For Quick Alerts
ALLOW NOTIFICATIONS  
For Daily Alerts

  ಊದಿಕೊಂಡ ಬೆರಳುಗಳಿಗೆ ಶಮನ ನೀಡುವ ಹತ್ತು ಅತ್ಯುತ್ತಮ ಮನೆಮದ್ದುಗಳು

  By Arshad
  |

  ನಿತ್ಯದ ಚಟುವಟಿಕೆಗಳಿಗೆ ನಾವು ಇಡಿಯ ದಿನ ಬೆರಳುಗಳನ್ನು ಅತಿ ಹೆಚ್ಚಾಗಿಯೇ ಬಳಸುತ್ತೇವೆ. ಬೆರಳಿಗೆ ಚಿಕ್ಕ ಗಾಯವಾದರೂ, ಪೆಟ್ಟಾದರೂ, ಉಳುಕು, ಬೊಬ್ಬೆ, ಸುಟ್ಟಗಾಯ ಮೊದಲಾದ ಏನಾದರೊಂದು ತೊಂದರೆಯುಂಟಾದರೂ ನಿತ್ಯದ ಕೆಲಸಗಳಿಗೆ ಭಾರೀ ತೊಡಕುಂಟಾಗುತ್ತದೆ. ಕೆಲವೊಮ್ಮೆ ಬೆರಳುಗಳು ಊದಿಕೊಂಡರೂ ನಿತ್ಯದ ಕೆಲಸಗಳು ಬಾಧೆಗೊಳಗಾಗುತ್ತವೆ. ಬೆರಳುಗಳು ಊದಿಕೊಳ್ಳಲು ಕೆಲವಾರು ಕಾರಣಗಳಿವೆ ಹಾಗೂ ಊದಿಕೊಂಡ ಬೆರಳುಗಳು ಅತಿ ಹೆಚ್ಚು ಸೂಕ್ಷ್ಮಸಂವೇದಿಯಾಗಿರುವ ಕಾರಣ ಏನನ್ನೂ ಮುಟ್ಟಲೂ ಆಗದೆ ಜುಮ್ಮೆನ್ನುತ್ತದೆ. ಬೆರಳುಗಳ ಒಳಗೆ ದ್ರವದ ಸಂಗ್ರಹ ಹೆಚ್ಚುವುದು ಹಾಗೂ ಉರಿಯೂತದ ಕಾರಣ ಊದಿಕೊಳ್ಳುತ್ತವೆ.

  ಇದಕ್ಕೆ ಪ್ರಮುಖ ಕಾರಣ ಕೀಟಗಳ ಕಡಿತ, ಜಜ್ಜಿದ ಅಥವಾ ಉಳುಕಿದ ಪರಿಣಾಮ, ದ್ರವ ಬೆರಳುಗಳಿಂದ ಹಿಂದಿರುಗಳು ಅಸಮರ್ಥವಾಗಿರುವುದು, ಚರ್ಮದ ದದ್ದು, ಸೋಂಕು, ಅತಿ ಹೆಚ್ಚು ಉಪ್ಪಿನ ಸೇವನೆ, ರಸದೂತಗಳ ಬದಲಾವಣೆ, ಅತಿ ಹೆಚ್ಚು ಸಮಯದವರೆಗೆ ಹೆಚ್ಚಿನ ತಾಪಮಾನದಲ್ಲಿ ಕಾಲ ಕಳೆಯುವುದು ಇತ್ಯಾದಿ. ಕೆಲವೊಮ್ಮೆ ಸೆಲ್ಯೂಲೈಟಿಸ್, ಸಂಧಿವಾತ, ರ್‍ಹೂಮಟಾಯ್ಡ್ ಸಂಧಿವಾತ, ಶಿಲೀಂಧ್ರದ ಸೋಂಕು ಮೊದಲಾದ ಕಾರಣಗಳಿಂದಲೂ ಬೆರಳುಗಳು ಊದಿಕೊಳ್ಳಬಹುದು. (ಪತ್ನಿಯ ಲಟ್ಟಣಿಗೆ ಪೆಟ್ಟು ತಡೆಯಲು ಕೈಯೊಡ್ಡಿದ ಸಂದರ್ಭವನ್ನು ಇಲ್ಲಿ ಪರಿಗಣಿಸಲಾಗದು)

