For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಪ್ರತಿ ದಿನ ಸಣ್ಣ ತುಂಡು ಬೆಲ್ಲ ತಿನ್ನಿ! ಆರೋಗ್ಯಕ್ಕೆ ಒಳ್ಳೆಯದು...

By Arshad
|

ಚಳಿಗಾಲ ಬಂತೆಂದರೆ ನಾವೆಲ್ಲಾ ಚಳಿಯಿಂದ ರಕ್ಷಣೆ ಪಡೆಯಲು ಬಿಸಿ ಬಿಸಿ ಕಾಫಿ, ಬೆಚ್ಚಗಿನ ಬಟ್ಟೆ, ಮೆಣಸಿನ ಬೋಂಡಾ ತಿನ್ನುವ ಜೊತೆಗೇ ಆತ್ಮೀಯರೊಂದಿಗೆ ಹೊರಹೋಗುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುತ್ತೇವೆ. ಕೆಲವೊಮ್ಮೆ ಚಳಿ ತೀರಾ ಹೆಚ್ಚಾದಾಗ ಹಾಗೂ ಈ ಥಟ್ಟನೇ ಬದಲಾಗುವ ವಾತಾವರಣದ ಕಾರಣ ನಮ್ಮಲ್ಲಿ ಹಲವರಿಗೆ ಥಟ್ಟನೇ ಆರೋಗ್ಯದಲ್ಲಿಯೂ ಏರುಪೇರು ಕಂಡುಬರಬಹುದು. ಅಲ್ಲದೇ ಚಳಿಗಾಲದ ಕುಳಿರ್ಗಾಳಿಯಲ್ಲಿ ತೇಲಿ ಬರುವ ಹೊಸ ಹೊಸ ಬಗೆಯ ವೈರಸ್ಸುಗಳು ಹೊಸ ಹೊಸ ಕಾಯಿಲೆಗಳನ್ನೂ ಅಂಟಿಸುತ್ತವೆ.

ಸೋರುವ ಮೂಗು, ಕೆಮ್ಮು, ನೆಗಡಿ, ಜ್ವರ ಮೊದಲಾದವು ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಕಾಯಿಲೆಗಳು ಚಳಿಗಾಲದ ತಿಂಗಳುಗಳಲ್ಲಿ ಹೊರಗಿನ ಆಹ್ಲಾದಕರ ವಾತಾವರಣವನ್ನು ಸವಿಯದಂತೆ ಮಾಡಿಬಿಡುತ್ತವೆ. ವಿಶೇಷವಾಗಿ ವರ್ಷಾಂತ್ಯದಲ್ಲಿ ಆಗಮಿಸುವ ಕ್ರಿಸ್ಮಸ್ ಹಾಗೂ ಹೊಸವರ್ಷದ ಸಂಭ್ರಮಕ್ಕೂ ತಣ್ಣೀರು ಎರಚುತ್ತವೆ. ಉದಾಹರಣೆಗೆ ಚಳಿಗಾಲದಲ್ಲಿ ನಿಮ್ಮನ್ನು ಭಾರೀ ಶೀತ ಅಥವಾ ಫ್ಲೂ ಜ್ವರ ಆವರಿಸಿದರೆ ಹಾಗೂ ಕ್ರಿಸ್ಮಸ್ ಅಥವಾ ಹೊಸವರ್ಷಕ್ಕೆ ಕೆಲವೇ ದಿನಗಳಿವೆ ಎಂದಿದ್ದಾಗ ಹೊರಹೋಗಲು ಸಾಧ್ಯವಾಗದೇ ಮನೆಯಲ್ಲಿ ಕುಳಿತಿರುವುದು ಅಸಹನೀಯವಾಗುತ್ತದೆ. ಆದ್ದರಿಂದ ಚಳಿಗಾಲ ಬಂದ ಕೂಡಲೇ ಸೂಕ್ತ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವ ಮೂಲಕ ಚಳಿಗಾಲದಲ್ಲಿ ಎದುರಾಗುವ ತೊಂದರೆಗಳಿಂದ ರಕ್ಷಣೆ ಪಡೆಯಬಹುದು. ಇದಕ್ಕೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಆದಷ್ಟು ಶಕ್ತಿಯುತವಾಗಿಸುವುದು ಅಗತ್ಯ.

