Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
8 ಗಂಟೆ ನಿದ್ದೆ ಮಾಡಿದ್ರೂ ಇನ್ನೂ ಸುಸ್ತಾದಂತಾಗುತ್ತಾ ?
ಕಳೆದ ರಾತ್ರಿಯ ನಿದ್ರೆ ಸಾಕಾಗಲಿಲ್ಲ ಎಂದು ನಿಮಗೆ ಅನಿಸುತ್ತಿದೆಯೇ? ಇದರಿಂದಾಗಿ ನಿಮ್ಮ ಸಂಪೂರ್ಣ ದಿನ ದಣಿದಂತೆ, ಆಲಸ್ಯವಾದಂತೆ,ಮತ್ತು ನಿಶ್ಶಕ್ತಿಯ ಅನುಭವವಾಗಬಹುದು. ನೀವು ತಡ ರಾತ್ರಿ ಎಚ್ಚರವಿದ್ದು ನೋಡುವ ಸಿನಿಮಾ, ತಡವಾಗಿ ಭೋಜನ ಮಾಡುವುದು , ನಿಮ್ಮ ಇತರ ದಿನಚರಿಯ ಕಾರಣದಿಂದ ಈ ರೀತಿ ಆಗುತ್ತಿರಬಹುದು. ಅಂತಹ ಒಂದು ದಿನ ತಿಂಗಳಿಗೆ ಒಂದು ಬಾರಿಯಾದರೆ ಪರವಾಗಿಲ್ಲ. ಆದರೆ 8 ಗಂಟೆಗಳ ನಿದ್ರೆಯ ನಂತರವೂ ನಿಮಗೆ ಹೀಗೆ ಅನಿಸುತ್ತದೆ ಎಂದಾದಲ್ಲಿ ಇದು ಕಳವಳದ ವಿಷಯವಾಗಿದೆ.
ನೀವು ನಿದ್ರೆ ಮಾಡುವ ರೀತಿಯಲ್ಲಿ ಸಣ್ಣ ಬದಲಾವಣೆ, ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳು, ಆರೋಗ್ಯಕರ ಆಹಾರ ಮತ್ತು ಉತ್ತಮ ವ್ಯಾಯಾಮಗಳು ಹಗಲಿನ ಆಲಸ್ಯ, ದಣಿವು ಮತ್ತು ನಿಶ್ಶಕ್ತಿಯನ್ನು ಸಂಪೂರ್ಣವಾಗಿ ನಿವಾರಿಸಲು ನೈಸರ್ಗಿಕ ಔಷಧಿಯಾಗಿವೆ. ಇದು ನಿಮ್ಮ ನಿದ್ರಾ ಚಕ್ರವನ್ನು ಹೊಂದಿಸಿ ಪ್ರತಿ ಬೆಳಿಗ್ಗೆ ತಾಜಾ ಭಾವನೆ ಮೂಡಿಸುತ್ತದೆ.

ನಿಮ್ಮ ಮಲಗುವ ಹವ್ಯಾಸ
ಹಗಲಿನ ನಿರಂತರ ಬಳಲಿಕೆ ನೀವು ಎಲ್ಲೋ ತಪ್ಪು ಮಾಡುತ್ತಿದ್ದೀರಿ ಎಂದು ಹೇಳುತ್ತದೆ. ಮತ್ತು ನಿಮ್ಮ ಮಲಗುವ ಹವ್ಯಾಸವನ್ನು ಹೊಂದಿಕೊಂಡಿದೆ. ನಿಮ್ಮ REM ನಿದ್ರೆಯ ( Rapid Eye Movement ಅಥವಾ ಕ್ಷಿಪ್ರ ನೇತ್ರ ಚಲನಾ ನಿದ್ರಾವಸ್ಥೆ) ನಡುವೆ ನೀವು ಎಚ್ಚರಗೊಳ್ಳುತ್ತಿದ್ದರೆ ಇದು ಸಂಭವಿಸುವ ಸಾಧ್ಯತೆ ಇದೆ. ಇದು ದಿನಪೂರ್ತಿ ನಿಮ್ಮನ್ನು ನಿರುತ್ಸಾಹವನ್ನುಂಟು ಮಾಡಬಹುದು.
REM ನಿದ್ರೆ ಎಂದರೇನು?
