For Quick Alerts
ALLOW NOTIFICATIONS  
For Daily Alerts

ಖಾಲಿ ಹೊಟ್ಟೆಯಲ್ಲಿ, ಒಂದು ಚಮಚ 'ಆಲಿವ್ ಎಣ್ಣೆ' ಸೇವಿಸಿದರೆ, ಹತ್ತಾರು ಲಾಭ!

By Arshad
|

ಆಲಿವ್ ಎಣ್ಣೆ ಆರೋಗ್ಯಕರ ಎಣ್ಣೆ ಎಂದು ಪರಿಗಣಿಸಲು ಇದರಲ್ಲಿರುವ ಅತಿ ಸೂಕ್ಷ್ಮವಾದ ಪೋಷಕಾಂಶಗಳು, ಕೊಬ್ಬಿನ ಆಮ್ಲ ಹಾಗೂ ವಿಟಮಿನ್ನುಗಳಿರುವುದೇ ಆಗಿದೆ. ಅಲ್ಲದೇ ಇದರಲ್ಲಿರುವ ಕೊಬ್ಬು ಏಕಾಪರ್ಯಾಪ್ತ (monounsaturated) ಕೊಬ್ಬುಗಳಿದ್ದು ಇದು ಹೃದಯಸ್ನೇಹಿಯಾಗಿದೆ. ಅಲ್ಲದೇ ಈ ಎಣ್ಣೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹೃದಯವನ್ನು ರಕ್ಷಿಸುವುದರ ಜೊತೆಗೇ ರಕ್ತಕಣಗಳಿಗೆ ಘಾಸಿಯಾಗುವುದರಿಂದ ರಕ್ಷಿಸುತ್ತದೆ.

ಆಲಿವ್ ಎಣ್ಣೆಯ ಸೇವನೆಯಿಂದ ಹೃದಯ ಹಾಗೂ ರಕ್ತಪರಿಚಲನಾ ವ್ಯವಸ್ಥೆ ಹೆಚ್ಚಿನ ಪ್ರಯೋಜನ ಪಡೆಯುತ್ತವೆ. ಯಾವುದೇ ಎಣ್ಣೆಯನ್ನು ನಾವು ಅಡುಗೆಯಲ್ಲಿ ಬಳಸಿದ ಬಳಿಕವೇ ಸೇವಿಸುತ್ತೇವೆ. ಆದರೆ ಈ ಎಣ್ಣೆಯನ್ನು ನೇರವಾಗಿ ಸೇವಿಸುವುದರಿಂದಲೂ ಕೆಲವು ಪ್ರಯೋಜನಗಳಿವೆ.


ಒಂದೆರಡು ಚಮಚ ಆಲಿವ್ ಎಣ್ಣೆ-ಇದುವೇ 'ಸೌಂದರ್ಯದ ಗಣಿ'!

ಇದು ಹೃದಯಕ್ಕೆ ಉತ್ತಮ ಮಾತ್ರವಲ್ಲ, ತೂಕ ಇಳಿಕೆಗೆ ಹಾಗೂ ನೋವು ನಿವಾರಕವಾಗಿಯೂ ಉತ್ತಮವಾಗಿ ಕೆಲಸ ಮಾಡುತ್ತದೆ. ಈ ಎಣ್ಣೆಯಲ್ಲಿ ಹೆಚ್ಚಿನ ಕ್ಯಾಲೋರಿಗಳೂ ಇರುವ ಕಾರಣ ನೇರವಾಗಿ ಸೇವಿಸುವ ಪ್ರಮಾಣ ಹೆಚ್ಚಾಗಕೂಡದು. ಯಾವುದಕ್ಕೂ ಆಲಿವ್ ಎಣ್ಣೆಯನ್ನು ನೇರವಾಗಿ ಸೇವಿಸುವ ಮುನ್ನ ಈ ಬಗ್ಗೆ ನಿಮ್ಮ ಕುಟುಂಬ ವೈದ್ಯರಿಂದ ಸಲಹೆ ಪಡೆದೇ ಮುಂದುವರೆಯುವುದು ಉತ್ತಮ. ಅಲ್ಲದೇ ನಿಮ್ಮ ನಿತ್ಯದ ಅಡುಗೆಗಳನ್ನು ಆಲಿವ್ ಎಣ್ಣೆಯಲ್ಲಿ ತಯಾರಿಸಿ ಸೇವಿಸುವ ಮೂಲಕವೂ ತೂಕ ಇಳಿಯಲು ನೆರವಾಗುತ್ತದೆ.

