Latest Updates
-
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ! -
ಫಿಟ್ನೆಸ್ ಕ್ರೇಜ್: ಮನೆಯಲ್ಲೇ ಫಿಟ್ ಆಗಿರೋದು ಹೇಗೆ? -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ!
ಬಾಕ್ಸರ್ ಅಥವಾ ಬ್ರೀಫ್ಸ್ ಇನ್ನರ್ ವೇರ್-ಪುರುಷರ ಫಲವತ್ತತೆಗೆ ಯಾವುದು ಒಳ್ಳೆಯದು?
ವೈವಾಹಿಕ ಜೀವನಕ್ಕೆ ಕಾಲಿಡುವಂತಹ ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆಯರಿಗೆ ಸಂತಾನಭಿವೃದ್ಧಿ ಮಾಡಿಕೊಳ್ಳಬೇಕೆಂಬ ಇಚ್ಛೆ ಇದ್ದೇ ಇರುವುದು. ಇದು ಪ್ರಕೃತಿ ಸಹಜ. ಆದರೆ ಕೆಲವೊಂದು ಸಲ ದಂಪತಿ ಸಂತಾನಭಿವೃದ್ಧಿಯಲ್ಲಿ ವಿಫಲರಾಗುವರು. ಹೆಚ್ಚಾಗಿ ಮದುವೆಯಾದ ಮೊದಲ ವರ್ಷದಲ್ಲೇ ದಂಪತಿಯು ಮಗುವನ್ನು ಪಡೆಯುವಂತಹ ಸಾಧ್ಯತೆಯು ಶೇ.85ರಷ್ಟು ಇರುವುದು.
ಎರಡನೇ ವರ್ಷದ ಬಳಿಕ ಶೇ.15ರಷ್ಟು ಇದೆ. ಮೊದಲ 12 ತಿಂಗಳಲ್ಲಿ ಮಗುವನ್ನು ಪಡೆಯಲು ವಿಫಲವಾಗುವುದೇ ಬಂಜೆತನದ ಲಕ್ಷಣವಾಗಿದೆ. ಪುರುಷರು ಹಾಗೂ ಮಹಿಳೆಯರಲ್ಲಿ ಇಬ್ಬರಲ್ಲೂ ಇರುವಂತಹ ಸಮಸ್ಯೆಯಿಂದ ಹೀಗೆ ಆಗಬಹುದು. ಪುರುಷರಲ್ಲಿ ಬಂಜೆತನ ಬರಲು ಈ ಕೆಳಗಿನ ಕೆಲವು ಕಾರಣಗಳು ಇರಬಹುದು. ಇದು ಯಾವುದೆಂದು ನೀವು ತಿಳಿಯಿರಿ.
ವೀರ್ಯ ಗಣತಿ ಕಡಿಮೆಯಿರುವುದು
15 ಮಿಲಿಯನ್ ಗಿಂತ ಒಳಗಿರುವುದನ್ನು ಕಡಿಮೆ ಎಂದು ಪರಿಗಣಿಸಲಾಗುವುದು.
ವೀರ್ಯ ಚತುರತೆ ಕಡಿಮೆ
ಅಂಡಾಣುಗಳತ್ತ ವೀರ್ಯವು ಪರಿಣಾಮಕಾರಿಯಾಗಿ ಸಾಗಿಸಲು ವಿಫಲವಾಗುವುದು.
ಅಸಾಮಾನ್ಯ ವೀರ್ಯ
ವೀರ್ಯದ ಅಸಾಮಾನ್ಯ ಗಾತ್ರದಿಂದಾಗಿ ಅದು ಅಂಡಾಣುಗಳನ್ನು ಫಲವತ್ತತೆ ಮಾಡಲು ಕಠಿಣವಾಗುವುದು. ಇದಕ್ಕೆಲ್ಲವೂ ಹಲವಾರು ಕಾರಣಗಳು ಇರಬಹುದು. ಇದರಲ್ಲಿ ಒಂದು ಪ್ರಮುಖ ಕಾರಣವೆಂದರೆ ಅದು ಒಳ ಉಡುಪುಗಳು. ಬಾಕ್ಸರ್ ಅಥವಾ ಬ್ರೀಫ್ಸ್? ಇದರಲ್ಲಿ ಯಾವುದು ಉತ್ತಮ? ವೀರ್ಯದ ಗುಣಮಟ್ಟವು ಫಲವತ್ತತೆ ಮೇಲೆ ಹೇಗೆ ಪರಿಣಾಮ ಬೀರುವುದು? ಆರೋಗ್ಯಕರ ವೀರ್ಯ ಉತ್ಪತ್ತಿ ಮಾಡುವುದು ಹೇಗೆ?

