Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಈ 5 ಲೋಹಗಳ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ!
ಅಡುಗೆ ಮಾಡುವುದು ಕೂಡ ಒಂದು ರೀತಿಯ ಕಲೆ. ಇದು ಪ್ರತಿಯೊಬ್ಬರಿಗೂ ಒಲಿದು ಬರುವುದಿಲ್ಲ. ಇದನ್ನು ಒಲಿಸಿಕೊಳ್ಳಲು ಶ್ರಮ ಕೂಡ ಅಗತ್ಯ. ಅಡುಗೆ ತಯಾರಿಸುವ ಪಾತ್ರೆಯಿಂದ ಹಿಡಿದು ತಾಜಾ ತರಕಾರಿಗಳು, ಬಳಸುವ ಸಾಂಬಾರ ಪದಾರ್ಥಗಳು ಹೀಗೆ ಪ್ರತಿಯೊಂದನ್ನು ತುಂಬಾ ಗಮನಿಸಿದರೆ ಆಗ ಆರೋಗ್ಯಕರವಾಗಿರುವ ಆಹಾರವು ತಯಾರಾಗುವುದು.
ಆದರೆ ಕೆಲವೊಂದು ಲೋಹಗಳ ಪಾತ್ರೆಗಳಲ್ಲಿ ಅಡುಗೆ ತಯಾರಿಸಿದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ನಿಮಗೆ ತಿಳಿದಿದೆಯಾ? ನಿಮ್ಮ ಕುಟುಂಬಕ್ಕೆ ಆರೋಗ್ಯಕರವಾಗಿರುವ ಆಹಾರವನ್ನು ತಯಾರು ಮಾಡಲು ನೀವು ಮೊದಲ ಆದ್ಯತೆ ನೀಡುವಿರಾದರೆ ಕೆಲವೊಂದು ಲೋಹದ ಪಾತ್ರೆಗಳ ಬಗ್ಗೆ ಗಮನಹರಿಸಬೇಕು. ಯಾಕೆಂದರೆ ಇದು ದೇಹದಲ್ಲಿ ರಾಸಾಯನಿಕ ಪ್ರಕ್ರಿಯೆ ಉಂಟು ಮಾಡಬಹುದು ಮತ್ತು ಆರೋಗ್ಯಕ್ಕೆ ಹಾನಿಯಾಗಬಹುದು. ಇಂತಹ ಪಾತ್ರೆಗಳು ಯಾವುದು ಎಂದು ತಿಳಿಯಿರಿ....

1.ಹೊಳಪಿನ ಲೇಪನದ ಪಾತ್ರೆಗಳನ್ನು ಖರೀದಿಸಬೇಡಿ
ತಾಮ್ರದ ಪಾತ್ರೆಗಳು ಅಡುಗೆ ಮಾಡಲು ತುಂಬಾ ಆರೋಗ್ಯಕಾರಿ ಆಯ್ಕೆಯೆಂದು ಪರಿಗಣಿಸಲಾಗಿದೆ. ಇದು ಅಡುಗೆಯನ್ನು ದೀರ್ಘಕಾಲದ ತನಕ ಬಿಸಿಯಾಗಿಡುವುದು. ಆದರೆ ಉಪ್ಪಿನಾಂಶ ಹೆಚ್ಚಿರುವಂತಹ ಆಹಾರವನ್ನು ತಾಮ್ರದ ಪಾತ್ರೆಗಳಲ್ಲಿ ತಯಾರಿಸಬಾರದು. ಯಾಕೆಂದರೆ ಐಯೋಡಿನ್ ವೇಗವಾಗಿ ತಾಮ್ರದೊಂದಿಗೆ ಬೇಗನೆ ಪ್ರತಿಕ್ರಿಯಿಸುವುದು. ಇದು ಹೆಚ್ಚಿನ ತಾಮ್ರದ ಅಂಶಗಳನ್ನು ಬಿಡುಗಡೆ ಮಾಡುವುದು. ಇದರಿಂದ ಇಂತಹ ಪಾತ್ರೆಗಳಲ್ಲಿ ಅಡುಗೆ ಮಾಡುವಾಗ ಎಚ್ಚರಿಕೆ ವಹಿಸಬೇಕು.

2.ಅಲ್ಯೂಮಿನಿಯಂ ಪಾತ್ರೆ ಖರೀದಿಸುವ ಮೊದಲು ಗಮನಿಸಿ
ಅಲ್ಯೂಮಿನಿಯಂ ಪಾತ್ರೆಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತೇವೆ. ಆದರೆ ಇದು ಹಳದಿಯಾಗಿರುವುದೆಲ್ಲವೂ ಬಂಗಾರವಲ್ಲ. ಅಲ್ಯೂಮಿನಿಯಂನಿಂದ ಮಾಡಿರುವಂತಹ ಪಾತ್ರೆಗಳು ಅಡುಗೆ ಮಾಡಲು ಒಳ್ಳೆಯದಲ್ಲ. ಈ ಪಾತ್ರೆಗಳು ಬೇಗನೆ ಬಿಸಿಯಾಗುವುದು ಮತ್ತು ಆಮ್ಲೀಯ ತರಕಾರಿಗಳ ಜತೆಗೆ ಬೇಗನೆ ಪ್ರತಿಕ್ರಿಯಿಸುವುದು. ಇದರಿಂದ ಇಂತಹ ಪಾತ್ರೆಗಳಿಂದ ದೂರವಿರಿ. ಈ ರಾಸಾಯನಿಕ ಪ್ರತಿಕ್ರಿಯೆಯು ಪ್ರತಿರೋಧಕ ವ್ಯವಸ್ಥೆ ಹಾನಿಯುಂಟು ಮಾಡುವುದು.

