For Quick Alerts
ALLOW NOTIFICATIONS  
For Daily Alerts

ತುಳಸಿ ಎಲೆ: ಮಧುಮೇಹ-ಕ್ಯಾನ್ಸರ್‌ನಂತ ಕಾಯಿಲೆಯನ್ನು ಗುಣಪಡಿಸುತ್ತದೆ!

By Deepu
|

ತುಳಸಿಯು ಹಿಂದೂ ಧಾರ್ಮಿಕ ಸಂಪ್ರದಾಯಗಳ ಪವಿತ್ರ ಸ್ಥಾನವನ್ನು ಹೊಂದಿದೆ. ಭಾರತೀಯರು ತುಳಸಿಯನ್ನು ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಪೂಜಿಸುತ್ತಾರೆ ಮತ್ತು ಈ ಪವಿತ್ರ ಸಸ್ಯದ ಔಷಧೀಯ ಗುಣಗಳನ್ನು ನೋಡಿದರೆ ನಿಮಗೂ ಅದರ ಮಹತ್ವದ ಅರ್ಥವಾಗುತ್ತದೆ. ತುಳಸಿ ಧಾರ್ಮಿಕವಾಗಿ ಮಾತ್ರ ಹೆಸರುಗಳಿಸಿಲ್ಲ, ಅದರಲ್ಲಿ ಹಲವು ಔಷಧೀಯ ಗುಣಗಳೂ ಇದೆ. ಆದರೆ ಈ ಅಂಶ ತುಳಸಿ ಬೆಳೆಸಿದ ಎಷ್ಟೋ ಜನರಿಗೂ ತಿಳಿದಿರುವುದಿಲ್ಲ.

ಇದರ ಎಲೆಯ ಗಂಧವೇ ವಾತಾವರಣವನ್ನು ತಂಪು ಮತ್ತು ಕಲ್ಮಶರಹಿತವಾಗಿಸುವ ಶಕ್ತಿ ಹೊಂದಿದೆ. ಈ ಗಿಡವನ್ನು ಮನೆಯ ಮುಂದುಗಡೆ ಬೆಳೆಸುವುದರಿಂದ ಮನೆಯವರೆಲ್ಲರಿಗೂ ಒಳಿತಾಗುತ್ತದೆ ಎಂಬ ವಿಶ್ವಾಸ ಕೂಡ ನಮ್ಮಲ್ಲಿದೆ. ವೈದ್ಯಕೀಯ ಕ್ಷೇತ್ರದಲ್ಲೂ ತುಳಸಿಯು ಹಲವಾರು ಅದ್ಭುತಗಳನ್ನು ಮಾಡಿದೆ.

ನಮ್ಮ ಭಾರತೀಯ ಪರಂಪರೆಯು ಸಾವಿರಾರು ವರ್ಷಗಳಿಂದ ತುಳಸಿಯನ್ನು ಬಳಸಿಕೊಂಡು ಬರುತ್ತಿದೆ. ನೋಡಲು ಪುಟ್ಟದಾಗಿರುವ ಈ ಎಲೆಗಳು ತಲೆನೋವನ್ನು ಗುಣಪಡಿಸುವಲ್ಲಿ, ಬಾಯಿಯ ದುರ್ವಾಸನೆ ಹೋಗಲಾಡಿಸುವಲ್ಲಿ ಮೊದಲಾದ ಚಿಕ್ಕಪುಟ್ಟ ತೊಂದರೆಗಳನ್ನು ಲೀಲಾಜಾಲವಾಗಿ ನಿವಾರಿಸುವುದು ಮಾತ್ರವಲ್ಲದೆ ಮುಖ್ಯವಾಗಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. ಬನ್ನಿ ತುಳಸಿ ಎಲೆಯ ಆರೋಗ್ಯಕಾರಿ ಪ್ರಯೋಜನಗಳೇನು ಎಂಬುದನ್ನು ನೋಡೋಣ...

1. ಜ್ವರವನ್ನು ಕಡಿಮೆಗೊಳಿಸುತ್ತದೆ

1. ಜ್ವರವನ್ನು ಕಡಿಮೆಗೊಳಿಸುತ್ತದೆ

ಒಂದು ವೇಳೆ ಯಾವುದೋ ಕಾರಣಕ್ಕೆ ಜ್ವರ ಬಂದಿದ್ದು ಸಾಮಾನ್ಯ ಔಷಧಿಗಳಿಗೆ ಬಗ್ಗದೇ ಇದ್ದಾಗ ತುಳಸಿ ಎಲೆಗಳ ಸೇವನೆಯನ್ನು ದಿನಕ್ಕೆ ಮೂರು ಎಲೆಗಳಿಗೆ ವಿಸ್ತರಿಸಿ ದಿನಕ್ಕೆ ಮೂರು ಹೊತ್ತು ಸೇವಿಸುವುದರಿಂದ ಜ್ವರ ಇಳಿಯಲು ನೆರವಾಗುತ್ತದೆ.

