ಆಕ್ಯುಪ್ರೆಷರ್ ಚಿಕಿತ್ಸೆಯ ಆರೋಗ್ಯಕಾರಿ ಪ್ರಯೋಜನಗಳು

ಕೆಲವೊಂದು ಸಾಂಪ್ರದಾಯಿಕ ಚಿಕಿತ್ಸಾ ಕ್ರಮಗಳು ತುಂಬಾ ಪರಿಣಾಮವನ್ನು ಬೀರುವುದು. ಅದು ನಮ್ಮ ದೇಹವನ್ನು ಸಂಪೂರ್ಣವಾಗಿ ಕಾಯಿಲೆಯಿಂದ ಗುಣಪಡಿಸುವುದು ಮಾತ್ರವಲ್ಲದೆ, ಮತ್ತೆ ರೋಗವು ಬರದಂತೆ ತಡೆಯುವುದು. ಭಾರತದಲ್ಲಿ ಆಯುರ್ವೇದವು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವಂತಹ ಚಿಕಿತ್ಸಾ ಕ್ರಮ. ಅದೇ ರೀತಿಯಾಗಿ ನಮ್ಮ ನೆರೆಯ ಚೀನಾದಲ್ಲೂ ಹಲವಾರು ರೀತಿಯ ಚಿಕಿತ್ಸಾ ಕ್ರಮಗಳು ಇವೆ. ಈ ಚಿಕಿತ್ಸೆಗಳು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇದರಲ್ಲಿ ಮುಖ್ಯವಾಗಿ ಆಕ್ಯುಪ್ರೆಷರ್.

Amazing Health Benefits of Acupressure treatment

ಚೀನಾದ ಸಾಂಪ್ರದಾಯಿಕ ಚಿಕಿತ್ಸಾ ಕ್ರಮಗಳಲ್ಲಿ ಆಕ್ಯುಪ್ರೆಷರ್ ಕೂಡ ಒಂದಾಗಿದೆ. ಇಂದಿನ ದಿನಗಳಲ್ಲಿ ಆಕ್ಯುಪ್ರೆಷರ್ ನ್ನು ವಿಶ್ವದ ಹೆಚ್ಚಿನ ಭಾಗಗಳಲ್ಲಿ ಚಿಕಿತ್ಸಾ ಕ್ರಮವಾಗಿ ಅನುಸರಿಸಿಕೊಂಡು ಹೋಗಲಾಗುತ್ತಿದೆ. ನಾವು ಕೂಡ ಆಕ್ಯುಪ್ರೆಷರ್ ನ್ನು ಕರಗತ ಮಾಡಿಕೊಳ್ಳಬಹುದು. ನಮ್ಮ ದೇಹದೊಳಗಿನ ಅಂಗಾಂಗಗಳಲ್ಲಿ ಇರುವಂತಹ ಸಣ್ಣ ಸಣ್ಣ ಹಾನಿಯನ್ನು ಸರಿಪಡಿಸುವುದರೊಂದಿಗೆ ಆಕ್ಯುಪ್ರೆಷರ್ ನಿಂದ ಇತರ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಆಕ್ಯುಪ್ರೆಷರ್ ನಿಂದಾಗಿ ಸಿಗುವಂತಹ ಲಾಭಗಳು ಯಾವುದು ಎಂದು ನೀವು ತಿಳಿದುಕೊಳ್ಳಿ ಮತ್ತು ಅದನ್ನು ನೀವು ಪಾಲಿಸಿಕೊಂಡು ಹೋಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಸಂಪೂರ್ಣ ದೇಹದ ಆರೋಗ್ಯ