ರಾತ್ರಿಯ ಸಮಯ ಮಧ್ಯಂತರಗಳಲ್ಲಿ ಸಂಭವಿಸುವ ಒಂದು ರೀತಿಯ ನಿದ್ರೆ. ತ್ವರಿತ ಕಣ್ಣಿನ ಚಲನೆಗಳು, ಹೆಚ್ಚು ಕನಸು ಮತ್ತು ದೈಹಿಕ ಚಲನೆ, ಮತ್ತು ವೇಗವಾದ ನಾಡಿ ಮತ್ತು ಉಸಿರಾಟದ ಮೂಲಕ ಇದನ್ನು ನಿರೂಪಿಸಲ್ಪಡುತ್ತದೆ. ಒಂದು ನಿರ್ದಿಷ್ಟ ನಿದ್ರಾ ಚಕ್ರವು ದೇಹಕ್ಕೆ ಬಹಳ ಮುಖ್ಯವಾದುದು. ಒಂದು ವೇಳೆ ಈ ನಿದ್ರಾ ಚಕ್ರದಲ್ಲಿ ವ್ಯತ್ಯಯ ಕಂಡರೆ ನಿಮ್ಮ ಶರೀರ ಗೊಂದಲಕ್ಕೊಳಗಾಗುತ್ತದೆ. ಆದುದರಿಂದ ಬೆಳಗ್ಗೆ ಏಳಬೇಕಾದ ಸಮಯವನ್ನು ನಿರ್ಧರಿಸಿ, ಒಂದು ಸಮಯವನ್ನು ನಿಗದಿಪಡಿಸಿ. 8 ಗಂಟೆಗಳ ಎಣಿಕೆ ಮಾಡಿ. ಅದೇ ಸಮಯವನ್ನು ದಿನವೂ ಅನುಸರಿಸಬೇಕು.
ಕೊಬ್ಬಿನ ಆಹಾರ ಕಡಿಮೆ ಮಾಡಿ
ಕೆಲವು ಆಹಾರಗಳನ್ನು ಕಡಿಮೆ ಮಾಡುವುದರಿಂದ ಅಥವಾ ಬಿಡುವುದರಿಂದ ನೀವು ಚೆನ್ನಾಗಿ ನಿದ್ರಿಸುವಂತೆ ಮಾಡಬಹುದು. ಸಕ್ಕರೆ, ಕಾರ್ಬ್ಸ್, ಕ್ಯಾಫೀನ್, ಕೊಬ್ಬಿನ ಸಂಸ್ಕರಿತ ಆಹಾರಗಳನ್ನು ದೂರವಿಡುವುದು ಉತ್ತಮ. 2017 ರಲ್ಲಿ ನಡೆಸಿದ ಅಧ್ಯಯನದ ನಂತರ, ಈ ದಿನನಿತ್ಯದ ಅರೆನಿದ್ರಾವಸ್ಥೆಯನ್ನು ಉಂಟುಮಾಡುವ ಒಂದು ಅತ್ಯಂತ ಆಶ್ಚರ್ಯಕರ ಕಾರಣವೆಂದರೆ ಒಬ್ಬ ವ್ಯಕ್ತಿಯ ಮಲಗುವ ಸ್ಥಾನ. ಹೌದು! ಅದು ಸಂಪೂರ್ಣವಾಗಿ ಸತ್ಯವಾಗಿದೆ. ನಿಮ್ಮ ನಿದ್ರೆಯ ಸ್ಥಾನವು ಹಗಲಿನ ದಣಿವವನ್ನು ತೊಡೆದುಹಾಕಲು ಸಹಾಯಕವಾಗಬಹುದು.
ನಾವು ತಿಳಿದಿರುವ ಹೆಚ್ಚಿನ ಮೂಲ ನಿದ್ರೆ ಸ್ಥಾನಗಳು ಯಾವುವು? ನೋಡೋಣ.
ಭ್ರೂಣದ ಪೊಸಿಷನ್: ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಈ ಸುರುಳಿಯಾಕಾರದ ಭ್ರೂಣದ ಸ್ಥಾನದಲ್ಲಿ ನಿದ್ರಿಸುತ್ತಾರೆ. ಇದು ಸಾಮಾನ್ಯ ಮಲಗುವ ಸ್ಥಾನಗಳಲ್ಲಿ ಒಂದಾಗಿದೆ.
2. ಸೋಲ್ಜರ್ ಪೊಸಿಷನ್: ಈ ಸ್ಥಾನದಲ್ಲಿ, ಜನರು ತಮ್ಮ ನೇರವಾಗಿ ಮಲಗಿದ್ದು ಕೈಗಳು ಶರೀರದ ಪಕ್ಕದಲ್ಲಿರುತ್ತದೆ.
3. ಮುಕ್ತ ಪತನ ಸ್ಥಾನ: ಈ ಸ್ಥಾನದಲ್ಲಿ, ವ್ಯಕ್ತಿಯು ತನ್ನ ಹೊಟ್ಟೆಯಮೇಲೆ ಭಾರ ಹಾಕಿ ನಿದ್ರಿಸುತ್ತಾನೆ ( ಕವಚಿ). ಕೈಗಳು ತಮ್ಮ ಬದಿಯಲ್ಲಿ ಅಥವಾ ಅವರ ತಲೆಯ ಬಳಿ ಇರಬಹುದು.
