For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ರಾತ್ರಿ ಮಲಗುವ ಮುನ್ನ ಒಳ ಉಡುಪು ಧರಿಸಬೇಡಿ!

By Arshad
|

ಈ ಪ್ರಶ್ನೆ ರಾತ್ರಿ ಮಲಗುವ ಮುನ್ನ ಬಹುತೇಕ ಎಲ್ಲರ ಮನದಲ್ಲಿಯೂ ಮೂಡಿರಬಹುದು. ಹೆಚ್ಚಿನವರು ಒಳ ಉಡುಪುಗಳನ್ನು ಕಳಚುವ ಮೂಲಕ ಕೊಂಚ ಮುಜುಗರ ಎದುರಿಸಬೇಕಾಗಬಹುದು ಎಂದುಕೊಂಡು ಒಂದಕ್ಕಿಂತ ಹೆಚ್ಚೇ ಒಳ ಉಡುಪುಗಳನ್ನು ತೊಟ್ಟುಕೊಂಡೇ ಮಲಗುತ್ತಾರೆ. ಆದರೆ ಮಲಗುವ ಸಮಯದಲ್ಲಿ ದಪ್ಪ ಉಡುಪುಗಳನ್ನು ತೊಟ್ಟುಕೊಳ್ಳುವುದು ತರವೇ?

ವಿಶೇಷವಾಗಿ ಗುಪ್ತಾಂಗಗಳನ್ನು ರಾತ್ರಿ ಮಲಗುವ ಸಮಯದಲ್ಲಿ ಒಳ ಉಡುಪುಗಳನ್ನು ತೊಟ್ಟು ಮಲಗಿದರೆ ಇದರ ಪರಿಣಾಮ ವಿಪರೀತವಾಗಬಹುದು ಎಂದು ನಿಮಗೆ ಗೊತ್ತೇ? ಇದುವರೆಗೂ ರಾತ್ರಿ ಮಲಗುವ ಮುನ್ನ ಉಳ ಉಡುಪು ಕಳಚುತ್ತಿರಲಿಲ್ಲವೇ?

ಸುಸ್ತು ಆಗಿಬಿಟ್ಟಿದೆ, ಎಂದು ಹೇಳಿ ಹಾಗೆಯೇ ಮಲಗಬೇಡಿ!

ಇಲ್ಲವೇ? ಹಾಗಾದರೆ ಇಂದಿನ ಲೇಖನವನ್ನು ನೀವು ಖಂಡಿತಾ ಓದಲೇಬೇಕು. ಈ ಅಭ್ಯಾಸ ಅನಾರೋಗ್ಯಕರವಾಗಿದೆ. ಉತ್ತಮ ಆರೋಗ್ಯಕ್ಕೆ ಉಳ ಉಡುಪುಗಳನ್ನು ಕಳಚಿ ಮಲಗುವುದು ಸೂಕ್ತ. ಇದು ಪುರುಷರಿಗೂ ಮಹಿಳೆಯರಿಗೂ ಸಮಾನವಾಗಿ ಅನ್ವಯಿಸುತ್ತದೆ. ಈ ಅಭ್ಯಾಸವನ್ನು ಅನುಸರಿಸುವ ಮೂಲಕ ಲಭಿಸುವ ಅನುಕೂಲತೆಗಳ ಬಗ್ಗೆ ಇಂದಿನ ಲೇಖನದಲ್ಲಿ ವಿವರಿಸಲಾಗಿದೆ...

