ಮೊಬೈಲು ಫೋನನ್ನು ಜೇಬಿನಲ್ಲಿಡಬಾರದು! ಏಕೆಂದು ಗೊತ್ತೇ?

By: Arshad
Subscribe to Boldsky

ಇಂದು ಮೊಬೈಲ್ ಫೋನ್ ಎಂದರೆ ನಮ್ಮ ದೇಹದ ಅವಿಭಾಜ್ಯ ಅಂಗದಷ್ಟೇ ಅವಶ್ಯಕವಾಗಿ ಹೋಗಿದೆ. ಫೋನು ಇಲ್ಲದೇ ನಾವು ಮನೆಯಿಂದ ಹೊರಗೇ ಹೋಗುವುದಿಲ್ಲ. ಒಂದು ವೇಳೆ ಮೊಬೈಲನ್ನು ಮನೆಯಲ್ಲಿಯೇ ಮರೆತು ಕಛೇರಿಗೆ ಹೋದರೆ ಅಂದಿನ ಇಡಿಯ ದಿನವೇ ಏನನ್ನೋ ಕಳೆದುಕೊಂಡಂತೆ ಚಡಪಡಿಸುತ್ತಾ ಇರುತ್ತೇವೆ.

ಆದರೆ ಮೊಬೈಲು ಫೋನನ್ನು ದಿನವಿಡೀ ಎದೆಗವಚಿಕೊಂಡೇ ಇರಿಸಿವುದು ಎಷ್ಟು ಕ್ಷೇಮ? ಈ ಬಗ್ಗೆ ಹಲವಾರು ಚರ್ಚೆಗಳು ನಡೆದಿದ್ದು ಸಾಧಕ ಬಾಧಕಗಳ ಬಗ್ಗೆ ವಿಮರ್ಶಿಸಲಾಗಿದೆ. ಮೊಬೈಲ್ ಫೋನ್ ಸಹಿತ ಇತರ ಯಾವುದೇ ದೂರಸಂಪರ್ಕ ಹೊಂದಿರುವ ಉಪಕರಣಗಳು ವಿದ್ಯುದಾಯಸ್ಕಾಂತೀಯ ಅಲೆಗಳನ್ನು ಆಧರಿಸಿರುತ್ತವೆ. 

ಮೊಬೈಲ್ ಫೋನ್‌ಗಳು ಮಿದುಳಿಗೆ ಮಾರಕ ಹೇಗೆ?

ಹಿಂದೆ ರೇಡಿಯೋದಲ್ಲಿ ಕೇವಲ ಮಾಹಿತಿಯನ್ನು ಕೇಳಬಹುದಿತ್ತು, ಆದರೆ ಈ ಫೋನುಗಳು ಮಾಹಿತಿಯನ್ನು ಕಳುಹಿಸಲೂ ಬಳಕೆಯಾಗುವುದರಿಂದ ಉಪಕರಣದಿಂದಲೂ ಅಲೆಗಳು ಹೊಮ್ಮುತ್ತವೆ. ಈ ಅಲೆಗಳು ದೇಹದ ಮೇಲೆ ಬೀರುವ ಪ್ರಭಾವದ ಕಾರಣ ಮೊಬೈಲುಗಳನ್ನು ಅಂಗಿಯ ಅಥವಾ ಪ್ಯಾಂಟ್‌ನ ಜೇಬಿನಲ್ಲಿರಿಸುವುದು ಕ್ಷೇಮಕರವಲ್ಲ ಎಂದೇ ಹೆಚ್ಚಿನವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ಕೆಲವು ವಾಸ್ತವಾಂಶಗಳು ಹೀಗಿವೆ....

ಮೊಬೈಲ್ ಫೋನನ್ನು ಪ್ಯಾಂಟ್ ಜೇಬಿನಲ್ಲಿಟ್ಟರೆ

ಮೊಬೈಲ್ ಫೋನನ್ನು ಪ್ಯಾಂಟ್ ಜೇಬಿನಲ್ಲಿಟ್ಟರೆ

ಮೊಬೈಲ್ ಫೋನನ್ನು ಪ್ಯಾಂಟ್ ಜೇಬಿನಲ್ಲಿಟ್ಟರೆ, ವಿಶೇಷವಾಗಿ ಪುರುಷರ ಸಂತಾನಶಕ್ತಿ ಕಡಿಮೆಯಾಗುತ್ತದೆ. ಏಕೆಂದರೆ ವೀರ್ಯಾಣುಗಳ ಮೂಲವಾದ ಸ್ಪರ್ಮಟೋ಼ಜೋವಾ ಎಂಬ ಜೀವಕೋಶಗಳ ಬೆಳವಣಿಗೆಗೆ ಈ ಅಲೆಗಳು ಅಡ್ಡಿಯಾಗುತ್ತವೆ.