  ಒಂದು ವೇಳೆ ಈ ಭಾರೀ ಎನಿಸುವಷ್ಟಿಲ್ಲದಿದ್ದರೆ ಇದರ ಚಿಕಿತ್ಸೆಯನ್ನು ಮನೆಯಲ್ಲಿಯೇ ಸುಲಭ ಸಾಮಾಗ್ರಿಗಳಿಂದಲೇ ಪಡೆದು ಕೊಳ್ಳಬಹುದು. ಇವು ಸುರಕ್ಷಿತ ಹಾಗೂ ಪರಿಣಾಮಕಾರಿಯೂ ಆಗಿವೆ. ಆದರೆ ಬಾವು ಹೆಚ್ಚಾಗಿದ್ದು ನೋವೂ ಹೆಚ್ಚೇ ಆಗಿದ್ದರೆ ಮಾತ್ರ ಯಾವುದೇ ಪ್ರಯತ್ನಕ್ಕೆ ಕೈ ಹಾಕದೇ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಬನ್ನಿ, ಸುಲಭ ಮನೆಮದ್ದುಗಳು ಯಾವುವು ಎಂಬುದನ್ನು ನೋಡೋಣ:

  1. ಹೈಡ್ರೋಥೆರಪಿ

  1. ಹೈಡ್ರೋಥೆರಪಿ

  ಹೆಸರೇ ತಿಳಿಸುವಂತೆ ಇದು ನೀರನ್ನು ಅವಲಂಬಿಸಿದ ಚಿಕಿತ್ಸೆಯಾಗಿದೆ. ವ್ಯತ್ಯಾಸವೇನೆಂದರೆ ಇಲ್ಲಿ ಬಿಸಿ ಮತ್ತು ತಣ್ಣನೆಯ ನೀರನ್ನು ಬಳಸಲಾಗುತ್ತದೆ. ಮೊದಲು ಎರಡೂ ಹಸ್ತಗಳು ಪೂರ್ಣವಾಗಿ ಮುಳುಗುವಷ್ಟು ಅಗಲ ಮತ್ತು ಆಳವಿರುವ ಎರಡು ಪಾತ್ರೆಗಳನ್ನು ತೆಗೆದುಕೊಳ್ಳಿ. ಒಂದರಲ್ಲಿ ನೀವು ಸಹಿಸುವಷ್ಟು ಬಿಸಿನೀರನ್ನೂ, ಇನ್ನೊಂದರಲ್ಲಿ ಸಾಮಾನ್ಯ ತಣ್ಣೀರನ್ನೂ ತುಂಬಿಸಿ. ಮೊದಲು ಬಿಸಿನೀರಿನಲ್ಲಿ ಕೈಗಳನ್ನು ಮುಳುಗಿಸಿ, ಬೆರಳುಗಳನ್ನು ಸಾಧ್ಯವಾಗದಷ್ಟು ಅಗಲಿಸಿ ನಾಲ್ಕು ನಿಮಿಷ ಹಾಗೇ ಇರಿಸಿ. ಬಳಿಕ ಎರಡೂ ಹಸ್ತಗಳನ್ನು ತಣ್ಣನೆಯ ನೀರಿನ ಪಾತ್ರೆಯಲ್ಲಿ ಮುಳುಗಿಸಿ ಸುಮಾರು ಒಂದು ನಿಮಿಷ ಹಾಗೇ ಬಿಡಿ. ಬಳಿಕ ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ. ಈ ವಿಧಾನವನ್ನು ದಿನಕ್ಕೆ ಮೂರು ಬಾರಿ ಅನುಸರಿಸಿ.

