ಆಸ್ತಿ ಸಂಪತ್ತಿಗಿಂತ, 'ಆರೋಗ್ಯವೇ' ಬಹುದೊಡ್ಡ ಸಕಲ ಸಂಪತ್ತು

By: Arshad
Subscribe to Boldsky

ಮಾನವರಿಗೆ ಎದುರಾಗುವ ಹಲವು ಮಾರಕ ಕಾಯಿಲೆಗಳಿಗೆ ನಮ್ಮ ಅಡುಗೆ ಮನೆಯಲ್ಲಿಯೇ ಔಷಧಿ ಇದೆ ಎಂದು ನಿಮಗೆ ಗೊತ್ತೇ? ಬೋಲ್ಡ್ ಸ್ಕೈ ತಂಡ ಇಂತಹ ಕೆಲವಾರು ಔಷಧಿರೂಪದ ಸುಪರ್ ಆಹಾರಗಳ ಬಗ್ಗೆ ಅಮೂಲ್ಯ ಮಾಹಿತಿ ಸಂಗ್ರಹಿಸಿದ್ದು ವಿಶ್ವ ಆರೋಗ್ಯ ದಿನದ ಸಂದರ್ಭದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ಹರ್ಷಿಸುತ್ತಿದೆ.

ಈ ಸೂಪರ್ ಆಹಾರಗಳು ಹೃದಯ ಸ್ತಂಭನದ ಸಹಿತ ಹಲವು ಮಾರಕ ಕಾಯಿಲೆಗಳು ಆವರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ವಾಸ್ತವವಾಗಿ ನಮ್ಮ ಆರೋಗ್ಯಕ್ಕೂ, ಅನಾರೋಗ್ಯಕ್ಕೂ ಮೂಲಕಾರಣವಾಗಿದೆ. ಆದ್ದರಿಂದ ನಮ್ಮ ಆಹಾರಕ್ರಮವನ್ನು ನಿಯಂತ್ರಿಸುವ ಮೂಲಕ ಹಾಗೂ ಸೂಕ್ತ ಆಹಾರಗಳನ್ನು ಸೇವಿಸುವ ಮೂಲಕ ಹೃದಯ ಸ್ತಂಭನದ ಸಾಧ್ಯತೆಯನ್ನು 70% ರಷ್ಟು ಕಡಿಮೆ ಮಾಡಬಹುದು. ವಿಶ್ವ ಆರೋಗ್ಯ ದಿನ ಎಂದರೇನು? ಇದರ ಮಹತ್ವವೇನು? 

ವಿಶೇಷವಾಗಿ ಕೆಲವು ಬಗೆಯ ಮೀನುಗಳು, ತರಕಾರಿಗಳು, ಹಣ್ಣುಗಳು, ಇಡಿಯ ಧಾನ್ಯಗಳು ಮೊದಲಾದವುಗಳನ್ನು ನಿತ್ಯವೂ ಸೇವಿಸುವ ಮೂಲಕ ಆರೋಗ್ಯವನ್ನು ಉತ್ತಮಗೊಳಿಸಲು ಸಾಧ್ಯ ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿಡಲೂ ಸಾಧ್ಯ. ಆರೋಗ್ಯಕರ ಆಹಾರಗಳ ಸೇವನೆ ಹಾಗೂ ಆರೋಗ್ಯಕರ ಜೀವನಕ್ರಮದ ಮೂಲಕ ಶರೀರವನ್ನು ಹೃದಯಕ್ಕೆ ಹೊರೆಯಾಗದಂತೆ ಕಾಪಾಡಿಕೊಳ್ಳಬಹುದು. ಇಂತಹ ಸೂಪರ್ ಫುಡ್ ಅನ್ನು ಮಿಸ್ ಮಾಡದೇ ಸೇವಿಸಿ  

