Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಿಳೆಯರೇ ಎಚ್ಚರ-ಬಿಗಿಯಾದ ಬ್ರಾ ಧರಿಸಿದರೆ 'ಎದೆ ನೋವು' ಬರಬಹುದು!
ಹೆಚ್ಚಿನ ಮಹಿಳೆಯರಿಗೆ ತಮ್ಮ ದೇಹದ ಅಂಗದ ಗಾತ್ರವೇ ಸರಿಯಾಗಿ ತಿಳಿದಿಲ್ಲವೆಂದು ಹೇಳಬಹುದು. ಹೌದು, ಇದು ನಿಜ. ಯಾಕೆಂದರೆ ಅಧ್ಯಯನವೊಂದರ ಪ್ರಕಾರ ಶೇ. 70-80 ಮಂದಿ ಮಹಿಳೆಯರು ತಪ್ಪು ಗಾತ್ರದ ಬ್ರಾಗಳನ್ನು ಬಳಸುತ್ತಾರಂತೆ! ಇದರಿಂದಾಗಿ ಅವರು ತಮ್ಮ ಆರೋಗ್ಯವನ್ನೇ ಅಪಾಯಕ್ಕೀಡು ಮಾಡುತ್ತಿದ್ದಾರೆ.

ಯಾಕೆಂದರೆ ಹೆಚ್ಚಿನ ಮಹಿಳೆಯರು ಬ್ರಾದ ಗಾತ್ರವು ತಮಗೆ ಹೊಂದಿಕೊಳ್ಳುತ್ತದೆಯಾ ಎಂದು ತಿಳಿದು ಖರೀದಿಸುವ ಬದಲು, ಅದರ ಅಂದಚಂದಕ್ಕೆ ಮಾರುಹೋಗಿ ಖರೀದಿಸುವರಂತೆ. ಮಹಿಳೆಯರು ಬ್ರಾ ಖರೀದಿಸುವ ವೇಳೆ ಮಾಡುವಂತಹ ದೊಡ್ಡ ತಪ್ಪೆಂದರೆ ಅವರು ಸಣ್ಣ ಗಾತ್ರದ ಅಥವಾ ಬಿಗಿಯಾಗಿರುವಂತಹ ಬ್ರಾ ಖರೀದಿ ಮಾಡುವುದು. ಬಿಗಿಯಾಗಿರುವ ಬ್ರಾ ಧರಿಸುವುದರಿಂದ ಮಹಿಳೆಯರಿಗೆ ಎದೆನೋವು ಬರುವುದೇ? ಹಾಗಾದರೆ ಮುಂದೆ ಓದುತ್ತಾ ಸಾಗಿ.

ಬಿಗಿಯಾಗಿರುವ ಬ್ರಾದಿಂದ ಎದೆನೋವು ಬರಬಹುದೇ?
ಹೌದು, ಇದು ನಿಜ. ಬಿಗಿಯಾದ ಬ್ರಾದಿಂದ ಸ್ತನಗಳಿಗೆ ನೋವು ಉಂಟಾಗಬಹುದು. ಇದು ಬಳಿಕ ಎದೆಗೂ ಹಬ್ಬಬಹುದು. ಇದರ ಹಿಂದಿನ ಕಾರಣವೆಂದರೆ ಸ್ತನ ಹಾಗೂ ಬ್ರಾದ ಹಿಂಭಾಗವು ಟ್ರಾಪಜಿಯಸ್ ಎನ್ನುವ ಸ್ನಾಯುವಿನ ಮೇಲೆ ಒತ್ತಡ ಹಾಕುವುದು. ಈ ಸ್ನಾಯು ಭುಜ ಹಾಗೂ ಕುತ್ತಿಗೆಯನ್ನು ಸಂಪರ್ಕಿಸುವುದು. ಅತಿಯಾದ, ಅನಗತ್ಯ ಮತ್ತು ನಿರಂತರ ಒತ್ತಡದಿಂದಾಗಿ ಸ್ನಾಯುವು ಭುಜ ನೋವು ಉಂಟು ಮಾಡಿ, ಬಳಿಕ ಇದು ಕುತ್ತಿಗೆ ಮತ್ತು ಎದೆಗೆ ಹಬ್ಬಬಹುದು. ದೊಡ್ಡ ಸ್ತನಗಳು ಇರುವಂತಹ ಮಹಿಳೆಯರು ಬಿಗಿಯಾದ ಬ್ರಾ ಆಯ್ಕೆ ಮಾಡುವರು. ಇದರಿಂದ ಎದೆಯಲ್ಲಿರುವ ಪೆಕ್ಟೊರಾಲ್ ಸ್ನಾಯುವು ಒತ್ತಲ್ಪಟ್ಟು ರಕ್ತಸಂಚಾರದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಎದೆನೋವು ಕಾಣಿಸಬಹುದು.

