For Quick Alerts
ALLOW NOTIFICATIONS  
For Daily Alerts

  ಮಾನ್ಸೂನ್ ನಲ್ಲಿ ಸುರಕ್ಷಿತವಾಗಿರಲು ಉತ್ತಮ ಆರೋಗ್ಯ ಸಲಹೆಗಳು

  By Sushma Charhra
  |

  ಮಾನ್ಸೂನ್ ಆರಂಭವಾದರೆ ಪ್ರತಿಯೊಬ್ಬರಿಗೂ ಒಂದು ರೀತಿಯ ಆಹ್ಲಾದ. ಬೇಸಿಗೆಯ ಬೇಗೆ ತಂಪಾಯ್ತು ಅನ್ನೋ ಭಾವನೆ. ಆದರೆ ಈ ತಂಪನೆಯ ವಾತಾವರಣ, ತಂಪಾದ ಗಾಳಿ, ಹನಿ ಹನಿ ನೀರು, ಎಲ್ಲವೂ ಖುಷಿಯ ಜೊತೆಗೆ ಕೆಲವು ಅನಾರೋಗ್ಯಕ್ಕೂ ಕಾರಣವಾಗಬಹುದು. ವಾಂತಿ, ಬೇಧಿ, ಕೆಮ್ಮು, ಕಫ, ಶೀತ, ಇತ್ಯಾದಿಗಳು. ಆದರೆ ಇವೆಲ್ಲವು ಬರದಂತೆ ತಡೆಯಲು ಸಾಧ್ಯವಿದೆ. ಅದಕ್ಕಾಗಿ ನಾವು ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಜೊತೆಗೆ ಪೋಷಕಾಂಶ ಭರಿತ ಆಹಾರ ಸೇವನೆಯನ್ನು ಮಾಡಬೇಕು.

  ಇಲ್ಲಿ ಕೆಲವು ಆರೋಗ್ಯ ಸಲಹೆಗಳಿವೆ. ಇವುಗಳನ್ನು ಪಾಲಿಸಿ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿ ಇಟ್ಟುಕೊಂಡು ಮಳೆಗಾಲವನ್ನು ಆನಂದಿಸಬಹುದು.. ಆಹಾರ ಕ್ರಮ ತಣ್ಣನೆಯ ವಾತಾವರಣವಿರುವುದರಿಂದಾಗಿ ನಿಮ್ಮ ಜೀರ್ಣಕ್ರಿಯೆಯು ನಿಧಾನಗತಿಯಾಗಿರುತ್ತೆ. ಹಾಗಾಗಿ ಸರಿಯಾದ ಆಹಾರ ಸೇವನೆಯು ನಿಮ್ಮನ್ನು ಆರೋಗ್ಯೋವಾಗಿರಲು ಸಹಕರಿಸುತ್ತೆ. ಹಾಗಾಗಿ ನಿಮ್ಮ ಆಹಾರದ ಬಗ್ಗೆ ಹೆಚ್ಚು ಜಾಗರೂಕರಾಗಿರಿ ಮತ್ತು ನೀರಿನ ಬಗ್ಗೆಯೂ ಕಾಳಜಿ ವಹಿಸಿ.

  Monsoon Season

  ಜೀರ್ಣಕ್ರಿಯೆ ನಿಧಾನಗತಿಗೆ ತಿರುಗುವುದರಿಂದಾಗಿ ಗ್ಯಾಸ್ಟ್ರಿಕ್ ಹೆಚ್ಚಾಗಿ ಅಜೀರ್ಣವಾಗುವ ಸಾಧ್ಯತೆ ಇರುತ್ತೆ. ನಿಮ್ಮ ಜೀರ್ಣಕ್ರಿಯೆ ಹತೋಟಿಯಲ್ಲಿರಲು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದ್ದು ಇವುಗಳನ್ನು ಮಾನ್ಸೂನ್ ನಲ್ಲಿ ಪಾಲಿಸುವುದರಿಂದಾಗಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಪ್ರತಿಯೊಂದು ಹಣ್ಣು ಮತ್ತು ತರಕಾರಿಯನ್ನು ಬಿಸಿನೀರಿನಲ್ಲಿ ತೊಳೆಯಿರಿ.