ಬೆಲೆಯಲ್ಲಿ ಕೊಂಚ ದುಬಾರಿ ಎಂಬ ಒಂದೇ ಕಾರಣ ಬಿಟ್ಟರೆ ಆಲಿವ್ ಎಣ್ಣೆಯನ್ನು ಬಳಸದೇ ಇರಲು ಇನ್ನಾವ ಕಾರಣವೂ ಇಲ್ಲ. ಆದರೆ ಆರೋಗ್ಯ ವೃದ್ಧಿಸುವುದಾದರೆ ಕೊಂಚ ಹೆಚ್ಚಿನ ಹಣ ವ್ಯಯಿಸುವುದಾದಲ್ಲಿ, ಅದು ನಿಜವಾದ ವ್ಯಯಿಕೆಯೇ ಅಲ್ಲವೇ? ಬನ್ನಿ ನಿತ್ಯವೂ ಕೊಂಚ ಪ್ರಮಾಣದಲ್ಲಿ, ಖಾಲಿ ಹೊಟ್ಟೆಯಲ್ಲಿ ಆಲಿವ್ ಎಣ್ಣೆಯನ್ನು ಸೇವಿಸುವ ಮೂಲಕ ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ....

ಕರುಳಿಗೆ ಆಗುವ ಘಾಸಿಯಿಂದ ರಕ್ಷಿಸುತ್ತದೆ

ಕರುಳಿಗೆ ಆಗುವ ಘಾಸಿಯಿಂದ ರಕ್ಷಿಸುತ್ತದೆ

ಕೆಲವು ಆಹಾರಕಣಗಳನ್ನು (ಉದಾಹರಣೆಗೆ ಮಾವಿನ ಗೊರಟು) ನಮ್ಮ ಕರುಳು ಜೀರ್ಣೀಸಿಕೊಳ್ಳಲು ಅಸಮರ್ಥವಾಗಿದ್ದು ಇವುಗಳ ಚಲನೆಯಿಂದ ಕರುಳುಗಳ ಒಳಗಿನ ಭಾಗದ ಜೀವಕೋಶಗಳಿಗೆ ಘಾಸಿಯಾಗಬಹುದು. ಇದು ಮುಂದೆ ಕ್ಯಾನ್ಸರ್‌ಗೂ ಕಾರಣವಾಗಬಹುದು ಅಥವಾ ಪರಾವಲಂಬಿ ಜೀವಿಗಳಿಗೆ ಆಸರೆ ಒದಗಿಸಲು ಕಾರಣವಾಗಬಹುದು. ಆದರೆ ಆಲಿವ್ ಎಣ್ಣೆ ಈ ಸಾಧ್ಯತೆಗಳನ್ನು ನಿವಾರಿಸಿ ಕಲ್ಮಶಗಳು ಸುಲಭವಾಗಿ ಹೊರಹೋಗಲು ನೆರವಾಗುವುದಲ್ಲದೇ ಮಲಬದ್ಧತೆಯಿಂದಲೂ ರಕ್ಷಿಸುತ್ತದೆ.

ತ್ವಚೆಯ ಆರೋಗ್ಯ ಹೆಚ್ಚುತ್ತದೆ

ತ್ವಚೆಯ ಆರೋಗ್ಯ ಹೆಚ್ಚುತ್ತದೆ

ಆಲಿವ್ ಎಣ್ಣೆ ತ್ವಚೆಗೂ ಉತ್ತಮವಾಗಿದೆ. ಅಷ್ಟೇ ಅಲ್ಲ, ಕೂದಲು ಹಾಗೂ ಉಗುರುಗಳು ಆರೋಗ್ಯಕರವಾಗಿ ಬೆಳೆಯಲು ನೆರವಾಗುತ್ತದೆ. ಘಾಸಿಗೊಂಡ, ತುಂಡಾದ ಹಾಗೂ ಹೊಳಪನ್ನು ಕಳೆದುಕೊಂಡ ಉಗುರು ಕೂದಲುಗಳು ಆಲಿವ್ ಎಣ್ಣೆಯ ಪೋಷಣೆಯಿಂದ ಆರೋಗ್ಯಕರವಾಗಿ ಬೆಳೆಯುತ್ತವೆ.

