Latest Updates
-
ಸ್ವಾತಂತ್ರ್ಯ ದಿನಾಚರಣೆ ನಂತರದ ಕ್ಲೀನಪ್: ಬಾಲ್ಕನಿ ಸ್ವಚ್ಛತೆ ಮತ್ತು ರಾಷ್ಟ್ರಧ್ವಜದ ಗೌರವಯುತ ನಿರ್ವಹಣೆ -
ಸ್ವಾತಂತ್ರ್ಯ ದಿನದ ಸಂಭ್ರಮ: ಟೆರೇಸ್ ಮೇಲೆ ಗಾಳಿಪಟ ಹಾರಿಸುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ: ಸಿಹಿ ತಿನಿಸುಗಳ ಸವಿಯ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ, ಇಲ್ಲಿದೆ ಸಿಂಪಲ್ ಟಿಪ್ಸ್! -
ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಆರೋಗ್ಯದ ಜಾಗೃತಿ: ಮಳೆಗಾಲದಲ್ಲಿ ಯಾವ ಆಹಾರ ಸೇವಿಸುವುದು ಸುರಕ್ಷಿತ? -
ಸ್ವಾತಂತ್ರ್ಯ ದಿನಾಚರಣೆ: ಮಳೆಯಲ್ಲೂ ಮಿಂಚಲು ಇಲ್ಲಿದೆ ಸಿಂಪಲ್ ಟ್ರೈಕಲರ್ ಫ್ಯಾಷನ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: 10 ನಿಮಿಷದಲ್ಲಿ ತ್ರಿರಂಗ ಲುಕ್ನಲ್ಲಿ ಮಿಂಚುವುದು ಹೇಗೆ? -
ಸ್ವಾತಂತ್ರ್ಯ ದಿನದ 'ತಿರಂಗಾ ರೈಡ್': ಮಳೆಗಾಲದಲ್ಲಿ ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿವೆ ಬೆಸ್ಟ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: ಪರೇಡ್ ವೀಕ್ಷಿಸುವ ಮುನ್ನ ಈ 10 ನಿಮಿಷದ ವ್ಯಾಯಾಮ ಮರೆಯದಿರಿ! -
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು! -
ಆನ್ಲೈನ್ ಸೆಕ್ಸ್ಟಾರ್ಷನ್ ವಂಚನೆ: ಅಪರಿಚಿತ ವಿಡಿಯೋ ಕಾಲ್ ರಿಸೀವ್ ಮಾಡಿದ್ರೆ ಹುಷಾರ್, ಇಲ್ಲಿದೆ ಎಚ್ಚರಿಕೆ!
ಬೇಯಿಸಿದ ಮೊಟ್ಟೆಯ ಆಹಾರಕ್ರಮ: ಎರಡೇ ವಾರದಲ್ಲಿ ಹತ್ತು ಕೆಜಿ ತೂಕ ಇಳಿಕೆ!
ತೂಕ ಇಳಿಸುವುದು ನಿಮ್ಮ ಸದ್ಯದ ಗುರಿಯಾಗಿದ್ದರೆ ಇದಕ್ಕೊಂದು ವಿಭಿನ್ನವಾದ ಮಾರ್ಗವನ್ನೇಕೆ ನೀವು ಪ್ರಯತ್ನಿಸಬಾರದು? ಇದಕ್ಕಾಗಿ ನಿಮ್ಮ ನೆಚ್ಚಿನ ಆಹಾರಗಳಿಗೆ ಕೊಂಚ ವಿರಾಮ ಹೇಳಿ ಇದರ ಬದಲಿಗೆ ಬೇಯಿಸಿದ ಮೊಟ್ಟೆಗಳನ್ನಾಧರಿಸಿದ ಆಹಾರಕ್ರಮವನ್ನು ಕೆಲವು ದಿನಗಳವರೆಗೆ ಅನುಸರಿಸಬೇಕು. ಇದಕ್ಕೆ ಕೆಲವೇ ಸಾಮಾಗ್ರಿಗಳು ಸಾಕು ಆದರೆ ಇದರಿಂದ ಜೀವರಾಸಾಯನಿಕ ಕ್ರಿಯೆ ಉತ್ತಮಗೊಂಡು ಕೊಬ್ಬನ್ನು ಹೆಚ್ಚಾಗಿ ಕರಗಿಸುತ್ತದೆ. ಅಲ್ಲದೇ ಈ ಆರೋಗ್ಯಕ್ರಮ ಆಹಾರವನ್ನು ತೂಕ ಇಳಿದ ಬಳಿಕವೂ ಕೆಲದಿನಗಳವರೆಗಾದರೂ ಮುಂದುವರೆಸಿದರೆ ಆ ಸಮಯದಲ್ಲಿ ಇಳಿದ ತೂಕ ಮತ್ತೆ ಇಳಿಯುವುದಿಲ್ಲ.
ಆದರೆ ಈ ಆಹಾರಕ್ರಮದಲ್ಲಿ ದಿನವಿಡೀ ಸಾಕಷ್ಟು ನೀರು ಕುಡಿಯಬೇಕಾಗುತ್ತದೆ ಹಾಗೂ ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸಬೇಕು. ದಿನಕ್ಕೆ ಸುಮಾರು ಎಂಟರಿಂದ ಹತ್ತು ದೊಡ್ಡ ಲೋಟವಾದರೂ ನೀರು ಕುಡಿಯುವುದು ಅಗತ್ಯ. ಇದರಿಂದ ದೇಹದ ಕಲ್ಮಶಗಳನ್ನು ಹೊರಹಾಕಲು ಸಾಧ್ಯ. ಆದರೆ ಕೇವಲ ಆಹಾರವನ್ನು ಬದಲಿಸುವುದರಿಂದ ತೂಕ ಇಳಿಯದು, ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ಸಾಮಾನ್ಯಗತಿಯ ವ್ಯಾಯಾಮಗಳನ್ನೂ ಮಾಡಬೇಕಾಗುತ್ತದೆ.
ಇದರೊಂದಿಗೆ ಕೆಲವು ಇತರ ಕಟ್ಟುಪಾಡುಗಳನ್ನೂ ಪಾಲಿಸಬೇಕಾಗುತ್ತದೆ:
ಸಿದ್ಧ ಆಹಾರಗಳನ್ನು ಸೇವಿಸದಿರುವುದು
ಮದ್ಯಪಾನವೂ ಬೇಡ, ಸಕ್ಕರೆ ಇರುವ ಆಹಾರ ಅಥವಾ ಪಾನೀಯಗಳೂ ಸಲ್ಲದು
ಇತರ ಸಕ್ಕರೆ ಮತ್ತು ಉಪ್ಪಿನ ಆಹಾರಗಳ ಮೇಲೆ ನಿಯಂತ್ರಣವಿರಲಿ. ಈ ವಿಧಾನವನ್ನು ದಿನಕ್ಕೊಂದು ಆಹಾರಕ್ರಮದಂತೆ ಎರಡು
ವಾರವಾದರೂ ಅನುಸರಿಸಬೇಕು...