ಬ್ರಾ ಬಿಗಿಯಾಗಿದೆ ಎಂದು ತೋರಿಸುವ ಚಿಹ್ನೆಗಳು
ಸ್ತನ ಹಾಗೂ ಬೆನ್ನಿನ ಭಾಗದಲ್ಲಿ ನಿಮಗೆ ಬಿಗಿ ಹಾಗೂ ಒತ್ತಡದ ಅನುಭವವಾಗುವ ಜತೆಗೆ ಇತರ ಕೆಲವೊಂದು ಕಾರಣಗಳಿಂದಲೂ ಬ್ರಾ ಬಿಗಿಯಾಗಿದೆ ಎಂದು ನೀವು ತಿಳಿಯಬಹುದು. ಇದು ಯಾವುದು ಎಂದು ತಿಳಿಯಿರಿ.
• ಸ್ತನಗಳು ಕಪ್ ನ ಮೇಲೆ, ಬದಿಗೆ ಮತ್ತು ಕೆಳಗಿನಿಂದ ಹೊರಗೆ ಬರಬಹುದು. ಇದರಿಂದ ಸ್ತನಗಳಿಗೆ ಗಾತ್ರವಿಲ್ಲದಂತೆ ಆಗಬಹುದು.
• ನಿಮ್ಮ ಬ್ರಾ ಕೊನೆಯ ಹುಕ್ ನಲ್ಲಿರಬಹುದು. ಮಧ್ಯದ ಹುಕ್ ನಲ್ಲಿದ್ದರೆ ಇದು ತುಂಬಾ ಆರಾಮದಾಯಕ

ಬ್ರಾ ಬಿಗಿಯಾಗಿದೆ ಎಂದು ತೋರಿಸುವ ಚಿಹ್ನೆಗಳು
•ಪಟ್ಟಿಗಳು ಹಾಕುವಂತಹ ಒತ್ತಡದಿಂದಾಗಿ ನಿಮ್ಮ ಭುಜಗಳಲ್ಲಿ ಗುರುತು ಮೂಡಬಹುದು.
• ಬ್ರಾದ ಅಂಡರ್ ವೈಯರ್ ನಿಮಗೆ ಚುಚ್ಚಬಹುದು.
• ಬಿಗಿಯಾಗಿರುವ ಬ್ರಾದಿಂದಾಗಿ ಸ್ನಾಯು ಮತ್ತು ಚರ್ಮವು ಹಿಸುಕಿ ಬೆನ್ನು ಉಬ್ಬಿದಂತೆ ಕಾಣಬಹುದು.