3.ಕಣ್ಣು ಮುಚ್ಚಿ ಸಂಪ್ರದಾಯನಿಕ ಅಡುಗೆ ವಿಧಾನ ಪಾಲಿಸಬೇಡಿ
ನಮ್ಮ ಹಿರಿಯರು ಹಿತ್ತಾಳೆ ಪಾತ್ರೆಗಳನ್ನು ಅಡುಗೆ ಮಾಡಲು ಬಳಸುತ್ತಿದ್ದರು. ಆದರೆ ಇದು ತುಂಬಾ ಭಾರವಾಗಿರುವುದು ಮತ್ತು ಅವುಗಳನ್ನು ಎತ್ತುವುದು ತುಂಬಾ ಕಷ್ಟ. ಹಿತ್ತಾಳೆ ಪಾತ್ರೆಯಿಂದ ಅಡುಗೆ ಮಾಡುವುದು ಮತ್ತು ಬಟ್ಟಲಿನಲ್ಲಿ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹಿತ್ತಾಳೆ ಬಟ್ಟಲಿನಲ್ಲಿ ಊಟ ಮಾಡಿದರೆ ಯಾವುದೇ ಹಾನಿಯಾಗುವುದಿಲ್ಲ. ಆದರೆ ಅಡುಗೆ ಮಾಡುವಾಗ ಹಿತ್ತಾಳೆಯು ಉಪ್ಪು ಮತ್ತು ಆಮ್ಲೀಯ ಆಹಾರಕ್ಕೆ ಬೇಗನೆ ಪ್ರತಿಕ್ರಿಯಿಸುವುದು. ಇದರಿಂದ ಇದನ್ನು ಕಡೆಗಣಿಸಬೇಕು.

4.ಸ್ಟೈನ್ ಲೆಸ್ ಸ್ಟೀಲ್ ಗಳೂ ಒಳ್ಳೆಯದಲ್ಲ
ಇಂದಿನ ದಿನಗಳಲ್ಲಿ ಹೆಚ್ಚಾಗಿ ಸ್ಟೈನ್ ಲೆಸ್ ಸ್ಟೀಲ್ ನಲ್ಲಿ ಜನರು ಅಡುಗೆ ಮಾಡಿಕೊಳ್ಳುವರು. ಆದರೆ ನಿಮ್ಮ ಇಷ್ಟದ ಆಹಾರವನ್ನು ತಯಾರಿಸಲು ಇದು ಒಳ್ಳೆಯ ಪಾತ್ರೆಯಲ್ಲವೆಂದು ಹೆಚ್ಚಿನವರಿಗೆ ತಿಳಿದಿಲ್ಲ. ಕ್ರೋಮಿಯಂ, ನಿಕೆಲ್, ಸಿಲಿಕಾನ್ ಮತ್ತು ಕಾರ್ಬನ್ ನ ಮಿಶ್ರಣ ಇದಾಗಿದೆ. ಆಮ್ಲೀಯ ಆಹಾರದೊಂದಿಗೆ ಇದು ಬೇಗನೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳನ್ನು ಖರೀದಿಸುವ ಮೊದಲು ನೀವು ಇದರ ಗುಣಮಟ್ಟ ಪರೀಕ್ಷೆ ಮಾಡಿಕೊಳ್ಳಿ. ಸರಿಯಾದ ಕ್ರಮದಲ್ಲಿ ಇದನ್ನು ತಯಾರಿಸದೆ ಇದ್ದರೆ ದೇಹಕ್ಕೆ ಹಾನಿಯಾಗಬಹುದು. ಒಳ್ಳೆಯ ಗುಣಮಟ್ಟದ ಪಾತ್ರೆಗಳನ್ನು ನೀವು ಬಳಸಿ.

5.ಆರೋಗ್ಯಕರ ಅಡುಗೆಗೆ ಕಬ್ಬಿಣದ ಪಾತ್ರೆಗಳು
ಕಬ್ಬಿಣದ ಪಾತ್ರೆಗಳು ಬೇರೆಲ್ಲಾ ಪಾತ್ರೆಗಳಿಗಿಂತ ತುಂಬಾ ಒಳ್ಳೆಯ ಆಯ್ಕೆ. ಯಾಕೆಂದರೆ ಇದು ನೈಸರ್ಗಿಕವಾಗಿ ಕಬ್ಬಿಣ ಬಿಡುಗಡೆ ಮಾಡುವುದು. ಇದು ನಮ್ಮ ದೇಹಕ್ಕೆ ಪ್ರಮುಖವಾಗಿ ಬೇಕಿರುವುದು. ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡಿದರೆ ಅದು ಗರ್ಭವತಿ ಮಹಿಳೆಯರಿಗೆ ತುಂಬಾ ಒಳ್ಳೆಯದು ಎಂದು ಕೆಲವು ಅಧ್ಯಯನಗಳು ಹೇಳಿವೆ. ಇದು ತಾಯಿ ಗರ್ಭದಲ್ಲಿರುವ ಮಗುವಿನ ಪ್ರಮುಖ ಪೋಷಕಾಂಶ ನೀಡುವುದು.



Click it and Unblock the Notifications