ಗುಪ್ತಾಂಗಗಳಿಗೆ ಉಸಿರಾಡಲು ಅವಕಾಶ ನೀಡುವುದು

ಗುಪ್ತಾಂಗಗಳಿಗೆ ಉಸಿರಾಡಲು ಅವಕಾಶ ನೀಡುವುದು

ಸಾಮಾನ್ಯವಾಗಿ ನಾವು ಇಡಿಯ ದಿನ ಒಳ ಉಡುಪುಗಳನ್ನು ತೊಟ್ಟೇ ಇರುವ ಕಾರಣ ಇವು ಆವರಿಸಿರುವ ಚರ್ಮದ ಭಾಗ ಪೂರ್ಣ ಪ್ರಮಾಣದಲ್ಲಿ ಉಸಿರಾಡಲು ಸಾಧ್ಯವಾಗುವುದಿಲ್ಲ. ಅಂದರೆ ಈ ಭಾಗದ ಚರ್ಮಕ್ಕೆ ಗಾಳಿ ತಗಲದೇ ಇರುವ ಕಾರಣದಿಂದ ಸೂಕ್ಷ್ಮರಂಧ್ರಗಳಿಂದ ಬೆವರು ಹೊರ ಹರಿಯದೇ ಹೋಗುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಈ ಅಗತ್ಯತೆ ಇತರರಿಗಿಂತ ಹೆಚ್ಚೇ ಇರುತ್ತದೆ. ಈ ಮೂಲಕ ಸೂಕ್ಷ್ಮಭಾಗಗಳಲ್ಲಿ ಉಪಕಾರಿ ಬ್ಯಾಕ್ಟೀರಿಯಾಗಳು ಉತ್ತಮ ಪ್ರಮಾಣದಲ್ಲಿರಲು ಸಾಧ್ಯವಾಗುತ್ತದೆ. ಒಳ ಉಡುಪುಗಳನ್ನು ತಯಾರಿಸಲು ಬಳಸಲಾಗುವ ರೇಷ್ಮೆ, ಸಿಂಥೆಟಿಕ್ ಮತ್ತು ಎಲಾಸ್ಟಿಕ್ ಮೊದಲಾದವು ಗಾಳಿಯಲ್ಲಿರುವ ಆರ್ದ್ರತೆಯನ್ನು ಹೀರಿಕೊಂಡು ಸೂಕ್ಷ್ಮಭಾಗಗಳಿಗೆ ಗಾಳಿಯಾಡದಂತೆ ತಡೆಯುತ್ತವೆ.

ಶಿಲೀಂಧ್ರದ ಸೋಂಕು ಅಥವಾ ಮೂತ್ರನಾಳದಲ್ಲಿ ಸೋಂಕು ಉಂಟಾಗಬಹುದು

ಶಿಲೀಂಧ್ರದ ಸೋಂಕು ಅಥವಾ ಮೂತ್ರನಾಳದಲ್ಲಿ ಸೋಂಕು ಉಂಟಾಗಬಹುದು

ವಿಶೇಷವಾಗಿ ಮೂತ್ರವಿಸರ್ಜಿಸುವ ಸ್ಥಳದಲ್ಲಿ ಗಾಳಿಯಾಡದೇ ಆರ್ದ್ರತೆಯನ್ನು ಅಲ್ಲಿಯೇ ಉಳಿಸುವ ಮೂಲಕ ಈ ಸ್ಥಳ ಕೆಟ್ಟ ಬ್ಯಾಕ್ಟೀರಿಯಾಗಳಿಗೆ ಅತ್ಯುತ್ತಮವಾದ ಆಶ್ರಯತಾಣವಾಗಿ ಮಾರ್ಪಡುತ್ತದೆ. ಇದು ಮುಂದುವರೆದು ಶಿಲೀಂಧ್ರದ ಸೋಂಕು ಅಥವಾ ಮೂತ್ರನಾಳದ ಒಳಗೆ ಪ್ರವೇಶಿಸಿ ಮೂತ್ರನಾಳ ಅಥವಾ ಮೂತ್ರಕೋಶದಲ್ಲಿ ಸೋಂಕು ಉಂಟಾಗಬಹುದು.