ಸರಿಯಾದ ಗಾತ್ರದ ಬ್ರಾ ಖರೀದಿ ಹೇಗೆ?
• ಬ್ರಾವು ನಿಮ್ಮ ಸ್ತನಗಳಿಗೆ ಸರಿಯಾಗಿರಬೇಕು. ಅದು ಬಿಗಿಯಾಗಿ ಇರಬಾರದು, ಸಡಿಲವಾಗಿ ಇರಬಾರದು. ನಿಮ್ಮ ಎರಡು ಬೆರಳುಗಳನ್ನು ಯಾವುದೇ ಸಮಸ್ಯೆಯಿಲ್ಲದೆ ಬ್ಯಾಂಡ್ ನ ಕೆಳಗಡೆ ಇಟ್ಟರೆ ಇದು ನಿಮಗೆ ತಿಳಿಯುವುದು.
• ಕೈಗಳನ್ನು ಮೇಲಕ್ಕೆ ಎತ್ತಿ ಮತ್ತು ಸುತ್ತಲು ತಿರುಗಿಸಿ. ಸ್ತನಗಳು ಹೊರಗೆ ಬಿದ್ದರೆ ಆಗ ಬ್ರಾ ಸಡಿಲವಾಗಿದೆ ಎಂದು ಹೇಳಬಹುದು. ಭುಜದ ಪಟ್ಟಿ ಸರಿ ಮಾಡಿಕೊಂಡು ಮತ್ತೆ ಪರೀಕ್ಷಿಸಿ. ಈಗಲೂ ಸ್ತನಗಳು ಹೊರಗೆ ಬರುತ್ತಿದ್ದರೆ ಸಣ್ಣ ಗಾತ್ರ ಆಯ್ಕೆ ಮಾಡಿ.
• ನೀವು ಪ್ಯಾಡೆಡ್ ಬ್ರಾ ಧರಿಸುತ್ತಿದ್ದರೆ ಆಗ ಸ್ತನಗಳು ಕಪ್ ನಲ್ಲಿ ಸರಿಯಾಗಿ ಕುಳಿತುಕೊಳ್ಳಬೇಕು.
• ಸ್ತನಗಳು ಹೊರಗೆ ಬರುತ್ತಿದೆ ಎಂದಾದರೆ ಆಗ ಬ್ರಾ ಬಿಗಿಯಾಗಿದೆ ಎಂದು ಹೇಳಬಹುದು. ಸ್ತನಗಳು ಮತ್ತು ಕಪ್ ಗಳ ಮಧ್ಯೆ ಅಂತರವಿದ್ದರೆ ಆಗ ಬ್ರಾ ತುಂಬಾ ಸಡಿಲವಾಗಿದೆ ಎನ್ನಬಹುದು.

ಸರಿಯಾದ ಗಾತ್ರದ ಬ್ರಾ ಖರೀದಿ ಹೇಗೆ?
• ಬೆನ್ನಿನ ಭಾಗವನ್ನು ನೋಡಿ. ಆಗ ಎರಡು ಬದಿಯಿಂದ ಚರ್ಮ ಹೊರಗೆ ಬಂದಿದ್ದರೆ ದೊಡ್ಡ ಗಾತ್ರ ಆಯ್ಕೆ ಮಾಡಿ.
• ನೀವು ಅಂಡರ್ ವೈಯರ್ಡ್ ಬ್ರಾ ಧರಿಸುತ್ತಿದ್ದರೆ ಆಗ ನೀವು ಅಂಡರ್ ವೈರ್ ನ್ನು ನೀವು ಸ್ತನಗಳ ಕೆಳಗೆ ಅಂಗಾತವಾಗಿಡಿ. ಮತ್ತು ಮಧ್ಯದ ಭಾಗವು ಸ್ತನದ ಮೂಳೆಯಲ್ಲಿ ಅಂಗಾತವಾಗಿ ನಿಲ್ಲಬೇಕು.
ಕೆಲವೊಂದು ಅಂಗಡಿಗಳಲ್ಲಿ ಒಳ್ಳೆಯ ವೃತ್ತಿಪರರ ಮಹಿಳೆಯರು ಇರುವರು. ಇವರು ನಿಮ್ಮ ಬ್ರಾಂಡ್ ಗೆ ಅನುಗುಣವಾಗಿ ನಿಮ್ಮ ಸ್ತನಗಳಿಗೆ ಹೊಂದಿಕೆಯಾಗುವ ಬ್ರಾಗಳನ್ನು ಆಯ್ಕೆ ಮಾಡಿಕೊಡುವರು. ಪ್ರತಿಯೊಂದು ಬ್ರಾಂಡ್ ಕೂಡ ಗಾತ್ರವು ಭಿನ್ನವಾಗಿರುವ ಕಾರಣ ನಿಮಗೆ ಒಂದೇ ರೀತಿಯ ಆರಾಮ ಕೊಡದು. ಇದರಿಂದ ನೀವು ಧರಿಸಿ ನೋಡಿ ಮತ್ತೆ ಖರೀದಿಸಿ.

