For Quick Alerts
ALLOW NOTIFICATIONS  
For Daily Alerts

ಥಟ್ಟಂತ ತಯಾರಾಗುವ ಇನ್‌ಸ್ಟೆಂಟ್ ನೂಡಲ್ಸ್ ತುಂಬಾನೇ ಡೇಂಜರ್!

By Arshad
|

ಇನ್‌ಸ್ಟೆಂಟ್ ನೂಡಲ್ಸ್ - ಇದು ಇಂದು ಪ್ರತಿ ಅಂಗಡಿಯಲ್ಲಿಯೂ ಥಟ್ಟನೇ ಕೈಗೆ ಸಿಗುವ ಸಿದ್ಧ ಆಹಾರದ ಪೊಟ್ಟಣವಾಗಿದೆ. ಹೆಸರೇ ತಿಳಿಸುವಂತೆ ಇದನ್ನು ಇನ್‌ಸ್ಟೆಂಟ್ ಅಥವಾ ಥಟ್ಟನೇ ತಯಾರಿಸಿ ಸೇವಿಸಬಹುದು. ರುಚಿಕರವೂ ಆರೋಗ್ಯಕರವೂ ಆಗಿರುವ ಈ ಮಸಾಲೆಭರಿತ ಶ್ಯಾವಿಗೆ ಸಮಯವಿಲ್ಲದವರ ಪಾಲಿಗೆ ಅಕ್ಷಯ ಪಾತ್ರೆಯೇ ಸರಿ. ವಿದ್ಯಾರ್ಥಿಗಳು, ಬೆಳಿಗ್ಗೆ ಧಾವಂತದಲ್ಲಿ ಬೇಗನೇ ಕಛೇರಿ, ಉದ್ಯೋಗದ ಸ್ಥಳಗಳಿಗೆ ತಲುಪಬೇಕಾದ ಉದ್ಯೋಗಸ್ಥರು, ಬೇರೆ ಕೆಲಸದಲ್ಲಿ ತೊಡಗಿದ್ದು ಅಡುಗೆಗೆ ಸಮಯವಿಲ್ಲದಿರುವ ಗೃಹಿಣಿಯರು ಒಟ್ಟಾರೆ ಎಲ್ಲರಿಗೂ ಈ ನೂಡಲ್ಸ್ ನೆಚ್ಚಿನ ಆಯ್ಕೆಯಾಗಿದೆ.

ಥಟ್ಟಂತ ತಯಾರಿಸಬಹುದು ಹಾಗೂ ರುಚಿಕರವಾಗಿರುತ್ತದೆ ಎಂಬ ಎರಡು ಕಾರಣಗಳನ್ನು ಹೊರತುಪಡಿಸಿದರೆ ವಾಸ್ತವದಲ್ಲಿ ವಿಶ್ವದ ಅತ್ಯಂತ ಕೆಟ್ಟ ಆಹಾರವೇ ಈ ನೂಡಲ್ಸ್. ಎಷ್ಟೋ ದಿನಗಳಿಂದ ತಿನ್ನುತ್ತಿದ್ದೇವೆ, ನಮಗೇನೂ ತೊಂದರೆಯಾಗಿಲ್ಲವಲ್ಲ ಎಂದು ನೂಡಲ್ಸ್‌ನ ಗುಣಗಾನ ಮಾಡುವವರಿಗೆ ನಿರಾಶೆ ಕಾದಿದೆ. ಏಕೆಂದರೆ ಇದರ ಸೇವನೆಯಿಂದ ಹೊಟ್ಟೆ ತುಂಬಿದಂತಾಗುವುದು, ವಾಯುಪ್ರಕೋಪ, ಅಜೀರ್ಣ ಹಾಗೂ ಇತರ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ಎದುರಾಗುತ್ತವೆ.