  ಯಾಕಂದ್ರೆ ಈ ಸಮಯದಲ್ಲಿ ಸಾಕಷ್ಟು ಕೊಳೆ ಇರುವ ಸಾಧ್ಯತೆಗಳಿರುತ್ತೆ. ಮಿತವಾದ ಆಹಾರ ಸೇವಿಸಿ. ಇದರಿಂದ ಮಾನ್ಸೂನ್ ನಲ್ಲಿ ನಿಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಗೆ ನೀವು ಸಹಾಯ ಮಾಡಿದಂತಾಗುತ್ತೆ. ಆರಾಮಾಗಿ ಆಹಾರ ಜೀರ್ಣವಾಗಲು ಮಿತವಾದ ಆಹಾರ ಸಹಕಾರಿ...

  *ಬಿಸಿಯಾದ ಪಾನೀಯ ಸ್ವೀಕರಿಸಿ. ಅದಕ್ಕೆ ಹಸಿಶುಂಠಿ ಇಲ್ಲವೇ ಒಣಗಿಸಿ ಪುಡಿ ಮಾಡಿಟ್ಟುಕೊಂಡ ಶುಂಠಿಯ ಟೀಯನ್ನು ಸೇವಿಸಿ. ಶುಂಠಿಯು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ.

  . ಯಾವಾಗಲೂ ಫ್ರೆಷ್ ಆಗಿ ತಯಾರಿಸಿದ ಆಹಾರವನ್ನೇ ಸೇವಿಸಿ. ಫ್ರಿಡ್ಜ್ ನಲ್ಲಿ ಇಟ್ಟ ಆಹಾರ ಮತ್ತು ಪದೇ ಪದೇ ಬಿಸಿ ಮಾಡಿ ಸೇವಿಸುವ ಆಹಾರವೂ ಅಷ್ಟು ಹಿತವಲ್ಲ.

  . ಫಿಲ್ಟರ್ ಮಾಡಿದ ಮತ್ತು ಕಾದಾರಿಸಿದ ನೀರನ್ನೇ ಕುಡಿಯಿರಿ. ಬಿಸಿ ಮಾಡಿ ಆರಿಸಿದ ನೀರನ್ನು 24 ಗಂಟೆಯೊಳಗೆ ಖಾಲಿ ಮಾಡಿ. ನಿನ್ನೆ ಕಾಯಿಸಿದ ನೀರನ್ನು ಇವತ್ತು ಕುಡಿಯಬೇಡಿ.

  . ಮಳೆಗಾಲದಲ್ಲಿ ಆದಷ್ಟು ಎಲೆ ರಹಿತ ಹಸಿ ತರಕಾರಿ ಸೇವಿಸುವುದು ಒಳಿತು . ಉದಾಹರಣೆಗೆ ಪಡವಲಕಾಯಿ, ಹೀರೆಕಾಯಿ, ಹಾಗಲಕಾಯಿ, ಬೀನ್ಸ್, ಅಲಸಂದಿ ಇತ್ಯಾದಿಗಳು

  . ಹಣ್ಣುಗಳ ಬಗ್ಗೆ ಹೇಳುವುದಾದರೆ ಈ ಕಾಲದಲ್ಲಿ ಲಭ್ಯವಿರುವ ಎಲ್ಲಾ ಹಣ್ಣುಗಳನ್ನು ಸೇವಿಸಬಹುದು. ಬಾಳೆಹಣ್ಣು, ಆಪಲ್,ದಾಳಿಂಬೆ, ಚೆರ್ರೀ ಹಣ್ಣುಗಳು ಈ ಕಾಲಕ್ಕೆ ಹಿತವಾದ ಹಣ್ಣುಗಳಾಗಿವೆ.

  . ರಸ್ತೆ ಬದಿಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು, ಚಾಟ್ಸ್ ತಿನ್ನುವುದು, ಕರಿದ ಪದಾರ್ಥಗಳನ್ನು ಸೇವಿಸಬೇಡಿ.

  . ಸಾಕಷ್ಟು ತರಕಾರಿಗಳನ್ನು ಒಂದೇ ದಿನ ಖರೀದಿಸಿ ಶೇಖರಿಸಿ ಇಡಬೇಡಿ. ಸಾಧ್ಯವಾದರೆ ಪ್ರತಿದಿನವೂ ಖರೀದಿಸಿ ಇಲ್ಲವೇ ಒಂದು ದಿನ ಬಿಟ್ಟು ಇನ್ನೊಂದು ದಿನ ತರಕಾರಿ ಖರೀದಿಸುವ ಅಭ್ಯಾಸ ಹೊಂದಿ.

