Latest Updates
-
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ
ಪುರುಷರ- ಮಹಿಳೆಯರ ಲೈಂಗಿಕ ಶಕ್ತಿ ಹೆಚ್ಚಿಸುವ ನೈಸರ್ಗಿಕ ಜ್ಯೂಸ್‌ಗಳು
ಲೈಂಗಿಕ ಶಕ್ತಿ ಹೆಚ್ಚಿದ್ದಷ್ಟೂ ದಂಪತಿಗಳು ಆತ್ಮೀಯ ಕ್ಷಣಗಳನ್ನು ಹೆಚ್ಚು ಹೊತ್ತು ಸವಿಯಲು ಸಾಧ್ಯವಾಗುತ್ತದೆ. ವಯಸ್ಸಿನೊಂದಿಗೇ ದೇಹ ಹಲವಾರು ಬದಲಾವಣೆಗಳಿಗೆ ಒಳಪಡುತ್ತಾ ಹೋಗುತ್ತದೆ ಹಾಗೂ ಕೆಲವು ಶಕ್ತಿಗಳು ಕುಂದುತ್ತಾ ಹೋಗುತ್ತವೆ. ಇದರಲ್ಲಿ ಲೈಂಗಿಕ ಶಕ್ತಿಯೂ ಒಂದು. ಪುರುಷರಲ್ಲಿ ನಿಮಿರು ದೌರ್ಬಲ್ಯ ಎದುರಾದರೆ ಮಹಿಳೆಯರಲ್ಲಿ ದ್ರವಿಸುವ ಕ್ಷಮತೆ ಉಡುಗುವ ಮೂಲಕ ಗುಪ್ತಾಂಗ ಒಣಗುವ ಮೂಲಕ ಲೈಂಗಿಕ ಆಸಕ್ತಿ ಹಾಗೂ ಕ್ಷಮತೆ ಕುಂದುತ್ತದೆ. ಪರಿಣಾಮವಾಗಿ ಲೈಂಗಿಕ ಜೀವನವೂ ನಿಸ್ಸಾರವಾಗುತ್ತಾ ಹೋಗುತ್ತದೆ.
ಲೈಂಗಿಕ ಚಟುವಟಿಕೆಯಿಲ್ಲದ ಜೀವನ ಅಥವಾ ಕಳಪೆ ಪ಼್ರದರ್ಶನ ಪುರುಷನ ಸ್ವಾಭಿಮಾನವನ್ನೇ ಕುಂದಿಸಬಹುದು. ಒಂದು ವೇಳೆ ದಂಪತಿಗಳಿಬ್ಬರೂ ಕಾರಣಾಂತರಗಳಿಂದ ಲೈಂಗಿಕ ಜೀವನದಿಂದ ವಿಮುಖರಾಗಿದ್ದರೆ ಈಗ ಈ ಜೀವನಕ್ಕೆ ಮತ್ತೆ ಕಳೆ ತುಂಬಲು ಸೂಕ್ತ ಸಮಯವಾಗಿದೆ.
ಈ ಶಕ್ತಿ ಕುಂದಲು ದೈಹಿಕ ಕಾರಣಕ್ಕಿಂತಲೂ ಮಾನಸಿಕ ಕಾರಣಗಳೇ ಹೆಚ್ಚು. ಹಾಗಾಗಿ ದಂಪತಿಗಳು ಮೊದಲಿಗೆ ತಮ್ಮ ಮನಸ್ಸುಗಳನ್ನು ನಿರಾಳಗೊಳಿಸಿ ಒಬ್ಬರಿಗೊಬ್ಬರು ಮತ್ತೊಮ್ಮೆ ಹತ್ತಿರ ಬರಲು ಯತ್ನಿಸಿದರೆ ಉಳಿದ ದೈಹಿಕ ಕೊರತೆಯನ್ನು ಈ ಹದಿನೈದು ಅತ್ಯುತ್ತಮ ಪೇಯಗಳು ನಿವಾರಿಸುತ್ತವೆ. ಈ ಪೇಯಗಳು ಆರೋಗ್ಯಕರ ಹಾಗೂ ಸುಲಭವಾಗಿ ತಯಾಸಿರುವಂತಹದ್ದಾಗಿದ್ದು ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಿ ಲೈಂಗಿಕ ಜೀವನದಲ್ಲಿ ಹೊಸ ರಂಗೇರಿಸಬಹುದು. ಬನ್ನಿ, ಈ ಹದಿನೈದು ಪೇಯಗಳು ಯಾವುವು ಎಂಬುದನ್ನು ನೋಡೋಣ....

