ಈರುಳ್ಳಿ ಸಿಪ್ಪೆಯನ್ನು ಇನ್ನು ಅಪ್ಪಿತಪ್ಪಿಯೂ ಕಸದ ಬುಟ್ಟಿಗೆ ಬಿಸಾಡಬೇಡಿ!!

By: Arshad
Subscribe to Boldsky

ಈರುಳ್ಳಿ ಸಿಪ್ಪೆ, ಹಗುರ ವಸ್ತುಗಳಿಗೆ ಉಪಯೋಗಿಸುವ ವಿಶೇಷಣವಾಗಿದ್ದ ಈ ನಿಕೃಷ್ಟ ಕಸ ವಾಸ್ತವದಲ್ಲಿ ಆಂಟಿ ಆಕ್ಸಿಡೆಂಟು, ಬ್ಯಾಕ್ಟೀರಿಯಾ ನಿರೋಧಕ, ಕ್ಯಾನ್ಸರ್ ನಿರೋಧಕ ಹಾಗೂ ಇತರ ಔಷಧೀಯ ಗುಣವುಳ್ಳ ಅದ್ಭುತ ವಸ್ತುವಾಗಿದೆ. ಈ ವಿಷಯ ಅರಿತು ನಿಮ್ಮ ಹುಬ್ಬು ಮೇಲೇರಿದರೂ ಇದು ನಿಜವೆಂದು ಈಗ ಸಾಬೀತಾಗಿದ್ದು ಈ ಸಿಪ್ಪೆಗಳಲ್ಲಿ ಹುದುಗಿರುವ ಪೋಷಕಾಂಶ ಹಾಗೂ ಇತರ ಔಷಧೀಯ ಗುಣಗಳ ಬಗ್ಗೆ ಹಲವು ಮಾಹಿತಿಗಳನ್ನು ಪ್ರಕಟಿಸಲಾಗಿದೆ.

ಈ ಸಿಪ್ಪೆಗಳಲ್ಲಿ ಅಧಿಕ ಪ್ರಮಾಣದ ಕರಗದ ನಾರು, ಫ್ಲೇವನಾಯ್ಡುಗಳು, ವಿಟಮಿನ್ ಎ,ಸಿ ಮತ್ತು ಇ ಇವೆ. ಫ್ಲೇವನಾಯ್ಡುಗಳಲ್ಲಿ ಕ್ವೆರ್ಸಟಿನ್ ಎಂಬ ಪೋಷಕಾಂಶದ ಅಂಶ ಗರಿಷ್ಠ ಪ್ರಮಾಣದಲ್ಲಿದ್ದು ಇದೊಂದು ಉತ್ತಮ ಆಂಟಿ ಆಕ್ಸಿಡೆಂಟು ಹಾಗೂ ಉರಿಯೂತ ನಿವಾರಕವೂ ಆಗಿದೆ. ಈ ಪೋಷಕಾಂಶಕ್ಕೆ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುವ ಗುಣವಿದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್‌ಗಳನ್ನು ನಿವಾರಿಸುವ ಹಾಗೂ ರಕ್ತನಾಳಗಳ ಒಳಗೆ ಜಿಡ್ಡು ಅಂಟಿಕೊಳ್ಳುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ. 

ಈರುಳ್ಳಿ ಕತ್ತರಿಸುವಾಗ ಕಣ್ಣಿನಲ್ಲಿ ನೀರು ಬರುತ್ತಿದೆಯೇ? ಚಿಂತೆ ಬಿಡಿ!

ಈರುಳ್ಳಿ ಸಿಪ್ಪೆಯನ್ನು ಸೇವಿಸುವ ಮೂಲಕ ಟೈಪ್ -2 ಮಧುಮೇಹವನ್ನೂ ನಿಯಂತ್ರಿಸಲು, ಸ್ಥೂಲಕಾಯ ಕಡಿಮೆಗೊಳಿಸಲು, ಹೃದಯಸಂಬಂಧಿ ತೊಂದರೆಗಳ ಸಾಧ್ಯತೆ ಕಡಿಮೆಗೊಳಿಸಲು, ಕರುಳಿನ ಕ್ಯಾನ್ಸರ್ ಹಾಗೂ ಜೀರ್ಣಾಂಗಗಳ ತೊಂದರೆಗಳು ಆವರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ಆದರೆ ಇದನ್ನು ಸೇವಿಸುವುದು ಹೇಗೆ? ಉತ್ತರ ಸುಲಭವಾಗಿದೆ, ಈರುಳ್ಳಿ ಸಿಪ್ಪೆಯ ಟೀ ಕುಡಿಯುವುದು. ಅಚ್ಚರಿಯಾಯಿತೇ? ಮುಂದೆ ಓದಿ....