  ಬಿಸಿ ಎಣ್ಣೆಯ ಮಸಾಜ್

  ಬಿಸಿ ಎಣ್ಣೆಯ ಮಸಾಜ್

  ಬಿಸಿ ಎಣ್ಣೆಯ ನಯವಾದ ಮಸಾಜ್ ಮೂಲಕವೂ ಊದಿಕೊಂಡಿದ್ದ ಬೆರಳುಗಳು ನಿಧಾನಕ್ಕೆ ಮೊದಲ ಸ್ಥಿತಿ ತಲುಪುತ್ತವೆ. ನೋಯುತ್ತಿರುವ ಸ್ನಾಯುಗಳನ್ನು ಸಡಿಲಗೊಳಿಸಿ ರಕ್ತಪರಿಚಲನೆಯನ್ನೂ ಉತ್ತಮಗೊಳಿಸುವ ಮೂಲಕ ಬಾತುಕೊಂಡಿದ್ದ ಬೆರಳುಗಳು ಬಾವು ಕಳೆದುಕೊಳ್ಳುತ್ತವೆ. ಕೊಂಚ ಸಾಸಿವೆ ಎಣ್ಣೆಯನ್ನು ಉಗುರುಬೆಚ್ಚಗಾಗುವಷ್ಟು ಬಿಸಿಯಾಗಿಸಿ. ಸುಮಾರು ಐದು ನಿಮಿಷಗಳವರೆಗೆ ಎಲ್ಲಾ ಬೆರಳುಗಳಿಗೆ ಹೆಚ್ಚಿನ ಒತ್ತಡವಿಲ್ಲದೇ ಮಸಾಜ್ ಮಾಡಿ. ಉತ್ತಮ ಪರಿಣಾಮಕ್ಕಾಗಿ ಇನ್ನೊಬ್ಬರಿಂದ ಮಸಾಜ್ ಮಾಡಿಸಿಕೊಳ್ಳಿ.

  ಬೆರಳುಗಳ ವ್ಯಾಯಾಮ

  ಬೆರಳುಗಳ ವ್ಯಾಯಾಮ

  ಒಂದು ವೇಳೆ ರಕ್ತಪರಿಚಲನೆಯ ಅಥವಾ ವ್ಯಾಯಾಮದ ಕೊರತೆಯಿಂದ ಈ ಬಾವು ಕಾಣಿಸಿಕೊಂಡಿದ್ದರೆ ಅಥವಾ ದ್ರವ ಒಳಗೇ ಉಳಿದುಕೊಂಡಿದ್ದು ನೋವಿಲ್ಲದ ಬಾವು ಇದ್ದರೆ ಈ ವಿಧಾನ ಸೂಕ್ತವಾಗಿದೆ. ಇದಕ್ಕಾಗಿ ಎಲ್ಲಾ ಬೆರಳುಗಳನ್ನು ಮುಷ್ಟಿಕಟ್ಟಿ ಸುಮಾರು ಒಂದು ನಿಮಿಷ ಗಟ್ಟಿಯಾಗಿಯೇ ಇರಿಸಿ. ನಿಧಾನವಾಗಿ ಬೆರಳುಗಳನ್ನು ತೆರೆಯುತ್ತಾ ಗರಿಷ್ಟವಾಗಿ ಹರಡಿಸಿ ಎಷ್ಟು ಹೊತ್ತು ಸಾಧ್ಯವೋ ಅಷ್ಟೂ ಹೊತ್ತು ಇರಿಸಿ. ಬಳಿಕ ನಿರಾಳರಾಗಿ. ಈ ವ್ಯಾಯಾಮವನ್ನು ದಿನಕ್ಕೆಷ್ಟು ಬಾರಿ ಸಾಧ್ಯವೋ ಅಷ್ಟೂ ಬಾರಿ ಪುನರಾವರ್ತಿಸಿ.