4. ಲಾಗ್ ಸ್ಥಾನ: ಈ ಸ್ಥಾನದಲ್ಲಿ, ವ್ಯಕ್ತಿಯು ಅವನ ಒಂದು ಬದಿಯಲ್ಲಿ ನಿದ್ರಿಸುತ್ತಾನೆ. ಅದು ಅವನ ಎಡ ಅಥವಾ ಬಲದಲ್ಲಿರಬಹುದು.
ಹೃದಯ ಸಂಬಂಧಿ ಸಮಸ್ಯೆ ಉಂಟಾಗುತ್ತದೆ
ನೀವು ಭ್ರೂಣ, ಮುಕ್ತ ಪತನ ಅಥವಾ ಲಾಗ್ ಸ್ಲೀಪರ್ ಆಗಿದ್ದರೆ, ನೀವು ಹಗಲಿನ ನಿಶ್ಶಕ್ತಿ ಅಥವಾ ಆಲಸ್ಯದ ತೊಂದರೆಗೆ ಒಳಗಾಗಬಹುದು. ಒಂದು ಬದಿಯಲ್ಲಿ ನಿದ್ರಿಸುವುದರಿಂದ ಭುಜ ಮತ್ತು ಸೊಂಟ ನೋವನ್ನು ಇನ್ನಷ್ಟು ಹದಗೆಡಿಸಬಹುದು. ಭ್ರೂಣದ ಸ್ಥಾನವು ದೀರ್ಘಕಾಲದವರೆಗೆ ಹೃದಯ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಅಧ್ಯಯನ ತಿಳಿಸಿದೆ.
ಹೊಟ್ಟೆಯಮೇಲೆ ಭಾರ ಹಾಕಿ ಮಲಗ್ತೀರಾ?
ನಿಮ್ಮ ಹೊಟ್ಟೆಯಮೇಲೆ ಭಾರ ಹಾಕಿ ನಿದ್ದೆ ಮಾಡಿದರೆ, ನಿಮ್ಮ ದೇಹದ ಮೇಲೆ ಸಾಕಷ್ಟು ಒತ್ತಡವನ್ನು ನೀವು ಹೇರಿದಂತಾಗುತ್ತದೆ. ಅಂದರೆ ನಿಮ್ಮ ದೇಹದಲ್ಲಿ ಇರುವ ಅಂಗಗಳನ್ನು ಒತ್ತಡಕ್ಕೊಳಪಡುತ್ತದೆ. ನಿದ್ರಾ ಸಮಯ ವಿಶ್ರಾಂತಿಯ ಸಮಯ. ಆದ ಕಾರಣ ನಿಮ್ಮ ದೇಹಕ್ಕೆ ಇದು ಕೆಟ್ಟದು, ನಿಮ್ಮ ದೇಹವು ವಿಶ್ರಾಂತಿ ಅಗತ್ಯದಲ್ಲಿರುತ್ತದೆ. ಇದು ಸ್ನಾಯು ನೋವು, ಮರಗಟ್ಟುವಿಕೆಗೆ ಕಾರಣವಾಗಿ ಪ್ರತಿ ಒಂದು ಘಂಟೆಯ ಬಳಿಕ ಸ್ಥಾನವನ್ನು ಬದಲಾಯಿಸುವಂತೆ ಮಾಡಬಹುದು
ಸೋಲ್ಜರ್ ಪೊಸಿಷನ್ ಉತ್ತಮ
ಸೋಲ್ಜರ್ ಪೊಸಿಷನ್ ಎಂಬುದು ಉತ್ತಮ ವಿಶ್ರಾಂತಿಗೆ ನಿಮ್ಮ ಪರಿಹಾರವಾಗಿದ್ದು, ನಿಮ್ಮನ್ನು ಸಕ್ರಿಯ ಮತ್ತು ಶಕ್ತಿಯುತವಾಗಿ ಮಾಡಲು ಸಹಾಯಕವಾಗಿದೆ. ಏಕೆಂದರೆ ಇದು ನೋವು, ಎದೆಯುರಿ ಎದೆ ನೋವಿನ ಅಪಾಯವನ್ನು ಕಡಿಮೆ ಮಾಡುತ್ತದೆ. ನೀವು ನಿಮ್ಮ ಬೆನ್ನಿನಲ್ಲಿ ಮಲಗಿದ್ದಾಗ ನಿಮ್ಮ ದೇಹದ ದ್ರವ್ಯರಾಶಿಯು ಯಾವುದೇ ದೇಹದ ಭಾಗದಲ್ಲಿ ಒತ್ತಡವಿಲ್ಲದೆ ವಿತರಿಸಲ್ಪಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