ವೀರ್ಯಾಣುಗಳ ಸಂಖ್ಯೆಯ ಮೇಲೂ ಪ್ರಭಾವ ಬೀರುತ್ತವೆ!

ವೀರ್ಯಾಣುಗಳ ಸಂಖ್ಯೆಯ ಮೇಲೂ ಪ್ರಭಾವ ಬೀರುತ್ತವೆ!

ಪ್ಯಾಂಟಿನಲ್ಲಿಟ್ಟ ಮೊಬೈಲು ವೃಷಣಗಳಲ್ಲಿ ಉತ್ಪತ್ತಿಯಾಗುವ ವೀರ್ಯಾಣುಗಳ ಸಂಖ್ಯೆಯ ಮೇಲೂ ಪ್ರಭಾವ ಬೀರುತ್ತವೆ. ಇದರಿಂದ ಆಕ್ಸಿಡೇಟಿವ್ ಒತ್ತಡ ಎದುರಾಗುತ್ತದೆ ಹಾಗೂ ವೀರ್ಯಾಣುಗಳ ಡಿಎನ್.ಎ ರಚನೆಯಲ್ಲಿಯೂ ಬದಲಾಗಬಹುದು.

ನಿಮಿರುವಿಕೆ ದೌರ್ಬಲ್ಯ

ನಿಮಿರುವಿಕೆ ದೌರ್ಬಲ್ಯ

ಇನ್ನೊಂದು ಸಂಶೋಧನೆಯ ಪ್ರಕಾರ ತಮ್ಮ ಮೊಬೈಲು ಫೋನುಗಳನ್ನು ಸದಾ ಚಾಲನೆಯಲ್ಲಿಯೇ ಇರಿಸಿ ಪ್ಯಾಂಟುಗಳಲ್ಲಿಟ್ಟುಕೊಳ್ಳುವ ಪುರುಷರು ನಿಮಿರುವಿಕೆ ದೌರ್ಬಲ್ಯವನ್ನು ಇತರರಿಗಿಂತ ಹೆಚ್ಚಾಗಿ ಎದುರಿಸುತ್ತಾರೆ.

ವಾಮೊಬೈಲ್ ಅಂಟೆನಾ

ವಾಮೊಬೈಲ್ ಅಂಟೆನಾ

ಮೊಬೈಲು ಫೋನುಗಳು ಸಂಕೇತವನ್ನು ಸ್ವೀಕರಿಸಲು ಅಥವಾ ಒದಗಿಸಲು ಅಯೋನೈಸೇಶನ್ ರಹಿತ ವಿಕಿರಣ ಹೊಂದುವ ರೇಡಿಯೋ ಅಲೆಗಳನ್ನು ಬಳಸುತ್ತವೆ. ಇದಕ್ಕಾಗಿ ಮೊಬೈಲಿನ ಒಳಗೇ ಒಂದು ಅಂಟೆನಾವನ್ನು ಅಳವಡಿಸಿರಲಾಗುತ್ತದೆ. ಈ ಆಂಟೆನಾ ದೇಹದ ಹತ್ತಿರವಿದ್ದರೆ ಈ ಭಾಗದಲ್ಲಿ ಸಾಂದ್ರೀಕೃತವಾಗಿರುವ ಅಲೆಗಳನ್ನು ದೇಹದ ಅಂಗಾಂಶಗಳೂ ಹೀರಿಕೊಳ್ಳುವ ಸಾಧ್ಯತೆ ಇದೆ.

