For Quick Alerts
ALLOW NOTIFICATIONS  
For Daily Alerts

ಎಚ್ಚರ! ಚೀನಾದಿಂದ ಬರುತ್ತಿದೆ ವಿಷಕಾರಿ ಬೆಳ್ಳುಳ್ಳಿ! ನೋಡಿ ಈ ರೀತಿಯಾಗಿ ಪತ್ತೆಹಚ್ಚಿ

|

ಹೆಚ್ಚಾಗಿ ಭಾರತೀಯರು ಪ್ರತಿಯೊಂದು ಅಡುಗೆಗೂ ಬೆಳ್ಳುಳ್ಳಿ ಬಳಸುವರು. ಇದರ ಹೊರತಾಗಿ ಅಡುಗೆ ಅಪೂರ್ಣವೆಂದು ಹೇಳಲಾಗುತ್ತದೆ. ವೈಜ್ಞಾನಿಕವಾಗಿಯೂ ಬೆಳ್ಳುಳ್ಳಿಯಲ್ಲಿ ಇರುವಂತಹ ಪೋಷಕಾಂಶಗಳು ಹಾಗೂ ಆರೋಗ್ಯ ಲಾಭಗಳ ಬಗ್ಗೆ ಸಾಬೀತಾಗಿದೆ. ಈ ಪವಾಡ ಸದೃಶ ಗುಣವುಳ್ಳ ಬೆಳ್ಳುಳ್ಳಿಯನ್ನು ಬಹಳ ಹಿಂದಿನಿಂದಲೂ ಹಲವು ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಗುಣಪಡಿಸಲು ಬಳಸುತ್ತಿದ್ದಾರೆ. ಬೆಳ್ಳುಳ್ಳಿಯಲ್ಲಿ ಪ್ರಬಲವಾದ ಗಂಧಕದ ಸಂಯುಕ್ತಗಳಿರುವುದರಿಂದ ಇದಕ್ಕೆ ಘಾಟಿನ ವಾಸನೆಯಿದೆ. ಇದರಲ್ಲಿ ಅಲ್ಲಿಸಿನ್ ಎನ್ನುವ ಸಂಯುಕ್ತದಲ್ಲಿ ಆ್ಯಂಟಿ-ಬ್ಯಾಕ್ಟಿರಿಯಲ್, ಆ್ಯಂಟಿ-ವೈರಲ್, ಆ್ಯಂಟಿ-ಫಂಗಲ್ ಮತ್ತು ಆ್ಯಂಟಿ-ಆ್ಯಕ್ಸಿಡೆಂಟ್ ಗುಣಗಳಿವೆ. ಬೆಳ್ಳುಳ್ಳಿಯನ್ನು ಚೆನ್ನಾಗಿ ತುರಿದು ಅಥವಾ ಕತ್ತರಿಸಿ ಸ್ವಲ್ಪ ಹೊತ್ತು ಇಟ್ಟು ನಂತರ ಬಳಸಿದರೆ ಹೆಚ್ಚು ಉಪಯೋಗಗಳನ್ನು ಪಡೆಯಬಹುದು.

ಅಲ್ಲದೆ ಕೆಲವು ವೈಜ್ಞಾನಿಕ ಸಮೀಕ್ಷೆಗಳ ಮೂಲಕ ನಿಯಮಿತವಾಗಿ ಬೆಳ್ಳುಳ್ಳಿ ಸೇವಿಸಿದ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದು ಕಂಡುಬಂದಿದೆ. ವಿಶೇಷವಾಗಿ ಶೀತ ಮತ್ತು ಇದರ ಇತರ ಪರಿಣಾಮಗಳನ್ನು 63%ರಷ್ಟು ಕಡಿಮೆಗೊಳಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಚೈತನ್ಯ ಹೆಚ್ಚಿಸಲು ನೆರವಾಗುತ್ತವೆ. ಇದೇ ಕಾರಣಕ್ಕೆ ಸತತವಾಗಿ ಶೀತ ಕೆಮ್ಮು ಜ್ವರ ಎಂದು ನಿತ್ಯವೂ ಕಾಯಿಲೆ ಬೀಳುವ ವ್ಯಕ್ತಿಗಳಿಗೆ ಊಟದಲ್ಲಿ ಬೆಳ್ಳುಳ್ಳಿ ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.