ಸಂಪೂರ್ಣ ದೇಹದ ಆರೋಗ್ಯ

ಆಕ್ಯುಪ್ರೆಷರ್ ಎಂದರೆ ದೇಹದಲ್ಲಿನ ಕೆಲವೊಂದು ಕೇಂದ್ರ ಹಾಗೂ ಬಿಂದುಗಳ ಮೇಲೆ ಲಘುವಾಗಿ ಒತ್ತಡ ಹಾಕುವುದು. ಇದರಿಂದ ಈ ಕೇಂದ್ರ ಅಥವಾ ಬಿಂದುಗಳಿಗೆ ಸಂಬಂಧ ಹೊಂದಿರುವಂತಹ ಅಂಗಾಂಗಗಳು ಮತ್ತು ಸ್ನಾಯುಗಳು ಪ್ರತಿಕ್ರಿಯಿಸುವುದು. ನಮ್ಮ ದೇಹವು ಸಂಪೂರ್ಣವಾಗಿ ಒಂದು ಜೀವಶಕ್ತಿ ಆಗಿರುವಂತಹ `ಚಿ' ಅಥವಾ 'ಕ್ಯಿ' ಯಿಂದ ರಚಿಸಲ್ಪಟ್ಟಿರುವುದು. ಇದು ನಮ್ಮ ದೇಹದಲ್ಲಿ ಅಗೋಚರ ಸಾಲು ಅಥವಾ ಮೆರಿಡಿಯನ್ ಮೂಲಕ ಸಾಗುವುದು. ಈ ಮೆರಿಡಿಯನ್ ಗಳನ್ನು ತಡೆದಾಗ ದೇಹಕ್ಕೆ ಕಾಯಿಲೆಗಳು ಬರುವುದು. ಈ ವೇಳೆ ಆಕ್ಯುಪ್ರೆಷರ್ ತುಂಬಾ ನೆರವಾಗುವುದು. ಇದು ಆ ಪ್ರದೇಶಗಳನ್ನು ತಡೆಯಿಂದ ಮುಕ್ತಗೊಳಿಸುವುದು ಮಾತ್ರವಲ್ಲದೆ, ದೇಹವು ಸಂಪೂರ್ಣವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು.

ವೇಗವಾಗಿ ಗುಣಮುಖವಾಗಲು ನೆರವಾಗುವುದು

ವೇಗವಾಗಿ ಗುಣಮುಖವಾಗಲು ನೆರವಾಗುವುದು

ಇದು ತುಂಬಾ ನೈಸರ್ಗಿಕವಾಗಿರುವ ಕಾರಣದಿಂದಾಗಿ ಆಕ್ಯುಪ್ರೆಷರ್ ನಿಂದ ಸ್ನಾಯುಗಳ ಒತ್ತಡವು ನಿವಾರಣೆಯಾಗುವುದು, ರಕ್ತ ಸಂಚಾರವು ಉತ್ತಮವಾಗುವುದು ಮತ್ತು ದೇಹದಲ್ಲಿ ಜೀವಶಕ್ತಿ ಹೆಚ್ಚಿಸಿ, ಚೇತರಿಕೆಗೆ ನೆರವಾಗುವುದು. ನೀವು ಯಾವುದೇ ರೀತಿಯ ಕಾಯಿಲೆಯಿಂದ ಬಳಲುತ್ತಿದ್ದರೆ ಆಗ ನೀವು ಆಕ್ಯುಪಂಕ್ಚರ್ ನ್ನು ಬಳಸಿಕೊಂಡು ವೇಗವಾಗಿ ಗುಣಮುಖರಾಗಬಹುದು.

ನೋವು ನಿವಾರಣೆ

ನೋವು ನಿವಾರಣೆ

ಆಕ್ಯುಪ್ರೆಷರ್ ತುಂಬಾ ಅದ್ಭುತವಾಗಿ ನೋವನ್ನು ನಿವಾರಣೆ ಮಾಡುವುದು. ಒಂದು ಕೇಂದ್ರದಲ್ಲಿ ಒತ್ತಡವನ್ನು ಹಾಕಿದಾಗ ದೇಹದ ಆ ಭಾಗಕ್ಕೆ ಸಂಬಂಧಿಸಿದಂತಹ ಅಂಗಾಂಗವು ಪ್ರತಿಕ್ರಿಯಿಸುವುದು. ಇದರಲ್ಲಿ ಪ್ರಮುಖವಾಗಿ ತಲೆನೋವು ಎಂದು ಪರಿಗಣಿಸಿದರೆ ಆಗ ತಲೆಗೆ ಸಂಬಂಧಿಸಿದ ಕೇಂದ್ರದಲ್ಲಿ ಒತ್ತಡ ಹಾಕಬೇಕು. ಆಗ ಅದು ತಡೆಯನ್ನು ತೆರವು ಮಾಡಿ ನೋವು ನಿವಾರಿಸಲು ನೆರವಾಗುವುದು. ಇದು ನೆರವಾಗಲು ಇನ್ನೊಂದು ಕಾರಣವೆಂದರೆ ಆ ಜಾಗದಲ್ಲಿ ಹಾಕುವಂತಹ ಒತ್ತಡದಿಂದಾಗಿ ರಕ್ತಸಂಚಾರವು ಉತ್ತಮವಾಗುವುದು ಮತ್ತು ನೋವು ನಿವಾರಣೆಯಾಗುವುದು.