ಮೊಬೈಲ್‌ ಸಂಕೇತಗಳು ಬಲು ಅಪಾಯಕಾರಿ

ಮೊಬೈಲ್‌ ಸಂಕೇತಗಳು ಬಲು ಅಪಾಯಕಾರಿ

ಮೊಬೈಲುಗಳು ಸತತವಾಗಿ ಸಂಕೇತಗಳನ್ನು ಸ್ವೀಕರಿಸುತ್ತಾ, ಪ್ರಸರಿಸುತ್ತಾ ಇರುತ್ತವೆ. ಈ ಸಂಕೇತಗಳ ಪ್ರಭಾವ ಜೀವಕೋಶಗಳ ಮೇಲೆ ಥಟ್ಟನೇ ಅಲ್ಲದಿದ್ದರೂ ಸತತವಾದ ಬಳಕೆಯಿಂದ ಜೀವಕೋಶಗಳನ್ನು ಬಿಸಿಮಾಡಿ ಪರೋಕ್ಷ ಪರಿಣಾಮಗಳನ್ನುಂಟು ಮಾಡಬಹುದು.

ಹಾಸಿಗೆ ಬಳಿ ಮೊಬೈಲ್ ಇಟ್ಟುಕೊಂಡರೆ ಅಪಾಯ ಗ್ಯಾರಂಟಿ..

ಹೆಡ್ ಫೋನ್‌‌ಗಳನ್ನೇ ಬಳಸಿ

ಹೆಡ್ ಫೋನ್‌‌ಗಳನ್ನೇ ಬಳಸಿ

ಫೋನುಗಳು ದೇಹದ ಮೇಲೆ ಮಾಡುವ ಪರಿಣಾಮಗಳಲ್ಲಿ ಬರೆಯ ಮೊಬೈಲ್ ಫೋನು ದೇಹಕ್ಕೆ ಹತ್ತಿರವಿದ್ದರೆ ಮಾತ್ರ ಸಾಲದು ಬದಲಿಗೆ ಒಂದು ದಿನದಲ್ಲಿ ಬರುವ ಕರೆಗಳ ಸಂಖ್ಯೆ, ನೀವು ಎಷ್ಟು ಹತ್ತಿರ ಹಿಡಿದುಕೊಳ್ಳುತ್ತೀರಿ, ಎಷ್ಟು ಹೊತ್ತು ಮಾತನಾಡುತ್ತೀರಿ ಮೊದಲಾದ ಅಂಶಗಳನ್ನೂ ಆಧರಿಸಿದೆ.

ಹೆಡ್ ಫೋನ್‌‌ಗಳನ್ನೇ ಬಳಸಿ

ಹೆಡ್ ಫೋನ್‌‌ಗಳನ್ನೇ ಬಳಸಿ

ತಜ್ಞರ ಪ್ರಕಾರ ಮೊಬೈಲು ಫೋನುಗಳನ್ನು ದೇಹಕ್ಕೆ ಅಂಟಿಸಿಕೊಂಡೇ ಇರುವ ಬದಲು ಕೊಂಚ ದೂರ ಇರಿಸುವುದು, ಹಾಗೂ ಜೇಬಿನಲ್ಲಿರಿಸುವ ಬದಲು ಕೈಯಲ್ಲಿ ಹಿಡಿದುಕೊಳ್ಳುವುದು, ಕರೆಗಳನ್ನು ಸ್ವೀಕರಿಸಲು ಹಾಗೂ ಕರೆ ಮಾಡಲು ಹೆಡ್ ಫೋನ್‌ಗಳನ್ನೇ ಉಪಯೋಗಿಸುವುದು ಇತ್ಯಾದಿಗಳು ಸೂಕ್ತ ಕ್ರಮಗಳಾಗಿವೆ.

ಅತಿಯಾದ ಮೊಬೈಲ್ ಫೋನ್-ಆಪತ್ತು ಕಟ್ಟಿಟ್ಟ ಬುತ್ತಿ!

English summary

Why You Shouldn't Put Mobile Phone In Pocket

None of us would ever leave home without carrying a mobile phone. Imagining a whole day without mobile phone is also impossible. But current studies are not yet clear about how safe it is to live so close to the mobile phones for the whole day. The effects of mobile radiation are yet to be studied. Currently, health experts claim that it isn't healthy to carry a mobile in your pockets whether it is your shirt's pocket or your trouser's. Here are some more facts on this...
Subscribe Newsletter