  . ಅಧಿಕ ಉಪ್ಪಿನಾಂಶವಿರುವ ಆಹಾರ, ಹೆವಿಯಾಗಿರುವ ಆಹಾರ ಸೇವಿಸಬೇಡಿ.. ಇದು ಹೊಟ್ಟೆಯಲ್ಲಿ ಗುಳುಗುಳು ಎಂಬಂತಾಗುವುದು ಮತ್ತು ನೀರಿನ ಅಗತ್ಯತೆಯನ್ನು ಹೆಚ್ಚಿಸಿ ನಿಮ್ಮ ಆರೋಗ್ಯ ಹಾಳು ಮಾಡಬಹುದು. ಕಾರ್ನ್ ಮತ್ತು ಆಲಿವ್ ಆಯಿಲ್ ಮಾನ್ಸೂನ್ ಗೆ ಬಳಕೆ ಮಾಡುವುದು ಒಳ್ಳೆಯದು.

  . ಕಾಳುಮೆಣಸು,ಶುಂಠಿ, ಇಂಗು, ಬೆಳ್ಳುಳ್ಳಿ, ಕೊತ್ತುಂಬರಿ ಪುಡಿ, ಜೀರಿಗೆ ಪುಡಿ., ಅರಿಶಿನ, ಇವುಗಳು ಬಳಕೆ ಮಾಡಿದರೆ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ. ನಿಮ್ಮ ಡಯಟ್ ನಲ್ಲಿ ಈ ಎಲ್ಲಾ ಆಹಾರಗಳನ್ನು ಸೇವಿಸುವುದು ಮರೆಯಬೇಡಿ.

  . ಬಿಸಿ ನೀರು ಸೇವನೆ,ಬಾರ್ಲಿ ನೀರು ಕುಡಿಯುವುದು, ತುಳಸಿ ನೀರು ಕುಡಿಯುವುದರಿಂದ ನಿಮ್ಮ ದೇಹದ ಟಾಕ್ಸಿನ್ಸ್ ಹೊರ ಹಾಕಲು ಸಾಧ್ಯವಿದೆ. ಬಿಸಿನೀರಿಗೆ ಸ್ವಲ್ಪ ರಾಕ್ ಸಾಲ್ಟ್ ಸೇರಿಸಿ ಸೇವಿಸುವುದರಿಂದ ಮಾಂಸಖಂಡಗಳು ಹಿಡಿದಂತಾಗುವುದು ತಪ್ಪುತ್ತದೆ. ಶೀತಕ್ಕೆ ಮೂಲಂಗಿ ಜ್ಯೂಸ್ ಸೇವಿಸುವುದು ಒಳ್ಳೆಯದು.

  . ಅರ್ಧ ಬೆಂದ ಮೊಟ್ಟೆ ಮತ್ತು ಮಾಂಸ ಸೇವನೆ ಮಾಡಬೇಡಿ.

  Monsoon Season

  2. ಕೂದಲು ಮತ್ತು ಚರ್ಮದ ರಕ್ಷಣೆ

  ಮಳೆಗಾಲದಲ್ಲಿ ನಿಮ್ಮ ಕೂದಲು ಮತ್ತು ಚರ್ಮ ವಿಶೇಷ ಜಾಗೃತಿಯನ್ನು ಬಯಸುತ್ತವೆ.ಕೆಟ್ಟ ವಾತಾವರಣದಿಂದ ಬೇಗನೆ ನಿಮ್ಮ ಚರ್ಮ ಹಾನಿಗೊಳಗಾಗುವ ಸಾಧ್ಯತೆ ಇರುತ್ತೆ. ಕ್ಯಾಡಿಡಾ ಅನ್ನುವುದೊಂದು ಸಾಮಾನ್ಯ ಫಂಗಸ್ ಆಗಿದ್ದು, ಯಾವಾಗಲೂ ನಿಮ್ಮ ಚರ್ಮ ಕೆಟ್ಟ ವಾತಾವರಣಕ್ಕೆ ತೆರೆದುಕೊಂಡಿದ್ದರೆ ನಿಮ್ಮ ಚರ್ಮಕ್ಕೆ ಅವು ಹಾನಿಯನ್ನುಂಟು ಮಾಡುತ್ತವೆ. ಹಾಗಾಗಿ ಆದಷ್ಟು ನಿಮ್ಮ ಚರ್ಮವನ್ನು ಕವರ್ ಮಾಡಿ ಇಟ್ಟುಕೊಳ್ಳಿ. ಮುಖ್ಯವಾಗಿ ಪಾದಗಳು, ಎದೆಯ ಸಂದು, ತೊಡೆಯ ಗಂಟಿನ ಹಿಂಭಾಗ, ಕಂಕಳು ಇತ್ಯಾದಿ

  ಭಾಗಗಳ ರಕ್ಷಣೆಗೆ ಹೆಚ್ಚು ಒತ್ತು ನೀಡಿ. ಈ ಎಲ್ಲಾ ಪ್ರದೇಶವು ಒಣಗಿದ್ದರೆ ಫಂಗಲ್ ಸೋಂಕು ತಗುಲುವುದಿಲ್ಲ.