  ಎಪ್ಸಂ ಉಪ್ಪು

  ಎಪ್ಸಂ ಉಪ್ಪು

  ಇದರಲ್ಲಿ ಮೆಗ್ನೇಶಿಯಂ ಸಲ್ಫೇಟ್ ಇದೆ. ಬಾತುಕೊಂಡಿದ್ದ ಬೆರಳುಗಳಿಗೆ ಈ ರಾಸಾಯನಿಕೆ ಅತ್ಯುತ್ತಮ ಪರಿಹಾರ ಒದಗಿಸುತ್ತದೆ ಹಾಗೂ ಬಾವನ್ನು ಇಳಿಸಲು ಮತ್ತು ನೋವು ನಿವಾರಿಸಲು ನೆರವಾಗುತ್ತದೆ. ಒಂದು ಚಿಕ್ಕ ಪಾತ್ರೆಯಲ್ಲಿ ನೀವು ಸಹಿಸಲು ಸಾಧ್ಯವಾದಷ್ಟು ಬಿಸಿನೀರನ್ನು ತುಂಬಿ ಇದಕ್ಕೆ ಎರಡು ದೊಡ್ಡ ಚಮಚ ಎಪ್ಸಂ ಉಪ್ಪನ್ನು ಬೆರೆಸಿ. ಈ ನೀರಿನಲ್ಲಿ ಕೈಗಳನ್ನು ಸುಮಾರು ಹತ್ತು ನಿಮಿಷಗಳ ಕಾಲ ಮುಳುಗಿಸಿಡಿ. ಈ ವಿಧಾನವನ್ನು ದಿನಕ್ಕೆರಡು ಬಾರಿ ಅನುಸರಿಸಿ.

  ಅರಿಶಿನ

  ಅರಿಶಿನ

  ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶಕ್ಕೆ ಆಂಟಿ ಆಕ್ಸಿಡೆಂಟ್ ಹಾಗೂ ಉರಿಯೂತ ನಿವಾರಕ ಗುಣಗಳಿವೆ. ಇದು ಆರೋಗ್ಯವನ್ನು ಹಲವು ರೀತಿಯಲ್ಲಿ ವೃದ್ದಿಸುವ ಜೊತೆಗೇ ಬೆರಳುಗಳ ಬಾವನ್ನೂ ಕಡಿಮೆ ಮಾಡಲು ನೆರವಾಗುತ್ತದೆ. ಒಂದು ಚಿಕ್ಕ ಚಮಚ ಆಲಿವ್ ಎಣ್ಣೆಗೆ ಅರ್ಧ ಚಿಕ್ಕ ಚಮಚ ಅರಿಶಿನದ ಪುಡಿ ಬೆರೆಸಿ. ಈ ಲೇಪನವನ್ನು ಬಾತುಕೊಂಡಿದ್ದ ಬೆರಳುಗಳಿಗೆ ತೆಳುವಾಗಿ ಲೇಪಿಸಿ ಒಣಗಲು ಬಿಡಿ. ಪೂರ್ಣವಾಗಿ ಒಣಗಿದ ಬಳಿಕ ಕೊಂಚ ಹೊತ್ತು ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

  ಸೇಬಿನ ಶಿರ್ಕಾ (Apple Cider Vinegar)

  ಸೇಬಿನ ಶಿರ್ಕಾ (Apple Cider Vinegar)