ಲೋಳೆಸರದ ಜ್ಯೂಸ್
ಕೆಲವು ಅಧ್ಯಯನಗಳ ಪ್ರಕಾರ ಲೋಳೆಸರ ಅಥವಾ ಆಲೋವೆರಾದ ತಿರುಳಿನಿಂದ ಸಂಗ್ರಹಿಸಿದ ರಸದ ಸೇವನೆಯಿಂದ ಪುರುಷರಲ್ಲಿ ಟೆಸ್ಟ್ರೋಸ್ಟೆರಾನ್ ಎಂಬ ರಸದೂತ ಹೆಚ್ಚು ಉತ್ಪಾದನೆಯಾಗುತ್ತದೆ. ಈ ರಸದೂತ ಕಾಮಶಕ್ತಿಗೆ ನೇರವಾಗಿ ಸಂಬಂಧಿಸಿದ ರಸದೂತವಾಗಿದ್ದು ಪುರುಷರಲ್ಲಿ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ನಿಮಿರುದೌರ್ಬಲ್ಯವನ್ನೂ ನಿವಾರಿಸುತ್ತದೆ. ಕೇವಲ ಲೈಂಗಿಕ ಶಕ್ತಿಗೆ ಮಾತ್ರವಲ್ಲ, ಈ ಜ್ಯೂಸ್ ನ ನಿಯಮಿತ ಸೇವನೆಯಿಂದ ಒಟ್ಟಾರೆ ಆರೋಗ್ಯವೂ ಉತ್ತಮಗೊಳ್ಳುತ್ತದೆ.

ಕಲ್ಲಂಗಡಿ ಹಣ್ಣಿನ ಜ್ಯೂಸ್
ಕಲ್ಲಂಗಡಿ ಹಣ್ಣಿನ ಬಹುತೇಕ ಭಾಗ ನೀರೇ ಆಗಿದ್ದರೂ ಇದಲ್ಲಿರುವ ಎಲ್-ಸಿಟ್ರುಲೈನ್ ಎಂಬ ಪೋಷಕಾಂಶ ಲೈಂಗಿಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಕಲ್ಲಂಗಡಿಯನ್ನು ಸೇವಿಸಿದ ಬಳಿಕ ಈ ಪೋಷಕಾಂಶ ನಮ್ಮ ಜೀರ್ಣಾಂಗಗಳಲ್ಲಿ ಜೀರ್ಣರಸಗಳ ಪ್ರಭಾವದ ಮೂಲಕ ಎಲ್-ಆರ್ಜಿನೈನ್ ಎಂಬ ಪೋಷಕಾಂಶವಾಗಿ ಬದಲಾಗುತ್ತದೆ. ಈ ಪೋಷಕಾಂಶ ರಕ್ತಕ್ಕೆ ಸೇರಿದ ಬಳಿಕ ಇದು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪತ್ತಿಗೆ ಪ್ರಚೋದಿಸುತ್ತದೆ. ಇದು ವಿಶೇಷವಾಗಿ ಪುರುಷರ ಜನನಾಂಗಗಳಿಗೆ ಹೆಚ್ಚಿನ ರಕ್ತಪರಿಚಲನೆಯನ್ನು ಹೆಚ್ಚಿಸಿ ಉದ್ರೇಕತೆಯನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಲೈಂಗಿಕ ಸಾಮರ್ಥ್ಯವೂ ಹೆಚ್ಚುತ್ತದೆ.

