For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಪಾಲಕ್ ಸೊಪ್ಪು ಮತ್ತು ಆವಕಾಡೊ ಹಣ‍್ಣಿನ ಮಹತ್ವ

By Suhani B
|

ನಮ್ಮ ಆರೋಗ್ಯ ದೃಷ್ಟಿಯಿಂದ ಜೀವ ಸತ್ವಗಳುಳ‍್ಳ ಆಹಾರ ಸೇವನೆ ಅತೀ ಮುಖ್ಯ. ಆರೋಗ್ಯಕ್ಕೆ ಬೇಕಾದಂತಹ ವಿಟಮಿನ್‌ಗಳು ಸೊಪ್ಪು ತರಕಾರಿ ಮತ್ತು ಹಣ‍್ಣುಗಳಲ್ಲಿ ಹೇರಳವಾಗಿ ದೊರಕುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಲ್ಯುಟೀನ್ (ಮೊಟ್ಟೆಯ ಭಾಗದ ಹಳದಿ ಲೋಳೆ) ಭರಿತ ಆಹಾರಗಳು ಪಾಲಕ್ ಸೊಪ್ಪು ಮತ್ತು ಆವಕಾಡೊಗಳಂತಹಗಳಲ್ಲಿ ನಮಗೆ ಅಗತ್ಯವಾದ ವಿಟಮಿನ್ ಮತ್ತು ಪ್ರೋಟೀನ್‌ಗಳು ಜಾಸ್ತಿಯಿದ್ದು, ಇದು ನಮ್ಮ ಅರಿವಿನ ಅಂಶ ಹಾಗೂ ಕೌಶಲ್ಯಗಳಿಗೆ ಸಹ ಒಳ್ಳೆಯದು.

ಲ್ಯುಟೀನ್ ಒಂದು ಪೌಷ್ಠಿಕಾಂಶವಾಗಿದ್ದು, ದೇಹವು ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ, ಆದ್ದರಿಂದ ಲ್ಯುಟೀನ್ ಹೊಂದಿರುವ ಆಹಾರದ ಮೂಲಕ ಅವುಗಳನ್ನು ಪಡೆಯಬೇಕು. ಆವಕಾಡೊ, ಕೇಲ್, ಕ್ಯಾರೆಟ್ ಮತ್ತು ಮೊಟ್ಟೆಗಳ ಸತ್ವವನ್ನು ಹೊಂದಿರುವ ಹಸಿರು ಎಲೆಗಳ ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲ್ಯುಟೀನ್ ಕಂಡುಬರುತ್ತದೆ.

Spinach

ನಿಯತಕಾಲಿಕದಲ್ಲಿ ಪ್ರಕಟವಾದ ಒಂದು ಇತ್ತೀಚಿನ ಅಧ್ಯಯನವು - ಫ್ರಾಂಟಿಯರ್ಸ್ ಏಜಿಂಗ್ ನ್ಯೂರೋಸೈನ್ಸ್, 25 ರಿಂದ 45 ರ ವಯಸ್ಸಿನ 60 ವಯಸ್ಕರನ್ನು ವಿಶ್ಲೇಷಿಸಿತು, ಮತ್ತು ಹೆಚ್ಚಿನ ಮಟ್ಟದ ಲ್ಯುಟೀನನ್ನು ಮಧ್ಯವಯಸ್ಕರಲ್ಲಿ ಕಂಡು ಬಂದಿತು. ಇವರನ್ನು ಇವರಿಗಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳೊಂದಿಗೆ ಹೋಲಿಸಿದಾಗ ಹೆಚ್ಚು ಸಮಾನವಾಗಿ ನರವ್ಯೂಹದ ಪ್ರತಿಕ್ರಿಯೆಗಳನ್ನು ಕಂಡುಕೊಂಡರು. ಗೆಳೆಯರೇ, ಇದಲ್ಲದೆ ಅರ್ಬಾನಾ-ಚಾಂಪೈನ್ನಲ್ಲಿರುವ ಇಲಿನಾಯ್ಸ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಲ್ಯುಟೀನ್ ಯುಕ್ತ ಸಮೃದ್ಧ ಆಹಾರಗಳ ಸೇವನೆ ಮಾಡಿದ ಮಧ್ಯ ವಯಸ್ಕ ವ್ಯಕ್ತಿಗಳಲ್ಲಿ ಒಟ್ಟಾರೆ ಜ್ಞಾನಗ್ರಹಣ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