ಮಹಿಳೆಯರೇ ಬ್ರಾ ಕೊಳ್ಳುವಾಗ ಮತ್ತು ಧರಿಸುವಾಗ ಇರಲಿ ಎಚ್ಚರ!
ಬ್ರಾ ಖರೀದಿಸುವುದು ಹಾಗೂ ಧರಿಸುವ ವಿಚಾರ. ಆನ್‌ಲೈನ್ ಮಾರುಕಟ್ಟೆ, ಇಂಟರ್‌ನೆಟ್ ಪ್ರಪಂಚದಲ್ಲಿದ್ದರೂ, ಹಲವು ಮಹಿಳೆಯರಿಗೆ ತಮಗೆ ಸರಿ ಹೊಂದುವ ಬ್ರಾ ಯಾವುದೆಂದು ಆಯ್ಕೆ ಮಾಡಲು ಆಗುವುದಿಲ್ಲ. ಕೆಲವು ಅಧ್ಯಯನ ಹಾಗೂ ಸಂಶೋಧನೆಯ ಪ್ರಕಾರ ಶೇ. 70-80ರಷ್ಟು ಮಹಿಳೆಯರು ತಮ್ಮ ಅಳತೆಯ ಬ್ರಾ ಗಿಂತ ಚಿಕ್ಕ ಅಳತೆಯ ಬ್ರಾ ಆಯ್ಕೆ ಮಾಡಿಕೊಳ್ಳುತ್ತಾರೆ. ಲೇಸ್ ವಿನ್ಯಾಸ, ಬಣ್ಣದ ಆಕರ್ಷಣೆಯ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆಯೇ ಹೊರತು, ಯಾವ ಅಳತೆಯ ಬ್ರಾ ನಮಗೆ ಒಗ್ಗುತ್ತದೆ ಎನ್ನುವುದನ್ನು ತಿಳಿದಿಲ್ಲ. ಈ ರೀತಿಯ ಚಿಕ್ಕ ಅಳತೆಯ ಬ್ರಾ ಧರಿಸುವುದರಿಂದ ಮಹಿಳೆಯರಲ್ಲಿ ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎನ್ನುವುದನ್ನು ಮರೆಯಬಾರದು.

ಬಿಗಿಯಾದ ಬ್ರಾ ಎದೆನೋವು ತರುವುದಾ?
ಹೌದು, ದಿನವಿಡೀ ಚಿಕ್ಕ ಬ್ರಾ ಧರಿಸುವುದರಿಂದ ಸ್ತನದಲ್ಲಿ ನೋವು ಉಂಟಾಗುವುದು. ಇದನ್ನು ರಾತ್ರಿ ನಿದ್ರಿಸುವಾಗಲೂ ಮುಂದುವರಿಸಿದರೆ ಟ್ರಾಪಜಿಯಸ್ ಎನ್ನುವ ಸ್ನಾಯುವಿನ ಮೇಲೆ ಒತ್ತಡ ಉಂಟಾಗುವುದು. ಇದು ಸ್ತನದ ಹಿಂಭಾಗ, ಭುಜ ಮತ್ತು ಕುತ್ತಿಗೆಗೆ ಸಂಪರ್ಕವನ್ನು ಪಡೆದುಕೊಂಡಿರುತ್ತದೆ. ಇದರ ಮೇಲೆ ಒತ್ತಡ ಹೆಚ್ಚಾದಷ್ಟು, ರಕ್ತ ಸಂಚಾರ ಕಡಿಮೆಯಾಗಿ, ನೋವು ಕಾಣಿಸಿಕೊಳ್ಳುವುದು. ಅಲ್ಲದೆ ಪೆಕ್ಟೋರಲ್ ಸ್ನಾಯುವಿನಲ್ಲಿ ರಕ್ತಸಂಚಾರ ಸರಿಯಾಗದಿದ್ದರೆ ಅಥವಾ ಸಂಕುಚಿತ ಕ್ರಿಯೆಗೆ ಅಡ್ಡಿ ಉಂಟಾದರೆ ಎದೆನೋವು ಕಾಣಿಸಿಕೊಳ್ಳುತ್ತದೆ.