2. ಒಣ ಕೆಮ್ಮಿಗೆ

2. ಒಣ ಕೆಮ್ಮಿಗೆ

ಒಂದು ವೇಳೆ ನಿಮ್ಮನ್ನು ಕೆಮ್ಮು ಬಾಧಿಸುತ್ತಿದ್ದು ಕಫವಿಲ್ಲದೇ ಗಂಟಲು ಒಣದಾಗಿದ್ದರೆ ತುಳಸಿ ಎಲೆಯನ್ನು ನೀರಿನೊಂದಿಗೆ ಸೇವಿಸಿದ ಬಳಿಕ ಉತ್ತಮ ಪರಿಣಾಮ ದೊರಕುತ್ತದೆ. ಏಕೆಂದರೆ ತುಳಸಿ ಎಲೆಗಳಲ್ಲಿರುವ ಕೆಮ್ಮು ನಿವಾರಕ ಗುಣ (antitussive property) ಕೆಮ್ಮಿಗೆ ಕಾರಣವಾಗಿರುವ ಕೀಟಾಣುಗಳನ್ನು ಹೊಡೆದೋಡಿಸುತ್ತದೆ ಹಾಗೂ ಇದರ ಕಫಹಾರಿ ಗುಣ ಗಂಟಲಿನಲ್ಲಿನ ಕಫವನ್ನು ನಿವಾರಿಸಲು ನೆರವಾಗುತ್ತದೆ.

3. ಬಾಯಿ ದುರ್ವಾಸನೆ ಬರುತ್ತಿದ್ದರೆ

3. ಬಾಯಿ ದುರ್ವಾಸನೆ ಬರುತ್ತಿದ್ದರೆ

ಬಾಯಿ ದುರ್ವಾಸನೆಗೆ ಒಂದು ಕಾರಣವೆಂದರೆ ಒಸಡಿನಲ್ಲಿ ಉಳಿದ ಆಹಾರದಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಆಹಾರವನ್ನು ಕೊಳೆಸುವುದು. ಇದಕ್ಕಾಗಿ ಬೆಳಿಗ್ಗೆ ಹಲ್ಲುಗಳನ್ನು ಬ್ರಶ್ ಮಾಡಿದ ಬಳಿಕ ತುಳಸಿ ಎಲೆಯೊಂದನ್ನು ಬೆರಳುಗಳಲ್ಲಿಯೇ ಹಿಚುಕಿ ಒಸಡುಗಳಿಗೆ ರಸ ತಗಲುವಂತೆ ಹಚ್ಚಿಕೊಳ್ಳಿ. ಇಡಿಯ ದಿನ ಬಾಯಿಯಲ್ಲಿ ದುರ್ವಾಸನೆ ಬರದಿರಲು ಇದು ನೆರವಾಗುತ್ತದೆ.

4. ತಲೆನೋವಿಗೂ ಉತ್ತಮ ಮನೆಮದ್ದು

4. ತಲೆನೋವಿಗೂ ಉತ್ತಮ ಮನೆಮದ್ದು

ಸಾಮಾನ್ಯವಾದ ತಲೆನೋವಿಗೆ ತುಳಸಿ ಉತ್ತಮವಾಗಿದೆ. ತುಳಸಿ ರಸದಲ್ಲಿರುವ ನರಗಳನ್ನು ಸಡಿಲಗೊಳಿಸುವ ಗುಣ ಮೆದುಳಿಗೆ ಹೆಚ್ಚಿನ ರಕ್ತ ಸರಬರಾಜು ಮಾಡಲು ನೆರವಾಗುತ್ತದೆ ಹಾಗೂ ಮೂಗು ಕಟ್ಟಿರುವುದನ್ನು ತೆರೆದು ಹೆಚ್ಚಿನ ಆಮ್ಲಜನಕ ಪಡೆಯಲು ನೆರವಾಗುತ್ತದೆ.