ಸೇಬಿನ ರಸ
ಸೇಬು ಒಟ್ಟಾರೆ ಆರೋಗ್ಯವನ್ನು ವೃದ್ದಿಸುವ ಜೊತೆಗೇ ಲೈಂಗಿಕ ಶಕ್ತಿಯನ್ನೂ ಹೆಚ್ಚಿಸುವ ಗುಣ ಹೊಂದಿದೆ. ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ಕ್ವೆರ್ಸಟಿನ್ ಎಂಬ ಆಂಟಿ ಆಕ್ಸಿಡೆಂಟ್ ಹಾಗೂ ಫ್ಲೇವನಾಯ್ಡುವಿಗೆ ಲೈಂಗಿಕ ಶಕ್ತಿ ಹೆಚ್ಚಿಸಲು ನೆರವಾಗುವ ಗುಣವಿದೆ. ನಿತ್ಯವೂ ತಾಜಾ ಸೇಬುಗಳಿಂದ ಹಿಂಡಿ ತೆಗೆದ ರಸವನ್ನು ಕುಡಿದರೆ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತದೆ.

ಶುಂಠಿಯ ರಸ
ನಿಮ್ಮ ಆಹಾರದಲ್ಲಿ ಕೊಂಚ ಶುಂಠಿಯ ರಸವನ್ನು ಬೆರೆಸಿ ಸೇವಿಸುವ ಮೂಲಕ ಆಹಾರದ ರುಚಿಯನ್ನು ಹೆಚ್ಚಿಸುವ ಜೊತೆಗೇ ಆರೋಗ್ಯವನ್ನೂ ವೃದ್ಧಿಸಬಹುದು. ಈ ರಸದ ಸೇವನೆಯಿಂದ ವಿಶೇಷವಾಗಿ ರಕ್ತನಾಳಗಳ ಆರೋಗ್ಯ ಹಾಗೂ ಕ್ಷಮತೆ ಹೆಚ್ಚುತ್ತದೆ ಹಾಗೂ ಈ ಮೂಲಕ ದೇಹದ ವಿವಿಧ ಭಾಗಗಳಿಗೆ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ಅಲ್ಲದೇ ಜನನಾಂಗಗಳಿಗೆ ಹೆಚ್ಚಿನ ರಕ್ತಸಂಚಾರ ಒದಗಿಸುವ ಮೂಲಕ ಲೈಂಗಿಕ ಶಕ್ತಿಯನ್ನೂ ಹೆಚ್ಚಿಸಿ ಶೀಘ್ರಸ್ಖಲನದ ತೊಂದರೆಯನ್ನು ನಿವಾರಿಸುತ್ತದೆ.

ಹಾಲು ಮತ್ತು ಜೇನು
ಜೇನು ನೈಸರ್ಗಿಕ ಸಿಹಿಕಾರಕವಾಗಿದೆ ಹಾಗೂ ಇದರ ಸೇವನೆ ಕಾಮೋತ್ತೇಜನ ನೀಡುತ್ತದೆ. ಇದರೊಂದಿಗೆ ಹಾಲನ್ನು ಬೆರೆಸಿ ಕುಡಿದರೆ ಲೈಂಗಿಕ ಶಕ್ತಿ ಏಕಸಮಾನವಾಗಿ ಹೆಚ್ಚು ಹೊತ್ತು ಮುಂದುವರೆಯಲು ನೆರವಾಗುತ್ತದೆ ಹಾಗೂ ಅತಿ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಹಾಲಿನಲ್ಲಿ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳಿದ್ದು ದೇಹಕ್ಕೆ ತಕ್ಷಣವೇ ಅಗತ್ಯ ಶಕ್ತಿಯನ್ನು ಒದಗಿಸುತ್ತದೆ.