ಮೊದಲನೆಯ ವಾರ
ಸೋಮವಾರ
ಬೆಳಗ್ಗಿನ ಉಪಾಹಾರ: 2 ಬೇಯಿಸಿದ ಮೊಟ್ಟೆಗಳು ಹಾಗೂ ಒಂದು ಪೀಸ್ ಕಿತ್ತಳೆ ಹಣ್ಣು
ಮಧ್ಯಾಹ್ನದ ಊಟ: 2 ಪೀಸ್ ಸಿಹಿ ಗೆಣಸು ಹಾಗೂ 2 ಸೇಬು ಹಣ್ಣುಗಳು
ರಾತ್ರಿಯ ಊಟ: ಒಂದು ಪ್ಲೇಟ್ ಸಲಾಡ್ ಹಾಗೂ ಚಿಕನ್

ಮಂಗಳವಾರ
ಬೆಳಗ್ಗಿನ ಉಪಾಹಾರ: 2 ಬೇಯಿಸಿದ ಮೊಟ್ಟೆಗಳು ಒಂದು ಪ್ರಮಾಣದ ಕಿತ್ತಳೆ ಅಥವಾ ಕಿತ್ತಳೆ ಜಾತಿಯ ಇತರ ಹಣ್ಣಿನ ತಿರುಳು
ಮಧ್ಯಾಹ್ನದ ಊಟ: ಹಸಿರು ತರಕಾರಿಗಳು ಮತ್ತು ಕೋಳಿಮಾಂಸದ ಸಾಲಾಡ್
ರಾತ್ರಿಯ ಊಟ: ಕೊಂಚ ಹಸಿರು ತರಕಾರಿಯ ಸಾಲಡ್, ಒಂದು ಕಿತ್ತಳೆಹಣ್ಣು ಮತ್ತು 2 ಬೇಯಿಸಿದ ಮೊಟ್ಟೆಗಳು.

