ಎಚ್ಚರ: ಪಾತ್ರೆ ತೊಳೆಯುವ ಸ್ಪಾಂಜ್, ಇದು ಸಿಕ್ಕಾಪಟ್ಟೆ ಡೇಂಜರ್!

By: Arshad
Subscribe to Boldsky

ನೀವು ಸರಿಯಾಗಿ ಓದಿದಿರಿ, ನಿಮ್ಮ ಅಡುಗೆಮನೆಯಲ್ಲಿರುವ ಪಾತ್ರೆ ತೊಳೆಯುವ ಸ್ಪಾಂಜ್ ಅಥವಾ ಸ್ಪಂಜು ಪಾತ್ರೆಗಳ ಕೊಳಕನ್ನು ತೊಳೆದರೂ ಪಾತ್ರೆ ತೊಳೆದ ಬಳಿಕ ಉಳಿದ ಉಳಿಯುವ ಆಹಾರಕಣಗಳು ಸ್ಪಂಜಿನಲ್ಲಿಯೇ ಉಳಿದು ಕೊಳೆತು ಬ್ಯಾಕ್ಟೀರಿಯಾ ಬೆಳೆಯಲು ಸೂಕ್ತ ತಾಣವಾಗುತ್ತದೆ.

ದಿನಗಳೆದಂತೆ ಈ ಬ್ಯಾಕ್ಟೀರಿಯಾಗಳೂ ಹೆಚ್ಚುತ್ತಾ ಸ್ಪಂಜಿನಿಂದ ಗಾಳಿಗೆ ದಾಟಿಕೊಳ್ಳುವ ಮೂಲಕ ಈ ಗಾಳಿಯನ್ನು ಉಸಿರಾಡುವ ಯಾರಿಗೂ ಸೋಂಕು ತರಬಹುದು. ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಈ ಸ್ಪಾಂಜ್‌ನಲ್ಲಿರುವ ಬ್ಯಾಕ್ಟೀರಿಯಾಗಳು ಜೀವನಿರೋಧಕ ಶಕ್ತಿ ಕಡಿಮೆ ಇದ್ದ ಕ್ಷಣವನ್ನು ಉಪಯೋಗಿಸಿಕೊಂಡು ಆರೋಗ್ಯ ಕೆಡಿಸಬಲ್ಲುದು. ಬನ್ನಿ, ಈ ಬಗ್ಗೆ ಕೆಲವು ವಾಸ್ತವಾಂಶಗಳನ್ನು ನೋಡೋಣ... 

ಸ್ಪಂಜೊಂದು ಆರೋಗ್ಯ ಕೆಡಿಸಲು ಹೇಗೆ ಸಾಧ್ಯ

ಸ್ಪಂಜೊಂದು ಆರೋಗ್ಯ ಕೆಡಿಸಲು ಹೇಗೆ ಸಾಧ್ಯ

ಬ್ಯಾಕ್ಟೀರಿಯಾಗಳಿಗೆ ಅತ್ಯಂತ ಸೂಕ್ತವಾದ ತಾಣವೆಂದರೆ ತೇವವಿರುವ, ಆದರೆ ಆಳವಿರದ ಸ್ಥಳ. ಸ್ಪಂಜಿನೊಳಗೆ ಚಿಕ್ಕ ಚಿಕ್ಕ ಗುಳ್ಳೆಗಳಿದ್ದು ಇವುಗಳ ಅಂಚಿನಲ್ಲಿರುವ ತೇವಾಂಶ ಬ್ಯಾಕ್ಟೀರಿಯಾಗಳಿಗೆ ಸೂಕ್ತ ತಾಣವಾಗಿದೆ. ಅಷ್ಟೇ ಅಲ್ಲ, ಸ್ಪಂಜಿನ ಒಳಗಿನ ತೇವಾಂಶ ಒಣಗಲು ತುಂಬಾ ಹೆಚ್ಚು ಸಮಯ ತೆಗೆದುಕೊಳ್ಳುವ ಕಾರಣ ಹಾಗೂ ಈ ಸೂಕ್ಷ್ಮ ರಂಧ್ರಗಳ ಒಳಗೆ ಸಿಲುಕಿಕೊಂಡಿರುವ ಆಹಾರದ ಕಣಗಳು ಸಹಾ ಕೊಳೆಯಲು ನೆರವಾಗುತ್ತದೆ. ಇದೇ ಕಾರಣಕ್ಕೆ ಒಂದೇ ದಿನದಲ್ಲಿ ಸ್ಪಂಜು ವಾಸನೆ ಹೊಡೆಯಲು ಪ್ರಾರಂಭವಾಗುತ್ತದೆ.

