ನಿದ್ರೆಯ ಸಮಸ್ಯೆ ಇದ್ದರೆ ಈ ಆಹಾರಗಳನ್ನು ಸೇವಿಸಿ...ನಿದ್ರೆ ಬಹು ಬೇಗ ಬರುವುದು

Posted By: Divya pandit Pandit
Subscribe to Boldsky

ನಿದ್ರೆ ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಒಂದು. ನಿದ್ರೆ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಸೂಕ್ತ ರೀತಿಯ ನಿದ್ರೆ ಹೊಂದದಿರುವುದು, ದೀರ್ಘ ಸಮಯದ ವರೆಗೆ ನಿದ್ರೆಯನ್ನು ತಡೆಗಟ್ಟುವುದರಿಂದ ಆರೋಗ್ಯದಲ್ಲಿ ವಿಭಿನ್ನ ಬಗೆಯ ವ್ಯತ್ಯಾಸ ಉಂಟಾಗುವುದು. ಅನೇಕ ಅನಾರೋಗ್ಯಕ್ಕೆ ಕಾರಣವಾಗುವುದು. ಹಾಗಾಗಿಯೇ ನಿದ್ರೆ ಬಾರದಂತಹ ಆರೋಗ್ಯ ಸಮಸ್ಯೆ ಹೊಂದಿದವರಿಗೆ ನಿದ್ರೆ ಮಾತ್ರೆ ನೀಡುವುದರ ಮೂಲಕ ನಿದ್ರೆ ಬರುವಂತೆ ಮಾಡಲಾಗುವುದು. ಕೆಲಸದ ಒತ್ತಡದಲ್ಲಿರುವಾಗ ಅಥವಾ ಕೆಲಸದಿಂದ ತುಂಬಾ ದಣಿದಿರುವಾಗ ಸ್ವಲ್ಪ ಹೊತ್ತು ನಿದ್ರೆಗೆ ಮೊರೆ ಹೋದರೆ ಸಾಕು. ಪುನಃ ಚೈತನ್ಯ ಅಥವಾ ಕೆಲಸ ಮಾಡುವ ಉತ್ಸಾಹ ಮರುಕಳಿಸುತ್ತದೆ.

ದೇಹದ ಆರೋಗ್ಯ ಪಾಲನೆಗೆ ಹಾಗೂ ಮಾನಸಿಕವಾಗಿ ಹೆಚ್ಚು ಉತ್ಸಾಹ ನೀಡುವಂತೆ ಮಾಡಲು ನಿದ್ರೆ ಅತ್ಯಗತ್ಯ ಎಂದು ಹೇಳಬಹುದು. ವಯಸ್ಸಾದವರಿಗೆ ಹಾಗೂ ಮಾನಸಿಕ ಒತ್ತಡದಿಂದ ಬಳಲುತ್ತಿದ್ದವರಿಗೆ ನಿದ್ರಾಹೀನತೆ ಕಾಡುವುದು ಸಹಜ. ಅಂತಹ ಸಂದರ್ಭದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ನಿದ್ರೆಯನ್ನು ಹೊಂದಬಹುದು. ನಿಮಗೂ ನಿದ್ರೆಯ ಸಮಸ್ಯೆ ಇದ್ದರೆ ಲೇಖನದ ಮುಂದಿನ ಭಾಗದಲ್ಲಿ ವಿವರಿಸಲಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಿ. ಸಮಸ್ಯೆಯನ್ನು ದೂರವಿಡಿ.... 

ಲೆಟಿಸ್

ಲೆಟಿಸ್

ಲೆಟಿಸ್ ಎನ್ನುವ ಸಸ್ಯ ಪ್ರಬೇಧವು ಸಮೃದ್ಧವಾದ ಲ್ಯಾಕ್ಟೋಸ್ಯಾರಿಮ್ ಅನ್ನು ಒಳಗೊಂಡಿರುತ್ತದೆ. ಇದು ನಿದ್ರೆಗೆ ಸಹಾಯ ಮಾಡುವ ಅಥವಾ ಪರಿಪೂರ್ಣವಾದ ನಿದ್ರಾಜನಕ ಎಂದು ಹೇಳಬಹುದು. ಇದನ್ನು ಸಾಮಾನ್ಯವಾಗಿ ವಿವಿಧ ಸಲಾಡ್‍ಗಳಲ್ಲಿ ಮತ್ತು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಸಲಾಗುವುದು. ನಿಯಮಿತವಾಗಿ ಇದರ ಸೇವನೆಯನ್ನು ಪ್ರಾರಂಭಿಸಿದರೆ ನಿದ್ರೆಯ ಸಮಸ್ಯೆ ದೂರವಾಗುವುದು.