ವ್ಯಾಯಾಮ ಮಾಡುವಾಗಲೂ ಇದು ಒಳ್ಳೆಯದಲ್ಲ
ದೈಹಿಕ ವ್ಯಾಯಾಮ ಮಾಡುವಾಗ ಅಥವಾ ಕ್ರೀಡೆಯಲ್ಲಿ ಪಾಲ್ಗೊಳ್ಳುವಾಗ ಮಹಿಳೆಯರು ಸಾಮಾನ್ಯ ಬ್ರಾಗಳ ಆಯ್ಕೆ ಮಾಡಬಾರದು. ವ್ಯಾಯಾಮ ಸಮಯದಲ್ಲಿ ಸ್ನಾಯುಗಳು ಮತ್ತು ಎದೆಯ ಭಾಗ ಸುಮಾರು 8 ಸೆಂ.ಮೀ.ನಷ್ಟು ಹಿಗ್ಗುವ ಸಾಧ್ಯತೆ ಇರುತ್ತದೆ. ಆಗ ಸಾಮಾನ್ಯ ಬ್ರಾ ಧರಿಸಿದರೆ ಅದು ನೋವನ್ನು ಪ್ರಚೋದಿಸುತ್ತದೆ. ಈ ಸಮಯದಲ್ಲಿ ಸ್ಫೋರ್ಟ್ಸ್ ಬ್ರಾ(ಕ್ರೀಡಾ ಸ್ತನಬಂಧ) ಧರಿಸಬೇಕು. ಇದನ್ನು ಸೂಕ್ತ ವಿನ್ಯಾಸದಲ್ಲಿ ತಯಾರಿಸಿರುವುದರಿಂದ ಶೇ. 80ರಷ್ಟು ಮೃದುತ್ವವನ್ನು ಕಾಯ್ದುಕೊಂಡು, ನೋವುಂಟಾಗದಂತೆ ಕಾಪಾಡುತ್ತದೆ.

ಬ್ರಾ ಬಿಗಿಯಾಗಿದೆ ಎಂದು ತಿಳಿಯುವುದು ಹೇಗೆ?
ಸ್ತನ ಹಾಗೂ ಬೆನ್ನಿನ ಸುತ್ತಲೂ ಬಿಗಿತ ಉಂಟಾಗುವುದರಿಂದ ಬ್ರಾ ಬಿಗಿಯಾಗಿದೆ ಎಂದು ಪರಿಗಣಿಸಬಹುದು. ಬ್ರಾದ ಕೊನೆಯ ಹುಕ್ ಹಾಕಿಕೊಂಡರೂ ಬಿಗಿತ ಉಂಟಾದರೆ ಅದು ಚಿಕ್ಕ ಬ್ರಾ ಎನಿಸಿಕೊಳ್ಳುತ್ತದೆ. ಯಾವಾಗಲೂ ಬ್ರಾದ ಮಧ್ಯದ ಹುಕ್ ಆರಾಮದಾಯಕವಾಗಿರುತ್ತದೆ. ಹೀಗಿದ್ದರೆ ಮಾತ್ರ ಬ್ರಾದ ಆಯ್ಕೆ ಸರಿಯಾಗಿದೆ ಎಂದು ತಿಳಿಯಬಹುದು.

ಬ್ರಾ ಬಿಗಿಯಾಗಿದೆ ಎಂದು ಹೇಳುವ ವಿಶೇಷ ಚಿಹ್ನೆಗಳು
ಬ್ರಾ ಬಿಗಿಯಾಗಿದ್ದರೆ, ನಿಮ್ಮ ಸ್ತನ ಬ್ರಾದ ಕಪ್‍ನಿಂದ ಮೇಲೆ ಮತ್ತು ಕೆಳ ಭಾಗದಲ್ಲಿ ಹರಡಿಕೊಂಡು, ಆಕಾರವಿಲ್ಲದಂತೆ ತೋರುತ್ತದೆ. ಬಿಗಿಯಾದ ಬ್ರಾಗಳನ್ನು ಧರಿಸಿದಾಗ ಬೆನ್ನಿನ ಭಾಗದಲ್ಲಿ ಇರುವ ಸ್ನಾಯುಗಳು ಉಬ್ಬಿಕೊಂಡಂತೆ ತೋರುತ್ತದೆ. ಬ್ರಾದ ತೋಳಿನ ಪಟ್ಟಿ ಮತ್ತು ಸೊಂಟದ ಪಟ್ಟಿ ಎರಡು ಸರಿಯಾದ ಅಳತೆಯನ್ನು ಹೊಂದಿದ್ದು ನೋವುಂಟಾಗದಂತಿರಬೇಕು.