ಬುಧವಾರ
ಬೆಳಗ್ಗಿನ ಉಪಾಹಾರ: 2 ಬೇಯಿಸಿದ ಮೊಟ್ಟೆಗಳು ಒಂದು ಕಿತ್ತಳೆ ಅಥವಾ ಕಿತ್ತಳೆ ಜಾತಿಯ ಇತರ ಹಣ್ಣು
ಮಧ್ಯಾಹ್ನದ ಊಟ:ಕೊಂಚ ಕಡಿಮೆ ಕೊಬ್ಬಿನ ಚೀಸ್, ಒಂದು ಟೊಮಾಟೋ ಮತ್ತು ಒಂದು ಚಿಕ್ಕ ತುಂಡು ಗೆಣಸು
ರಾತ್ರಿಯ ಊಟ: ಕೊಂಚ ಸಾಲಾಡ್ ಮತ್ತು ಕೊಂಚ ಕೋಳಿಮಾಂಸ

ಗುರುವಾರ
ಬೆಳಗ್ಗಿನ ಉಪಾಹಾರ: 2 ಬೇಯಿಸಿದ ಮೊಟ್ಟೆಗಳು ಒಂದು ಪ್ರಮಾಣದ ಕಿತ್ತಳೆ ಅಥವಾ ಕಿತ್ತಳೆ ಜಾತಿಯ ಇತರ ಹಣ್ಣಿನ ತಿರುಳು
ಮಧ್ಯಾಹ್ನದ ಊಟ: ಸಾಕಷ್ಟು ಹಣ್ಣುಗಳು
ರಾತ್ರಿಯ ಊಟ: ಕೊಂಚ ಸಾಲಾಡ್ ಮತ್ತು ಕೊಂಚ ಹಬೆಯಲ್ಲಿ ಬೇಯಿಸಿದ ಕೋಳಿಮಾಂಸ

ಶುಕ್ರವಾರ
ಬೆಳಗ್ಗಿನ ಉಪಾಹಾರ: 2 ಬೇಯಿಸಿದ ಮೊಟ್ಟೆಗಳು ಹಾಗೂ ಒಂದು ಕಿತ್ತಳೆ ಅಥವಾ ಕಿತ್ತಳೆ ಜಾತಿಯ ಇತರ ಹಣ್ಣು
ಮಧ್ಯಾಹ್ನದ ಊಟ:ಬೇಯಿಸಿದ ತರಕಾರಿಗಳು ಮತ್ತು ಎರಡು ಮೊಟ್ಟೆಗಳು
ರಾತ್ರಿಯ ಊಟ: ಸಾಲಾಡ್ ಮತ್ತು ಬೆಂಕಿಯಲ್ಲಿ ನೇರವಾಗಿ ಬೇಯಿಸಿದ ಮೀನು

ಶನಿವಾರ
ಬೆಳಗ್ಗಿನ ಉಪಾಹಾರ: 2 ಬೇಯಿಸಿದ ಮೊಟ್ಟೆಗಳು ಹಾಗೂ ಒಂದು ಕಿತ್ತಳೆ ಅಥವಾ ಕಿತ್ತಳೆ ಜಾತಿಯ ಇತರ ಹಣ್ಣು
ಮಧ್ಯಾಹ್ನದ ಊಟ:ಸಾಕಷ್ಟು ಹಣ್ಣುಗಳು
ರಾತ್ರಿಯ ಊಟ: ಹಬೆಯಲ್ಲಿ ಬೇಯಿಸಿದ ತರಕಾರಿ ಮತ್ತು ಕೋಳಿಮಾಂಸ

