಡಿದಾಗ ಅದು ಯಾವುದೇ ಬಗೆಯ ಪೋಷಕಾಂಶಗಳನ್ನು ಕಳೆದುಕೊಳ್ಳುವುದಿಲ್ಲ. ಅದರಲ್ಲಿ ರಚನಾತ್ಮಕ ಕೊಬ್ಬುಗಳ ವಿಘಟನೆಗೆ ಕಾರಣವಾಗಬಹುದು. ಇದು ಹಾನಿಕಾರಕ ರಾಡಿಕಲ್‍ಗಳನ್ನು ನಿರ್ಮೂಲನೆ ಮಾಡುವುದು. ಹಾಗಾಗಿ ಬಿಸಿ ಮಾಡಿದ ತೆಂಗಿನೆಣ್ಣೆ ಯಾವುದೇ ರೀತಿಯಲ್ಲೂ ಆರೋಗ್ಯಕ್ಕೆ ಹಾನಿಕಾರಕವಲ್ಲ. ಹಾಗಾಗಿಯೇ ಅಡುಗೆ ತಯಾರಿಸಲು ತೆಂಗಿನ ಎಣ್ಣೆ ಅತ್ಯುತ್ತಮವಾದ ಪರಿಹಾರವಾಗಿದೆ.

ತೆಂಗಿನೆಣ್ಣೆಯಿಂದ ಆರೋಗ್ಯಕ್ಕೆ ಉಂಟಾಗುವ ಉಪಯೋಗಗಳು
ಹೃದಯ, ಮಿದುಳು ಮತ್ತು ಕೀಲುಗಳಿಗೆ ಸಂಬಂಧಿಸಿದ ಅಸ್ವಸ್ಥತೆಗಳನ್ನು ಗುಣಪಡಿಸುವ ಶಕ್ತಿಯನ್ನು ತೆಂಗಿನ ಎಣ್ಣೆ ಒಳಗೊಂಡಿದೆ. ಅಡುಗೆಯಲ್ಲಿ ತೆಂಗಿನ ಎಣ್ಣೆಯನ್ನು ಬಳಸುವುದರಿಂದ ಆರೋಗ್ಯದಲ್ಲಿ ಉಂಟಾಗುವ ಅನೇಕ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಜನರು ಇಂದಿಗೂ ಅನೇಕ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ತೆಂಗಿನ ಎಣ್ಣೆಯನ್ನೇ ಪ್ರಮುಖ ಔಷಧವಾಗಿ ಬಳಸುವುದನ್ನು ಕಾಣಬಹುದು. ತೆಂಗಿನ ಎಣ್ಣೆಯಲ್ಲಿ ತಯಾರಿಸಿದ ಆಹಾರ ಪದಾರ್ಥವು ಯಕೃತ್ತಿನಲ್ಲಿ ಸುಲಭವಾಗಿ ಜೀರ್ಣವಾಗುವುದು. ರಕ್ತದೊತ್ತಡದ ನಿವಾರಣೆ ಹೊಂದುವುದು. ಮೂತ್ರದ ಸೋಂಕು ಮತ್ತು ಮೂತ್ರಪಿಂಡಕ್ಕೆ ಸಂಬಂಧಿತ ಅನೇಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವುದು. ಸಂಧಿ ನೋವುಗಳಿಗೆ ಇದರಿಂದ ಮಸಾಜ್ ಮಾಡುವುದರಿಂದ ಶಮನಗೊಳಿಸಬಹುದು.