ಇನ್ನು ಬೆಳ್ಳುಳ್ಳಿಯಲ್ಲಿ ಪಾಲಿ ಸಲ್ಫೈಡ್ ಎಂಬ ಪೋಷಕಾಂಶವಿದೆ. ನಮ್ಮ ರಕ್ತದ ಕೆಂಪು ರಕ್ತಕಣಗಳು ಈ ಪೋಷಕಾಂಶಗಳನ್ನು ಹೈಡ್ರೋಜನ್ ಸಲ್ಫೈಡ್ ಆಗಿ ಪರಿವರ್ತಿಸುತ್ತವೆ. ಇದು ನರಗಳು ಪೆಡಸಾಗಿದ್ದರೆ ಸಡಿಲಗೊಳಿಸಲು ನೆರವಾಗುತ್ತವೆ. ಪರಿಣಾಮವಾಗಿ ಹೃದಯಕ್ಕೆ ಕಡಿಮೆ ಒತ್ತಡದಲ್ಲಿ ರಕ್ತವನ್ನು ದೂಡಿಕೊಟ್ಟರೆ ಸಾಕಾಗುತ್ತದೆ. ಇದು ಅಧಿಕ ರಕ್ತದ ಒತ್ತಡದ ಸಮಸ್ಯೆ ಇರುವ ವ್ಯಕ್ತಿಗಳಿಗೆ ಒಂದು ವರದಾನವಾಗಿದೆ. ಆದರೆ ಅತಿಯಾಸೆಗೆ ಬಿದ್ದಿರುವ ಮನುಷ್ಯರು ಇದನ್ನು ವಿಷಕಾರಿಯಾಗಿಸುತ್ತಿದ್ದಾರೆ. ಇದು ಹೇಗೆ ಎಂದು ನೀವು ತಿಳಿಯಿರಿ.

 ಬೆಳ್ಳುಳ್ಳಿಯು ವಿಷಕಾರಿಯಾಗುವುದು ಹೇಗೆ?

ಬೆಳ್ಳುಳ್ಳಿಯು ವಿಷಕಾರಿಯಾಗುವುದು ಹೇಗೆ?

ಸೂಪರ್ ಮಾರ್ಕೆಟ್ ಗಳಲ್ಲಿ ಹಣ್ಣುಗಳು ಹಾಗೂ ತರಕಾರಿಗಳು ಹೊಳೆಯುವಂತೆ ಕಾಣುವುದು. ನಾವು ಮಾತ್ರ ಕೆಲವು ಸಣ್ಣ ಅಂಗಡಿಗಳಿಂದ ಖರೀದಿ ಮಾಡುತ್ತೇವೆ. ಆರೋಗ್ಯಕರ ದೇಹಕ್ಕೆ ಲೇಬಲ್ ಹಚ್ಚಿರುವಂತಹ ಉತ್ಪನ್ನಗಳು ತುಂಬಾ ಒಳ್ಳೆಯದು ಎಂದು ನಮಗೆ ತಪ್ಪು ಮಾಹಿತಿ ನೀಡಲಾಗಿದೆ. ಚೀನಾದ ಬೆಳ್ಳುಳ್ಳಿಯು ಇದಕ್ಕೆ ಒಂದು ಉದಾಹರಣೆ.

 ತಪ್ಪುಮಾಹಿತಿ

ತಪ್ಪುಮಾಹಿತಿ

ಕಾಂತಿಯುತ ಬಣ್ಣ ಹಾಗೂ ಕಲೆಗಳು ಇಲ್ಲದೆ ಇರುವ ಕಾರಣದಿಂದಾಗಿ ಚೀನಾದ ಬೆಳ್ಳುಳ್ಳಿಯು ಇಂದಿನ ದಿನಗಳಲ್ಲಿ ಜನಪ್ರಿಯವಾಗುತ್ತಲಿದೆ. ಚೀನಾದಲ್ಲಿ ಉತ್ಪಾದನೆ ಮಾಡಿರುವಂತಹ ಶೇ. 80ರಷ್ಟು ಬೆಳ್ಳುಳ್ಳಿಯನ್ನು ವಿಶ್ವಮಟ್ಟದಲ್ಲಿ ಮಾರಲಾಗುತ್ತದೆ. ಚೀನಾದಲ್ಲಿ ಎರಡು ರೀತಿಯ ಬೆಳ್ಳುಳ್ಳಿಗಳನ್ನು ಬೆಳೆಸಲಾಗುತ್ತದೆ. ಒಂದು ಸಾವಯವ ಮತ್ತು ಸಾವಯವ ಅಲ್ಲದೆ ಇರುವುದು. ಆದರೆ ಎರಡರಲ್ಲೂ ಕೀಟನಾಶ ಮತ್ತು ಬ್ಲೀಚ್ ಬಳಸಲಾಗುತ್ತದೆ.