  ಮಳೆಗಾಲದಲ್ಲಿ ನಿಮ್ಮ ಕೂದಲಿನ ರಕ್ಷಣೆಯೂ ಭಾರೀ ಮುಖ್ಯ. ಯಾವಾಗಲೂ ಮಳೆಯಲ್ಲಿ ಒದ್ದೆಯಾಗುವುದರಿಂದಾಗಿ ನಿಮ್ಮ ಸ್ಕಾಲ್ಪ್ ನಲ್ಲಿ ಸಮಸ್ಯೆಗಳಾಗಬಹುದು. ಮಳೆಯ ನೀರು ಕೇವಲ ನಿಮ್ಮ ಕೂದಲನ್ನು ಮಾತ್ರ ಹಾಳು ಮಾಡುವುದಿಲ್ಲ ಬದಲಾಗಿ ನಿಮ್ಮ ಸ್ಕಾಲ್ಪ್ ನಲ್ಲಿ ಫಂಗಸ್ ಗಳ ಬೆಳವಣಿಗೆಯಾಗಿ ತೊಂದರೆಯೊಡ್ಡ ಬಹುದು. ಮೂರು ದಿನಗಳಿಗೊಮ್ಮೆಯಾದರೂ ನಿಮ್ಮ ಕೂದಲನ್ನು ಸ್ವಚ್ಛವಾಗಿ ಸೌಮ್ಯ ಶಾಂಪೂ ಬಳಸಿ ತೊಳೆಯುವ ಪರಿಪಾಠವನ್ನು ಇಟ್ಟುಕೊಳ್ಳಿ.

  ಪ್ರತಿ ಬಾರಿ ಶಾಂಪೂ ಮಾಡುವ ಮುನ್ನವೂ ಎಣ್ಣೆ ಮಸಾಜ್ ಮಾಡಿಕೊಳ್ಳುವುದನ್ನು ಮರೆಯಬೇಡಿ. ಎಣ್ಣೆ ಮಸಾಜ್ ನಿಮ್ಮ ಕೂದಲಿನಲ್ಲಿ ತೇವಾಂಶ ಕಾಪಾಡಿ,ಆರೋಗ್ಯವಾಗಿರಲು ಸಹಕರಿಸುತ್ತೆ. ಅಷ್ಟೇ ಅಲ್ಲ, ಕಂಡೀಷನರ್ ನಂತೆ ಕೂಡ ಇದು ವರ್ತಿಸುತ್ತೆ. ಆದರೆ ಅತಿಯಾಗಿ ಎಣ್ಣೆ ಬಳಿದುಕೊಂಡಿಲ್ಲಿ ಎಂಬ ಬಗ್ಗೆ ನಿಮಗೆ ಖಾತ್ರಿ ಇರಲಿ... ಅತಿಯಾಗಿ ಎಣ್ಣೆ ಹಚ್ಚಿದರೆ ಅದನ್ನು ತೊಳೆಯಲು ಶಾಂಪೂ ಕೂಡ ಅಧಿಕ ಬೇಕಾಗುತ್ತದೆ. ಇದು ನಿಮ್ಮ ಕೂದಲನ್ನು ಹಾಳು ಮಾಡುವ ಸಾಧ್ಯತೆ ಇದೆ. ನಿಮ್ಮ ಅಡುಗೆ ಮನೆಯ ವಸ್ತುಗಳಿಂದಲೇ ಉತ್ತಮ ಶಾಂಪೂ ತಯಾರಿಸಿಕೊಳ್ಳುವುದು ಒಳಿತು.

