For Quick Alerts
ALLOW NOTIFICATIONS  
For Daily Alerts

ನೀವು ಕೆಲಸ ಮಾಡುವ ಕಡೆ ಈ ಹವ್ಯಾಸಗಳಿದ್ದರೆ ಒಳ್ಳೆಯದಲ್ಲ ನೆನಪಿರಲಿ!

By Divya Pandith
|

ಕಾರ್ಮಿಕರ ಅನುಕೂಲಕ್ಕಾಗಿಯೇ ಶೌಚಾಲಯಗಳ ವ್ಯವಸ್ಥೆಯನ್ನು ಸಂಸ್ಥೆ ಮಾಡಿರುತ್ತದೆ. ಕಾರ್ಮಿಕರಾದ ನಾವು ಅದನ್ನು ಬಳಸುವ ರೀತಿಯ ಮೇಲೆ ಸ್ವಚ್ಛತೆ ನಿಂತಿರುತ್ತದೆ. ಒಂದೇ ಶೌಚಾಲಯದಲ್ಲಿ ನೂರಾರು ಮಂದಿ ಹೋಗಿ ಬರುವುದರಿಂದ ಪದೇ ಪದೇ ಹೊಲಸಾಗುತ್ತಲೇ ಇರುತ್ತದೆ. ಇದರಿಂದಲೇ ಕೆಲವು ಅನಾರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಇರುತ್ತವೆ. ಕೆಲಸ ಮಾಡುವ ಸ್ಥಳಗಳಿಂದ ಬರುವ ಅನಾರೋಗ್ಯಕ್ಕೆ ಕೇವಲ ಇದೊಂದೇ ಕಾರಣವಲ್ಲ.

ಹೀಗೆ ಅನೇಕ ಕಾರಣಗಳಿಂದಲೂ ಕೆಲಸ ಮಾಡುವ ಸ್ಥಳಗಳ ಸ್ವಚ್ಛತೆ ಹಾಳಾಗುತ್ತದೆ, ಜೊತೆಗೆ ಅನಾರೋಗ್ಯ ಆವರಿಸುತ್ತದೆ. ನಿಜ, ಕೆಲಸ ಮಾಡುವ ಸ್ಥಳದಲ್ಲಿ ನಾವು ತೋರುವ ಹವ್ಯಾಸಗಳು ಹಾಗೂ ಕೆಲವು ಸನ್ನಿವೇಶಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ. ಹಾಗಾದರೆ ಅವು ಯಾವವು? ಎನ್ನುವ ಕುತೂಹಲವಿದ್ದರೆ ಲೇಖನದ ಮುಂದಿನ ಭಾಗವನ್ನು ಓದಿ... ನಿಮ್ಮಲ್ಲೂ ಈ ಹವ್ಯಾಸಗಳಿದ್ದರೆ ಇಂದೇ ಬಿಟ್ಟುಬಿಡಿ...