ಬಾಕ್ಸರ್ ಅಥವಾ ಬ್ರೀಫ್ಸ್?
ಬಾಕ್ಸರ್ ಗಳಿಗೆ ಹೋಲಿಸಿದರೆ ಬ್ರೀಪ್ಸ್ ತುಂಬಾ ಬಿಗಿಯಾಗಿರುವುದು. ಬಿಗಿಯಾದ ಒಳಉಡುಪಿನಿಂದಾಗಿ ಉಷ್ಣತೆಯು ಹೆಚ್ಚಾಗುವುದು. ದೇಹದ ಇತರ ಭಾಗಕ್ಕಿಂತ ಉಷ್ಣಾಂಶವು ಕಡಿಮೆಯಾಗಿದ್ದರೆ ಆಗ ಆರೋಗ್ಯಕರ ವೀರ್ಯ ಉತ್ಪತ್ತಿ ಮಾಡಲು ಸಾಧ್ಯ. ಬ್ರೀಫ್ಸ್ ಗಾಳಿಯಾಡಲು ಬಿಡದೆ ಇರುವ ಕಾರಣದಿಂದ ಉಷ್ಣತೆಯು ಅಧಿಕವಾಗಿರುವುದು.

ಬಾಕ್ಸರ್ ಗಳ ವಿಚಾರದಲ್ಲಿ ಹೇಳುವುದಾದರೆ...
ಬಾಕ್ಸರ್ ಗಳ ವಿಚಾರದಲ್ಲಿ ಇದು ತುಂಬಾ ಸಡಿಲವಾಗಿರುವುದು ಮತ್ತು ಗಾಳಿಯಾಡುತ್ತಲಿರುವುದು. ಇದರಿಂದ ದೇಹದ ಇತರ ಭಾಗಕ್ಕಿಂತ ಜನನೇಂದ್ರಿಯಗಳು ಕಡಿಮೆ ಉಷ್ಣತೆ ಹೊಂದಿರುವುದು. ಸಡಿಲವಾಗಿರುವಂತಹ ಒಳಉಡುಪು ಧರಿಸುವಂತಹವರಿಗೆ ಇದು ಒಳ್ಳೆಯ ಸುದ್ದಿ. ಬಿಗಿಯಾಗಿರುವಂತಹ ಒಳಉಡುಪು ಧರಿಸುವಂತಹ ಜನರಿಗೆ ಇದು ಕೆಟ್ಟ ಸುದ್ದಿಯೆಂದರೆ ತಪ್ಪಾಗದು.

ಇದರಲ್ಲಿ ಯಾವುದು ಉತ್ತಮ?
ಹಾವರ್ಡ್ ಟಿಎಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ ಅಧ್ಯಯನದ ಪ್ರಕಾರ ಬಾಕ್ಸರ್ ಗಳು ಮಾತ್ರ ಫಲವತ್ತತೆ ಸ್ನೇಹಿಗಳು ಎಂದು ಹೇಳಲಾಗಿದೆ. ಇದು ಒಳಉಡುಪು ಆಗಿರುವುದಕ್ಕಿಂತಲೂ ಹೆಚ್ಚಾಗಿ ನಿರ್ಮಿಸುವಂತಹ ವಾತಾವರಣವು ಮುಖ್ಯವಾಗಿದೆ. ಬಾಕ್ಸರ್ ಗಳನ್ನು ಫಲವತ್ತತೆ ಸ್ನೇಹಿ ಎಂದು ಕರೆಯಲು ಕಾರಣವೆಂದರೆ ಇದರಲ್ಲಿ ಸರಾಗವಾಗಿ ಗಾಳಿಯಾಡುವುದು ಮತ್ತು ಇದರಿಂದ ವೃಷಣವು ತಂಪಾಗಿರುವುದು. ಆರೋಗ್ಯಕರ ವೀರ್ಯಕ್ಕೆ ತಂಪಾದ ವಾತಾವರಣ ಬೇಕು. ವೀರ್ಯ ಉತ್ಪಾದನೆಗೆ 12-15 ವಾರಗಳು ಬೇಕಾಗುವುದು. ಇದರಿಂದ ಬಾಕ್ಸರ್ ಧರಿಸಿದರೆ ಆಗ ಇದು ನಿಮಗೆ ಪರಿಣಾಮಕಾರಿಯಾದ ಫಲಿತಾಂಶ ನೀಡುವುದು.