Most Read: ಇನ್ನು ಬೆಳ್ಳುಳ್ಳಿ, ಅಕ್ಕಿ, ಮೊಟ್ಟೆ ಖರೀದಿಸುವಾಗ ಎಚ್ಚರ! ಇದೆಲ್ಲಾ ಚೀನಾದಿಂದ ಬಂದಿರುತ್ತೆ!!

ರಾಸಾಯನಿಕಗಳಲ್ಲಿ ಮುಳುಗಿಸುವರು

ರಾಸಾಯನಿಕಗಳಲ್ಲಿ ಮುಳುಗಿಸುವರು

ಬೆಳ್ಳುಳ್ಳಿಗೆ ರಾಸಾಯನಿಕ ಸಿಂಪಡಣೆ ಮಾಡಲು ಪ್ರಮುಖ ಕಾರಣವೆಂದರೆ ಇದನ್ನು ಮಾರುಕಟ್ಟೆಯಲ್ಲಿ ಇಟ್ಟಾಗ ಅದಕ್ಕೆ ಮೊಳಕೆ ಬರದಂತೆ ತಡೆಯುವುದು. ಬೆಳ್ಳುಳ್ಳಿಯಲ್ಲಿ ನೈಸರ್ಗಿಕವಾಗಿ ಕಪ್ಪು ಕಲೆಗಳು ಇರುವುದು. ಇದನ್ನು ನೋಡಿ ಹೆಚ್ಚಿನವರು ಖರೀದಿ ಮಾಡುವುದಿಲ್ಲ. ಇದು ಸ್ವಚ್ಛವಾಗಿ ಕಾಣಲು ಹಾಗೂ ಹೊಳೆಯುವಂತೆ ಮಾಡಲು ಕ್ಲೋರೀನ್ ಗೆ ಬ್ಲೀಚ್ ಮಾಡಲಾಗುತ್ತದೆ. ಇದು ಕ್ಯಾನ್ಸರ್ ಕಾರಕವಾಗಿದೆ.

ಹಾನಿಕಾರಕ ಚೀನಾದ ಬೆಳ್ಳುಳ್ಳಿ

ಹಾನಿಕಾರಕ ಚೀನಾದ ಬೆಳ್ಳುಳ್ಳಿ

ತುಂಬಾ ಹೊಳೆಯುವ, ಕಲೆರಹಿತ ಮತ್ತು ದೊಡ್ಡ ಬೆಳ್ಳುಳ್ಳಿ ಕಂಡುಬಂದರೆ ಇದು ಚೀನಾದಿಂದ ಆಮದು ಮಾಡಿಕೊಂಡಿರುವುದು ಎಂದು ತಿಳಿಯಿರಿ. ಚೀನಾವು ಬೆಳ್ಳುಳ್ಳಿಗೆ ಸಿಂಪಡಿಸುವ ರಾಸಾಯನಿಕವು ತುಂಬಾ ಹಾನಿಕಾರಕ.

ಚೀನಾದ ಕಾನೂನು

ಚೀನಾದ ಕಾನೂನು

ಚೀನಾದ ಕಾನೂನಿನ ಪ್ರಕಾರ ರೈತರು ತಮ್ಮ ಬೆಳೆಗಳಿಗೆ ಕೀಟನಾಶಕ ಮೀಥೈಲ್ ಬ್ರೋಮೈಡ್ ಸಿಂಪಡಿಸುವುದು ಕಡ್ಡಾಯ. ಮೀಥೈಲ್ ಬ್ರೋಮೈಡ್ ಕೀಟಗಳು ಮತ್ತು ಸಸ್ಯಗಳ ಹುಳುಬಾಧೆ ನಿವಾರಿಸುವುದು. ಈ ರೀತಿಯ ಕೀಟನಾಶಕಗಳು ಪ್ರಾಣಕ್ಕೆ ಹಾನಿಯುಂಟು ಮಾಡುವ ರೋಗಗಳಿಗೆ ಕಾರಣವಾಗಬಹುದು.