ಮೇಜಿನ ಬಳಿಯೇ ತಿನ್ನುವುದು

ಮೇಜಿನ ಬಳಿಯೇ ತಿನ್ನುವುದು

ಕೆಲಸದ ಒತ್ತಡ ಇದೆಯೆಂದು ಅಥವಾ ಸಮಯ ಉಳಿಸುವ ಉದ್ದೇಶಕ್ಕಾಗಿ ಊಟ ಮಾಡಲೆಂದೇ ನಿಗದಿ ಪಡಿಸಿದ ಸ್ಥಳಕ್ಕೆ ಹೋಗುವುದೇ ಇಲ್ಲ. ಅಲ್ಲಿಗೆ ಹೋಗುವ ಸಮಯದಲ್ಲಿ ಟೇಬಲ್ ಬಳಿಯೇ ಕುಳಿತು ತಿನ್ನುತ್ತಾರೆ. ಹೀಗೆ ಮಾಡುವುದರಿಂದ ಅಲ್ಲಿ ಬಿದ್ದ ಆಹಾರದ ಚೂರುಗಳು ಇರುವೆ, ಜಿರಳೆ ಹಾಗೂ ಇಲಿಗಳಿಗೆ ಆಹ್ವಾನ ನೀಡುತ್ತವೆ. ಇದರಿಂದ ಸಾಲ್ಮೋನೆಲ್ಲಾ, ಸ್ಟ್ಯಾಪಿಲೋಕೊಕಸ್ ಮತ್ತು ಸ್ಟ್ರೆಪ್ಟೋಕೊಕಸ್ ನಂತಹ ಬ್ಯಾಕ್ಟೀರಿಯಾಗಳು ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ದೀರ್ಘಸಮಯ ಅದೇ ಟೇಬಲ್‍ಗಳ ಮೇಲೆ ಕೈಗಳನ್ನು ಇರಿಸಿ ಕೆಲಸ ಮಾಡುತ್ತಿರುತ್ತೇವೆ. ಟೇಬಲ್ ಮೇಲಿರುವ ಸೋಂಕುಗಳು ಆಹಾರವನ್ನು ಪ್ರವೇಶಿಸುತ್ತವೆ.

ಕಪ್‍ಗಳನ್ನು ತೊಳೆಯದೆ ಇರುವುದು

ಕಪ್‍ಗಳನ್ನು ತೊಳೆಯದೆ ಇರುವುದು

ಕೆಲಸದ ವೇಳೆಯಲ್ಲಿ ಸ್ವಲ್ಪ ಸಮಯ ವಿರಾಮ ನೀಡುವ ಉದ್ದೇಶಕ್ಕೆ ಕಾಫಿ, ಟೀ ವಿರಾಮವಿರುತ್ತದೆ. ಈ ಸಮಯದಲ್ಲಿ ಕುಡಿದ ಕಾಫಿ ಮತ್ತು ಟೀ ಕಪ್‍ಗಳನ್ನು ತೊಳೆಯದೆ ಇರುವುದು ಒಂದು ಕೆಟ್ಟ ಹವ್ಯಾಸ. ಹಾಗೆ ಬಿಟ್ಟ ಕಪ್‍ಗಳಿಂದ ರೋಗಾಣು ಹರಡುವುದು. ಜೊತೆಗೆ ಇಲಿ, ಹಲ್ಲಿ, ಇರುವೆಗಳಂತಹ ಪ್ರಾಣಿಗಳು ರಾತ್ರಿ ವೇಳೆ ಪ್ರವೇಶ ಪಡೆಯುತ್ತಾರೆ. ಹಾಗಾಗಿ ಮೊದಲು ಒಮ್ಮೆ ಬಳಸಿದ ಕಪ್‍ಅನ್ನು ತೊಳೆದಿಡುವ ಪದ್ಧತಿ ಹಾಗೂ ಬಳಸುವ ಮುನ್ನ ಸೋಪು ಅಥವಾ ಬಿಸಿ

ನೀರಿನಿಂದ ತೊಳೆದುಕೊಳ್ಳುವ ಹವ್ಯಾಸವನ್ನು ಬೆಳೆಸಿಕೊಳ್ಳಿ.