5. ಮೈಗ್ರೇನ್ ನಂತಹ ತಲೆನೋವಿಗೂ ರಾಮಬಾಣ

5. ಮೈಗ್ರೇನ್ ನಂತಹ ತಲೆನೋವಿಗೂ ರಾಮಬಾಣ

ಸಾಮಾನ್ಯವಾಗಿ ಮೆದುಳಿಗೆ ರಕ್ತಸರಬರಾಜು ಮಾಡುವ ನಾಳ, ಮೂಗಿನ ಮೇಲೆ, ಎರಡು ಕಣ್ಣುಗಳ ನಡುವೆ ಹಣೆಯ ಹಿಂಬದಿಯಲ್ಲಿ ಇರುವ ಟೊಳ್ಳಾದ ಭಾಗವಾದ ಕುಹರ ಅಥವಾ ಸೈನಸ್ ನಲ್ಲಿ ಸೋಂಕು ಆಗಿದ್ದರೆ ಇದು ತಲೆನೋವಿಗೆ ಕಾರಣವಾಗಬಹುದು. ತುಳಸಿಯ ಸೇವನೆ ಅಥವಾ ತುಳಸಿಯ ಎಣ್ಣೆಗಳನ್ನು ಹಣೆ, ಕುತ್ತಿಗೆಗೆ ಹಿಂಭಾಗ, ಕಿವಿಯ ಹಿಂಭಾಗದಲ್ಲಿ ಹಚ್ಚಿಕೊಳ್ಳುವುದರಿಂದ ಮೈಗ್ರೇನ್ ನಂತಹ ಅತ್ಯುಗ್ರ ತಲೆನೋವು ಸಹಾ ತಹಬಂದಿಗೆ ಬರುತ್ತದೆ.

6. ಕ್ಯಾನ್ಸರ್ ನಿಂದ ರಕ್ಷಣೆಗೆ!

6. ಕ್ಯಾನ್ಸರ್ ನಿಂದ ರಕ್ಷಣೆಗೆ!

ಕ್ಯಾನ್ಸರ್ ವಿರೋಧಿ ಹಾಗೂ ಆ್ಯಂಟಿಆಕ್ಸಿಡೆಂಟ್ ಅಂಶಗಳು ತುಳಸಿಯಲ್ಲಿ ಸಮೃದ್ಧವಾಗಿರುವ ಕಾರಣದಿಂದ ಕ್ಯಾನ್ಸರ್‌ನ್ನು ತುಳಸಿಯಿಂದ ನಿವಾರಣೆ ಮಾಡಬಹುದಾಗಿದೆ. ತಂಬಾಕಿನಿಂದ ಬರುವಂತಹ ಬಾಯಿಯ ಕ್ಯಾನ್ಸರ್ ಮತ್ತು ಸ್ತನದ ಕ್ಯಾನ್ಸರ್ ಇರುವಂತವರು ತುಳಸಿ ಎಲೆಗಳನ್ನು ನಿಯಮಿತವಾಗಿ ತಿಂದಾಗ ಹೆಚ್ಚಿನ ಪರಿಣಾಮ ಕಂಡುಬಂದಿದೆ ಎಂದು ಅಧ್ಯಯನಗಳು ಹೇಳಿವೆ. ತುಳಸಿಯಲ್ಲಿರುವಂತಹ ಅಂಶಗಳು ಫ್ರೀ ರ್ಯಾಡಿಕಲ್ ನ್ನು ತಡೆದು ದೇಹವನ್ನು ಆರೋಗ್ಯವಾಗಿಡುತ್ತವೆ. ದೇಹವನ್ನು ಆರೋಗ್ಯ ಹಾಗೂ ಬಲಿಷ್ಠವಾಗಿಡಲು ಪ್ರತೀ ದಿನ ಒಂದು ಲೋಟ ತುಳಸಿ ಜ್ಯೂಸ್ ಕುಡಿಯಿರಿ.

7. ಕಿಡ್ನಿ ಕಲ್ಲಿನ ಸಮಸ್ಯೆ ಇದ್ದರೆ

7. ಕಿಡ್ನಿ ಕಲ್ಲಿನ ಸಮಸ್ಯೆ ಇದ್ದರೆ

ಮೂತ್ರಪಿಂಡಗಳಲ್ಲಿ ಕಲ್ಲುಂಟಾಗುವುದು ಸಾಮಾನ್ಯವಾಗಿದೆ. ಇದರ ತೊಂದರೆ ಏನೆಂದರೆ ಈ ಕಲ್ಲು ಒಂದು ನಿರ್ದಿಷ್ಟ ಗಾತ್ರಕ್ಕೆ ಬೆಳೆಯುವವರೆಗೂ ನೋವು ನೀಡದೇ ಗೋಪ್ಯವಾಗಿರುತ್ತದೆ. ಒಮ್ಮೆ ಈ ಕಲ್ಲಿನ ಗಾತ್ರ ಮೂತ್ರಪಿಂಡದ ಸಹನೆಗೆ ಮೀರಿತೋ, ಅತೀವ ನೋವು ನೀಡಲು ಪ್ರಾರಂಭಿಸುತ್ತದೆ. ಇಂತಹ ಸಮಸ್ಯೆಯಿಂದ ಪಾರಾಗಲು ತುಳಸಿ ರಸಕ್ಕೆ ಜೇನುತುಪ್ಪವನ್ನು ಹಾಕಿಕೊಂಡು ಪ್ರತಿದಿನ ಕುಡಿಯುವುದರಿಂದ ಕಿಡ್ನಿಯಲ್ಲಿರುವ ಕಲ್ಲುಗಳನ್ನು ಮೂತ್ರದ ಮೂಲಕ ಹೊರಹಾಕುತ್ತದೆ ಎಂದು ಆಯುರ್ವೇದವು ಹೇಳುತ್ತದೆ. ತುಳಸಿಯಲ್ಲಿ ನಿರ್ವಿಷಕಾರಿ ಗುಣಗಳು ಇರುವುದರಿಂದ ದೇಹದಲ್ಲಿರುವ ಯುರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ. ಕಿಡ್ನಿಯಲ್ಲಿ ಉಂಟಾಗುವ ಕಲ್ಲುಗಳಿಗೆ ದೇಹದಲ್ಲಿರುವ ಯುರಿಕ್ ಆಮ್ಲವೇ ಕಾರಣವಾಗಿದೆ.