ಪಿಸ್ತಾ

ಪಿಸ್ತಾ

ಪಿಸ್ತಾ ಸಮೃದ್ಧವಾದ ಮೆಗ್ನಿಸಿಯಮ್, ಪ್ರೋಟೀನ್, ವಿಟಮಿನ್ ಬಿ6ಗಳನ್ನು ಹೊಂದಿರುವ ಅತ್ಯುತ್ತಮ ಆಹಾರ ಪದಾರ್ಥ. ಇದು ಉತ್ತಮ ನಿದ್ರೆಯನ್ನು ಉತ್ತೇಜಿಸುವುದು. ಈ ಪಿಸ್ತಾ ಬೀಜಗಳನ್ನು ಸಿಹಿತಿಂಡಿಗಳ ತಯಾರಿಗೆ ಹಾಗೂ ತ್ವರಿತವಾಗಿ ಹಸಿವನ್ನು ಮರೆಮಾಚಲು ಲಘುವಾಗಿ ಸೇವಿಸಬಹುದು.

ಕೇಲ್

ಕೇಲ್

ಕೇಲ್ ಕ್ಯಾಲ್ಸಿಯಂನಿಂದ ಕೂಡಿರುವ ಅತ್ಯುತ್ತಮವಾದ ಆಹಾರ ಘಟಕ. ಲ್ಯಾಕ್ಟೋಸ್ ಅಸಹಿಷ್ಣುತೆಯನ್ನು ಹೊಂದಿದೆ. ಇದನ್ನು ಕೆಲವು ಆಹಾರಪದಾರ್ಥಗಳಿಗೆ ಸೇರಿಸಿ ಸೇವಿಸಬಹುದು. ಕ್ಯಾಲ್ಸಿಯಂ ಕೊರತೆ ಇದ್ದರೆ ನಿದ್ರಾ ಸಮಸ್ಯೆ ಉಂಟಾಗುವುದು ಎನ್ನಲಾಗುವುದು. ಮಲಗುವ ವೇಳೆ ಇದನ್ನು ಬೇಯಿಸಿ ತಿನ್ನುವುದರ ಮೂಲಕ ನಿದ್ರಾಹೀನತೆಯನ್ನು ನಿವಾರಿಸಬಹುದು.

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು ನಿದ್ರೆಗೆ ಅತ್ಯುತ್ತಮ ರೀತಿಯಲ್ಲಿ ಉತ್ತೇಜಿಸುತ್ತವೆ. ಮಲಗುವ ಮುನ್ನ ಒಂದು ಬೌಲ್ ಅಲ್ಲಿ ವಿವಿಧ ಏಕದಳ ಧಾನ್ಯಗಳ ಮಿಶ್ರಣವನ್ನು ಸೇರಿಸಿ ಸೇವಿಸುವುದರಿಂದ ನಿದ್ರಾ ಸಮಸ್ಯೆಯನ್ನು ನಿವಾರಿಸಬಹುದು. ಇವುಗಳಲ್ಲಿ ಅಧಿಕ ಪ್ರಮಾಣದ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲ್ಸಿಯಮ್ ಗಳ ಸಂಯೋಜನೆ ಇರುವುದರಿಂದ ನಿದ್ರೆಗೆ ಉತ್ತೇಜನ ನೀಡುವುದು.

ಓಟ್ ಮೀಲ್

ಓಟ್ ಮೀಲ್

ಓಟ್‍ಮೀಲ್ ಜನಪ್ರಿಯ ಆಹಾರ ಪದಾರ್ಥಗಳಲ್ಲಿ ಒಂದು. ಇದನ್ನು ಬೆಳಗಿನ ಉಪಹಾರ ಅಥವಾ ರಾತ್ರಿಯ ಊಟದ ಲೆಕ್ಕದಲ್ಲೂ ಸೇವಿಸಬಹುದು. ಇದರಲ್ಲಿ ಉತ್ತಮವಾದ ಮೆಲಟೋನಿನ್ ಗಳಿಂದ ಕೂಡಿರುತ್ತದೆ. ಇದು ನಿಧಾನವಾಗಿ ನಿದ್ರೆಗೆ ಉತ್ತೇಜನ ನೀಡುವುದು.

ಧಾನ್ಯಗಳು

ಧಾನ್ಯಗಳು

ಹೋಲ್ ಗ್ರೇನ್ಸ್ ಅಥವಾ ಧಾನ್ಯಗಳು ನಿದ್ರೆಗೆ ಉತ್ತೇಜನ ನೀಡುವ ಅತ್ಯುತ್ತಮ ಆಹಾರ ಪದಾರ್ಥಗಳು. ಇವು ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಹೆಚ್ಚಿಸುತ್ತವೆ. ಅಲ್ಲದೆ ಉತ್ತಮ ನಿದ್ರೆಗೆ ಪ್ರೋತ್ಸಾಹಿಸುವುದು. ಮಲಗುವ ಮುನ್ನ ಅಥವಾ ನಿಯಮಿತವಾಗಿ ಧಾನ್ಯಗಳನ್ನು ಸೇವಿಸುವುದರಿಂದ ಉತ್ತಮ ನಿದ್ರೆಯನ್ನು ಹೊಂದಬಹುದು.