ಸಡಿಲವಾಗಿರುವಂತಹ ಒಳಉಡುಪುಗಳು ಆರೋಗ್ಯಕರ
ಕೇವಲ ಬಾಕ್ಸರ್ ಮಾತ್ರವಲ್ಲದೆ ಸಡಿಲವಾಗಿರುವಂತಹ ಯಾವುದೇ ರೀತಿಯ ಒಳಉಡುಪುಗಳು ಆರೋಗ್ಯಕರ ವೀರ್ಯ ಉತ್ಪಾದನೆಗೆ ಸಹಕಾರಿಯಾಗಿರಲಿದೆ. ಉಷ್ಣಾಂಶವನ್ನು ನಿಯಂತ್ರಣದಲ್ಲಿಟ್ಟು ಕೊಂಡಷ್ಟು ವೀರ್ಯದ ಮೇಲೆ ಪರಿಣಾಮವಾಗಲ್ಲ. ವೀರ್ಯದ ಗುಣಮಟ್ಟವು ಫಲವತ್ತತೆ ಮೇಲೆ ಯಾವ ರೀತಿ ಪರಿಣಾಮ ಬೀರುವುದು? ವೀರ್ಯದ ಆರೋಗ್ಯದ ಮೇಲೆ ಮೂರು ವಿಚಾರಗಳು ಪರಿಣಾಮ ಬೀರುವುದು.

ವೀರ್ಯದ ಗುಣಮಟ್ಟ
ಒಂದು ಸಲ್ಖನ ವೇಳೆ ಮಿಲಿಲೀಟರ್ ಗೆ 15 ಮಿಲಿಯನ್ ಗಿಂತ ಹೆಚ್ಚಿನ ವೀರ್ಯವನ್ನು ತುಂಬಾ ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕಿಂತ ಕಡಿಮೆ ಇದ್ದರೆ ಆಗ ಅಂಡಾಣುಗಳು ಫಲವತ್ತತೆ ಹೊಂದುವುದು ಕಷ್ಟ.

ವೀರ್ಯದ ಚತುರತೆ
ಅಂಡಾಣುವು ಫಲವತ್ತತೆ ಪಡೆಯಬೇಕೆಂದರೆ ಆಗ ವೀರ್ಯವು ಅಲ್ಲಿಗೆ ಈಜಿಕೊಂಡು ಹೋಗಬೇಕು ಮತ್ತು ಮಹಿಳೆಯ ಗರ್ಭಕಂಠ, ಗರ್ಭಕೋಶ ಮತ್ತು ಡಿಂಬನಾಳವನ್ನು ತಲುಪಬೇಕು. ಹೀಗೆ ಮಾಡಲು ವೀರ್ಯವು ವಿಫಲವಾದರೆ ಆಗ ಫಲವತ್ತತೆ ಉಂಟಾಗುವ ಸಾಧ್ಯತೆಯು ತುಂಬಾ ಕಡಿಮೆ.

ವಿನ್ಯಾಸ
ಅಂಡಾಕಾರದ ತಲೆ ಮತ್ತು ಉದ್ದದ ಬಾಲವು ವೀರ್ಯವು ಸರಿಯಾಗಿ ಕೆಲಸ ಮಾಡಲು ನೆರವಾಗುವುದು. ಗರ್ಭ ಧರಿಸಲು ಇವುಗಳಲ್ಲಿ ಕೆಲವೊಂದು ಅನುವಂಶಿಕ ಮಾಹಿತಿಗಳು ಇರುವುದು. ಇದರಲ್ಲಿ ಯಾವುದೇ ಒಂದು ಇಲ್ಲದೆ ಇದ್ದರೂ ಆಗ ಗರ್ಭಧರಿಸುವ ಸಾಧ್ಯತೆಯು ಕಡಿಮೆ ಇರುವುದು. ಇದರಿಂದ ಯಶಸ್ವಿಯಾಗಿ ಗರ್ಭಧರಿಸಲು ವೀರ್ಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಚತುರತೆ ಹೊಂದಿರುವ ಮತ್ತು ಯಾವುದೇ ವೈಕಲ್ಯವಿಲ್ಲದೆ ಇರುವಂತಹ 15 ಮಿಲಿಯನ್‌ಗೂ ಹೆಚ್ಚಿನ ವೀರ್ಯವನ್ನು ಸ್ಖಲನ ಮಾಡಬೇಕಾಗುತ್ತದೆ. ವೀರ್ಯದ ಆರೋಗ್ಯವು ಉತ್ತಮವಾಗಿದ್ದಷ್ಟು ಫಲವತ್ತತೆ ಸಾಧ್ಯತೆಯು ಹೆಚ್ಚಾಗಿರುವುದು.