ಯಕೃತ್ ಅನ್ನು ಸ್ವಚ್ಛಗೊಳಿಸಲು

ಯಕೃತ್ ಅನ್ನು ಸ್ವಚ್ಛಗೊಳಿಸಲು

ನಮ್ಮ ದೇಹದ ಕಲ್ಮಶಗಳನ್ನು ಹೊರಹಾಕುವ ಮೂಲಕ ಯಕೃತ್ ಮುಖ್ಯವಾದ ಕೆಲಸವನ್ನು ನಿರ್ವಹಿಸುತ್ತದೆ. ಆದರೆ ಸ್ವಚ್ಛಗೊಳಿಸಿದ ಕಲ್ಮಶಗಳನ್ನು ದೇಹದಿಂದ ಪೂರ್ಣವಾಗಿ ಹೊರಹಾಕಬೇಕಾಗಿರುವುದು ಸಹಾ ಅಗತ್ಯ. ಈ ಕೆಲಸವನ್ನು ಆಲಿವ್ ಎಣ್ಣೆ ಸಮರ್ಥವಾಗಿ ನಿರ್ವಹಿಸುತ್ತದೆ. ಇದಕ್ಕಾಗಿ ಪ್ರತಿದಿನ ಬೆಳಿಗ್ಗೆ ಎರಡು ಚಿಕ್ಕ ಚಮಚ ಆಲಿವ್ ಎಣ್ಣೆ ಹಾಗೂ 1/3ರಷ್ಟು ಲಿಂಬೆಯ ರಸವನ್ನು ಬೆರೆಸಿ ಕುಡಿಯಬೇಕು.

 ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಈ ಎಣ್ಣೆಯಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನ ಆಮ್ಲಗಳಿದ್ದು ಇವು ಆರೋಗ್ಯಕರ ಕೊಬ್ಬುಗಳಾಗಿವೆ. ಈ ಎಣ್ಣೆಯಿಂದ ತಯಾರಿಸಿದ ಆಹಾರವನ್ನು ಸೇವಿಸಿದಾಗ ಕೊಂಚ ಪ್ರಮಾಣದ ಬಳಿಕ ಹೊಟ್ಟೆ ತುಂಬಿದಂತಾಗುವ ಅನುಭವ ಪಡೆಯುವ ಮೂಲಕ ಅನಗತ್ಯವಾಗಿ ಹೆಚ್ಚಿನ ಪ್ರಮಾಣದ ಆಹಾರವನ್ನು ಸೇವಿಸುವುದರಿಂದ ತಡೆದಂತಾಗುತ್ತದೆ. ತನ್ಮೂಲಕ ತೂಕ ಇಳಿಕೆಗೆ ಸಹಕಾರಿಯಾಗಿದೆ. ಆದ್ದರಿಂದ ಎಲ್ಲೆಲ್ಲಿ ಎಣ್ಣೆ, ಬೆಣ್ಣೆಯನ್ನು ಬಳಸಬೇಕಾಗಿ ಬರುತ್ತದೆಯೋ ಅಲ್ಲೆಲ್ಲಾ ಆಲಿವ್ ಎಣ್ಣೆಯನ್ನು ಬಳಸುವ ಮೂಲಕ ರುಚಿಗೆ ಚ್ಯುತಿ ಬರದಂತೆ ಆರೋಗ್ಯಕರ ಆಹಾರವನ್ನು ಸೇವಿಸಿ ತೂಕವನ್ನು ಇಳಿಸಲು ಸಾಧ್ಯ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಇದರಲ್ಲಿರುವ ಕೊಬ್ಬಿನ ಆಮ್ಲಗಳು ರೋಗ ನಿರೋಧಕ ಶಕ್ತಿಯನ್ನು ಇನ್ನಷ್ಟು ಉತ್ತಮಗೊಳಿಸುವ ಮೂಲಕ ಹಲವಾರು ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತವೆ. ಅಷ್ಟೇ ಅಲ್ಲ, ನಮ್ಮ ದೇಹದಲ್ಲಿ ಕೆಲವೊಮ್ಮೆ ಎದುರಾಗುವ ಸ್ವರಕ್ಷಿತ ರೋಗಗಳು (autoimmune diseases), ಅಂದರೆ ದೇಹವನ್ನು ರಕ್ಷಿಸಬೇಕಾದ ವ್ಯವಸ್ಥೆಯೇ ಯಾವುದಾದರೊಂದು ಅಂಗಾಂಶವನ್ನು ಘಾಸಿಗೊಳಿಸುವ ರೋಗದ ಚಿಕಿತ್ಸೆಗೂ ನೆರವಾಗುತ್ತದೆ.