ಮೇಜಿನ ಡ್ರಾಯರ್ ಒಳಗೆ ಆಹಾರ ಸಂಗ್ರಹಿಸಿಡುವುದು

ಮೇಜಿನ ಡ್ರಾಯರ್ ಒಳಗೆ ಆಹಾರ ಸಂಗ್ರಹಿಸಿಡುವುದು

ಮೇಜಿನ ಡ್ರಾಯರ್ ಒಳಗೆ ಚಿಪ್ಸ್, ಬಿಸ್ಕೇಟ್, ಚಕ್ಲಿಗಳನ್ನು ಇಟ್ಟುಕೊಳ್ಳುತ್ತಾರೆ. ಇದನ್ನು ರಾತ್ರಿ ವೇಳೆ ಇಲಿ, ಜಿರಳೆಗಳಂತವು ತಿನ್ನುವುದು ಅಥವಾ ಮುಟ್ಟುವ ಸಾಧ್ಯತೆ ಇರುತ್ತದೆ. ಹಾಗೊಮ್ಮೆ ಇಡಲೇ ಬೇಕೆನ್ನುವುದಾದರೆ ಅವುಗಳನ್ನು ಏರ್ ಟೈಟ್ ಡಬ್ಬಾ ಅಥವಾ ಕವರ್‍‌ಗಳಲ್ಲಿ ಶೇಖರಿಸಿ ಇಡಿ.

ಮೇಜಿನ ಡ್ರಾಯರ್ ಒಳಗೆ ಆಹಾರ ಸಂಗ್ರಹಿಸಿಡುವುದು

ಮೇಜಿನ ಡ್ರಾಯರ್ ಒಳಗೆ ಆಹಾರ ಸಂಗ್ರಹಿಸಿಡುವುದು

ಮೇಜಿನ ಡ್ರಾಯರ್ ಒಳಗೆ ಚಿಪ್ಸ್, ಬಿಸ್ಕೇಟ್, ಚಕ್ಲಿಗಳನ್ನು ಇಟ್ಟುಕೊಳ್ಳುತ್ತಾರೆ. ಇದನ್ನು ರಾತ್ರಿ ವೇಳೆ ಇಲಿ, ಜಿರಳೆಗಳಂತವು ತಿನ್ನುವುದು ಅಥವಾ ಮುಟ್ಟುವ ಸಾಧ್ಯತೆ ಇರುತ್ತದೆ. ಹಾಗೊಮ್ಮೆ ಇಡಲೇ ಬೇಕೆನ್ನುವುದಾದರೆ ಅವುಗಳನ್ನು ಏರ್ ಟೈಟ್ ಡಬ್ಬಾ ಅಥವಾ ಕವರ್‍‌ಗಳಲ್ಲಿ ಶೇಖರಿಸಿ ಇಡಿ.

ಟಾಯ್ಲೆಟ್ ಸೀಟ್ ಒರೆಸದಿರುವುದು

ಟಾಯ್ಲೆಟ್ ಸೀಟ್ ಒರೆಸದಿರುವುದು

ಸ್ತ್ರೀಯರು ತೇವಾಂಶ ಇರುವ ಟಾಯ್ಲೆಟ್ ಸೀಟ್‍ಗಳ ಮೇಲೆ ಕುಳಿತುಕೊಂಡರೆ ಅತಿಸಾರ ಹಾಗೂ ಹೊಟ್ಟೆ ನೋವುಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಟಾಯ್ಲೆಟ್ ಬಳಸಿದ ನಂತರ ಅದರ ಆಸನವನ್ನು ಟಿಶ್ಯುವಿನಿಂದ ಒರೆಸಿ ಬರಬೇಕು. ಇಲ್ಲವಾದರೆ ಬ್ಯಾಕ್ಟೀರಿಯಾ ಅಥವಾ ರೋಗಾಣುಗಳು ಹರಡುವ ಸಾಧ್ಯತೆ ಇರುತ್ತದೆ.