ಈ ನೂಡಲ್ಸ್ ಮಕ್ಕಳಿಗೆ ಹೆಚ್ಚು ಇಷ್ಟ. ಮಕ್ಕಳಿಗೆ ಹಸಿವಾದರೆ ತಕ್ಷಣವೇ ಏನಾದರೂ ತಿನ್ನಬೇಕಿರುತ್ತದೆ ಹಾಗೂ ಇವರ ನೆಚ್ಚಿನ ಕಾರ್ಟೂನು ಪಾತ್ರಗಳನ್ನೂ ಇದರ ಪ್ಯಾಕೆಟ್ಟಿನ ಮೇಲೆ ಮುದ್ರಿಸುವ ಮೂಲಕ ಮಕ್ಕಳು ಇನ್ನಷ್ಟು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಮಕ್ಕಳು ಇಷ್ಟಪಡ್ತುತಾರೆ ಎಂದೇ ಹೆಚ್ಚಿನ ಪಾಲಕರು ಹೆಚ್ಚು ಹೆಚ್ಚು ಪ್ರಮಾಣ ಹಾಗೂ ಭಿನ್ನವಾದ ರುಚಿಯ ನೂಡಲ್ಸ್ ಪ್ಯಾಕೆಟ್ಟುಗಳನ್ನು ಕೊಂಡು ತರುತ್ತಾರೆ.

ಈ ನೂಡಲ್ಸ್ ಏಕೆ ಕೆಟ್ಟ ಆಹಾರವಾಗಿದೆ ಎಂದರೆ ಇದನ್ನು ತಯಾರಿಸಲು ಮೊದಲಾಗಿ ನಾರಿನ ಅಂಶವೇ ಇಲ್ಲದ ಮೈದಾ ಹಿಟ್ಟಿನ ಶಾವಿಗೆಯನ್ನು ಯಂತ್ರಗಳ ಮೂಲಕ ತಯಾರಿಸಿ ಇದಕ್ಕೆ ಹಲವಾರು ಮಸಾಲೆ ಹಾಗೂ ಕೆಡದೇ ಇರುವಂತೆ ಸಂರಕ್ಷಕಗಳು ಹಾಗೂ ಕೃತಕ ರುಚಿಬರುವ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಈ ರಾಸಾಯನಿಕಗಳೆಲ್ಲಾ ರುಚಿಯಾಗಿದ್ದರೂ ಆರೋಗ್ಯಕ್ಕೆ ಮಾರಕವಾಗಬಲ್ಲವು. ಬನ್ನಿ, ಥಟ್ಟಂತ ತಯಾರಾಗುವ ನೋಡಲ್ಸ್ ಏಕೆ ಕೆಟ್ಟ ಆಹಾರವಾಗಿದೆ ಎಂಬುದನ್ನು ನೋಡೋಣ....

ಜೀರ್ಣಕ್ರಿಯೆಯನ್ನು ಏರುಪೇರುಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಏರುಪೇರುಗೊಳಿಸುತ್ತದೆ

ಸತತವಾಗಿ ನೂಡಲ್ಸ್ ಸೇವಿಸುವ ಮೂಲಕ ಜೀರ್ಣಕ್ರಿಯೆಯ ಲಯಬದ್ದತೆ ಹಾನಿಗೊಳಗಾಗುತ್ತದೆ. ಕೆಲವು ದಿನಗಳ ಬಳಿಕ ಮಲಬದ್ದತೆ, ಆಮಶಂಕೆ, ಹೊಟ್ಟೆಯಲ್ಲಿ ನೋವು, ಆಮ್ಲೀಯತೆ, ಎದೆಯುರಿ, ಹೊಟ್ಟೆಯಲ್ಲಿ ಗುಡುಗುಡು, ಹೊಟ್ಟೆಯುಬ್ಬರಿಕೆ ಹಾಗೂ ಸದಾ ಹೊಟ್ಟೆ ತುಂಬಿದಂತಿರುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ.