 ಹೃದಯವನ್ನು ರಕ್ಷಿಸುತ್ತದೆ

ಹೃದಯವನ್ನು ರಕ್ಷಿಸುತ್ತದೆ

ನಮ್ಮ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಥವಾ HDL ಪ್ರಮಾಣವನ್ನು ಹೆಚ್ಚಿಸಲು ಒಂದು ಸುಲಭ ಉಪಾಯವೆಂದರೆ ಆಲಿವ್ ಎಣ್ಣೆಯಲ್ಲಿ ತಯಾರಿಸಿದ ಆಹಾರಗಳನ್ನು ಸೇವಿಸುವುದು. ಈ ಆಹಾರಗಳಲ್ಲಿ ದ್ವಿದಳಧಾನ್ಯಗಳು, ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿರುವುದು ಅಗತ್ಯ.

ಉರಿಯೂತವನ್ನು ಕಡಿಮೆ ಮಾಡುತ್ತದೆ

ಉರಿಯೂತವನ್ನು ಕಡಿಮೆ ಮಾಡುತ್ತದೆ

ಸಾಮಾನ್ಯವಾಗಿ ಉರಿಯೂತವನ್ನು ಕಡಿಮೆ ಮಾಡಲು ವೈದ್ಯರು ibuprofen ಎಂಬ ಔಷಧಿಯನ್ನು ಸಲಹೆ ಮಾಡುತ್ತಾರೆ. ಆದರೆ ದಿನಕ್ಕೆ ಸುಮಾರು ಮೂರರಿಂದ ನಾಲ್ಕು ಚಿಕ್ಕ ಚಮಚ ಆಲಿವ್ ಎಣ್ಣೆಯನ್ನು ಸೇವಿಸುವ ಮೂಲಕ 10% ರಷ್ಟು ibuprofen ಪ್ರಮಾಣವನ್ನು ನೈಸರ್ಗಿಕವಾಗಿ ಪಡೆದಂತಾಗುತ್ತದೆ.

ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ

ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ

ಆಲಿವ್ ಎಣ್ಣೆ ರಕ್ತದಲ್ಲಿ ಕೊಲೆಸ್ಟ್ರಾಲ್ ಹಾಗೂ ಸಕ್ಕರೆಯ ಮಟ್ಟಗಳನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ಆಲಿವ್ ಎಣ್ಣೆ ಮಧುಮೇಹಿಗಳಿಗೂ ಹೃದಯದ ತೊಂದರೆ ಇರುವ ವ್ಯಕ್ತಿಗಳಿಗೂ ಸುರಕ್ಷಿತವಾಗಿದೆ.

ಮೆದುಳನ್ನು ರಕ್ಷಿಸುತ್ತದೆ

ಮೆದುಳನ್ನು ರಕ್ಷಿಸುತ್ತದೆ

ನಮ್ಮ ಮೆದುಳಿಗೆ ಅತಿ ಹೆಚ್ಚು ಆಮ್ಲಜನಕದ ಅವಶ್ಯಕತೆ ಇರುವ ಕಾರಣ ಹೃದಯದಿಂದ ಹೊರಡುವ ಹೆಚ್ಚಿನ ಪ್ರಮಾಣದ ರಕ್ತ ಮೆದುಳಿಗೇ ಸರಬರಾಜಾಗುತ್ತದೆ. ಆದರೆ ಇದೇ ಕಾರಣದಿಂದ ರಕ್ತದ ಮೂಲಕ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳೂ ಹೆಚ್ಚೇ ಮೆದುಳನ್ನು ತಲುಪುತ್ತವೆ. ಆದರೆ ಆಲಿವ್ ಎಣ್ಣೆ ಈ ಕಣಗಳ ಪ್ರಮಾಣವನ್ನು ಕಡಿಮೆಗೊಳಿಸಿ ಮೆದುಳನ್ನು ರಕ್ಷಿಸುತ್ತದೆ. ಅಷ್ಟು ಮಾತ್ರವಲ್ಲ, ಸ್ಮರಣ ಶಕ್ತಿಯನ್ನು ಉತ್ತಮಗೊಳಿಸುವುದು ಹಾಗೂ ಖಿನ್ನತೆ ಮೊದಲಾದ ತೊಂದರೆಗಳಿಂದಲೂ ರಕ್ಷಿಸುತ್ತದೆ.