  ಈ ಶಿರ್ಕಾದಲ್ಲಿರುವ ಪೊಟ್ಯಾಶಿಯಂ ಲವಣ ಬೆರಳುಗಳಲ್ಲಿ ಉಳಿದುಕೊಂಡಿದ್ದ ದ್ರವವನ್ನು ನಿವಾರಿಸಲು ನೆರವಾಗುತ್ತದೆ. ಇದಕ್ಕಾಗಿ ಒಂದು ಬೋಗುಣಿಯಲ್ಲಿ ಉಗುರುಬೆಚ್ಚನೆಯ ನೀರು ತುಂಬಿ ಎರಡು ದೊಡ್ಡ ಚಮಚ ಸೇಬಿನ ಶಿರ್ಕಾ ಬೆರೆಸಿ. ಈ ನೀರಿನಲ್ಲಿ ದಪ್ಪ ಟವೆಲ್ಲೊಂದನ್ನು ಮುಳುಗಿಸಿ ಕೊಂಚವೇ ಹಿಂಡಿ ಹೆಚ್ಚುವರಿ ನೀರನ್ನು ನಿವಾರಿಸಿ. ಈ ಟವೆಲ್ಲನ್ನು ಬಾತುಕೊಂಡಿದ್ದ ಬೆರಳುಗಳನ್ನು ಸುತ್ತುವರೆಯುವಂತೆ ಸುಮಾರು ಹತ್ತು ನಿಮಿಷ ಹಾಗೇ ಇರಿಸಿ.

  ಕಪ್ಪು ಟೀ ಬ್ಯಾಗ್

  ಕಪ್ಪು ಟೀ ಬ್ಯಾಗ್

  ಕಪ್ಪು ಟೀಯಲ್ಲಿರುವ ಟ್ಯಾನಿನ್ ಹಾಗೂ ಇತರ ಆಂಟಿ ಆಕ್ಸಿಡೆಂಟುಗಳು ಬೆರಳುಗಳ ಬಾವನ್ನು ನಿವಾರಿಸಲೂ ನೆರವಾಗುತ್ತವೆ. ಕೆಲವಾರು ಬ್ಯಾಗ್ ಗಳನ್ನು ಕುದಿಯುವ ನೀರಿಗೆ ಬೆರೆಸಿ ಒಂದರೆಡು ನಿಮಿಷ ಕುದಿಸಿ. ಬಳಿಕ ಈ ಬ್ಯಾಗ್ ಗಳನ್ನು ನಿವಾರಿಸಿ ಈ ನೀರನ್ನು ಸುಮಾರು ಹದಿನೈದು ನಿಮಿಷ ಫ್ರಿಜ್ಜಿನಲ್ಲಿರಿಸಿ (ಫ್ರೀಜರ್ ಒಳಗೆ). ಬಳಿಕ ತಣ್ಣಗಾದ ಈ ಬ್ಯಾಗ್ ಗಳನ್ನು ಬಾತುಕೊಂಡಿದ್ದ ಬೆರಳುಗಳ ಮೇಲೆ ಇರಿಸಿ ಸುಮಾರು ಹತ್ತು ನಿಮಿಶ ಹಾಗೇ ಬಿಡಿ. ಈ ವಿಧಾನವನ್ನು ದಿನದಲ್ಲಿ ಕೆಲವಾರು ಬಾರಿ ಅನುಸರಿಸಿ.

  ಐಸ್ ಪ್ಯಾಕ್

  ಐಸ್ ಪ್ಯಾಕ್

  ಬೆರಳು ಮಡಚಲು ಸಾಧ್ಯವಾಗದಷ್ಟು ಊದಿಕೊಂಡಿದ್ದು ಮರಗಟ್ಟಿದಂತಿದ್ದರೆ ಈ ವಿಧಾನ ಸೂಕ್ತವಾಗಿದೆ. ಈ ಬಾವು ಉರಿಯೂತದಿಂದ ಎದುರಾಗಿದ್ದು ತಣ್ಣನೆಯ ಐಸ್ ಉತ್ತಮ ಪರಿಹಾರ ಒದಗಿಸುತ್ತದೆ. ಕೆಲವು ಮಂಜುಗಡ್ಡೆಯ ತುಂಡುಗಳನ್ನು ಒಂದು ಟವೆಲ್ಲಿನೊಳಗಿರುವಂತಿರಿಸಿ ಟವೆಲ್ಲನ್ನು ಮಡಚಿ. ಈ ಟವೆಲ್ಲನ್ನು, ಮಂಜುಗಡ್ಡೆಯ ತುಂಡುಗಳು ಬಾವು ಬಂದಿರುವ ಬೆರಳುಗಳಿಗೆ ತಾಕುವಂತೆ ಸುತ್ತಿ ಸುಮಾರು ಐದರಿಂದ ಹತ್ತು ನಿಮಿಷ ಹಾಗೇ ಬಿಡಿ.