ಹೃದಯದ ಒತ್ತಡವನ್ನು ಹೆಚ್ಚಿಸುತ್ತದೆ

ಹೃದಯದ ಒತ್ತಡವನ್ನು ಹೆಚ್ಚಿಸುತ್ತದೆ

ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದ ಸೋಡಿಯಂ ಇದೆ. ಇದು ರಕ್ತದ ಒತ್ತಡವನ್ನು ಹೆಚ್ಚಿಸಲು ಪ್ರಮುಖವಾದ ಕಾರಣವಾಗಿದೆ. ಅಷ್ಟೇ ಅಲ್ಲ, ಈ ಹೆಚ್ಚುವರಿ ಪ್ರಮಾಣವನ್ನು ನಮ್ಮ ದೇಹದಿಂದ ಹೊರಹಾಕಲು ನಮ್ಮ ಮೂತ್ರಪಿಂಡಗಳು ಅತಿ ಹೆಚ್ಚು ಶ್ರಮಿಸಬೇಕಾಗುತ್ತದೆ. ಇದಕ್ಕಾಗಿ ಮೂತ್ರಪಿಂಡಗಳು ದೇಹದಲ್ಲಿ ನೀರನ್ನು ಉಳಿಸಿಕೊಳ್ಳಬೇಕಾಗುತ್ತದೆ (fluid retention) ಪರಿಣಾಮವಾಗಿ ಕೈಕಾಲುಗಳು ನೀರುತುಂಬಿಕೊಂಡಂತೆ ಊದಿಕೊಳ್ಳುತ್ತವೆ. ಒಂದು ವೇಳೆ ಈಗಾಗಲೇ ಹೃದಯದೊತ್ತಡ ಮತ್ತು ಮೂತ್ರಪಿಂಡದ ತೊಂದರೆ ಇರುವ ವ್ಯಕ್ತಿಗಳಿಗೆ ನೂಡಲ್ಸ್ ನೇರವಾದ ವಿಷಾಹಾರವಾಗಿದೆ.

ಜೀವರಾಸಾಯನಿಕ ಕ್ರಿಯೆಯನ್ನು ಕುಗ್ಗಿಸುತ್ತದೆ

ಜೀವರಾಸಾಯನಿಕ ಕ್ರಿಯೆಯನ್ನು ಕುಗ್ಗಿಸುತ್ತದೆ

ಒಂದು ವೇಳೆ ನಿಮ್ಮ ಜೀವರಾಸಾಯನಿಕ ಕ್ರಿಯೆ ಕುಗ್ಗಿದರೆ ಇದು ಸ್ಥೂಲಕಾಯಕ್ಕೆ ನೇರವಾದ ಕಾರಣವಾಗುತ್ತದೆ. ಈ ಆಹಾರ ದೇಹದಲ್ಲಿ ವಿಷವಸ್ತುಗಳ ಸಂಗ್ರಹ ಹೆಚ್ಚುತ್ತದೆ ಹಾಗೂ ಇದೇ ಕಾರಣಕ್ಕೆ ಜೀವರಾಸಾಯನಿಕ ಕ್ರಿಯೆ ಕುಗ್ಗುತ್ತದೆ. ಈ ವಿಷಗಳೆಲ್ಲಾ ನಾಲಿಗೆಗೆ ರುಚಿಕರವಾಗಿರುವ ರಾಸಾಯನಿಕ ಹಾಗೂ ಸಂರಕ್ಷಕಗಳಾಗಿದ್ದು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನುವಂತೆ ಪ್ರಚೋದಿಸುತ್ತದೆ.