ಸೌಂದರ್ಯ ಇಮ್ಮಡಿಗೊಳಿಸುವ ಸಿಹಿ ಸಿಹಿ ಬೆಲ್ಲ!

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಮ್ಮ ಅಡುಗೆ ಮನೆಯಲ್ಲಿಯೇ ಹಲವಾರು ಸಾಮಾಗ್ರಿಗಳಿವೆ. ಹಿಂದಿನ ದಿನಗಳಲ್ಲಿ ಇಂದಿನಂತೆ ಆಧುನಿಕ ಔಷಧಿಗಳಿರಲಿಲ್ಲದಿದ್ದಾಗ ನಮ್ಮ ಹಿರಿಯರು ನೈಸರ್ಗಿಕ ಸಾಮಾಗ್ರಿಗಳನ್ನೇ ಉಪಯೋಗಿಸಿ ತಮ್ಮ ಆರೋಗ್ಯವನ್ನು ಉತ್ತಮವಾಗಿಸಿರಿಕೊಳ್ಳುತ್ತಿದ್ದರು. ನಮ್ಮ ನಿಸರ್ಗ ನೀಡಿರುವ ಈ ಸಾಮಾಗ್ರಿಗಳೇ ಚಳಿಗಾಲದಲ್ಲಿ ಆರೋಗ್ಯವನ್ನು ಸಮರ್ಥವಾಗಿ ಕಾಪಾಡುತ್ತವೆ ಎಂಬುದಕ್ಕೆ ಇದೇ ಸಾಕ್ಷಿ. ಈ ಸಾಮಾಗ್ರಿಗಳಲ್ಲಿ ಹಿಂದಿನವರ ಸಿಹಿಯಾಗಿದ್ದ ಬೆಲ್ಲವೂ ಒಂದು. ಬೆಲ್ಲವನ್ನು ಕೇವಲ ಕಾಫಿ ಟೀ ಸಿಹಿತಿಂಡಿಗಳಲ್ಲಿ ಮಾತ್ರವಲ್ಲ, ಸಾಂಬಾರು ಹಾಗೂ ಇತರ ಖಾರವಾದ ಖಾದ್ಯಗಳ ರುಚಿ ಹೆಚ್ಚಿಸಲೂ ಬಳಸಲಾಗುತ್ತದೆ.

ಗರ್ಭಿಣಿಯರ ಆರೋಗ್ಯಕ್ಕೆ ಬೇಕು, ಒಂದು ತುಂಡು ಬೆಲ್ಲ..!

ಬೆಲ್ಲವನ್ನೂ ಕಬ್ಬಿನ ರಸದಿಂದಲೇ ತಯಾರಿಸಲಾಗಿದ್ದರೂ ಇದರಲ್ಲಿ ಸಕ್ಕರೆಗಿಂತ ಬಹಳ ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳಿವೆ. ಇದೇ ಕಾರಣಕ್ಕೆ ತೂಕ ಇಳಿಸಲು ಯತ್ನಿಸುವ ವ್ಯಕ್ತಿಗಳಿಗೆ ಸಕ್ಕರೆಯ ಬದಲು ಬೆಲ್ಲವನ್ನು ಬಳಸುವ ಮೂಲಕ ಆಹಾರದ ರುಚಿಯಲ್ಲಿ ಬದಲಾವಣೆ ಮಾಡದೇ ಶೀಘ್ರವಾಗಿ ಇಳಿಸಲು ನೆರವಾಗುತ್ತದೆ. ತೂಕದ ಬಗ್ಗೆ ಅಸ್ಥೆಯುಳ್ಳವರಿಗೆ ಮಾತ್ರವಲ್ಲ, ಮಧುಮೇಹಿಗಳಿಗೂ ಬೆಲ್ಲ ಉತ್ತಮ ಆಯ್ಕೆಯಾಗಿದ್ದು ಯಾವುದೇ ಭಯವಿಲ್ಲದೇ ಸೇವಿಸಬಹುದು. ಬನ್ನಿ, ಬೆಲ್ಲದ ಸೇವನೆಯಿಂದ ಯಾವ ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ...