ವೃಷಣಗಳಲ್ಲಿ ವೀರ್ಯೋತ್ಪನ್ನ ಕಡಿಮೆಯಾಗುತ್ತದೆ

ವೃಷಣಗಳಲ್ಲಿ ವೀರ್ಯೋತ್ಪನ್ನ ಕಡಿಮೆಯಾಗುತ್ತದೆ

ವೀರ್ಯಾಣುಗಳ ಉತ್ಪನ್ನ ವೃಷಣಗಳಲ್ಲಿ ಆಗುತ್ತದೆ. ಇದು ದೇಹದ ತಾಪಮಾನಕ್ಕಿಂತ ಕೊಂಚ ಕಡಿಮೆ ಇರಬೇಕೆಂದೇ ಎಲ್ಲಾ ಗಂಡು ಸಸ್ತನಿಗಳ ವೃಷಣಗಳು ದೇಹದಿಂದ ಹೊರಗಿರುತ್ತವೆ. ಆದರೆ ಬಿಗಿಯಾದ ಒಳ ಉಡುಪು ತೊಡುವ ಮೂಲಕ ವೃಷಣಗಳ ಬಳಿ ತಾಪಮಾನ ಹೆಚ್ಚಲು ಕಾರಣವಾಗುತ್ತದೆ. ಈ ಬಿಸಿಯಲ್ಲಿ ವೀರ್ಯಾಣುಗಳು ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗದು. ಪರಿಣಾಮ? ದಂಪತಿಗಳಾಗಲು ಅಸಫಲತೆ!

ಕೆಳಹೊಟ್ಟೆಯಲ್ಲಿ ನೋವು

ಕೆಳಹೊಟ್ಟೆಯಲ್ಲಿ ನೋವು

ಒಳ ಉಡುಪು ಧರಿಸದೇ ಮಲಗುವ ಮೂಲಕ ರಾತ್ರಿ ನಡೆಯುವ ಅನೈಚ್ಛಿಕ ಕಾರ್ಯಗಳು ಸುಸೂತ್ರವಾಗಿ ನೆರವೇರುತ್ತವೆ. ವಿಶೇಶವಾಗಿ ಕೆಳಹೊಟ್ಟೆಯಲ್ಲಿ ಪೂರ್ಣ ಪ್ರಮಾಣದ ರಕ್ತಪರಿಚಲನೆ ಜರುತ್ತದೆ ಹಾಗೂ ಜೀರ್ಣಕ್ರಿಯೆಯೂ ಸರಾಗವಾಗಿ ನಡೆಯುತ್ತದೆ. ಈ ಮೂಲಕ ಎದುರಾಗಬಹುದಾಗಿದ್ದ ಅತಿಸಾರ, ಮಲಬದ್ದತೆ, ಬೆನ್ನುನೋವು ಮೊದಲಾದ ತೊಂದರೆಗಳು ಎದುರಾಗುವುದಿಲ್ಲ. ಒಳ ಉಡುಪುಗಳನ್ನು ತೊಡದೇ ಮಲಗುವ ಅತ್ಯುತ್ತಮ ಪ್ರಯೋಜನ ಇದಾಗಿದೆ.

ಬೆವರು ಗ್ರಂಥಿಗಳ ಮತ್ತು ಮೇಧಸ್ಸಿನ ಕ್ಷಮತೆ

ಬೆವರು ಗ್ರಂಥಿಗಳ ಮತ್ತು ಮೇಧಸ್ಸಿನ ಕ್ಷಮತೆ

ಚರ್ಮದಲ್ಲಿರುವ ಬೆವರುಗ್ರಂಥಿಗಳು ಹಾಗೂ ಮೇಧಸ್ಸಿನ ಗ್ರಂಧಿಗಳು ಸರಿಯಾಗಿ ಕೆಲಸ ಮಾಡಬೇಕಾದರೆ ಚರ್ಮದ ಭಾಗವನ್ನು ಗಾಳಿಗೆ ಒಡ್ಡುವುದು ಅಗತ್ಯ. ವಿಶೇಷವಾಗಿ ಕಂಕಳು ಹಾಗೂ ಗುಪ್ತಾಂಗಗಳ ಭಾಗದಲ್ಲಿ ಬೆವರುಗ್ರಂಥಿ ಹಾಗೂ ಮೇಧಸ್ಸಿನ ಗ್ರಂಥಿಗಳು ಹೆಚ್ಚು ಸಾಂದ್ರೀಕೃತವಾಗಿದ್ದು ತೆರೆದ ಚರ್ಮದಲ್ಲಿ ಇವು ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಪರಿಣಾಮವಾಗಿ ಆರೋಗ್ಯ ಉತ್ತಮವಾಗಿರುತ್ತದೆ.