8. ಮಧುಮೇಹಿ ರೋಗಿಗಳಿಗೂ ತುಳಸಿ ಟೀ ರಾಮಬಾಣ

8. ಮಧುಮೇಹಿ ರೋಗಿಗಳಿಗೂ ತುಳಸಿ ಟೀ ರಾಮಬಾಣ

ತುಳಸಿ ಟೀ ಯನ್ನು ಸಕ್ಕರೆ ಇಲ್ಲದೇ ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿ ಮಧುಮೇಹ ಆವರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸಬಹುದು. ಇದರಲ್ಲಿರುವ polyunsaturated ಕೊಬ್ಬಿನ ಆಮ್ಲಗಳು ಈ ಕೆಲಸಕ್ಕೆ ಪೂರಕವಾಗಿವೆ.

9. ತುಳಸಿ ಚಹಾವನ್ನು ತಯಾರಿಸುವುದು ಹೇಗೆ

9. ತುಳಸಿ ಚಹಾವನ್ನು ತಯಾರಿಸುವುದು ಹೇಗೆ

ಒಂದು ಕಪ್‌ನಷ್ಟು ತುಳಸಿ ಚಹಾವನ್ನು ತಯಾರಿಸುವುದು ಕಷ್ಟದ ಕೆಲಸವೇನಲ್ಲ. ಕೆಲವರ ಮನೆಯಲ್ಲಿ ಧಾರ್ಮಿಕ ನಂಬಿಕೆಗಳಿಗಾಗಿ ಪೂಜೆ ಪುನಸ್ಕಾರಕ್ಕಾಗಿ ತುಳಸಿ ಗಿಡವನ್ನು ಬೆಳೆಸಿರುತ್ತಾರೆ. ತುಳಸಿ ಗಿಡವನ್ನು ತಮ್ಮ ಮನೆಗಳಲ್ಲಿ ಹೊಂದಿರದೇ ಇರುವವರು ಪೂರ್ವ ಪ್ಯಾಕೇಜ್ ಮಾಡಿದ ಅಥವಾ ಒಣಗಿದ ತುಳಸಿ ಎಲೆಯನ್ನು ಮಾರುಕಟ್ಟೆಯಿಂದ ಖರೀದಿಸಬೇಕಾಗುತ್ತದೆ. ಈ ಚಹಾವನ್ನು ತಯಾರಿಸಲು, ಒಂದು ಕಪ್‌ನಷ್ಟು ನೀರನ್ನು ಕುದಿಸಿಕೊಳ್ಳಿ ಮತ್ತು ತುಳಸಿ ಚಹಾದ ಬ್ಯಾಗ್ ಅನ್ನು ಇದಕ್ಕೆ ಮುಳುಗಿಸಿ. ಐದು ನಿಮಿಷಗಳ ಕಾಲ ಇದನ್ನು ಹಾಗೆಯೇ ಇರಿಸಿ. ಪೂರ್ವವಾಗಿ ಪ್ಯಾಕ್ ಮಾಡಿದ ಚಹಾವನ್ನು ನೀವು ಬಳಸುತ್ತಿಲ್ಲವೆಂದಾದಲ್ಲಿ, ತಾಜಾ ತುಳಸಿ ಎಲೆಗಳನ್ನು ಕಿತ್ತುಕೊಳ್ಳಿ ಮತ್ತು ಇದನ್ನು ಕಪ್‌ನಷ್ಟು ನೀರಿನಲ್ಲಿ ಕವರ್ ಮಾಡಿಕೊಳ್ಳಿ. ಎರಡು ನಿಮಿಷಗಳಷ್ಟು ಕಾಲ ಈ ಎಲೆಗಳು ನೀರಿನಲ್ಲಿರಲಿ.

English summary

Benefits of Tulsi, Facts You Must Know About ...

According to Ayurveda, tulsi can help to treat common ailments, it can strengthen the immune system, fight against bacterial infection in the body and also help to combat skin and hair problems. So, here are some of the health benefits of tulsi leaves.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more