ಸ್ತನಗಳನ್ನು ಬಿಗಿಯಾಗಿಸುತ್ತದೆ

ಸ್ತನಗಳನ್ನು ಬಿಗಿಯಾಗಿಸುತ್ತದೆ

ಚರ್ಮ ಸಡಿಲಗೊಂಡು ಜೋಲುಬಿದ್ದಿರುವ ಸ್ತನಗಳನ್ನು ಮತ್ತೆ ಹಿಂದಿನ ರೂಪಕ್ಕೆ ತರಲೂ ಆಲಿವ್ ಎಣ್ಣೆ ಉಪಯುಕ್ತವಾಗಿದೆ. ಪ್ರತಿದಿನ ಸ್ವತಃ ತಮ್ಮ ಸ್ತನಗಳನ್ನು ವೃತ್ತಾಕಾರದಲ್ಲಿ, ಹೊರಭಾಗದಿಂದ ಒಳಭಾಗಕ್ಕೆ ಬರುವಂತೆ ಮಸಾಜ್ ಮಾಡಿಕೊಳ್ಳುವ ಮೂಲಕ ಚರ್ಮದ ಸೆಳೆತ ಹೆಚ್ಚಾಗುತ್ತಾ ಹೋಗುತ್ತದೆ. ನಿತ್ಯವೂ ಮಾಡುವ ಮಸಾಜ್ ಮೂಲಕ ಕೇವಲ ಮೂವತ್ತು ದಿನಗಳಲ್ಲಿ ಬಿಗಿಯಾಗಿರುವ ಹಾಗೂ ಆರೋಗ್ಯಕರ ಸ್ತನಗಳನ್ನು ಪಡೆಯಬಹುದು.

ಮಧುಮೇಹದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ

ಮಧುಮೇಹದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ

ಆಲಿವ್ ಎಣ್ಣೆಯಲ್ಲಿ monosaturated fat ಎಂಬ ತೈಲ ಅಂಶವಿದ್ದು ಇದು ಮಧುಮೇಹ ಬರುವುದನ್ನು ತಡೆಗಟ್ಟುತ್ತದೆ. ಸಾಮಾನ್ಯವಾಗಿ ಮಧುಮೇಹ ಅನುವಂಶಿಕವಾಗಿ ಬರುವ ಸಾಧ್ಯತೆ ಹೆಚ್ಚು. ಈ ಸಂದರ್ಭದಲ್ಲಿ ಪ್ರತಿದಿನ ಎರಡು ಚಮಚದಷ್ಟು ಆಲಿವ್ ಎಣ್ಣೆಯನ್ನು ಆಹಾರದೊಡನೆ ಸೇವಿಸಿದರೆ ಮಧುಮೇಹ ಬರುವ ಸಾಧ್ಯತೆ ಶೇಖಡಾ ಐವತ್ತರಷ್ಟು ಕಡಿಮೆಯಾಗುತ್ತದೆ. ಈ ಆಂಕಿ ಅಂಶಗಳನ್ನು Californian Health Agency ಧೃಢೀಕರಿಸಿದೆ.