ಸಾಮಾನ್ಯವಾಗಿ ಆರೋಗ್ಯಕರ ಆಹಾರಗಳು ರುಚಿಯಾಗಿರುವುದಿಲ್ಲ. ಆದರೆ ಕೆಲವು ಸುಪರ್ ಆಹಾರಗಳ ಸೂಕ್ತ ಸಂಯೋಜನೆಯಿಂದ ರುಚಿಕರ ಅಹಾರವೂ ಮತ್ತು ಉತ್ತಮ ಆರೋಗ್ಯವೂ ಲಭ್ಯವಾಗುತ್ತದೆ. ಆದ್ದರಿಂದ ಆರೋಗ್ಯಕರ ಆಹಾರಕ್ಕೆ ರು಼ಚಿಯನ್ನು ತ್ಯಜಿಸಬೇಕಾಗಿಲ್ಲ. ಬನ್ನಿ, ಆರೋಗ್ಯವನ್ನು ಕಾಪಾಡಿಕೊಳ್ಳಲು ಸೇವಿಸಲೇಬೇಕಾದ ಸುಪರ್ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆಗೊಳಿಸೋಣ.

ಸಮುದ್ರದ ಸಾಲ್ಮನ್ ಮೀನು

ಸಮುದ್ರದ ಸಾಲ್ಮನ್ ಮೀನು

ಈ ಸ್ನಾಯುಭರಿತ ಮೀನಿನಲ್ಲಿ ಉತ್ತಮ ಪ್ರಮಾಣದ ಒಮೆಗಾ-3 ಕೊಬ್ಬಿನ ಆಮ್ಲವಿದ್ದು ಈ ಪೋಷಕಾಂಶ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಸಾಲ್ಮನ್ ಮೀನಿನಲ್ಲಿ ಸೆಲೆನಿಯಂ ಸಹಾ ಇದ್ದು ಇದು ಹೃದಯ ಸಂಬಂಧಿ ಆರೋಗ್ಯವನ್ನು ಉತ್ತಮಗೊಳಿಸುವ ಆಂಟಿ ಆಕ್ಸಿಡೆಂಟಾಗಿದೆ. ಈ ಮೀನಿನ ಸೇವನೆಯಿಂದ ಹೃದಯ ಸ್ತಂಭನದ ಸಾಧ್ಯತೆ ಕಡಿಮೆಯಾಗುತ್ತದೆ.

ಬೂತಾಯಿ ಮೀನು

ಬೂತಾಯಿ ಮೀನು

ಬೂತಾಯಿ ಮೀನಿನಲ್ಲಿಯೂ ಉತ್ತಮ ಪ್ರಮಾಣದ ಒಮೆಗಾ-3 ಕೊಬ್ಬಿನ ಆಮ್ಲವು ಮೀನಿನೆಣ್ಣೆಯ ರೂಪದಲ್ಲಿ ಲಭ್ಯವಿದೆ. ಇದು ರಕ್ತದಲ್ಲಿ ಉತ್ತಮ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ. ತನ್ಮೂಲಕ ಹಠಾತ್ತಾಗಿ ಸಂಭವಿಸುವ ಹೃದಯ ಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ವಿಶೇಷವಾಗಿ ಈ ಮೊದಲು ಹೃದಯ ಸ್ತಂಭನಕ್ಕೆ ಒಳಗಾದ ವ್ಯಕ್ತಿಗಳಿಗೆ ಈ ಮೀನು ಅತ್ಯುತ್ತಮ ಸುಪರ್ ಆಹಾರವಾಗಿದೆ.

ಯಕೃತ್

ಯಕೃತ್

ಯಕೃತ್‌ನಲ್ಲಿ ಇರುವ ಕೊಬ್ಬು ಹೃದಯಕ್ಕೆ ಉತ್ತಮವಾದ ಕೊಬ್ಬು ಆಗಿದ್ದು ಇದರ ಇರುವಿಕೆಯಿಂದ ಹೃದಯ ಸ್ತಂಭನದ ಸಾಧ್ಯತೆ ಕಡಿಮೆಯಾಗಿಸುತ್ತದೆ. ಹೃದಯ ಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುವ ಆಹಾರಗಳ ಪೈಕಿ ಇದು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!