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ವಿಶ್ವದಾದ್ಯಂತ ನಡೆಸಿದ ಹಲವಾರು ಅಧ್ಯಯನಗಳಲ್ಲಿ ಕಂಡುಕೊಂಡಂತೆ ಚಳಿಗಾಲದಲ್ಲಿ ನಮ್ಮ ರೋಗ ನಿರೋಧಕ ಶಕ್ತಿ ಉಡುಗುತ್ತದೆ. ತಾಪಮಾನ ಕಡಿಮೆ ಇದ್ದಾಗ ನಮ್ಮ ದೇಹ ಹೆಚ್ಚು ಬಿಸಿಯನ್ನು ಉತ್ಪಾದಿಸಬೇಕಾಗುತ್ತದೆ ಹಾಗೂ ಸಾಮಾನ್ಯ ತಾಪಮಾನವನ್ನು ಉಳಿಸಿಕೊಳ್ಳಲು ನಮ್ಮ ಜೀವಕೋಶಗಳು ಸತತವಾಗಿ ಶ್ರಮಿಸಬೇಕಾಗುತ್ತದೆ. ಈಗ ನಮ್ಮ ದೇಹದ ಮೇಲೆ ಧಾಳಿಯಿಡುವ ವೈರಸ್ಸುಗಳಿಗೆ ಒಳಗೆ ನುಸುಳಲು ಅವಕಾಶ ದೊರಕುವ ಮೂಲಕ ಶೀತ ನೆಗಡಿ ಎದುರಾಗುತ್ತವೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಬೆಲ್ಲದಲ್ಲಿ ಸತುವಿನ ಸಹಿತ ಹಲವಾರು ಪೋಷಕಾಂಶಗಳಿದ್ದು ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಜೊತೆಯಾಗಿ ಕಾರ್ಯನಿರ್ವಹಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಈ ಮೂಲಕ ದೇಹ ಹಲವಾರು ಕಾಯಿಲೆಗಳ ವಿರುದ್ಧ ನೈಸರ್ಗಿಕವಾದ ರಕ್ಷಣೆ ಪಡೆಯುತ್ತದೆ ಹಾಗೂ ಚಳಿಗಾಲದಲ್ಲಿಯೂ ದೇಹವನ್ನು ಆರೋಗ್ಯಕರವಾಗಿಸಲು ನೆರವಾಗುತ್ತದೆ.

ಶ್ವಾಸಕೋಶದ ಕ್ಷಮತೆಯನ್ನು ಹೆಚ್ಚಿಸುತ್ತದೆ

ಶ್ವಾಸಕೋಶದ ಕ್ಷಮತೆಯನ್ನು ಹೆಚ್ಚಿಸುತ್ತದೆ

ಚಳಿಗಾಲದಲ್ಲಿ ಶೀತ, ಕೆಮ್ಮು,ನೆಗಡಿ, ಉಸಿರು ಕಟ್ಟುವುದು, ಗಂಟಲ ಕೆರೆತ ಮೊದಲಾದವು ಸಾಮಾನಯ್ವಾಗಿ ಎದುರಾಗುತ್ತದೆ. ವಿಶೇಷವಾಗಿ ಮಕ್ಕಳು ಮತ್ತು ವೃದ್ದರಲ್ಲಿ ಚಳಿಗಾಲದ ಕಾಯಿಲೆಗಳು ಹೆಚ್ಚು. ಇದಕ್ಕೆ ಪ್ರಮುಖ ಕಾರಣ ತಣ್ಣಗಿನ ಗಾಳಿಯನ್ನು ಎಳೆದುಕೊಳ್ಳುವ ಮೂಲಕ ದೇಹವೂ ತಣ್ಣಗಾಗುತ್ತದೆ ಹಾಗೂ ಶ್ವಾಸಕೋಶದ ಕ್ಷಮತೆ ಕಡಿಮೆಯಾಗುತ್ತದೆ ಹಾಗೂ ಈ ಮೂಲಕ ಶ್ವಾಸಕ್ರಿಯೆಯೂ ಬಾಧೆಗೊಳಗಾಗುತ್ತದೆ.