ಅಜಿನೋಮೋಟೋ ಸಹಾ ಇದೆ

ಅಜಿನೋಮೋಟೋ ಸಹಾ ಇದೆ

Mono Sodium Glutamate (MSG) ಅಥವ Chinese Salt ಎಂದೂ ಕರೆಯಲ್ಪಡುವ ಅಜಿನೋಮೋಟೋ (ವಾಸ್ತವವಾಗಿ ಇದು ಉತ್ಪಾದಿಸುವ ಸಂಸ್ಥೆಯ ಹೆಸರು) ಒಂದು ರುಚಿಹೆಚ್ಚಿಸುವ ಉಪ್ಪಾಗಿದ್ದರೂ ಮಾರಕವಾದ ರಾಸಾಯನಿಕವಾಗಿದೆ. ಇದರ ಹೆಸರು ಗೊತ್ತಿಲ್ಲದ ಮುಗ್ಧ ಬಾಣಸಿಗರು ಇಂದಿಗೂ ಇದಕ್ಕೆ ಟೇಸ್ಟಿಂಗ್ ಪೌಡರ್ ಎಂದೇ ಕರೆಯುತ್ತಾರೆ. ಆದರೆ ಸಂಶೋಧನೆಗಳ ಮೂಲಕ ಈ ರಾಸಾಯನಿಕದ ಸೇವನೆ ಮೆದುಳಿಗೆ ಹಾನಿಕಾರಕ ಎಂದು ಸಾಬೀತಾಗಿದೆ. ಅಲ್ಲದೇ ಮೂತ್ರಪಿಂಡಗಳ ವೈಫಲ್ಯ ಹಾಗೂ ಇತರ ದೈಹಿಕ ತೊಂದರೆಗಳನ್ನೂ ತಂದೊಡ್ಡುತ್ತದೆ. ಕೆಲವರಿಗೆ ಈ ರಾಸಾಯನಿಕ ಅಲರ್ಜಿಕಾರಕವಾಗಿದ್ದು ಕೊಂಚ ಹೆಚ್ಚಿನ ಪ್ರಮಾಣ ದೇಹ ಸೇರಿದರೂ ಇವರಿಗೆ ಎದೆಯಲ್ಲಿ ನೋವು, ತಲೆನೋವು ಮೊದಲಾದವು ಎದುರಾಗುತ್ತವೆ.

ಮೇಣ

ಮೇಣ

ಶ್ಯಾವಿಗೆಯ ನೂಲುಗಳು ಒಂದಕ್ಕೊಂದು ಅಂಟಿಕೊಂಡಿರದಂತೆ ಇರಲು ಈ ಉತ್ಪನ್ನಗಳಲ್ಲಿ ಮೇಣವನ್ನು ಬಳಸಲಾಗುತ್ತದೆ. ಒಣಗಿದ್ದಾಗ ಈ ಮೇಣ ಕಾಣಲು ಬರುವುದಿಲ್ಲ. ಇದನ್ನು ಪರೀಕ್ಷಿಸಬೇಕೆಂದರೆ ಕುದಿಯುವ ನೀರಿನಲ್ಲಿ ಕೊಂಚ ನೂಡಲ್ಸ್ ಗಳನ್ನು ಮಾತ್ರ ಹಾಕಿ ಒಂದು ನಿಮಿಷ ಬಿಟ್ಟರೆ ಸಾಕು. ಮೇಣಕರಗಿ ನೀರಿನ ಮೇಲ್ಮೈಯಲ್ಲಿ ತೇಲುತ್ತಾ ರಂಗುರಂಗಿನ ಚಿತ್ತಾರ ಬಿಡಿಸುವುದನ್ನು ಕಾಣಬಹುದು. ಈ ಮೇಣವನ್ನು ಜೀರ್ಣಿಸಿಕೊಳ್ಳಲು ನಮ್ಮ ದೇಹದಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಇದು ವಿಸರ್ಜನೆಗೊಳ್ಳುವ ಮೊದಲು ಕರುಳುಗಳಲ್ಲಿ ತೊಂದರೆ, ಮಲಬದ್ಧತೆ, ವಾಯುಪ್ರಕೋಪ ಮೊದಲಾದವುಗಳನ್ನು ಉಂಟುಮಾಡಿಯೇ ವಿದಾಯ ಹೇಳುತ್ತದೆ.