  ಲೋಳೆಸರ

  ಲೋಳೆಸರ

  ಒಂದು ವೇಳೆ ಕೀಟದ ಕಡಿತದಿಂದ ಬಾವು ಉಂಟಾಗಿದ್ದರೆ ಈ ವಿಧಾನವನ್ನು ಆದಷ್ಟು ಬೇಗನೇ ಅನುಸರಿಸಿ. ಇದು ಕೀಟದ ಕಡಿತದ ಉರಿಯನ್ನು ಹಾಗೂ ಈ ಮೂಲಕ ಎದುರಾಗಿದ್ದ ಬಾವನ್ನೂ ತಕ್ಷಣವೇ ಕಡಿಮೆ ಮಾಡುತ್ತದೆ. ಇದಕ್ಕಾಗಿ ಒಂದು ತಾಜಾ ಲೋಳೆಸರದ ಕೋಡನ್ನು ಮುರಿದು ಇದರಿಂದ ಒಸರುತ್ತಿರುವ ರಸವನ್ನು ಕೀಟ ಕಡಿದ ಭಾಗಕ್ಕೆ ಹಚ್ಚಿ. ಕೀಟ ಕಡಿದು ಕೊಂಚ ಹೊತ್ತಾಗಿದ್ದರೆ ಈ ಕೋಡನ್ನು ತೆರೆದು ಒಳಗಿನ ತಿರುಳನ್ನು ಕಿವುಚಿ ಬಾತುಕೊಂಡಿದ್ದ ಎಲ್ಲಾ ಬೆರಳುಗಳಿಗೆ ದಪ್ಪನಾಗಿ ಹಚ್ಚಿಕೊಳ್ಳಿ.

  ಉಪ್ಪಿನ ಸೇವನೆ ಕನಿಷ್ಠವಾಗಿಸಿ

  ಉಪ್ಪಿನ ಸೇವನೆ ಕನಿಷ್ಠವಾಗಿಸಿ

  ದೇಹದಲ್ಲಿ ಉಪ್ಪಿನ ಅಥವಾ ಸೋಡಿಯಂ ಲವಣದ ಪ್ರಮಾಣ ಹೆಚ್ಚಾಗಿದ್ದರೂ ಬೆರಳುಗಳು ಬಾತುಕೊಳ್ಳುತ್ತವೆ. ಸೋಡಿಯಂ ಹೆಚ್ಚಿದ್ದಷ್ಟೂ ದೇಹದ ತುದಿಭಾಗಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಅಡುಗೆಯಲ್ಲಿ ಅತಿ ಕಡಿಮೆ ಉಪ್ಪು ಬಳಸಿ ಹಾಗೂ ಹೊರಗಿನ ಆಹಾರ ಸೇವಿಸುವಾಗ ಕಡಿಮೆ ಉಪ್ಪಿರುವ ಆಹಾರಗಳನ್ನೇ ಆಯ್ದುಕೊಳ್ಳಿ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

  Read more about: health wellness
  English summary

  10 Home Remedies To Reduce Swelling In The Fingers

  Fingers can swell for a lot of reasons and it becomes extremely uncomfortable to touch things. A swollen finger can occur due to fluid build-up or inflammation. This can happen because of insect bites, an injury like a sprained or jammed finger, fluid retention, rash, infection, high salt intake, hormonal changes in the body and exposure to extreme temperature. Also, a swollen finger can be caused by certain health problems such as cellulitis, rheumatoid arthritis, fungal infection and so on. If it's a mild finger swelling, you can try out simple home remedies.
  Story first published: Tuesday, March 20, 2018, 16:19 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more