  . ಸ್ವಚ್ಛತೆ

  . ಆಗಾಗ ನಿಮ್ಮ ಕೈ ಮತ್ತು ಕಾಲುಗಳನ್ನು ಹದ ಬೆಚ್ಚಗಿರುವ ಸೋಪು ನೀರು ಬಳಸಿ ತೊಳಿಯಿರಿ. ಮುಖ್ಯವಾಗಿ ನೀವು ಹೊರಗಡೆಯಿಂದ ತಿರುಗಾಡಿ ಮನೆಗೆ ಬಂದಾಗ ಈ ಅಭ್ಯಾಸ ಮರೆಯಬೇಡಿ

  .ಈ ಸೀಸನ್ ನಲ್ಲಿ ಫ್ಲೂ ಅಟ್ಯಾಕ್ ಆಗುವುದು ಭಾರೀ ಬೇಗ. ಹಾಗಾಗಿ ಆದಷ್ಟು ಮಾಸ್ಕ್ ಗಳನ್ನು ಬಳಸಿ. ಜನಸಂದಣಿ ಇರುವ ಪ್ರದೇಶದಿಂದ ಆದಷ್ಟು ದೂರವಿರಲು ಪ್ರಯತ್ನಿಸಿ

  .ಬೇಯಿಸಿದ ಮತ್ತು ಬೇಯಿಸದೇ ಇರುವ ತರಕಾರಿಗಳನ್ನು ಸಪರೇಟ್ ಆಗಿ ಇಡಿ. ಎಲ್ಲಾ ಆಹಾರ ಪದಾರ್ಥಗಳನ್ನು ಮುಚ್ಚಿಡಿ.

  *ನಿಮ್ಮ ರೆಫ್ರಿಜರೇಟರ್ ನ್ನು ಆಗಾಗ ಸ್ವಚ್ಛಗೊಳಿಸುತ್ತಲೇ ಇರಿ. ಯಾವುದೇ ಕಾರಣಕ್ಕೂ ಫಂಗಸ್ ಗಳು ಆಗದಂತೆ ಎಚ್ಚರ ವಹಿಸಿ.ಒಂದು ವೇಳೆ ಜಾಗರೂಕತೆ ತಪ್ಪಿದರೆ ನಿಮ್ಮ ಎಲ್ಲಾ ಆಹಾರ ಪದಾರ್ಥವೂ ಹಾಳಾಗುತ್ತೆ ಎಂಬುದು ನೆನಪಿರಲಿ.

  .ನಿಮ್ಮ ತೋಟದಲ್ಲೂ ಕೂಡ ನೀವು ಚಪ್ಪಲಿ ಇಲ್ಲದೆ ಓಡಾಡಬೇಡಿ. ಬಚ್ಚಲು ಮನೆ, ಶೌಚಾಲಯಕ್ಕೆ ತೆರಳುವಾಗ ಚಪ್ಪಲಿ ಬಳಸಿ. ಆದಷ್ಟು ಮನೆಯೊಳಗೂ ಚಪ್ಪಲಿ ಬಳಸುವುದು ಉತ್ತಮ.

  . ಶೌಚಾಲಯ, ಬಚ್ಚಲು ಮನೆ, ಸಿಂಕ್ ಗಳನ್ನು ಸ್ವಚ್ಛಗೊಳಿಸುವಾಗ ಬಿಸಿ ನೀರನ್ನು ಬಳಸಿ ಮತ್ತು ಅದಕ್ಕೆ ಎರಡು ಚಮಚ ಉಪ್ಪು ಸೇರಿಸಿಕೊಳ್ಳಿ. ಇದು ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸಲು ಸಹಕರಿಸುತ್ತೆ.

  . ಆಹಾರ ಸೇವನೆಯಾದ ಕೂಡಲೇ ಆ ಪಾತ್ರೆಗಳನ್ನು ತೊಳೆದುಬಿಡಿ.

  .ನಿಮ್ಮ ಸಾಕ್ಸ್, ಶೂ, ಬೆಡ್ ಶೀಟ್ಸ್, ರೈನ್ ಕೋಟ್ಸ್ ಎಲ್ಲವೂ ಒಣಗಿರುವಂತೆ ನೋಡಿಕೊಳ್ಳಿ

  ಈ ಎಲ್ಲಾ ಆರೋಗ್ಯಕಾರಿ ಸಲಹೆಗಳನ್ನು ಪಾಲಿಸಿ ಮತ್ತು ಮಳೆಗಾಲವನ್ನು ಎಂಜಾಯ್ ಮಾಡಿ...!

  English summary

  Best Health Tips For A Safe Monsoon Season

  The monsoon brings some respite from the summer heat, and hence, is much welcomed by one and all. However, along with the cool, wet weather, monsoon brings with it various ailments such as dysentery, diarrhoea, cold and flu. But, all of these can be prevented if we take certain precautions during the monsoon season, along with having fresh nutritious food. So, here are some health tips that you can follow to enjoy a happy, healthy monsoon season:
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more