ಅನಾರೋಗ್ಯಕರ ವಾತಾವರಣ

ಅನಾರೋಗ್ಯಕರ ವಾತಾವರಣ

ಚೀನಾದ ಬೆಳ್ಳುಳ್ಳಿಯನ್ನು ಚರಂಡಿ ನೀರಿನಲ್ಲಿ ಬೆಳೆಸಲಾಗುತ್ತದೆ. ಇದರಲ್ಲಿ ಲೆಡ್ ಹಾಗೂ ಸಲ್ಫೇಟ್ ಇರಬಹುದು ಎಂದು ಅಧ್ಯಯನಗಳು ಹೇಳಿವೆ. ವಿಶ್ವದೆಲ್ಲೆಡೆಗೂ ಚೀನಾದ ಬೆಳ್ಳುಳ್ಳಿಯನ್ನು ರಫ್ತು ಮಾಡುವ ಕಾರಣದಿಂದಾಗಿ ಇದಕ್ಕೆ ಮೊಳಕೆ ಬರುವುದನ್ನು ತಪ್ಪಿಸಲು ತಂಪಾದ ವಾತಾವರಣದಲ್ಲಿ ಸಂಗ್ರಹಿಸಿಡಬಹುದು.

ಗರ್ಭಿಣಿಯರಿಗೆ ಮಾರಕ

ಗರ್ಭಿಣಿಯರಿಗೆ ಮಾರಕ

ಇಂತಹ ಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಗರ್ಭಿಣಿಯರು ಸೇವಿಸಿದರೆ ಇದು ಗರ್ಭಕ್ಕೂ ಮಾರಕವಾಗಬಲ್ಲುದು. ಆದ್ದರಿಂದ ಗರ್ಭಿಣಿಯರು ಹಾಗೂ ಹಾಲೂಡಿಸುತ್ತಿರುವ ತಾಯಂದಿರು ಬೆಳ್ಳುಳ್ಳಿಯ ಸೇವನೆಯಿಂದ ದೂರವಿರಬೇಕು. ಗರ್ಭಿಣಿಯರಿಗೆ ಇದು ಹೆರಿಗೆಯ ದಿನವನ್ನು ಹಿಂದೆ ತರುವ ಸಾಧ್ಯತೆಯೂ ಇದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

Most Read:ಅಗರಬತ್ತಿಯ ಹೊಗೆ ತುಂಬಾನೇ ಅಪಾಯಕಾರಿಯಂತೆ! ಇಲ್ಲಿದೆ ನೋಡಿ ಕಾರಣಗಳು

ಅತಿಯಾಗಿ ಸಂಗ್ರಹಣೆ

ಅತಿಯಾಗಿ ಸಂಗ್ರಹಣೆ

ಹಣ ಉಳಿತಾಯ ಮಾಡುವ ಸಲುವಾಗಿ ನಾವು ಬೆಳ್ಳುಳ್ಳಿಯನ್ನು ಹೆಚ್ಚು ತಂದಿಟ್ಟುಕೊಳ್ಳುತ್ತೇವೆ. ಇದರಿಂದಾಗಿ ಇದು ದೀರ್ಘಕಾಲದ ತನಕ ಸಂಗ್ರಹಿಸಡಬೇಕಾಗುತ್ತದೆ. ಹೀಗೆ ಮಾಡಿದರೆ ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಅಂಶವು ಕುಗ್ಗಬಹುದು. ಅಲಿಸಿನ್ ಬೆಳ್ಳುಳ್ಳಿಯಲ್ಲಿರುವ ಆರೋಗ್ಯ ಗುಣಗಳಿಗೆ ಕಾರಣವಾಗಿದೆ. ಬೆಳ್ಳುಳ್ಳಿ ಖರೀದಿಸುವ ಮೊದಲು ಪಾಲಿಸಬೇಕಾದ ಸಲಹೆಗಳು

ಬೆಳ್ಳುಳ್ಳಿ ಖರೀದಿಸುವ ಮೊದಲು ಪಾಲಿಸಬೇಕಾದ ಸಲಹೆಗಳು

ಬೆಳ್ಳುಳ್ಳಿ ಖರೀದಿಸುವ ಮೊದಲು ಪಾಲಿಸಬೇಕಾದ ಸಲಹೆಗಳು

*ರುಚಿ

ನೀವು ಬೆಳ್ಳುಳ್ಳಿ ಸೇವಿಸುವಾಗ ಇದು ಸಪ್ಪೆಯಾಗಿದ್ದರೆ ಇದು ಚೀನಾದ ಬೆಳ್ಳುಳ್ಳಿ ಎಂದು ಹೇಳಬಹುದು.