ಅಕ್ರೋಟು

ಅಕ್ರೋಟು

ಅಕ್ರೋಟಿನಲ್ಲಿ ಉತ್ತಮ ಪ್ರಮಾಣದ ಕರಗುವ ನಾರು, ವಿಟಮಿನ್ ಇ, ಫೋಲೇಟ್ ಹಾಗೂ ಒಮೆಗಾ-3 ಕೊಬ್ಬಿನ ಆಮ್ಲವಿದ್ದು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಲ್ಲದೇ ಇದರಲ್ಲಿರುವ ಅಸಂತುಲಿತ ಕೊಬ್ಬುಗಳೂ ಹೃದಯ ಸ್ತಂಭನದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಬಾದಾಮಿ

ಬಾದಾಮಿ

ಬಾದಾಮಿಗಳಲ್ಲಿಯೂ ಉತ್ತಮ ಪ್ರಮಾಣದ ಒಮೆಗಾ-3 ಕೊಬ್ಬಿನ ಆಮ್ಲವಿದ್ದು ಹೃದಯ ಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಹೃದಯ ಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುವ ಆಹಾರಗಳಲ್ಲಿ ಬಾದಾಮಿಯೂ ಪ್ರಮುಖ ಸ್ಥಾನ ಪಡೆಯುತ್ತದೆ. ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

ಚಿಯಾ ಬೀಜಗಳು

ಚಿಯಾ ಬೀಜಗಳು

ದಿನಕ್ಕೆ ಬರೆಯ ಒಂದು ಚಮಚದಷ್ಟು ಚಿಯಾ ಬೀಜಗಳನ್ನು ಸೇವಿಸುತ್ತಾ ಬರುವ ಮೂಲಕ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಹಾಗೂ ರಕ್ತನಾಳಗಳ ಒಳಗೆ ಜಿಡ್ಡು ಅಂಟಿಕೊಳ್ಳುವುದನ್ನು ತಡೆದು ಪರೋಕ್ಷವಾಗಿ ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ.

ಓಟ್ಸ್ ರವೆ

ಓಟ್ಸ್ ರವೆ

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ಓಟ್ಸ್ ಅದ್ಭುತವಾದ ಆಹಾರವಾಗಿದೆ. ಅಲ್ಲದೇ ಹೃದಯ ಸ್ತಂಭನವನ್ನು ತಡೆಗಟ್ಟುವ ಒಂದು ಸುಪರ್ ಆಹಾರವೂ ಆಗಿದೆ.

ಬ್ಲೂಬೆರಿ ಹಣ್ಣುಗಳು

ಬ್ಲೂಬೆರಿ ಹಣ್ಣುಗಳು

ಈ ಹಣ್ಣುಗಳಲ್ಲಿ ರೆಸ್ವರೆಟ್ರಾಲ್ ಎಂಬ ಪೋಷಕಾಂಶ ಹಾಗೂ ವಿವಿಧ ಫ್ಲೇವನಾಯ್ಡುಗಳಿದ್ದು ಹೃದಯದ ನಾಳದ ಕಾಯಿಲೆಯನ್ನು ತಡೆಗಟ್ಟುವ ಸಾಧ್ಯತೆ ಹೊಂದಿದೆ. ಅಲ್ಲದೇ ಈ ಹಣ್ಣಿಸ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆಯೂ ಕಡಿಮೆಯಾಗುತ್ತದೆ.

ಸೇಬು

ಸೇಬು

ಸೇಬುಹಣ್ಣಿನಲ್ಲಿಯೂ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ವಿಶೇಷವಾಗಿ ಟೈಪ್-2 ಮಧುಮೇಹವನ್ನು ತಡೆಗಟ್ಟುವ ಶಕ್ತಿ ಇದೆ. ದಿನಕ್ಕೊಂದು ಸೇಬಿನ ಸೇವನೆಯಿಂದ ಹೃದಯದ ತೊಂದರೆಗಳ ಸಾಧ್ಯತೆಯನ್ನು ಕಡಿಮೆಗೊಳಿಸುವ ಮೂಲಕ ನಿಜಕ್ಕೂ ವೈದ್ಯರನ್ನು ದೂರವಿಡಲೂ ಸಾಧ್ಯವಾಗುತ್ತದೆ.