ಅಡುಗೆಗೆ ಬಳಸುವಾಗ ನೆನಪಿಡಬೇಕಾದ ವಿಚಾರ
ಅಡುಗೆ ತಯಾರಿಸಲು ಎಲ್ಲಾ ತೈಲಗಳಲ್ಲಿ ಬಹಳ ಉತ್ತಮವಾದ ಎಣ್ಣೆ ಎಂದರೆ ತೆಂಗಿನ ಎಣ್ಣೆ. ಇದನ್ನು ಅಡುಗೆಗೆ ಬಳಸುವಾಗ ಕೆಲವು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಸ್ಟೋವ್ ಮೇಲೆ ಎಣ್ಣೆಯನ್ನು ಇಟ್ಟಾಗ ಅದು ಅತಿಯಾಗಿ ಕುದಿ ಬಂದು, ಹೊಗೆಯನ್ನು ಸೂಸುವವರೆಗೆ ಕಾಯಬಾರದು. ಎಣ್ಣೆ ಅತಿಯಾಗಿ ಬಿಸಿಯಾಗಿ ಹೊಗೆ ಸೂಸಿದರೆ ಅದರಲ್ಲಿ ಕೊಬ್ಬು ಮತ್ತು ಕ್ಯಾಲೋರಿಯ ಪ್ರಮಾಣ ಹೆಚ್ಚುವುದು. ಆಗ ಅದು ಫಿಟ್‍ನೆಸ್‍ಗೆ ಅಷ್ಟು ಸೂಕ್ತವಾದುದ್ದಲ್ಲ ಎಂದು ಹೇಳಬಹುದಾಗಿದೆ.

ಅಡುಗೆಗೆ ಆರೋಗ್ಯಕರವಾದ ಎಣ್ಣೆ
ಅಧಿಕ ಶಾಖದ ಆಹಾರ ತಯಾರಿಸಲು ತೆಂಗಿನೆಣ್ಣೆ ಪ್ರಮುಖವಾದುದ್ದು. ತೂಕವನ್ನು ಇಳಿಸುವ ಹಂಬಲ ಇರುವವರು ಅಡುಗೆಯಲ್ಲಿ ತೆಂಗಿನೆಣ್ಣೆ ಬಳಸುವುದು ಸೂಕ್ತ. ಇದು ವ್ಯಕ್ತಿಯ ಕೊಬ್ಬಿನ ಪ್ರಮಾಣವನ್ನು ಸೂಕ್ತರೀತಿಯಲ್ಲಿರುವಂತೆ ಮಾಡುತ್ತದೆ. ಹೆಚ್ಚುವರಿ ಪೋಷಕಾಂಶದೊಂದಿಗೆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವುದು. ಅಲ್ಲದೆ ಚರ್ಮದ ಆರೋಗ್ಯದಲ್ಲೂ ಇದು ಪರಿಣಾಮ ಬೀರುವುದು. ಚರ್ಮವನ್ನು ಸದಾ ತಾಜ ಹಾಗೂ ತೇವಾಂಶದಿಮದ ಕೂಡಿರುವಂತೆ ಮಾಡುವುದು. ಕೇಶ ವೃದ್ಧಿಗೆ ಸಹಕರಿಸುವ ತೆಂಗಿನೆಣ್ಣೆ ತ್ವಚೆಯ ಮೇಲೆ ಕಾಣಿಸಿಕೊಳ್ಳುವ ಅನುಪಯುಕ್ತ ಕೂದಲುಗಳ ನಿವಾರಣೆಗೆ ಸಹಾಯ ಮಾಡುವುದು.

ಅಡುಗೆಗೆ ಆರೋಗ್ಯಕರವಾದ ಎಣ್ಣೆ
ತೆಂಗಿನೆಣ್ಣೆಯು ಇದೀಗ ಪಾಶ್ಚಾತ್ಯ ದೇಶಗಳಲ್ಲೂ ಮನ್ನಣೆಯನ್ನು ಪಡೆದುಕೊಳ್ಳುತ್ತಿದೆ. ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುವ ಎಣ್ಣೆ ಎಂದು ಪರಿಗಣಿಸಲಾಗಿದೆ. ತೆಂಗಿನೆಣ್ಣೆ ಸೇವಿಸುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚುವದು. ಅಲ್ಲದೆ ದೈಹಿಕವಾದ ದೌರ್ಬಲ್ಯವನ್ನು ತೊಡೆದುಹಾಕಲು ಸಹಾಯ ಮಾಡುವುದು. ಆರೋಗ್ಯಕರವಾದ ಅಂಶಗಳನ್ನು ಒಳಗೊಂಡಿರುವುದರಿಂದ ಇದನ್ನು"ಆಲ್ ಇನ್ ಒನ್"ಎಂದು ಪರಿಗಣಿಸಲಾಗುವುದು.



Click it and Unblock the Notifications