ಆರೋಗ್ಯಕರ ವೀರ್ಯದ ಉತ್ಪಾದನೆ ಮಾಡುವುದು ಹೇಗೆ?
ಆರೋಗ್ಯಕರ ವೀರ್ಯದ ಮೇಲೆ ಪರಿಣಾಮ ಬೀರುವಂತಹ ಹಲವಾರು ಅಂಶಗಳು ಇವೆ. ದೇಹದ ರಚನೆ, ಜೀವನಶೈಲಿ ಇತ್ಯಾದಿಗಳು ಪ್ರಮುಖ ಪಾತ್ರ ವಹಿಸುವುದು. ವೀರ್ಯದ ಆರೋಗ್ಯವನ್ನು ಸುಧಾರಿಸಲು ಕೆಲವೊಂದು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಬಹುದು.

ಆರೋಗ್ಯಕರ ವೀರ್ಯದ ಉತ್ಪಾದನೆ ಮಾಡುವುದು ಹೇಗೆ?
*ಆರೋಗ್ಯಕರ ತೂಕ ಕಾಪಾಡಿಕೊಳ್ಳಿ. ಬಿಎಂಐ ಹೆಚ್ಚಾದಾಗ ಫಲವತ್ತತೆಯ ಸಾಧ್ಯತೆಯು ಕುಗ್ಗುವುದು ಎಂದು ಅಧ್ಯಯನಗಳು ಹೇಳಿವೆ.
*ಹಣ್ಣುಗಳು ಹಾಗೂ ತರಕಾರಿಗಳನ್ನು ಆದಷ್ಟು ಸೇವನೆ ಮಾಡಿ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ವೀರ್ಯದ ಆರೋಗ್ಯಕ್ಕೆ ನೆರವಾಗುವುದು.
*ಒತ್ತಡದ ಮಟ್ಟ ನಿಯಂತ್ರಿಸಿ. ಒತ್ತಡವು ಲೈಂಗಿಕಾಸಕ್ತಿ ಕಡಿಮೆ ಮಾಡುವುದು. ವೀರ್ಯದ ಉತ್ಪಾದನೆಗೆ ಬೇಕಾಗುವಂತಹ ಹಾರ್ಮೋನು ಬಿಡುಗಡೆಗೂ ಇದು ಪರಿಣಾಮ ಬೀರುವುದು.
*ಸಡಿಲ ಒಳ ಉಡುಪು ಧರಿಸಿ. ಗಾಳಿಯಾಡುವಂತೆ ಇರಲಿ. ಚರ್ಮವು ಸರಿಯಾಗಿ ಉಸಿರಾಡುವಂತೆ ಇರಲಿ. ಇದು ವೃಷಣದ ಉಷ್ಣತೆ ಕಾಪಾಡಿಕೊಂಡು ವೀರ್ಯ ಉತ್ಪತ್ತಿಗೆ ನೆರವಾಗುವುದು. ನೀವು ತಂಪಾಗಿರಿ. ಬಿಸಿ ನೀರಿನ ಸ್ನಾನವನ್ನು ಹೆಚ್ಚು ಮಾಡಬೇಡಿ. ಇದು ದೇಹದ ಉಷ್ಣತೆ ಹೆಚ್ಚು ಮಾಡುವುದು.
*ನಿಮ್ಮ ದೇಹಕ್ಕೆ ವ್ಯಾಯಾಮ ನೀಡಿ. ವ್ಯಾಯಾಮದಿಂದ ವೀರ್ಯಕ್ಕೆ ಮಾತ್ರವಲ್ಲದೆ ಸಂಪೂರ್ಣ ದೇಹಕ್ಕೆ ಹಲವಾರು ಲಾಭಗಳು ಇವೆ. ದೈಹಿಕ ಚಟುವಟಿಕೆಯಿಂದ ಆ್ಯಂಟಿಆಕ್ಸಿಡೆಂಟ್ ಕಿಣ್ವಗಳ ಮಟ್ಟವು ಹೆಚ್ಚಾಗುವುದು ಮತ್ತು ಇದರಿಂದ ಆರೋಗ್ಯಕರ ವೀರ್ಯ ಪಡೆಯಲು ನೆರವಾಗುವುದು.