ದೇಹವನ್ನು ಶಾಂತವಾಗಿಡುವುದು

ದೇಹವನ್ನು ಶಾಂತವಾಗಿಡುವುದು

ದೇಹದಲ್ಲಿ ಕೆಲವೊಂದು ಬಿಂದುಗಳು ಹಾಗೂ ಕೇಂದ್ರಗಳ ಮೇಲೆ ಒತ್ತಡವನ್ನು ಉತ್ತೇಜಿಸುವುದು ಆಕ್ಯುಪ್ರೆಶರ್ ಒಳಗೊಂಡಿದೆ. ಈ ರೀತಿಯ ಕಾರಣದಿಂದಾಗಿ ಇದು ಮನಸ್ಸಿನ ಕಾರ್ಯವನ್ನು ಉತ್ತಮಪಡಿಸುವುದು. ದೇಹದಲ್ಲಿರುವ ಎಲ್ಲಾ ಮೆರಿಡಿಯನ್ ಗಳನ್ನು ನಿರ್ಬಂಧದಿಂದ ಮುಕ್ತಗೊಳಿಸಿದರೆ ಆಗ ದೇಹವು ಶಾಂತವಾಗಿರುವುದು ಎಂದು ಚೀನಾದ ವೈದ್ಯಕೀಯ ವಿಜ್ಞಾನವು ಹೇಳುತ್ತದೆ. ಹೀಗೆ ಮಾಡುವುದರಿಂದ ನಿಮಗೆ ಒತ್ತಡ ನಿಭಾಯಿಸಲು ಸಾಧ್ಯವಾಗುವುದು.

ಲೈಂಗಿಕವಾಗಿಯೂ ಉತ್ತಮರಾಗುವಿರಿ

ಲೈಂಗಿಕವಾಗಿಯೂ ಉತ್ತಮರಾಗುವಿರಿ

ಆಕ್ಯುಪ್ರೆಶರ್ ನ ಅಧ್ಯಯನದ ಪ್ರಕಾರ ಕ್ಯಿ ಶಕ್ತಿಯ ಅಸಮತೋಲನದಿಂದಾಗಿ ಅಂಗಾಂಗಳಲ್ಲಿ ನಿಶ್ಯಕ್ತಿಯು ಕಾಡುವುದು. ಇದರಿಂದಾಗಿ ಕಾಮಾಸಕ್ತಿಯ ಮೇಲೆ ಪರಿಣಾಮ ಬೀರುವುದು. ಈ ಶಕ್ತಿಯು ಕಿಡ್ನಿ ಮತ್ತು ಹೃದಯದ ಆರೋಗ್ಯವನ್ನು ಕೂಡ ಕಾಪಾಡುವುದು. ಈ ವ್ಯವಸ್ಥೆಗೆ ನೀವು ಆಕ್ಯುಪ್ರೆಶರ್ ಮಾಡುವ ಮೂಲಕವಾಗಿ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುವಂತೆ ಮಾಡಬಹುದು ಮತ್ತು ಇದರಿಂದ ನಿಮ್ಮ ಲೈಂಗಿಕ ಜೀವನವು ಸುಧಾರಣೆಯಾಗುವುದು.

ಮುಖದಲ್ಲಿನ ಸ್ನಾಯುಗಳನ್ನು ಬಲಗೊಳಿಸುವುದು

ಮುಖದಲ್ಲಿನ ಸ್ನಾಯುಗಳನ್ನು ಬಲಗೊಳಿಸುವುದು

ಕಾಸ್ಮೆಟಿಕ್ ಆಕ್ಯುಪ್ರೆಶರ್ ಎಂದು ಕರೆಯಲ್ಪಡುವಂತಹ ವಿಧಾನದಿಂದಾಗಿ ಇದು ಮುಖದ ಮೇಲಿನ ಸ್ನಾಯುಗಳನ್ನು ಬಲಪಡಿಸುವುದು, ರಕ್ತ ಸಂಚಾರ ಉತ್ತೇಜಿಸುವುದು ಮತ್ತು ದೇಹದಲ್ಲಿ ಕಾಲಜನ್ ಉತ್ಪತ್ತಿಯಾಗಲು ನೆರವಾಗುವುದು. ಈ ಎಲ್ಲಾ ಕ್ರಿಯೆಗಳಿಂದಾಗಿ ಮುಖದ ಅಂದವು ಹೆಚ್ಚಾಗುವುದು ಮತ್ತು ವಯಸ್ಸಾಗುವ ಲಕ್ಷಣಗಳು ನಿವಾರಣೆಯಾಗುವುದು