ಭಾನುವಾರ
ಬೆಳಗ್ಗಿನ ಉಪಾಹಾರ: 2 ಬೇಯಿಸಿದ ಮೊಟ್ಟೆಗಳು ಹಾಗೂ ಒಂದು ಕಿತ್ತಳೆ ಅಥವಾ ಕಿತ್ತಳೆ ಜಾತಿಯ ಇತರ ಹಣ್ಣು
ಮಧ್ಯಾಹ್ನದ ಊಟ: ಟೊಮಾಟೋ ಸಲಾಡ್, ಹಬೆಯಲ್ಲಿ ಬೇಯಿಸಿದ ತರಕಾರಿ ಮತ್ತು ಕೋಳಿಮಾಂಸ
ರಾತ್ರಿಯ ಊಟ: ಹಬೆಯಲ್ಲಿ ಬೇಯಿಸಿದ ತರಕಾರಿ

ಎರಡನೆಯ ವಾರ
ಸೋಮವಾರ
ಬೆಳಗ್ಗಿನ ಉಪಾಹಾರ: 2 ಮೊಟ್ಟೆಗಳು ಮತ್ತು ಒಂದು ಕಿತ್ತಳೆ ಅಥವಾ ಕಿತ್ತಳೆ ಜಾತಿಯ ಇತರ ಹಣ್ಣು
ಮಧ್ಯಾಹ್ನದ ಊಟ: ಸಾಲಾಡ್ ಮತ್ತು ಕೋಳಿಮಾಂಸ
ರಾತ್ರಿಯ ಊಟ: 1 ಕಿತ್ತಳೆ, ಕೊಂಚ ಹಸಿರು ತರಕಾರಿ ಮತ್ತು ಬೇಯಿಸಿದ ಕೋಳಿಮಾಂಸ

ಮಂಗಳವಾರ
ಬೆಳಗ್ಗಿನ ಉಪಾಹಾರ: 2 ಮೊಟ್ಟೆಗಳು ಹಾಗೂ ಒಂದು ಕಿತ್ತಳೆ ಅಥವಾ ಕಿತ್ತಳೆ ಜಾತಿಯ ಇತರ ಹಣ್ಣು
ಮಧ್ಯಾಹ್ನದ ಊಟ: 2 ಮೊಟ್ಟೆಗಳು ಮತ್ತು ಹಬೆಯಲ್ಲಿ ಬೇಯಿಸಿದ ತರಕಾರಿ.
ರಾತ್ರಿಯ ಊಟ: ಸಲಾಡ್ ಮತ್ತು ಗ್ರಿಲ್ ಮಾಡಿದ ಮೀನು

ಬುಧವಾರ
ಬೆಳಗ್ಗಿನ ಉಪಾಹಾರ: 2 ಮೊಟ್ಟೆಗಳು ಹಾಗೂ ಹಾಗೂ ಒಂದು ಕಿತ್ತಳೆ ಅಥವಾ ಕಿತ್ತಳೆ ಜಾತಿಯ ಇತರ ಹಣ್ಣು
ಮಧ್ಯಾಹ್ನದ ಊಟ: ಸಾಲಾಡ್ ಮತ್ತು ಕೋಳಿಮಾಂಸ
ರಾತ್ರಿಯ ಊಟ: 1 ಕಿತ್ತಳೆ, ಹಸಿರು ತರಕಾರಿಯ ಸಾಲಡ್ ಮತ್ತು ಎರಡು ಮೊಟ್ಟೆಗಳು

ಗುರುವಾರ
ಬೆಳಗ್ಗಿನ ಉಪಾಹಾರ: 2 ಮೊಟ್ಟೆಗಳು ಹಾಗೂ ಒಂದು ಕಿತ್ತಳೆ ಅಥವಾ ಕಿತ್ತಳೆ ಜಾತಿಯ ಇತರ ಹಣ್ಣು
ಮಧ್ಯಾಹ್ನದ ಊಟ: ಹಬೆಯಲ್ಲಿ ಬೇಯಿಸಿದ ತರಕಾರಿಗಳು, ಕೊಬ್ಬುರಹಿತ ಚೀಸ್ ಮತ್ತು ಎರಡು ಮೊಟ್ಟೆಗಳು
ರಾತ್ರಿಯ ಊಟ: ಸಾಲಾಡ್ ಮತ್ತು ಕೋಳಿಮಾಂಸ