ಗುಪ್ತಾಂಗಗಳಲ್ಲಿ ತುರಿಕೆ

ಗುಪ್ತಾಂಗಗಳಲ್ಲಿ ತುರಿಕೆ

ಒಳ ಉಡುಪುಗಳನ್ನು ತೊಡದೇ ಮಲಗುವುದರಿಂದ ಲಭಿಸುವ ಅತ್ಯುತ್ತಮ ಪ್ರಯೋಜನವೆಂದರೆ ತುರಿಕೆ ಇಲ್ಲವಾಗುವುದು. ಸಾಮಾನ್ಯವಾಗಿ ಈ ಭಾಗಗಳಲ್ಲಿ ಬ್ಯಾಕ್ಟೀರಿಯಾಗಳು ಸೋಂಕು ಉಂಟುಮಾಡುವ ಮೂಲಕ ತುರಿಕೆ ಎದುರಾಗುತ್ತದೆ. ನಾಲ್ಕು ಜನರ ಎದುರು ಈ ಭಾಗವನ್ನು ತುರಿಸಲು ಸಾಧ್ಯವಾಗದೇ ಮುಜುಗರ ಎದುರಿಸಬೇಕಾಗುತ್ತದೆ. ಆದ್ದರಿಂದ ರಾತ್ರಿ ಮಲಗುವ ಮುನ್ನ ತೆಳುವಾದ ಸಡಿಲ ಬಟ್ಟೆಗಳನ್ನು ಒಳ ಉಡುಪುರಹಿತವಾಗಿ ತೊಟ್ಟು ಮಲಗುವುದೇ ಆರೋಗ್ಯಕರವಾಗಿದೆ.

ಮೂತ್ರನಾಳದ ಸೋಂಕು

ಮೂತ್ರನಾಳದ ಸೋಂಕು

ಒಂದು ವೇಳೆ ಗುಪ್ತಾಂಗಗಳಲ್ಲಿ ಬ್ಯಾಕ್ಟೀರಿಯಾಗಳ ಸಾಂದ್ರತೆ ಹೆಚ್ಚಿ ಸೋಂಕು ಎದುರಾದರೆ ಈ ಸೋಂಕು ಮೂತ್ರನಾಳದ ಮೂಲಕ ಒಳಪ್ರವೇಶಿಸಿ ಮೂತ್ರಕೋಶದವರೆಗೂ ವ್ಯಾಪಿಸಬಹುದು. ರಾತ್ರಿ ಒಳ ಉಡುಪು ತೊಡದೇ ಇರುವುದರಿಂದ ಸಾಕಷ್ಟು ಗಾಳಿಯಾಡುತ್ತದೆ ಹಾಗೂ ಈ ಮೂಲಕ ಸೋಂಕು ಹರಡಲು ಸಾಧ್ಯವಾಗುವುದಿಲ್ಲ.

ಅಹಿತಕರ ವಾಸನೆ

ಅಹಿತಕರ ವಾಸನೆ

ಒಂದು ವೇಳೆ ಗುಪ್ತಾಂಗಗಳ ಒಳಗೆ ಸೋಂಕು ಉಂಟಾಗಿದ್ದರೆ ಇದು ಕಮಟು ವಾಸನೆಗೆ ಕಾರಣವಾಗಬಹುದು. ವಿಶೇಷವಾಗಿ ಮಹಿಳೆಯರಲ್ಲಿ ಈ ಸಾಧ್ಯತೆ ಹೆಚ್ಚು. ಆದ್ದರಿಂದ ಈ ಸೋಂಕು ಉಂಟಾಗದೇ ಇರಲು ರಾತ್ರಿ ಒಳ ಉಡುಪು ಧರಿಸದಿರುವುದೇ ಸರಿಯಾದ ಮಾರ್ಗವಾಗಿದೆ.

English summary

Why You Must Take Off Your Undergarment Before Bedtime

Sleeping with your underwear on can create major problems for our health. Yes, you heard that right! Sleeping without an underwear is known to be a healthy habit for both men and women. In this article, we have mentioned about some of the top benefits of not wearing an underwear to bed. Continue reading to know if it is okay to remove underwear at night.
Story first published: Tuesday, August 8, 2017, 20:29 [IST]
X
Desktop Bottom Promotion