*ಲೈಂಗಿಕವಾಗಿ ಹರಡುವಂತಹ ಕಾಯಿಲೆಗಳಿಂದ ದೂರವಿರಿ. ಎಸ್ ಟಿಡಿಯಿಂದಾಗಿ ಪುರುಷರಲ್ಲಿ ಫಲವತ್ತತೆ ಸಮಸ್ಯೆ ಬರುವುದು. ಸಂಗಾತಿಗಳ ಸಂಖ್ಯೆಯು ಕಡಿಮೆಯಿರಲಿ ಮತ್ತು ಲೈಂಗಿಕ ಕ್ರಿಯೆ ಬಳಿಕ ಸ್ವಚ್ಛತೆ ಕಾಪಾಡಿಕೊಳ್ಳಿ. ಇದರಿಂದ ಬ್ಯಾಕ್ಟೀರಿಯಾವನ್ನು ದೂರ ಮಾಡಬಹುದು.
*ಧೂಮಪಾನ ಕಡಿಮೆ ಮಾಡಿ. ಧೂಮಪಾನವು ನೇರವಾಗಿ ವೀರ್ಯ ಗಣತಿ ಮೇಲೆ ಪರಿಣಾಮ ಬೀರುವುದು. ಇಷ್ಟು ಮಾತ್ರವಲ್ಲದೆ ಇದು ನಿಮಿರು ದೌರ್ಬಲ್ಯ ಮತ್ತು ಬಂಜೆತನ ಉಂಟು ಮಾಡುವುದು.
*ಮದ್ಯಪಾನ ಕಡಿಮೆ ಮಾಡಿ. ಅತಿಯಾಗಿ ಮದ್ಯಪಾನ ಮಾಡಿದರೆ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆಯಾಗುವುದು. ಇದರಿಂದ ವೀರ್ಯದ ಉತ್ಪತ್ತಿಯು ಕಡಿಮೆಯಾಗುವುದು. ನೀವು ಕುಡಿಯುತ್ತಲಿದ್ದರೆ ಕಡಿಮೆ ಮಾಡಿಕೊಳ್ಳಿ.
*ಲೈಂಗಿಕ ಕ್ರಿಯೆ ವೇಳೆ ಲ್ಯೂಬ್ರಿಕೆಂಟ್ ಬಳಸಬೇಡಿ. ಹಾಸಿಗೆಯಲ್ಲಿ ಮೊದಲ ಸಲ ಇದು ತುಂಬಾ ಒಳ್ಳೆಯದೆಂದು ನಿಮಗನಿಸಬಹುದು. ಆದರೆ ಕೆಲವೊಂದು ಲ್ಯೂಬ್ರಿಕೆಂಟ್ ಗಳು ವೀರ್ಯದ ಮೇಲೆ ಪರಿಣಾಮ ಬೀರುವುದು ಮತ್ತು ಗರ್ಭಕೋಶದ ಗೋಡೆಯಲ್ಲಿ ಕಿರಿಕಿರಿ ಉಂಟು ಮಾಡುವುದು. ನಿಯಮಿತವಾಗಿ ಬಳಸುವ ಬದಲು ಯಾವಾಗಲೊಮ್ಮೆ ಬಳಸಿದರೆ ಒಳ್ಳೆಯದು.
*ಸುತ್ತಲಿನ ವಾತಾವರಣ ಬಗ್ಗೆ ಗಮನಹರಿಸಿ. ಲೋಹಗಳು, ರಾಸಾಯನಿಕಗಳು, ಕೀಟನಾಶಗಳು, ಪೈಂಟ್ ಇತ್ಯಾದಿ ವಿಷಕಾರಕಗಳು ವೀರ್ಯದ ಗುಣಮಟ್ಟ ಮತ್ತು ಪ್ರಮಾಣದ ಮೇಲೆ ಹಾನಿಯುಂಟು ಮಾಡುವುದು. ಇಂತಹ ರಾಸಾಯನಿಕಗಳು ಸುತ್ತಲು ಇರುವಾಗ ನೀವು ರಕ್ಷಣಾತ್ಮಕವಾಗಿರುವಂತಹ ಬಟ್ಟೆಗಳನ್ನು ಧರಿಸಿ. ಸರಿಯಾಗಿರುವಂತಹ ಒಳ ಉಡುಪು ಧರಿಸುವುದು ಅತೀ ಅಗತ್ಯ. ಇದರಂತೆ ನೀವು ಆಯ್ಕೆ ಮಾಡಿ.



Click it and Unblock the Notifications