ಕ್ಯಾನ್ಸರ್‌ಕಾರಕ ಕಣಗಳು

ಕ್ಯಾನ್ಸರ್‌ಕಾರಕ ಕಣಗಳು

ಈ ನೂಡಲ್ಸ್‌ಗಳಲ್ಲಿ ಕೆಲವಾರು ರಾಸಾಯನಿಕಗಳು ಕ್ಯಾನ್ಸರ್ ಉಂಟುಮಾಡುವ ಸಾಧ್ಯತೆ ಹೊಂದಿವೆ. ವಿಶೇಷವಾಗಿ ಕಪ್‌ಗಳಲ್ಲಿ ಪ್ಯಾಕ್ ಮಾಡಿಸುವ ಉತ್ಪನ್ನಗಳು. ಈ ಕಪ್ ಗಳನ್ನು ಥರ್ಮೋಕೋಲ್ ಆಧಾರಿತ ಉತ್ಪನ್ನಗಳಿಂದ ತಯಾರಿಸಲಾಗಿದ್ದು ಇದಕ್ಕೆ ಬಿಸಿನೀರು ತಗುಲಿದೊಡನೆ ಇದರಲ್ಲಿರುವ ಕೆಲವು ರಾಸಾಯನಿಕಗಳು ಕರಗಿ ನೀರಿನೊಡನೆ ಬೆರೆಯುತ್ತವೆ. ಎಷ್ಟೋ ಮುಂದುವರೆದ ರಾಷ್ಟ್ರಗಳಲ್ಲಿ ಥರ್ಮೋಕೋಲ್ ಆಧಾರಿತ ಉತ್ಪನ್ನಗಳನ್ನು ಬಿಸಿದ್ರವಗಳಿಗೆ ಬಳಸುವುದನ್ನು ನಿಷೇಧಿಸಲಾಗಿದೆ. ಭಾರತದಲ್ಲಿಯೂ ಇದರ ನಿಷೇಧದ ಅಗತ್ಯವಿದ್ದು ಈಗಲೂ ಈ ಉತ್ಪನ್ನಗಳನ್ನು ನೂಡಲ್ಸ್‌ನಲ್ಲಿ ಪ್ಯಾಕ್ ಮಾಡಿರುವ ಕಾರಣ ಇದನ್ನು ಸೇವಿಸುವವರಲ್ಲಿ ಕ್ಯಾನ್ಸರ್ ಆವರಿಸುವ ಸಾಧ್ಯತೆ ಇದ್ದೇ ಇರುತ್ತದೆ.

 ಯಕೃತ್‌ಗೆ ಆಗುವ ಹಾನಿಯ ಸಾಧ್ಯತೆ

ಯಕೃತ್‌ಗೆ ಆಗುವ ಹಾನಿಯ ಸಾಧ್ಯತೆ

ನೂಡಲ್ಸ್ ನಲ್ಲಿರುವ humectants ಅಥವಾ ಮಂಜುಗಡ್ಡೆಯಾಗದಂತೆ ತಡೆಯಲು ಬಳಸಲಾಗುವ ಕೆಲವು ರಾಸಾಯನಿಕಗಳು ವಿಶೇಷವಾಗಿ ಯಕೃತ್ ಮತ್ತು ಮೂತ್ರಪಿಂಡಗಳಿಗೆ ಹಾನಿ ಎಸಗುವ ಸಾಧ್ಯತೆ ಇದೆ. ಅಲ್ಲದೇ ಇದರೊಂದಿಗೆ ಬಳಸಲಾಗುವ propylene glycol ಎಂಬ ರಾಸಾಯನಿಕ ನಮ್ಮ ರೋಗ ನಿರೋಧಕ ಶಕ್ತಿಯನ್ನೇ ಕುಗ್ಗಿಸಬಲ್ಲುದು.