ಬಾಳೆಹಣ್ಣಿನ ರಸಾಯನ
ಲೈಂಗಿಕ ಶಕ್ತಿ ಹಾಗೂ ಕಾಮಾಸಕ್ತಿಯನ್ನು ಹೆಚ್ಚಿಸಲು ಬಾಳೆಹಣ್ಣು ಸಹಾ ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಬ್ರೋಮಿಲೈನ್ ಎಂಬ ಕಿಣ್ವ ಉತ್ತಮ ಲೈಂಗಿಕ ಶಕ್ತಿ ವರ್ಧಕವಾಗಿದೆ. ಅಲ್ಲದೇ ಬಾಳೆಹಣ್ಣಿನಲ್ಲಿರುವ ಇತರ ಪೋಷಕಾಂಶಗಳು ಹಾಗೂ ವಿಟಮಿನ್ನುಗಳು ಮತ್ತು ಖನಿಜಗಳು ದೇಹಕ್ಕೆ ಅಗತ್ಯವಿರುವ ಕಸುವನ್ನೂ, ಶಕ್ತಿಯನ್ನೂ ಒದಗಿಸುತ್ತದೆ ಹಾಗೂ ಲೈಂಗಿಕ ರಸದೂತಗಳನ್ನು ಹೆಚ್ಚು ಉತ್ಪತ್ತಿ ಮಾಡುವ ಮೂಲಕ ಲೈಂಗಿಕ ಆಸಕ್ತಿ ಮತ್ತು ಶಕ್ತಿಯನ್ನೂ ವೃದ್ಧಿಸುತ್ತದೆ.

ದಾಳಿಂಬೆ ಹಣ್ಣಿನ ರಸ
ದಾಳಿಂಬೆ ಹಣ್ಣುಗಳ ಕಾಳುಗಳನ್ನು ಹಿಂಡಿ ಬೀಜ ನಿವಾರಿಸಿದ ರಸವನ್ನು ನೇರವಾಗಿ ಕುಡಿಯುವ ಮೂಲಕ ನಿಮಿರು ದೌರ್ಬಲ್ಯ ಕಡಿಮೆಯಾಗುತ್ತದೆ. ಸಾಂದ್ರೀಕರಿಸಿದ ರಸದಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ರಕ್ತಪರಿಚಲನೆಯನ್ನು ಹೆಚ್ಚಿಸುತ್ತವೆ. ಅಷ್ಟೇ ಅಲ್ಲ, ಈ ಹಣ್ಣಿನ ರಸದ ಸೇವನೆಯಿಂದ ಹೃದಯದ ತೊಂದರೆಗಳ ಸಾಧ್ಯತೆಯೂ ಕಡಿಮೆಯಾಗುತ್ತದೆ.

ಕಾಫಿ
ಕಾಫಿ ಸಹಾ ಒಂದು ನೈಸರ್ಗಿಕ ಕಾಮೋತ್ತೇಜಕವಾಗಿದೆ ಹಾಗೂ ಇದರಲ್ಲಿರುವ ಕೆಫೀನ್ ಲೈಂಗಿಕ ಶಕ್ತಿ ಮತ್ತು ತ್ರಾಣವನ್ನು ಹೆಚ್ಚಿಸುತ್ತದೆ. ನಿತ್ಯವೂ ಒಂದು ಅಥವಾ ಎರಡ್ ಕಪ್ ಚಿಕೊರಿ ಇಲ್ಲದ ಕಾಫಿ ಕುಡಿಯುವ ಮೂಲಕ ತಡೆರಹಿತ ಲೈಂಗಿಕ ಜೀವನವನ್ನು ಅನುಭವಿಸಬಹುದು.