ಕೆಂಪು ವೈನ್

ಕೆಂಪು ವೈನ್

ಈ ವೈನ್ ನಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಇವು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ ಹಾಗೂ ನರಗಳ ದೃಢತೆ ಹೆಚ್ಚಿಸುತ್ತದೆ ಹಾಗೂ ನರಗಳ ಗೋಡೆಗಳನ್ನು ದಪ್ಪನಾಗುವುದರಿಂದ ತಪ್ಪಿಸಿ ಹೃದಯದ ಮೇಲಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ನಿಯಮಿತವಾಗಿ ಕೊಂಚವೇ ಪ್ರಮಾಣದಲ್ಲಿ ಕೆಂಪು ವೈನ್ ಸೇವಿಸುತ್ತಾ ಬಂದರೆ ಹೃದಯ ಸಂಬಂಧಿ ತೊಂದರೆಯ ಸಾಧ್ಯತೆ ಕಡಿಮೆಯಾಗುತ್ತದೆ.

ಹಸಿರು ಟೀ

ಹಸಿರು ಟೀ

ಹಸಿರು ಟೀಯಲ್ಲಿ ಕ್ಯಾಟೆಚಿನ್, ಫ್ಲೇವನಾಯ್ಡುಗಳು ಮತ್ತು ಆಂಟಿ ಆಕ್ಸಿಡೆಂಟುಗಳಿದ್ದು ಇವುಗಳ ಇರುವಿಕೆಯಿಂದ ಹಲವು ರೀತಿಯಲ್ಲಿ ಹೃದಯ ಸಂಬಂಧಿ ತೊಂದರೆಗಳು ಇಲ್ಲವಾಗುತ್ತವೆ. ವಿಶೇಷವಾಗಿ ದೇಹದೊಳಗೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ಕಡಿಮೆಗೊಳಿಸುವ ಮೂಲಕ ಹೃದಯ ಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ಸೋಯಾ ಅವರೆ

ಸೋಯಾ ಅವರೆ

ಈ ಅವರೆಯ ಕಾಳಿನ ಮತ್ತು ಅವರೆ ಹಾಲಿನ ಸೇವನೆಯಿಂದ ದೇಹಕ್ಕೆ ಲಭಿಸುವ ಐಸೋಫ್ಲೇವೋನ್ಸ್ ಎಂಬ ಪೋಷಕಾಂಶ ಕೊಲೆಸ್ಟ್ರಾಲ್ ಕಡಿಮೆಗೊಳಿಸು ನೆರವಾಗುತ್ತದೆ. ಅಲ್ಲದೇ ರಕ್ತಪರಿಚಲನೆಯನ್ನು ಚುರುಕುಗೊಳಿಸುವ ಮೂಲಕ ಹೃದಯ ಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಇದರ ಸೇವನೆಯಿಂದ ಅಧಿಕ ರಕ್ತದ ಒತ್ತಡ ಕಡಿಮೆಯಾಗುವ ಮೂಲಕ ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೇ ಇದರಲ್ಲಿರುವ ಫ್ಲೇವನಾಯ್ಡುಗಳು ನರಗಳ ಸೆಡೆತವನ್ನು ಕಡಿಮೆಗೊಳಿಸು ರಕ್ತಪರಿಚಲನೆಯನ್ನು ಸರಾಗಗೊಳಿಸುತ್ತದೆ.

English summary

World Health Day: Superfoods That Avoid The Risk Of Heart Attack

Certain superfoods are known to prevent the risk of heart attacks and ensure your well-being. Read this article to find out about them
Subscribe Newsletter