ನಿಮ್ಮ ಚಟುವಟಿಕೆಗಳನ್ನು ಚೂಟಿಯಾಗಿಸುತ್ತದೆ

ನಿಮ್ಮ ಚಟುವಟಿಕೆಗಳನ್ನು ಚೂಟಿಯಾಗಿಸುತ್ತದೆ

ಕ್ರಿಕೆಟ್ ಆಟದಲ್ಲಿ ಬಲಾಢ್ಯರು ಬ್ಯಾಟಿಂಗ್ ಮಾಡಿದರೆ ಬರೆಯ ಸಿಕ್ಸರ್ ಹೊಡೆದು ಪಂದ್ಯ ಗೆಲ್ಲಬಹುದಲ್ಲಾ? ಈ ಪ್ರಶ್ನೆಗೆ ಯಾವುದೇ ಕ್ರಿಕೆಟ್ ಪ್ರೇಮಿಯ ಬಳಿ ಸಿದ್ಧ ಉತ್ತರವಿದೆ. ಅದೆಂದರೆ ತಕ್ಷಣದ ನರಪ್ರಚೋದನೆಯ ಪ್ರತಿಕ್ರಿಯೆ (neural reflex system). ಅಂದರೆ ನಿಮ್ಮ ಶರೀರದ ಪ್ರತಿಯೊಂದು ಜೀವಕೋಶ ಮೆದುಳಿನ ಸೂಚನೆಗಳನ್ನು ಕ್ಷಣಾರ್ಧದಲ್ಲಿ ಗ್ರಹಿಸಿ ಆ ಪ್ರಕಾರ ಕಾರ್ಯ ನಿರ್ವಹಿಸಬೇಕು. ಹಾಗಾಗಿ ಕ್ರಿಕೆಟ್ ಸೇರಿ ಯಾವುದೇ ಆಟದಲ್ಲಿ ಮಾಂಸಖಂಡಗಳ ಬಲಾಢ್ಯತೆಗಿಂತ ಚುರುಕಾದ ಚಲನವಲನ ಮುಖ್ಯ. ಇದಕ್ಕಾಗಿ ಜೀವಕೋಶಗಳಿಂದ ಮೆದುಳಿಗೆ ತಲುಪುವ ಹಾಗೂ ಮೆದುಳಿನಿಂದ ತಿರುಗಿ ಜೀವಕೋಶಗಳಿಗೆ ತಲುಪುವ ಸೂಚನೆಗಳು ಮಿಂಚಿನ ವೇಗದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಆಲಿವ್ ಎಣ್ಣೆಯಲ್ಲಿ ಓಲಿಕ್ ಆಮ್ಲ (Oleic Acid) ಎಂಬ ಪೋಷಕಾಂಷವಿದೆ. ಇದು ನರಗಳ ಹೊರಕವಚದಲ್ಲಿ ಮೈಲಿನ್ ಎಂಬ ಕವಚವನ್ನು (myelin sheath) ಸೃಷ್ಟಿಸುತ್ತದೆ. ಈ ಕವಚದ ಮೂಲಕ ಮೆದುಳಿನ ಸೂಚನೆಗಳು ಅದ್ಭುತವಾದ ವೇಗದಲ್ಲಿ ತಮ್ಮ ಗುರಿಯನ್ನು ತಲುಪುತ್ತವೆ. ಪರಿಣಾಮ, ಈಗ ನಿಮಗೆ ಸ್ಪಷ್ಟವಾಗಿ ಅರ್ಥವಾಗಿದೆ.

ದೇಹದಲ್ಲಿ ಕಂಡುಬರುವ ಕೊಬ್ಬಿನಿಂದ ರಕ್ಷಿಸುತ್ತದೆ

ದೇಹದಲ್ಲಿ ಕಂಡುಬರುವ ಕೊಬ್ಬಿನಿಂದ ರಕ್ಷಿಸುತ್ತದೆ

ನಮ್ಮ ದೇಹದ ಪ್ರತಿ ಜೀವಕೋಶಗಳು ಸತತವಾಗಿ ಮರುಹುಟ್ಟು ಪಡೆಯುತ್ತಾ ಇರುತ್ತವೆ. ಕೆಲವು ವೈಪರೀತ್ಯಗಳ ಕಾರಣ ಸತ್ತ ಜೀವಕೋಶಗಳ ಸಮಪ್ರಮಾಣದಲ್ಲಿ ಹೊಸ ಜೀವಕೋಶಗಳು ಹುಟ್ಟದೇ ಇರುವ ಕಾರಣ ದೇಹ ಸೊರಗುತ್ತದೆ. ಇದರ ಮೂಲಕ ಪಾರ್ಕಿನ್ಸನ್ ರೋಗ, ಆಲ್ಝೀಮರ್ ರೋಗ, atherosclerosis ಮೊದಲಾದ ಕಾಯಿಲೆಗಳು ಪ್ರಾರಂಭವಾಗುತ್ತವೆ. ಆಲಿವ್ ಎಣ್ಣೆಯಲ್ಲಿ monosaturated fat ಎಂಬ ಕೊಬ್ಬು ಜೀವಕೋಶಗಳು ಸಮಪ್ರಮಾಣದಲ್ಲಿ ಮರುಹುಟ್ಟು ಪಡೆಯಲು ಸಹಕರಿಸುವುದರಿಂದ ದೇಹದ ಆರೋಗ್ಯ ಉತ್ತಮಗೊಳ್ಳುತ್ತದೆ.