ತೂಕದಲ್ಲಿ ಹೆಚ್ಚಳ

ತೂಕದಲ್ಲಿ ಹೆಚ್ಚಳ

ಥಟ್ಟನೇ ತಯಾರಾಗುವ ನೂಡಲ್ಸ್‌ನಲ್ಲಿ ಸಂಸ್ಕರಿತ ಕಾರ್ಬೋಹೈಡ್ರೇಟುಗಳಾದ ಮೈದಾ ಹಾಗೂ ಇತರ ಆಹಾರಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದರೊಂದಿಗೇ ಅಜಿನೋಮೋಟೋ, ಉಪ್ಪು, ರುಚಿಕಾರಕಗಳು ಹೆಚ್ಚು ಹೆಚ್ಚು ತಿನ್ನಲು ಹಾಗೂ ತೂಕ ಹೆಚ್ಚಲು ಬೆಂಬಲ ನೀಡುತ್ತವೆ. ಅಲ್ಲದೇ ಈ ಆಹಾರದ ಸೇವನೆಯಿಂದ ನಮ್ಮ ರಕ್ತದಲ್ಲಿಯೂ ಸಕ್ಕರೆಯ ಪ್ರಮಾಣ ಥಟ್ಟಂತ ಏರುತ್ತದೆ ಹಾಗೂ ಈ ಆಗಾಧ ಪ್ರಮಾಣವನ್ನು ನಿಭಾಯಿಸಲು ಮೇದೋಜೀರಕ ಗ್ರಂಥಿ ಅನಿವಾರ್ಯವಾಗಿ ಹೆಚ್ಚಿನ ಪ್ರಮಾಣದ ಇನ್ಸುಲಿನ್ ಅನ್ನೂ ಬಿಡುಗಡೆಗೊಳಿಸಬೇಕಾಗಿ ಬರುತ್ತದೆ. ಇದು ದೇಹದಲ್ಲಿ ಕೊಬ್ಬಿನ ಸಂಗ್ರಹಕ್ಕೆ ಕಾರಣವಾಗುತ್ತದೆ ಹಾಗೂ ಈ ಏರುಪೇರು ಹಲವಾರು ತೊಂದರೆಗಳನ್ನು ಹುಟ್ಟುಹಾಕುತ್ತದೆ.

ಹೊಟ್ಟೆಯುಬ್ಬರಿಕೆ, ಗ್ಯಾಸ್ ಟ್ರಬಲ್ ಹಾಗೂ ಅಜೀರ್ಣತೆ

ಹೊಟ್ಟೆಯುಬ್ಬರಿಕೆ, ಗ್ಯಾಸ್ ಟ್ರಬಲ್ ಹಾಗೂ ಅಜೀರ್ಣತೆ

ನೂಡಲ್ಸ್ ಅನ್ನೇ ಹೆಚ್ಚು ಇಷ್ಟಪಟ್ಟು ತಿನ್ನುವವರಿಗೆ ಕೊಂಚ ನಿರಾಶೆಯಾಗುವುದಂತೂ ಖಂಡಿತಾ. ಏಕೆಂದರೆ ಈ ಆಹಾರ ನಮ್ಮ ಕರುಳುಗಳ ಒಳಗಿನ ವಿಲ್ಲೈ ಎಂಬ ಹೀರುಕ ಭಾಗಕ್ಕೆ ಅಂಟಿಕೊಳ್ಳುವ ಗುಣವಿದ್ದು ಇದು ಮುಂದೆಹೋಗದೇ ಅಲ್ಲಿಯೇ ವಾಯುವಿನ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ಹೊಟ್ಟೆಯುಬ್ಬರಿಕೆ, ಹೊಟ್ಟೆಯಲ್ಲಿ ಉರಿ, ಹುಳಿತೇಗು, ಅಜೀರ್ಣತೆ ಮೊದಲಾದ ತೊಂದರೆಗಳು ಎದುರಾಗುತ್ತವೆ.

ಅಷ್ಟಕ್ಕೂ ಇವನ್ನು ಸರ್ಕಾರವೇಕೆ ನಿಷೇಧಿಸುವುದಿಲ್ಲ?

ಅಷ್ಟಕ್ಕೂ ಇವನ್ನು ಸರ್ಕಾರವೇಕೆ ನಿಷೇಧಿಸುವುದಿಲ್ಲ?