ಸ್ಪಂಜೊಂದು ಆರೋಗ್ಯ ಕೆಡಿಸಲು ಹೇಗೆ ಸಾಧ್ಯ

ಸ್ಪಂಜೊಂದು ಆರೋಗ್ಯ ಕೆಡಿಸಲು ಹೇಗೆ ಸಾಧ್ಯ

ಸಾಮಾನ್ಯವಾಗಿ ನಾವೆಲ್ಲಾ ಪಾತ್ರೆ ತೊಳೆದ ಬಳಿಕ ಸ್ಪಂಜನ್ನೂ ಸೋಪುನೀರಿನಿಂದ ತೋಯಿಸಿ ಹಿಂಡಿ ಒಂದು ಸ್ಥಾನದಲ್ಲಿ ಇಟ್ಟು ಬಿಡುತ್ತೇವೆ. ಆದರೆ ಇದು ಸಾಕಾಗುವುದಿಲ್ಲ. ಎಷ್ಟೇ ಹಿಂಡಿದರೂ ಸ್ಪಂಜಿನ ಒಳಭಾಗದಲ್ಲಿ ಕೊಂಚವಾದರೂ ಆಹಾರಕಣಗಳು ಉಳಿದೇ ಉಳಿಯುತ್ತವೆ.

ಅಹಾರಕಣವಿದ್ದರೆ ಬ್ಯಾಕ್ಟೀರಿಯಾ ಖಚಿತ

ಅಹಾರಕಣವಿದ್ದರೆ ಬ್ಯಾಕ್ಟೀರಿಯಾ ಖಚಿತ

ಈ ಸಂಶೋಧನೆಯಲ್ಲಿ ಹಲವಾರು ಬಳಸಿದ ಸ್ಪಂಜುಗಳನ್ನು ಕತ್ತರಿಸಿ ಸೂಕ್ಷ್ಮದರ್ಶಕದ ಅಡಿಯಲ್ಲಿರಿಸಿ ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಬಹುತೇಕ ಎಲ್ಲಾ ಸ್ಪಂಜುಗಳಲ್ಲಿಯೂ ಬ್ಯಾಕ್ಟೀರಿಯಾಗಳಿದ್ದುದು ಪತ್ತೆಯಾಗಿದೆ. ಅದರಲ್ಲಿ ಕೆಲವಂತೂ ಕಾಲರಾ, ಟೈಫಾಯ್ಡ್ ಮೊದಲಾದ ಕಾಯಿಲೆ ಬರಿಸುವಷ್ಟೂ, ನೀರಿನ ಮೂಲಕ ಹೊಟ್ಟೆ ಸೇರಿದರೆ ಹೊಟ್ಟೆ ಕೆಡಿಸುವಷ್ಟು ಪ್ರಬಲವಾದ ಬ್ಯಾಕ್ಟೀರಿಯಾಗಳೂ ಕಂಡುಬಂದಿವೆ.

ಹಾಗಾದರೆ ಬಿಸಿನೀರಿನಿಂದ ತೊಳೆದರೆ ಆಗಬಹುದೇ?

ಹಾಗಾದರೆ ಬಿಸಿನೀರಿನಿಂದ ತೊಳೆದರೆ ಆಗಬಹುದೇ?