ಬ್ರಾದ ಸರಿಯಾದ ಆಯ್ಕೆ ಹೇಗಿರಬೇಕು?
* ಬ್ರಾ ಅತಿಯಾಗಿ ಬಿಗಿ ಮತ್ತು ತುಂಬಾ ಸಡಿಲವಾಗಿರಬಾರದು. ಅದನ್ನು ಧರಿಸಿದಾಗ ಸರಿಯಾದ ಅನುಭವ ನೀಡಬೇಕು. * ಬ್ರಾ ಧರಿಸಿದಾಗ ಕಪ್‍ಗಳಲ್ಲಿ ಸರಿಯಾಗಿ ಸ್ತನ ಕೂತಿರುವಂತೆ ಇರಬೇಕು.
* ಬ್ರಾ ಧರಿಸಿದ ಮೇಲೆ, ಬ್ರಾದ ಸುತ್ತು ಪಟ್ಟಿಯು ಸ್ತನದ ಅರ್ಧ ಭಾಗಕ್ಕೆ ಬರುವಂತಿರಬಾರದು. ಅದು ಸುತ್ತಲೂ ಸರಿಯಾಗಿ ಕುಳಿತಿರಬೇಕು. ತೋಳ್ ಪಟ್ಟಿಯಿಂದ ಬಿಗಿತದ ಅಳತೆ ಮಾಡಿಕೊಂಡಾಗಲೂ, ಸುತ್ತ ಪಟ್ಟಿ ಮೇಲೆ ಬರಬಾರದು.

ಬ್ರಾ ಆಯ್ಕೆಗೆ ಕೆಲವು ಸುಲಭ ಉಪಾಯ
* ಬ್ರಾ ಧರಿಸಿದ ಮೇಲೆ ಸೊಂಟ ಪಟ್ಟಿ ಅಥವಾ ಸುತ್ತು ಪಟ್ಟಿಯ ಒಳಗೆ ಎರಡು ಬೆರಳು ಹೋಗುವಷ್ಟು ಸಡಿಲ ಇರಬೇಕು.
* ಬ್ರಾ ಧರಿಸಿ ಎರಡು ಕೈಗಳನ್ನು ಮೇಲೆ ಎತ್ತಿದಾಗ ಸ್ತನವು ಬ್ರಾಗಿಂತ ಕೆಳಗೆ ಹರಡಿಕೊಳ್ಳಬಾರದು.
* ಪ್ಯಾಡ್ ಇರುವ ಬ್ರಾಗಳ ಆಯ್ಕೆ ಮಾಡುವುದಾದರೆ ಸ್ತನಗಳು ಬ್ರಾದ ಕಪ್‍ನಲ್ಲಿ ಸರಿಯಾಗಿ ಕುಳಿತುಕೊಳ್ಳಬೇಕು. ತುಂಬಾ ಸಡಿಲ ಅಥವಾ ಬಿಗಿಯಾಗಿರಬಾರದು.

ಬ್ರಾಗಳ ಆಯ್ಕೆಯಲ್ಲಿ ಕಪ್‍ನ ಅಳತೆ ಮುಖ್ಯ
ಬ್ರಾ ಆಯ್ಕೆ ಮಾಡುವಾಗ ನಿಮ್ಮ ಕಪ್ ಅಳತೆ ಎಷ್ಟೆಂದು ತಿಳಿದುಕೊಳ್ಳಬೇಕು. ಸುತ್ತಳತೆ ಸರಿಯಾಗಿದ್ದು, ಕಪ್ ಅಳತೆ ಸರಿಯಾಗಿರದಿದ್ದರೆ, ಸೂಕ್ತ ಬ್ರಾ ಆಯ್ಕೆ ಕಷ್ಟವಾಗುವುದು. ಕಪ್‍ನಲ್ಲಿ ಕಪ್-ಎ, ಕಪ್-ಬಿ, ಕಪ್-ಸಿ, ಕಪ್-ಡಿ ಎನ್ನುವ ಅಳತೆ ಇರುತ್ತದೆ. ಅದರಲ್ಲಿ ಯಾವುದು ನಿಮಗೆ ಒಗ್ಗುವ ಕಪ್ ಎಂದು ತಿಳಿದು, ನಂತರ ಬ್ರಾ ಸೈಸ್ ಆಯ್ಕೆ ಮಡಿಕೊಳ್ಳಬೇಕು. ಉದಾ: 32ಬ್ರಾ ಸೈಸ್ ಕಪ್-ಬಿ.



Click it and Unblock the Notifications