ಕಿವಿ

ಕಿವಿ

ಕಿವಿ ಹಣ್ಣು ವಿಟಮಿನ್ ಸಿ, ವಿಟಮಿನ್ ಇ, ಪೋಲೇಟ್ ಮತ್ತು ಸಿರೊಟೋನಿನ್ ಗಳಿಂದ ಸಮೃದ್ಧವಾಗಿದೆ. ಉತ್ತಮ ನಿದ್ರೆ ಪಡೆಯಲು ಇವು ಸಹಾಯ ಮಾಡುತ್ತವೆ. ಕಿವಿ ಹಣ್ಣು ನಿದ್ರಾಹೀನತೆ ಹೊಂದಿದವರಿಗೆ ಅಥವಾ ಉತ್ತಮ ನಿದ್ರೆ ಹೊಂದಲು ಬಯಸುವವರಿಗೆ ಅತ್ಯುತ್ತಮ ರೀತಿಯಲ್ಲಿ ಸಹಕರಿಸುವುದು.

ಟ್ಯೂನಾ

ಟ್ಯೂನಾ

ಟ್ಯೂನಾ ಆರೋಗ್ಯಕರವಾದ ಕೊಬ್ಬು ಮತ್ತು ಪ್ರೋಟಿನ್‍ಗಳನ್ನು ಹೊಂದಿರುವ ಅತ್ಯುತ್ತಮವಾದ ಮೂಲ ಎಂದು ಹೇಳಲಾಗುವುದು. ಇದು ಜೀವನಸತ್ವ ಬಿ6 ಅನ್ನು ಒಳಗೊಂಡಿದೆ. ಇದು ದೇಹದಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್ ಉತ್ಪಾದಿಸಲು ಸಹಕರಿಸುವುದು. ಟ್ಯೂನಾ ದೇಹಕ್ಕೆ ವಿಶ್ರಾಂತಿ ನೀಡಲು ಹಾಗೂ ಉತ್ತಮ ನಿದ್ರೆಗೆ ಸಹಕರಿಸುವುದು.

ಡಾರ್ಕ್ ಚಾಕೊಲೇಟ್

ಡಾರ್ಕ್ ಚಾಕೊಲೇಟ್

ಕೆಲವರಿಗೆ ಡಾರ್ಕ್ ಚಾಕೊಲೇಟ್ ಬಹಳ ಇಷ್ಟವಾಗುವುದು. ಇನ್ನೂ ಕೆಲವರು ಊಟದ ನಂತರ ಚಾಕೊಲೇಟ್ ಸೇವಿಸಲು ಇಷ್ಟಪಡುತ್ತಾರೆ. ಈ ಹವ್ಯಾಸವು ನಿದ್ರೆಗೆ ಉತ್ತೇಜನ ನೀಡುವುದು. ಡಾರ್ಕ್ ಚಾಕೊಲೇಟ್‍ಗಳು ಸಿರೊಟೋನಿನ್ ಅನ್ನು ಒಳಗೊಂಡಿದೆ. ಇದು ದೇಹಕ್ಕೆ ಉತ್ತಮ ವಿಶ್ರಾಂತಿ ನೀಡುವುದರ ಜೊತೆಗೆ ಉತ್ತಮ ನಿದ್ರೆಗೆ ಸಹಾಯ ಮಾಡುವುದು.

ವಾಲ್‍ನಟ್

ವಾಲ್‍ನಟ್

ವಾಲ್‍ನಟ್ ಟ್ರಿಫ್ಟೊಫಾನ್ ಅನ್ನು ಒಳಗೊಂಡಿದೆ. ಇದು ದೇಹದಲ್ಲಿ ಸಿರೋಟೊನಿನ್ ಮತ್ತು ಮೆಲಟೋನಿನ್‍ಅನ್ನು ಉತ್ಪಾದಿಸುವುದು. ಇವೆರಡು ರಾತ್ರಿಯ ಉತ್ತಮ ನಿದ್ರೆಗೆ ಪ್ರೋತ್ಸಾಹ ನೀಡುವುದು. ನಿಯಮಿತವಾಗಿ ಇದರ ಸೇವನೆ ಮಾಡುವುದರಿಂದ ಅಥವಾ ಊಟದ ಸಮಯದಲ್ಲಿ ನಿಮ್ಮ ಸಲಾಡ್‍ಗಳಲ್ಲಿ ಸೇರಿಸಿಕೊಂಡು ಸವಿಯುವುದರಿಂದ ಉತ್ತಮ ನಿದ್ರೆಗೆ ಜಾರಬಹುದು.

English summary

10 Foods That Will Help You Sleep Well

Getting good sleep at night is really important for your health because it may lower the risk of developing certain chronic illnesses. A good night's sleep keeps your brain healthy, improves digestion and boosts your immune system. However, sometimes, it might be difficult for you in falling asleep due to stress, depression and other factors that affect sleep. Eating certain foods could also promote a good night's sleep.