ಈರುಳ್ಳಿ ಸಿಪ್ಪೆಯ ಟೀ ಮಾಡುವ ವಿಧಾನ

ಈರುಳ್ಳಿ ಸಿಪ್ಪೆಯ ಟೀ ಮಾಡುವ ವಿಧಾನ

ಈರುಳ್ಳಿಯ ಒಣಸಿಪ್ಪೆಗಳನ್ನು ಪ್ರತ್ಯೇಕಿಸಿ ಒಂದು ಗಾಜಿನ ಜಾಡಿಯಲ್ಲಿ ಹಾಕಿಡಿ. ಟೀ ಕುಡಿಯಬೇಕೆಂದಾಗ ಒಂದು ಲೋಟ ನೀರನ್ನು ಕುದಿಸಿ ಉರಿ ಆರಿಸಿ.

ಈ ನೀರಿನಲ್ಲಿ ಕೊಂಚ ಒಣಸಿಪ್ಪೆಗಳನ್ನು ಸುಮಾರು ಹದಿನೈದು ನಿಮಿಷಗಳ ಕಾಲ ಮುಳುಗಿಸಿಡಿ. ಬಳಿಕ ಈ ನೀರನ್ನು ಸೋಸಿ

ಪ್ರತಿದಿನ ಮಲಗುವ ಮುನ್ನ ದಿನದ ಕಡೆಯ ಆಹಾರವಾಗಿ ಸೇವಿಸಿ ಮಲಗಿ.

ದಿನಕ್ಕೊಂದು ಹಸಿ ಈರುಳ್ಳಿ ತಿಂದರೆ, ಆರೋಗ್ಯಕ್ಕೆ ಹತ್ತಾರು ಲಾಭ!

ಚೆನ್ನಾಗಿ ನಿದ್ದೆ ಬರಲು...

ಚೆನ್ನಾಗಿ ನಿದ್ದೆ ಬರಲು...

ರಾತ್ರಿ ಮಲಗುವ ಮುನ್ನ ಸೇವಿಸುವುದೇ ಉತ್ತಮವೇಕೆಂದರೆ ಕ್ವೆರ್ಸಟಿನ್ ಪೋಷಕಾಂಶ ಒಂದು ಲಘು ನಿದ್ರಾಜನಕವಾಗಿದ್ದು ಶೀಘ್ರದಲ್ಲಿಯೇ ನಿದ್ದೆಗೆ ಜಾರಲು ನೆರವಾಗುತ್ತದೆ. ಆದರೆ ಈ ಟೀ ಗರ್ಭಿಣಿಯರಿಗೆ ಹಾಗೂ ಇನ್ನೂ ತಾಯಿಹಾಲು ಕುಡಿಯುತ್ತಿರುವ ಮಗುವಿನ ತಾಯಂದಿರಿಗೆ ಸೂಕ್ತವಲ್ಲ.

ಚೆನ್ನಾಗಿ ನಿದ್ದೆ ಬರಲು...

ಚೆನ್ನಾಗಿ ನಿದ್ದೆ ಬರಲು...

ಟೀ ಮಾಡುವ ಹೊರತಾಗಿ ಈರುಳ್ಳಿ ಸಿಪ್ಪೆಯ ಸೂಪ್ ಕೂಡ ಮಾಡಬಹುದು. ಈ ಸಿಪ್ಪೆಗಳನ್ನು ಹಾಗೇ ತಿನ್ನಲು ಸಾಧ್ಯವಿಲ್ಲ. ಹಾಗಾಗಿ ಇವನ್ನು ಬೇಯಿಸಿದ ಬಳಿಕ ಇವನ್ನು ಸೋಸಿ ನೀರನ್ನು ಮಾತ್ರವೇ ಸಂಗ್ರಹಿಸಬೇಕು. ಈ ನೀರನ್ನು ನಿಮ್ಮ ನೆಚ್ಚಿನ ಇತರ ಖಾದ್ಯಗಳೊಡನೆ ಬೆರೆಸಿ ಸೇವಿಸುವ ಮೂಲಕವೂ ಇದರ ಉತ್ತಮ ಗುಣಗಳನ್ನು ಪಡೆಯಬಹುದು.