*ತೂಕ

ನೀವು ಖರೀದಿಸುವ ಬೆಳ್ಳುಳ್ಳಿಯು ತುಂಬಾ ಹಗುರ, ಮೃಧು ಮತ್ತು ಕಡಿಮೆ ಸಿಪ್ಪೆ ಹೊಂದಿದ್ದರೆ ಇದು ಚೀನಾದಿಂದ ರಫ್ತಾಗಿರುವುದು.

*ಬೇರುಗಳು

ಚೀನಾದವರು ಬೆಳ್ಳುಳ್ಳಿಯ ಬೇರುಗಳನ್ನು ತೆಗೆದುಹಾಕುವರು. ಇದರಿಂದ ಮುಂದಿನ ಸಲ ಸೂಪರ್ ಮಾರ್ಕೆಟ್ ನಿಂದ ಬೆಳ್ಳುಳ್ಳಿ ಖರೀದಿ ಮಾಡುವಾಗ ಅದಕ್ಕೆ ಬೇರುಗಳು ಇದೆಯಾ ಎಂದು ನೋಡಿ.

*ಸ್ಥಳೀಯ ವ್ಯಾಪಾರಿಗಳು

ಮನೆಯಲ್ಲೇ ಅಥವಾ ಸ್ಥಳೀಯವಾಗಿ ರೈತರು ಬೆಳೆಸಿರುವ ಬೆಳ್ಳುಳ್ಳಿ ಖರೀದಿ ಮಾಡುವುದು ಒಳ್ಳೆಯ ಆಯ್ಕೆ. ಇದು ರಾಸಾಯನಿಕ ಮುಕ್ತವಾಗಿರುವುದು ಮತ್ತು ದೇಹಕ್ಕೂ ಒಳ್ಳೆಯದು.

ಬೆಳ್ಳುಳ್ಳಿ ಖರೀದಿಸುವ ಮೊದಲು ಪಾಲಿಸಬೇಕಾದ ಸಲಹೆಗಳು

ಬೆಳ್ಳುಳ್ಳಿ ಖರೀದಿಸುವ ಮೊದಲು ಪಾಲಿಸಬೇಕಾದ ಸಲಹೆಗಳು

ಮೊಳಕೆಯೊಡೆದ ಬೆಳ್ಳುಳ್ಳಿ ಅಂದರೆ ಈಗ ಇದು ಚೆನ್ನಾಗಿ ಬಲಿತಿದೆ ಎಂದರ್ಥ. ಮೊಳಕೆಯೊಡೆದರೆ ಹಾಳಾಗಿದೆ ಎಂದು ಸರ್ವಥಾ ಅರ್ಥವಲ್ಲ. ಬದಲಿಗೆ ಇದು ಗಿಡವಾಗಲು ತನ್ನಲ್ಲಿ ಕೇಂದ್ರೀಕರಿಸಿದ್ದ ಶಕ್ತಿಯನ್ನೆಲ್ಲಾ ಹೊರಬಿಟ್ಟಿದೆ ಎಂದು ತಿಳಿದುಕೊಳ್ಳಬಹುದು. ಈ ಬೆಳ್ಳುಳ್ಳಿಯನ್ನೂ ಅಡುಗೆಗೆ ಸಾಮಾನ್ಯ ಬೆಳ್ಳುಳ್ಳಿಯಂತೆಯೇ ಬಳಸಬಹುದು. ಆದರೆ ಇದು ಮೊಳಕೆ ಚಿಕ್ಕದಿದ್ದಾಗ ಮಾತ್ರ. ಮೊಳಕೆ ಉದ್ದವಾದರೆ ಬೆಳ್ಳುಳ್ಳಿಯ ಎಸಳಿನ ಮೇಲೆ ಕಪ್ಪು ಕಲೆಗಳು ಮೂಡುತ್ತವೆ. ಇದು ಆರೋಗ್ಯಕರವಲ್ಲ. ಇದು ಬೆಳ್ಳುಳ್ಳಿ ಗಾಳಿಯಲ್ಲಿದ್ದ ಕಾರಣ ಕೊಳೆತ ಸಂಕೇತವಾಗಿದ್ದು ಇವನ್ನು ವರ್ಜಿಸಬೇಕು.

English summary

Beware of Chinese garlic! Here Is How To Spot It!

As Indians, we love to add garlic to our food. Without its tinge, our food seems incomplete. While science and studies state how nutritious and healthy garlic is, mankind has made it poisonous for us to consume this multi-purpose plant.
X
Desktop Bottom Promotion