ಕೆಲದಿನಗಳ ಹಿಂದೆ ಮ್ಯಾಗಿ ಎಂಬ ಉತ್ಪನ್ನವನ್ನು ಭಾರತದ ಮಾರುಕಟ್ಟೆ ನಿಷೇಧಿಸಿತ್ತು. ಈ ಉತ್ಪನ್ನಗಳಲ್ಲಿ ಅಪಾಯಕರ ಮಟ್ಟದಲ್ಲಿ ಬೂದಿ ಇದೆ ಎಂದು ಪ್ರಯೋಗಾಲಯಗಳಲ್ಲಿ ಸಿದ್ಧಪಡಿಸಿ ತೋರಿಸಲಾಗಿತ್ತು. ಇದನ್ನು ಸರಿಪಡಿಸಿದ ಬಳಿಕ ಮತ್ತೆ ಇದು ಮಾರುಕಟ್ಟೆಗೆ ಬಂದಿದೆ. ಆದರೆ ಯಾವುದೇ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುವಾಗ ಇದರ ಸೇವನೆ ಆರೋಗ್ಯಕ್ಕೆ ಹೇಗೆ ಮಾರಕ ಎಂದು ಅಧ್ಯಯನ ಮಾಡಿಯೇ ಬಿಡುಗಡೆಮಾಡಲಾಗುತ್ತದೆ. ಆದ್ದರಿಂದ ಇದರ ಪರಿಣಾಮಗಳು ತಕ್ಷಣದ ಬಳಕೆಯಿಂದ ಗೋಚರಿಸಲ್ಪಡುವುದಿಲ್ಲ.

ಅಷ್ಟಕ್ಕೂ ಇವನ್ನು ಸರ್ಕಾರವೇಕೆ ನಿಷೇಧಿಸುವುದಿಲ್ಲ?

ಅಷ್ಟಕ್ಕೂ ಇವನ್ನು ಸರ್ಕಾರವೇಕೆ ನಿಷೇಧಿಸುವುದಿಲ್ಲ?

ಹಾಗಾಗಿ ಈ ಸಂಸ್ಥೆಗಳು ಬಚಾವು. ಒಂದು ವರ್ಷದ ಮೇಲೆ ಯಾವುದಾದರೂ ತೊಂದರೆ ಎದುರಾದರೂ ಅದು ನೀವು ಒಂದು ವರ್ಷದಿಂದ ನೂಡಲ್ಸ್ ತಿಂದಿದ್ದಕ್ಕೇ ಬಂದಿರುವುದು ಎಂದು ಸಾಬೀತುಪಡಿಸಲು ಸಾಧ್ಯವಿಲ್ಲದ ಕಾರಣ ಇವನ್ನು ನಿಷೇಧಿಸಲು ಸರ್ಕಾರಕ್ಕೂ ಸ್ಪಷ್ಟ ಕಾರಣ ದೊರಕುವುದಿಲ್ಲ. ಹಾಗಾಗಿ ಇವು ಎಗ್ಗಿಲ್ಲದೇ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಆದರೆ ಬಳಕೆದಾರರಾದ ನಾವೇ ಎಚ್ಚೆತ್ತು ಸ್ವತಃ ಈ ಉತ್ಪನ್ನಗಳನ್ನು ಕೊಳ್ಳದೇ ಇರುವ ಮೂಲಕ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳುವುದೇ ಜಾಣತನ.

English summary

Why You Should Not Eat Instant Noodles

Children usually like eating this the most, as it can be prepared instantly and the taste of it is something that remains in their memories for a long time. Even the parents don't hesitate to offer them without knowing its health hazards. Instant noodles are made from refined carbs (such as maida) that lack fibres and cause a sharp increase in the blood sugar level. This leads to weight gain and many other health-related complications. Also, the additives such as flavours, preservatives and colours also contribute to its harmful effects. Have a look at the harmful health effects of instant noodles.
X
Desktop Bottom Promotion