ಬ್ರೀಟ್ರೂಟ್ ರಸ
ಬೀಟ್ರೂಟ್ ರಸ ಒಟ್ಟಾರೆ ಆರೋಗ್ಯಕ್ಕೂ ಉತ್ತಮ ಹಾಗೂ ಲೈಂಗಿಕ ಶಕ್ತಿ ಹೆಚ್ಚಿಸಲೂ ನೆರವಾಗುತ್ತದೆ. ಈ ತರಕಾರಿಯ ಜ್ಯೂಸ್ ಅನ್ನು ನಿತ್ಯವೂ ಕುಡಿಯುವ ಮೂಲಕ ಉತ್ತಮ ಲೈಂಗಿಕ ಜೀವನವನ್ನು ಬಹುಕಾಲ ಅನುಭವಿಸಬಹುದು. ಇದಕ್ಕಾಗಿ ನಿತ್ಯವೂ ಒಂದು ಲೋಟ ಬೀಟ್ರೂಟ್ ರಸವನ್ನು ಕುಡಿಯುತ್ತಾ ಹೋಗಬೇಕಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ರಕ್ತನಾಳಗಳನ್ನು ಸಡಿಲಿಸಿ ಹೆಚ್ಚಿನ ಪ್ರಮಾಣದ ರಕ್ತಸಂಚಾರ ಸಾಗಲು, ವಿಶೇಷವಾಗಿ ಜನನಾಂಗಗಳಿಗೆ ಹೆಚ್ಚಿನ ರಕ್ತಪರಿಚಲನೆ ದೊರಕಲು ನೆರವಾಗುತ್ತದೆ. ಪರಿಣಾಮವಾಗಿ ನಿಮಿರುತನ ಹಾಗೂ ಲೈಂಗಿಕ ಸಾಮರ್ಥ್ಯವೂ ಹೆಚ್ಚುತ್ತದೆ. ವಿಶೇಷವಾಗಿ ನಡುವಯಸ್ಸು ದಾಟಿದ ದಂಪತಿಗಳಿಗೆ ಈ ಜ್ಯೂಸ್ ವರದಾನವಾಗಿದೆ.

ಪಾಲಕ್ ಸೊಪ್ಪಿನ ರಸ
ಪಾಲಕ್ ಸೊಪ್ಪಿನಲ್ಲಿ ಆರ್ಜಿನೈನ್ ಎಂಬ ಪೋಷಕಾಂಶ ಹೆಚ್ಚಿನ ಪ್ರಮಾಣದಲ್ಲಿದೆ. ಪಾಲಕ್ ಸೊಪ್ಪಿನ ರಸವನ್ನು ಸೇವಿಸಿದಾಗ ಈ ಪೋಷಕಾಂಶ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತಿತವಾಗುತ್ತದೆ ಹಾಗೂ ಇದು ಲೈಂಗಿಕ ಶಕ್ತಿಯನ್ನು ನೈಸರ್ಗಿಕವಾಗಿ ಹೆಚ್ಚಿಸಲು ನೆರವಾಗುತ್ತದೆ.

ಬೆಣ್ಣೆಹಣ್ಣಿನ ಜ್ಯೂಸ್
ಬೆಣ್ಣೆಹಣ್ಣಿನಲ್ಲಿ ಫೋಲಿಕ್ ಆಮ್ಲ, ವಿಟಮಿನ್ ಬಿ6 ಹೆಚ್ಚಿನ ಪ್ರಮಾಣದಲ್ಲಿದೆ. ಈ ಪೋಷಕಾಂಶಗಳು ದೇಹಕ್ಕೆ ಅಧಿಕ ಶಕ್ತಿಯನ್ನು ಒದಗಿಸುತ್ತವೆ.

ಚಿಯಾ ಬೀಜಗಳ ನೀರು
ಚಿಯಾ ಬೀಜಗಳಲ್ಲಿ ಪ್ರೋಟೀನುಗಳು, ಕರಗದ ನಾರು ಹಾಗೂ ಆರೋಗ್ಯಕರ ಕೊಬ್ಬುಗಳಿವೆ. ಇವು ದೇಹಕ್ಕೆ ಅಗತ್ಯ ಶಕ್ತಿಯನ್ನು ಒದಗಿಸುತ್ತವೆ. ಈ ಬೀಜಗಳನ್ನು ನೆನೆಸಿಟ್ಟ ನೀರನ್ನು ಕುಡಿಯುವ ಮೂಲಕ ದೈಹಿಕವಾಗಿ ಹೆಚ್ಚಿನ ಶಕ್ತಿ ದೊರಕುತ್ತವೆ ಹಾಗೂ ತ್ರಾಣವೂ ಹೆಚ್ಚುತ್ತದೆ.