ಶ್ವಾಸಕೋಶದ ಕ್ಷಮತೆಯನ್ನು ಹೆಚ್ಚಿಸುತ್ತದೆ

ಶ್ವಾಸಕೋಶದ ಕ್ಷಮತೆಯನ್ನು ಹೆಚ್ಚಿಸುತ್ತದೆ

ನಿಯಮಿತವಾಗಿ ಬೆಲ್ಲವನ್ನು ಸೇವಿಸುತ್ತಾ ಬರುವ ಮೂಲಕ ದೇಹದ ತಾಪಮಾನವನ್ನು ಚಳಿಗಾಲದಲ್ಲಿಯೂ ಬಿಸಿಯಾಗಿಯೇ ಇರಿಸಿಕೊಳ್ಳುವ ಮೂಲಕ ಶ್ವಾಸಕೋಶಗಳ ಕ್ಷಮತೆ ಉಡುಗದಂತೆ ನೋಡಿಕೊಳ್ಳಬಹುದು. ಅಲ್ಲದೇ ಬೆಲ್ಲದಲ್ಲಿ ಅಲರ್ಜಿ ನಿವಾರಕ ಗುಣವೂ ಇರುವುದರಿಂದ ಗಾಳಿಯ ಮೂಲಕ ದೇಹವನ್ನು ಪ್ರವೇಶಿಸುವ ಅಲರ್ಜಿಕಾರಕ ಕಣಗಳಿಂದ ರಕ್ಷಣೆಯನ್ನು ಪಡೆಯಬಹುದು.

ಸಂಧಿವಾತದಿಂದ ರಕ್ಷಿಸುತ್ತದೆ

ಸಂಧಿವಾತದಿಂದ ರಕ್ಷಿಸುತ್ತದೆ

ಒಂದು ವೇಳೆ ನಿಮಗೆ ಕೆಲಕಾಲದಿಂದ ಸಂಧಿವಾತ ಅಥವಾ ಸ್ನಾಯುಗಳ ನೋವು ಕಾಡುತ್ತಿದ್ದರೆ ಈ ನೋವುಗಳು ಚಳಿಗಾಲದಲ್ಲಿ ಅತಿ ಹೆಚ್ಚಾಗುವುದನ್ನು ನೀವು ಅನುಭವಿಸಿಯೇ ಇರುತ್ತೀರಿ. ಏಕೆಂದರೆ ಚಳಿಗಾಲದಲ್ಲಿ ಕಡಿಮೆಯಾಗುವ ರಕ್ತಪರಿಚಲನೆ ಸಂಧಿವಾತ ಹಾಗೂ ಸ್ನಾಯುಗಳ ನೋವು ಇರುವೆಡೆ ಪೋಷಕಾಂಶಗಳು ಕಡಿಮೆಯಾಗಿ ನೋವು ಇನ್ನಷ್ಟು ನೋವು ಹೆಚ್ಚುತ್ತದೆ.

ಸಂಧಿವಾತದಿಂದ ರಕ್ಷಿಸುತ್ತದೆ

ಸಂಧಿವಾತದಿಂದ ರಕ್ಷಿಸುತ್ತದೆ

ಈ ಸಮಯದಲ್ಲಿ ನಿತ್ಯವೂ ಒಂದು ತುಂಡು ಸಾವಯವ ವಿಧಾನದಿಂದ ತಯಾರಿಸಿದ ಬೆಲ್ಲವನ್ನು ಬಾಯಲ್ಲಿಟ್ಟು ಕೊಂಡು ನಿಧಾನವಾಗಿ ಚೀಪಿ ನುಂಗುವ ಮೂಲಕ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು ನೆರವಾಗುತ್ತದೆ ಹಾಗೂ ತನ್ಮೂಲಕ ಸಂಧಿವಾತ ಹಾಗೂ ಸ್ನಾಯುಗಳ ನೋವಿನಿಂದ ರಕ್ಷಿಸುತ್ತದೆ. ಇದರೊಂದಿಗೇ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮೂಳೆಗಳ ಗಂಟುಗಳಿಗೆ ರಕ್ತಪರಿಚಲನೆಯನ್ನು ಉತ್ತಮಗೊಳಿಸುವ ಮೂಲಕ ಸಂಧಿವಾತದ ನೋವಿಗೆ ಪರಿಹಾರ ಒದಗಿಸುತ್ತದೆ.