ಮಲಬದ್ಧತೆಯ ಸಮಸ್ಯೆಗೆ...

ಮಲಬದ್ಧತೆಯ ಸಮಸ್ಯೆಗೆ...

ಈ ನೀರಿನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇರುವ ಕಾರಣ ನಿಮ್ಮ ನಿತ್ಯದ ಆಹಾರದೊಡನೆ ಸೇವಿಸಲು ಅತ್ಯುತ್ತಮವಾಗಿದೆ ಎಂದು ಸಂಶೋಧನೆಗಳು ತಿಳಿಸುತ್ತವೆ.

ಮಲಬದ್ಧತೆಯ ಸಮಸ್ಯೆಗೆ...

ಮಲಬದ್ಧತೆಯ ಸಮಸ್ಯೆಗೆ...

ಕರಗದ ನಾರು ಮಲಬದ್ಧತೆಯಾಗದಂತೆ ರಕ್ಷಿಸುತ್ತದೆ ಹಾಗೂ ಕಲ್ಮಶಗಳನ್ನು ಹೊರಹಾಕಲು ಹಾಗೂ ಕರುಳುಗಳಲ್ಲಿ ಪಿ ಎಚ್ ಮಟ್ಟ ಸಂತುಲಿತ ಮಟ್ಟದಲ್ಲಿರಲು ನೆರವಾಗುತ್ತದೆ.

ಈರುಳ್ಳಿ ಸಿಪ್ಪೆಯ ಇತರ ಉಪಯೋಗಗಳು

ಈರುಳ್ಳಿ ಸಿಪ್ಪೆಯ ಇತರ ಉಪಯೋಗಗಳು

ಒಂದು ವೇಳೆ ನಿಮಗೆ ಚರ್ಮದಲ್ಲಿ ತುರಿಕೆ ಮೊದಲಾದ ತೊಂದರೆ ಇದ್ದರೆ ಈ ಸಿಪ್ಪೆಯನ್ನು ಕುದಿಸಿದ ನೀರಿನಿಂದ ಚರ್ಮವನ್ನು ತೊಳೆದುಕೊಳ್ಳಲು ಉಪಯೋಗಿಸಬಹುದು. ಇದರಲ್ಲಿರುವ ಆಂಟಿಆಕ್ಸಿಡೆಂಟುಗಳು ಚರ್ಮದ ಆಳಕ್ಕೆ ಇಳಿದು ಉತ್ತೇಜಿಸುವ ಮೂಲಕ ಚರ್ಮಕ್ಕೆ ಮೊದಲಿನ ಕಳೆ ನೀಡಲು ಸಾಧ್ಯವಾಗುತ್ತದೆ.

ಕೂದಲಿನ ಆರೈಕೆಗೆ

ಕೂದಲಿನ ಆರೈಕೆಗೆ

ಈ ನೀರನ್ನು ಕೂದಲ ಪೋಷಣೆಗೂ ಬಳಸಬಹುದು. ಇದಕ್ಕಾಗಿ ಹೆಚ್ಚಿನ ಪ್ರಮಾಣದ ಈರುಳ್ಳಿ ಸಿಪ್ಪೆಯನ್ನು ಕುದಿಸಿದ ನೀರನ್ನು ತಣಿಸಿ ಉಗುರುಬೆಚ್ಚಗಾದಾಗ ಕೂದಲನ್ನು ತೋಯಿಸಿಕೊಳ್ಳಬೇಕು. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಕೂದಲು ಮೃದುವಾಗಿ ರೇಷ್ಮೆಯಂತೆ ಹೊಳೆಯುತ್ತದೆ.

English summary

You’ll Never Throw Another Onion Skin Away After Reading This!

This article is dedicated to the amazing antioxidant, anti-bacterial, anti-carcinogenic and medical properties of onion skins, which may come to you as a surprise but it’s true. Some very interesting information has recently surfaced about the amazing health benefits of onion skins and the high amount of nutritional ingredients they contain.
Subscribe Newsletter