ಖಿನ್ನತೆಯನ್ನು ತಡೆಯುತ್ತದೆ ಹಾಗೂ ಖಿನ್ನತೆಯಿಂದ ಹೊರಬರಲು ಸಹಕರಿಸುತ್ತದೆ

ಖಿನ್ನತೆಯನ್ನು ತಡೆಯುತ್ತದೆ ಹಾಗೂ ಖಿನ್ನತೆಯಿಂದ ಹೊರಬರಲು ಸಹಕರಿಸುತ್ತದೆ

ಆಲಿವ್ ಎಣ್ಣೆಯಲ್ಲಿ oleocanthal ಎಂಬ ಪೋಷಕಾಂಶವಿದೆ. ಇದು ಖಿನ್ನತೆಗೆ ಕಾರಣವಾಗುವ ರಸಾಯನಿಕಗಳನ್ನು ಉತ್ಪತ್ತಿಯಾಗದಂತೆ ತಡೆಯುತ್ತದೆ, ಅಲ್ಲದೇ ಈಗಾಗಲೇ ಉತ್ಪತ್ತಿಯಾಗಿರುವ ಕಣಗಳನ್ನು ನೈಸರ್ಗಿಕವಾಗಿ ದೇಹದಿಂದ ಹೊರಹೋಗಲು ಸಹಕರಿಸುತ್ತದೆ. ಪರಿಣಾಮವಾಗಿ ಖಿನ್ನತೆಯಿಂದ ಬಳಲುತ್ತಿದ್ದ ಮನ ಈಗ ನಿರಾಳವಾಗುತ್ತದೆ, ಜೀವನ ಸುಂದರವಾಗಿ ಕಾಣತೊಡಗುತ್ತದೆ, ಸುತ್ತಮುತ್ತ ಸಂತೋಷ ಮೂಡುತ್ತದೆ.

ಮಲಬದ್ಧತೆಯಾಗುವುದನ್ನು ತಡೆಯುತ್ತದೆ

ಮಲಬದ್ಧತೆಯಾಗುವುದನ್ನು ತಡೆಯುತ್ತದೆ

ಪಿತ್ತದಿಂದ ಉತ್ಪತ್ತಿಯಾಗುವ ಪಿತ್ತರಸ ನಮ್ಮ ಕರುಳುಗಳ ಒಳಗಣ ಚಲನೆಗೆ ನೈಸರ್ಗಿಕವಾದ ನುಣುಪನ್ನು ನೀಡುತ್ತದೆ. ಆಲಿವ್ ಎಣ್ಣೆಯಲ್ಲಿರುವ ಕಬ್ಬಿಣ,ವಿಟಮಿನ್ ಇ ಮತ್ತು ಕೆ, ಒಮೆಗಾ 3 ಮತ್ತು 6 fatty acid ನಂತಹ ಪ್ರಮುಖ ಪೋಷಕಾಂಶಗಳು ಸಮಗ್ರ ಜೀರ್ಣಕ್ರಿಯೆಯಲ್ಲಿ ಸಹಕರಿಸಿ ಮಲಬದ್ಧತೆಯಾಗುವುದನ್ನು ತಡೆಯುತ್ತದೆ.

English summary

Why You Must Have Olive Oil On An Empty Stomach Every Day

Olive oil is chocked with macronutrients, fatty acids and vitamins. It contains monounsaturated, heart-healthy fats. It is loaded with antioxidants that can help protect the heart and blood cells from damage. Olive oil is known for its cardiovascular benefits. Drinking olive oil every day is not only good for the heart, but also aids with weight loss and pain relief. As this oil is high in calories, you must drink this in moderation, with any other supplement or consult your doctor before taking it. An olive oil-enriched diet also facilitates weight loss.
X
Desktop Bottom Promotion