 ಬೆಲ್ಲದ ಇತರ ಉಪಯೋಗಗಳು

ಬೆಲ್ಲದ ಇತರ ಉಪಯೋಗಗಳು

ಬೆಲ್ಲ ನೋಡಲು ಸುಂದರವಾಗಿಲ್ಲದ ಕಾರಣದಿಂದ ಕೆಲವರು ಇದನ್ನು ನೇರವಾಗಿ ತಿನ್ನಲು ಇಷ್ಟಪಡುವುದಿಲ್ಲ. ಆದರೆ ಬೆಲ್ಲ ಸೇರಿಸಿದ ಹಾಲನ್ನು ಕುಡಿಯಲು ತೊಂದರೆಯಾಗಲಾರದು. ಬನ್ನಿ, ಈ ಬೆಲ್ಲ ಸೇರಿಸಿದ ಹಾಲಿನ ಉಪಯೋಗಗಳ ಬಗ್ಗೆ ಅರಿಯೋಣ...

ಬೆಲ್ಲದ ಇತರ ಉಪಯೋಗಗಳು

ಬೆಲ್ಲದ ಇತರ ಉಪಯೋಗಗಳು

1) ಅಸ್ತಮಾ ಮತ್ತು ಬ್ರಾಂಕೈಟಿಸ್ ರೋಗಗಳಿಗೆ: ಕರಿ ಎಳ್ಳು ಮತ್ತು ಬೆಲ್ಲದ ಉಂಡೆ ಮಾಡಿ ನಿತ್ಯವೂ ಸೇವಿಸಿ

2) ನಿಃಶಕ್ತಿಗೆ: ಒಂದು ಚಮಚ ಬೆಲ್ಲದ ಪುಡಿ ಮತ್ತು ಹಾಲನ್ನು ಬೆರೆಸಿ ನಿತ್ಯವೂ ಎರಡು ಬಾರಿ ಒಂದು ಚಿಕ್ಕ ಚಮಚದಷ್ಟು ಸೇವಿಸಿ

1) ಅಸ್ತಮಾ ಮತ್ತು ಬ್ರಾಂಕೈಟಿಸ್ ರೋಗಗಳಿಗೆ: ಕರಿ ಎಳ್ಳು ಮತ್ತು ಬೆಲ್ಲದ ಉಂಡೆ ಮಾಡಿ ನಿತ್ಯವೂ ಸೇವಿಸಿ

2) ನಿಃಶಕ್ತಿಗೆ: ಒಂದು ಚಮಚ ಬೆಲ್ಲದ ಪುಡಿ ಮತ್ತು ಹಾಲನ್ನು ಬೆರೆಸಿ ನಿತ್ಯವೂ ಎರಡು ಬಾರಿ ಒಂದು ಚಿಕ್ಕ ಚಮಚದಷ್ಟು ಸೇವಿಸಿ

3) ಸ್ನಾಯುಗಳ ಶಕ್ತಿ ಹೆಚ್ಚಲು: ನಿತ್ಯವೂ ಬೆಲ್ಲ ಸೇರಿಸಿದ ಹಾಲನ್ನು ಬೆಳಿಗ್ಗೆ ಮತ್ತು ರಾತ್ರಿ ಕುಡಿಯಿರಿ.

4) ಸುಸ್ತು ನಿವಾರಿಸಲು: ನಿತ್ಯವೂ ದಿನಕ್ಕೆ ಮೂರು ಹೊತ್ತಿನಲ್ಲಿ ಒಂದೊಂದು ಚಿಕ್ಕ ಚಮಚ ಬೆಲ್ಲದ ಪುಡಿ ನೇರವಾಗಿ ಸೇವಿಸಿ

5) ಮಾಸಿಕ ದಿನಗಳ ಏರುಪೇರು ತಪ್ಪಿಸಲುನಿತ್ಯವೂ ಒಂದು ಚಿಕ್ಕ ಚಮಚ ಬೆಲ್ಲವನ್ನು ನೇರವಾಗಿ ರಾತ್ರಿ ಮಲಗುವ ಮುನ್ನ ಸೇವಿಸಿ.

ಹಾಲಿಗೆ ಬೆಲ್ಲ ಹಾಕಿ ಕುಡಿಯಿರಿ, ಆರೋಗ್ಯ ಪಡೆಯಿರಿ

English summary

Why You Must Consume Jaggery During The Winter Season!

Most of us would know about jaggery, the sweet ingredient which is used to prepare various sweets and is added to certain dishes to add a sweet taste. Jaggery is made from concentrated cane juice and contains very less calories and fats, compared to white sugar. So, jaggery is used by people trying to lose weight, by fitness-conscious people and even diabetic patients who can use jaggery without fear! Now, have a look at how jaggery can help our health during the winter months.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more