"ಜನರು ವಯಸ್ಸಾದಂತೆ, ಅವರು ವಿಶಿಷ್ಟವಾದ ಇಳಿಮುಖತೆಯನ್ನು ಅನುಭವಿಸುತ್ತಾರೆ, ಆದರೆ ಸಂಶೋಧನೆಯು ಈ ಪ್ರಕ್ರಿಯೆಯು ನಿರೀಕ್ಷೆಗಿಂತ ಮುಂಚೆಯೇ ಪ್ರಾರಂಭವಾಗಹುದು ಎಂದು ತೋರಿಸಿದೆ ಲ್ಯುಟೀನ್ ಆಹಾರ ಸೇವನೆ ಮಾಡದೆ ಇದ್ದಲ್ಲಿ 30 ರ ವಯಸ್ಸಿನಲ್ಲೇ ನಾವು ಕೆಲವು ವ್ಯತ್ಯಾಸಗಳನ್ನು ನೋಡಲಾರಂಭಿಸಬಹುದು" ಎಂದು ಅನ್ನೆ ವಲ್ಕ್ ಲೇಖಕರು ಹೇಳಿದ್ದಾರೆ.

ಸಂಶೋಧಕರು ಹಲವು ವ್ಯಕ್ತಿಗಳನ್ನು ಪರೀಕ್ಷಿಸಿದಾಗ ಮಿದುಳಿನ ಹೊರತಾಗಿ, ಲ್ಯುಟೀನ್ ಆಹಾರ ಸೇವಿಸುವವರ ಕಣ್ಣುಗಳು ಮಿನುಗುವ ಬೆಳಕಿನಲ್ಲಿ ಪ್ರತಿಕ್ರಿಯಿಸುವಂತೆ ಕಣ‍್ಣುಗಳು ಕಾಣುತ್ತವೆ. ಮತ್ತು, ನೆತ್ತಿ ಮೇಲೆ ವಿದ್ಯುದ್ವಾರಗಳನ್ನು ಬಳಸಿ, ಅವರ ಮೆದುಳಿನಲ್ಲಿ ನರವ್ಯೂಹದ ಚಟುವಟಿಕೆಯನ್ನು ಅಳೆಯುತ್ತಾರೆ ಹಾಗೂ ಭಾಗವಹಿಸಿದವರ ಮಿದುಳಿನ ಅರಿವಿನ ಕಾರ್ಯಗಳ ಮಾಪನವನ್ನು ಮಾಡುತ್ತಾರೆ ಮತ್ತು ಲ್ಯುಟೀನ್ ಸೇವಾಯುಕ್ತರಲ್ಲಿ ಪ್ರಬಲವಾಗಿ ಎಲ್ಲಾ ಒಳ‍್ಳೆಯ ಅಂಶಗಳು.

English summary

Why Spinach & Avocado Is A Must Have If You Are On Your 30’s

According to a latest study, lutein-rich foods like spinach and avocado not only give you your required dose of vitamins and proteins, but is also good for your overall cognitive skills. Lutein is a nutrient that the body cannot make on its own hence one needs to get them through foods containing lutein. Lutein is found in high quantities in green leafy vegetables like spinach, avocado, kale and yellow carrots, as well as eggs.
Story first published: Sunday, July 30, 2017, 13:29 [IST]
X
Desktop Bottom Promotion