ಕಪ್ಪು ಚಾಕಲೇಟು ಪೇಯ
ಕಪ್ಪು ಚಾಕಲೇಟಿನಲ್ಲಿರುವ ಥಿಯೋಬ್ರೋಮೈನ್ ಎಂಬ ಪೋಷಕಾಂಶ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿದೆ. ಹಾಗಾಗಿ ಸಂಗಾತಿಯನ್ನು ತೃಪ್ತಿಪಡಿಸುವ ಇರಾದೆ ಹೊಂದಿದ್ದರೆ ರಾತ್ರಿಯೂಟದ ಬಳಿಕ ಒಂದು ದೊಡ್ಡ ತುಂಡು ಚಾಕಲೇಟನ್ನು ತಿನ್ನಿ.

ಬಾದಾಮಿ ಹಾಲು
ಈ ಆರೋಗ್ಯಕರ ಒಣಫಲಗಳು ಅವಶ್ಯಕ ಕೊಬ್ಬುಗಳಿಂದ ಸಮೃದ್ದವಾಗಿದೆ. ಈ ಕೊಬ್ಬು ಮತ್ತು ಇತರ ಖನಿಜಗಳು ವಿಶೇಷವಾಗಿ ಪುರುಷರಲ್ಲಿ ಆರೋಗ್ಯಕರ ರಸದೂತಗಳ ಉತ್ಪಾದನೆಗೆ ನೆರವಾಗುತ್ತವೆ. ಅಲ್ಲದೇ ಮಹಿಳೆಯರಲ್ಲಿಯೂ ಬಾದಾಮಿ ಸೇವನೆಯಿಂದ ಹೆಚ್ಚಿನ ಲೈಂಗಿಕ ಪ್ರಚೋದನೆ ದೊರಕುತ್ತದೆ.

ವನಿಲ್ಲಾ-ಜೇನಿನ ಪೇಯ
ದೇಹಕ್ಕೆ ಹೆಚ್ಚಿನ ಶಕ್ತಿ ಒದಗಿಸಲು ಜೇನು ಅತ್ಯುತ್ತಮವಾಗಿದೆ ಹಾಗೂ ವಿಶೇಷವಾಗಿ ಪುರುಷರಲ್ಲಿ ಹೆಚ್ಚಿನ ಪ್ರಮಾಣದ ಟೆಸ್ಟೋಸ್ಟೆರೋನ್ ರಸದೂತದ ಉತ್ಪತ್ತಿಗೆ ನೆರವಾಗುತ್ತದೆ. ಇದರೊಂದಿಗೆ ವನಿಲ್ಲಾವನ್ನು ಬೆರೆಸಿದರೆ ಈ ಜೋಡಿ ಅತ್ಯುತ್ತಮವಾದ ಕಾಮೋತ್ತೇಜಕವಾಗುತ್ತವೆ. ಇವೆರಡನ್ನೂ ಹಾಲಿನಲ್ಲಿ ಕುದಿಸಿ ಸೇವಿಸುವ ಮೂಲಕ ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಕಾಮಾಸಕ್ತಿ ಮತ್ತು ಶಕ್ತಿ ಹೆಚ್ಚುವ ಮೂಲಕ ತಡೆಯಿಲ್ಲದ ಆತ್ಮೀಯ ಕ್ಷಣಗಳನ್ನು ಹೆಚ್ಚು ಹೊತ್ತು ಆಸ್ವಾದಿಸಲು ಸಾಧ್ಯವಾಗುತ್ತದೆ.



Click it and Unblock the Notifications