ಬಿಸಿನೀರಿನಿಂದ ಬ್ಯಾಕ್ಟೀರಿಯಾಗಳು ಸತ್ತು ಹೋಗುತ್ತವೆ ಎನ್ನುವುದಾದರೆ ಏಕಾಗಬಾರದು? ಆದರೆ ಕೆಲವು ಬ್ಯಾಕ್ಟೀರಿಯಾಗಳು ಬಿಸಿನೀರಿನಲ್ಲಿಯೂ ಬದುಕಿ ಉಳಿಯುವ ಸಾಮರ್ಥ್ಯ ಹೊಂದಿರುತ್ತವೆ. ಅಲ್ಲದೇ ಸ್ಪಂಜಿನ ಒಳಭಾಗದಲ್ಲಿ ಒಂದು ಚುಕ್ಕೆಯಷ್ಟು ಚಿಕ್ಕ ಜಾಗದಲ್ಲಿ ಬಿಸಿನೀರು ತಲುಪದೇ ಇದ್ದರೂ ಈ ಸ್ಥಳದಲ್ಲಿ ಸುಮಾರು ಐದು ಕೋಟಿ ಬ್ಯಾಕ್ಟೀರಿಯಾಗಳು ಅಡಗಿ ಕುಳಿತು ಬದುಕಬಲ್ಲವು.

ಹಾಗಾದರೇನು ಮಾಡಬೇಕು?

ಹಾಗಾದರೇನು ಮಾಡಬೇಕು?

ಪ್ರತಿ ಸ್ಪಂಜಿನಲ್ಲಿಯೂ ಬ್ಯಾಕ್ಟೀರಿಯಾ ಇರುತ್ತವೆ ಎಂದ ಬಳಿಕ ಪ್ರತಿದಿನವೂ ಹೊಸ ಸ್ಪಂಜೊಂದನ್ನು ಬಳಸುವುದು ಅನಿವಾರ್ಯವಲ್ಲವೇ? ಆದರೆ ಈ ಆಯ್ಕೆ ಕೊಂಚ ದುಬಾರಿಯಾಬಹುದು. ಅಂದರೆ ಸ್ಪಂಜನ್ನು ಉಪಯೋಗಿಸುವುದನ್ನೇ ಬಿಡಬೇಕೇ? ಇದಕ್ಕೆ ಪರ್ಯಾಯವೇನು? ಖಂಡಿತಾ ಪರ್ಯಾಯಗಳಿವೆ.

ಯಾವ ಪರ್ಯಾಯಗಳಿವೆ?

ಯಾವ ಪರ್ಯಾಯಗಳಿವೆ?

ಒಂದು ಸ್ಪಂಜನ್ನು ಒಂದು ವಾರದವರೆಗೆ ಬಳಸಿ ಬಳಿಕ ಚೆನ್ನಾಗಿದೆ ಎನ್ನಿಸಿದರೂ ಎಸೆದುಬಿಡಿ. ಸಾಧ್ಯವಾದರೆ ನೈಸರ್ಗಿಕ ವಿಧಾನಗಳನ್ನು ಬಳಸಲು ತೊಡಗಿ. ಇದಕ್ಕೆ ಅತ್ಯುತ್ತಮವಾದ ಪರ್ಯಾಯವೆಂದರೆ ತೆಂಗಿನ ನಾರು. ಬೂದಿ ಮತ್ತು ಹಳೆಯ ಬಟ್ಟೆಯನ್ನೂ ಸಹಾ ಬಳಸಬಹುದು. ಇವು ಲಭ್ಯವಿಲ್ಲವೆಂದರೆ ಕೊಂಚ ಅಗ್ಗದ ಸ್ಪಂಜನ್ನು ತಂದು ಪ್ರತಿ ಎರಡು ದಿನಕ್ಕೊಂದು ಹೊಸ ಸ್ಪಂಜನ್ನು ಬಳಸಬಹುದು.

English summary

Your Dish Washing Sponge Can Spoil Your Health!

Here is the shocker! A new study says that the scrub or the sponge you use to clean dishes is the breeding ground of bacteria which can spoil your health when your immunity is down! Here are some more facts.
Subscribe Newsletter