ಶುಕ್ರವಾರ
ಬೆಳಗ್ಗಿನ ಉಪಾಹಾರ: 2 ಮೊಟ್ಟೆಗಳು ಹಾಗೂ ಒಂದು ಕಿತ್ತಳೆ ಅಥವಾ ಕಿತ್ತಳೆ ಜಾತಿಯ ಇತರ ಹಣ್ಣು
ಮಧ್ಯಾಹ್ನದ ಊಟ: ಸಾರ್ಡೀನ್ ಮೀನಿನ ಖಾದ್ಯ
ರಾತ್ರಿಯ ಊಟ: ಸಾಲಡ್ ಮತ್ತು ಎರಡು ಮೊಟ್ಟೆಗಳು

ಶುಕ್ರವಾರ
ಬೆಳಗ್ಗಿನ ಉಪಾಹಾರ: 2 ಮೊಟ್ಟೆಗಳು ಹಾಗೂ ಒಂದು ಕಿತ್ತಳೆ ಅಥವಾ ಕಿತ್ತಳೆ ಜಾತಿಯ ಇತರ ಹಣ್ಣು
ಮಧ್ಯಾಹ್ನದ ಊಟ: ಸಾಲಾಡ್ ಮತ್ತು ಕೋಳಿಮಾಂಸ
ರಾತ್ರಿಯ ಊಟ: ಹಣ್ಣುಗಳು

ಭಾನುವಾರ
ಬೆಳಗ್ಗಿನ ಉಪಾಹಾರ: 2 ಮೊಟ್ಟೆಗಳು ಹಾಗೂ ಒಂದು ಕಿತ್ತಳೆ ಅಥವಾ ಕಿತ್ತಳೆ ಜಾತಿಯ ಇತರ ಹಣ್ಣು
ಮಧ್ಯಾಹ್ನದ ಊಟ: ಹಬೆಯಲ್ಲಿ ಬೇಯಿಸಿದ ತರಕಾರಿ ಮತ್ತು ಕೋಳಿಮಾಂಸ
ರಾತ್ರಿಯ ಊಟ: ಮಧ್ಯಾಹ್ನದ ಊಟದಂತೆಯೇ

ಸೂಚನೆ
ಈ ಆಹಾರವನ್ನು ಕೊಂಚ ಗಮನಿಸಿ, ಎಲ್ಲಿಯೂ ಕಾರ್ಬೋಹೈಡ್ರೇಟುಗಳಿಲ್ಲ. ತೂಕ ಏರದೇ ಇರಲು ಹಾಗೂ ಶೀಘ್ರವಾಗಿ ಕೊಬ್ಬು ಕರಗಿಸಲೂ ಇದೇ ಕಾರಣ
ನೆನಪಿರಲಿ: ನಿಮ್ಮ ಆಹಾರಕ್ರಮವನ್ನು ಏಕಾಏಕಿ ಹೀಗೆ ಬದಲಿಸಿಕೊಳ್ಳುವ ಮುನ್ನ ನಿಮ್ಮ ಕುಟುಂಬವೈದ್ಯರ ಸಲಹೆಯನ್ನು ಪಡೆಯಿರಿ. ಯಾವುದೇ ಆಹಾರಕ್ರಮವನ್ನು ಬದಲಿಸಬೇಕಾದರೂ ಆಹಾರ ತಜ್ಞರನ್ನು ಭೇಟಿಯಾಗಿಯೇ ಮುಂದುವರೆಯಬೇಕು.ಈ ವಿಧಾನದಿಂದ ಉಪವಾಸ ಬೀಳದಿದ್ದರೂ ನಿಮ್ಮ ಆರೋಗ್ಯವನ್ನು ಹಾನಿಗೊಳಿಸುವುದಿಲ್ಲವೆಂದು ಖಚಿತಪಡಿಸಿಕೊಳ್ಳಲ್ಲಲಾದರೂ ಈ ಬದಲಾವಣೆಯನ್ನು ಅನ್ವಯಿಸುವ ಮುನ್ನಾಅಹಾರ ತಜ್ಞರೊಂದಿಗೆ ಸಮಾಲೋಚಿಸಿ ಸಲಹೆ ಪಡೆಯಬೇಕು.



Click it and Unblock the Notifications