ರೋಗಿಯಾಗಿರುವಾಗಲೂ ಕೆಲಸಕ್ಕೆ ಹೋಗುವುದು

ರೋಗಿಯಾಗಿರುವಾಗಲೂ ಕೆಲಸಕ್ಕೆ ಹೋಗುವುದು

ಯಾವುದಾದರೂ ಅನಾರೋಗ್ಯ ಉಂಟಾಗಿದೆ ಎಂದಾಗ ಮನೆಯಲ್ಲಿಯೇ ಸಂಪೂರ್ಣ ಗುಣಮುಖವಾಗುವವರೆಗೂ ಇರಬೇಕು. ರೋಗವು ಸಂಪೂರ್ಣವಾಗಿ ವಾಸಿಯಾಗದೇ ಇರುವಾಗಲೇ ಕೆಲಸಕ್ಕೆ ಹೋಗುವುದರಿಂದ ನಿಮ್ಮ ದೇಹ ಹಾಗೂ ಅನಾರೋಗ್ಯದಿಂದ ಇತರರಿಗೆ ಹರಡುವ ಸಾಧ್ಯತೆ ಇರುತ್ತದೆ. ಅಂತಹ ಸಮಯದಲ್ಲಿ ಕೆಲಸ ಮಾಡುವುದರಿಂದ ನಿಮಗೂ ಹೆಚ್ಚು ಆಯಾಸ ಆಗುವುದು. ಪದೇ ಪದೇ ಆರೋಗ್ಯ ಸಮಸ್ಯೆ ಕಾಡುವುದು.

ತಿಂಡಿಯನ್ನು ಹಂಚಿಕೊಳ್ಳುವುದು

ತಿಂಡಿಯನ್ನು ಹಂಚಿಕೊಳ್ಳುವುದು

ಅನಾರೋಗ್ಯದಿಂದ ಇರುವಾಗ ಬಳಸಿದ ಪಾತ್ರೆಯಲ್ಲಿಯ ಆಹಾರವನ್ನು ಹಂಚಿಕೊಳ್ಳುವುದು, ಬೇರೆಯವರ ಕಪ್ ಅಥವಾ ಮಗ್‍ಗಳನ್ನು ಬಳಸುವುದರಿಂದ ಬಹು ಬೇಗ ಸೋಂಕುಗಳು ಹರಡುತ್ತವೆ. ಇವು ಅನಾರೋಗ್ಯವನ್ನು ಸೃಷ್ಟಿಸಬಹುದು. ಆದಷ್ಟು ಇಂತಹ ಹವ್ಯಾಸಗಳಿದ್ದರೆ ಇಂದೇ ಬಿಟ್ಟು ಬಿಡಿ.

ಲಿಪ್ ಕೇರ್ ಪಡೆದುಕೊಳ್ಳುವುದು

ಲಿಪ್ ಕೇರ್ ಪಡೆದುಕೊಳ್ಳುವುದು

ಬಹುತೇಕ ಕಚೇರಿಗಳು ಎಸಿ ಯ ವ್ಯವಸ್ಥೆಯಲ್ಲಿರುತ್ತದೆ. ಉದ್ಯೋಗಿಗಳು ಆ ವಾತಾವರಣದಲ್ಲಿ ಕುಳಿತು ಕೆಲಸ ಮಾಡುವುದರಿಂದ ತುಟಿ ಒಡೆಯುವುದು ಸಹಜ. ಅಂತಹ ಸಮಯದಲ್ಲಿ ಸಹೋದ್ಯೋಗಿಗಳಿಂದ ಅವರು ಬಳಸುವ ಲಿಪ್ ಕೇರ್ ಅಥವಾ ಲಿಪ್‍ಸ್ಟಿಕ್ ಪಡೆದು ಹಚ್ಚಿಕೊಳ್ಳುವುದು ಸೂಕ್ತವಲ್ಲ. ಇದರಿಂದ ಅವರ ತುಟಿಗೆ ಇರುವ ರೋಗಾಣುಗಳು ನಿಮ್ಮ ದೇಹವನ್ನು ಪ್ರವೇಶಿಸುತ್ತದೆ. ಇಂತಹ ಹವ್ಯಾಸಗಳಿದ್ದರೆ ಇಂದೇ ಬಿಟ್ಟುಬಿಡಿ.

English summary

Workplace habits that are making you sick

Is your office making you sick? Most likely, it is. If you happen to work in an environment where over a hundred people are crammed in a small space, using the same toilets and sharing the same circulated air, it is possible that you may end up catching an infection or two. Plus, some of your careless workplace habits are making you more vulnerable to health problems than the others. Here are some of the ways in which you must be sabotaging your own health at the workplace.
X
Desktop Bottom Promotion