ಸ್ನಾಯುಗಳ ಒತ್ತಡ ನಿವಾರಣೆ

ಸ್ನಾಯುಗಳ ಒತ್ತಡ ನಿವಾರಣೆ

ನರಗಳ ಚಟುವಟಿಕೆಯನ್ನು ಉತ್ತೇಜಿಸಿ, ಸ್ನಾಯುಗಳಿಗೆ ಪೋಷಣೆ ನೀಡುವ ಮೂಲಕ ಸ್ನಾಯುಗಳಲ್ಲಿ ಇರುವಂತಹ ಒತ್ತಡವನ್ನು ಆಕ್ಯುಪ್ರೆಷರ್ ಕಡಿಮೆ ಮಾಡುವುದು. ಇದು ಒತ್ತಡದ ಮಟ್ಟವನ್ನು ಕಡಿಮೆ ಮಾಡುವುದು ಮತ್ತು ಸಂಪೂರ್ಣ ದೇಹವು ಆರಾಮವಾಗಿರುವಂತೆ ಮಾಡುವುದು. ಇದರಿಂದ ದೇಹವು ಒತ್ತಡದಿಂದ ಮುಕ್ತವಾಗುವುದು.

ರಕ್ತ ಸಂಚಾರವು ಸುಗಮವಾಗಿ ಆಗುವುದು

ರಕ್ತ ಸಂಚಾರವು ಸುಗಮವಾಗಿ ಆಗುವುದು

ಆಕ್ಯುಪ್ರೆಶರ್ ನ್ನು ಸರಿಯಾಗಿ ಬಳಸಿಕೊಂಡರೆ ಆಗ ದೇಹದಲ್ಲಿನ ರಕ್ತಸಂಚಾರವು ಸರಿಯಾಗಿ ಆಗಲು ನೆರವಾಗುವುದು. ಒಂದು ಬಿಂದು ಅಥವಾ ಕೇಂದ್ರದಲ್ಲಿ ನೀವು ಒತ್ತಡ ಹಾಕಿದಾಗ ಅದು ಚರ್ಮದ ಕೆಳಭಾಗದಲ್ಲಿ ಇರುವಂತಹ ರಕ್ತನಾಳಗಳಲ್ಲಿ ರಕ್ತ ಸಂಚಾರವನ್ನು ಸುಧಾರಿಸುವುದು. ರಕ್ತ ಸಂಚಾರವು ಹೆಚ್ಚಾಗುವ ಕಾರಣದಿಂದಾಗಿ ದೇಹದಲ್ಲಿನ ಎಲ್ಲಾ ಅಂಗಾಂಗಗಳು ಪುರ್ನಶ್ಚೇತನ ಪಡೆಯುವುದು ಮತ್ತು ದೇಹವು ಅತ್ಯುತ್ತಮವಾಗಿ ಕೆಲಸ ಮಾಡುವುದು.

ಒಟಿಸಿ ಔಷಧಿಗಳ ಅಗತ್ಯತೆ ತಗ್ಗಿಸುವುದು

ಒಟಿಸಿ ಔಷಧಿಗಳ ಅಗತ್ಯತೆ ತಗ್ಗಿಸುವುದು

ಆಕ್ಯುಪ್ರೆಶರ್ ನ್ನು ಶತಮಾನಗಳಿಂದಲೂ ಕೆಲವೊಂದು ಸಾಮಾನ್ಯ ಸಮಸ್ಯೆಗಳಾಗಿರುವಂತಹ ತಲೆನೋವು, ಸೈನಟಿಸ್ ಮತ್ತು ಶೀತಕ್ಕೆ ಬಳಸಲಾಗುತ್ತಿದೆ. ಆಕ್ಯುಪ್ರೆಶರ್ ನಿಂದಾಗಿ ನೋವು ನಿವಾರಣೆ ಮಾಡಲು ಸಾಧ್ಯವಾಗುವುದು ಮತ್ತು ತಲೆನೋವಿಗೆ ಚಿಕಿತ್ಸೆ ನೀಡಲು ಮತ್ತು ತಲೆನೋವಿನ ನಿವಾರಣೆಗೆ ನೀವು ಮಾತ್ರೆಗಳನ್ನು ಸೇವಿಸುವಂತಹ ಸಾಧ್ಯತೆಗಳನ್ನು ತುಂಬಾ ಕಡಿಮೆ ಮಾಡುವುದು.

English summary

Amazing Health Benefits of Acupressure treatment

Acupressure is an ancient form of medicine that is an offshoot of Traditional Chinese Medicine (TCM). Practiced widely all over the world, now one can even self administer acupressure.But apart from simply correcting flaws in our internal organs, acupressure has a large number of other benefits for your body.
X
Desktop Bottom Promotion