Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದಿನಕ್ಕೊಂದು ಗ್ಲಾಸ್ ಮಸಾಲಾ ಹಾಲು ಕುಡಿದರೆ, ಆರೋಗ್ಯವಾಗಿರುವಿರಿ
ನಾವು ಭಾರತೀಯರು, ಅಪ್ಪಟ ಮಸಾಲೆ ಪ್ರಿಯರು. ನಮ್ಮ ಅಡುಗೆಗಳಲ್ಲಿ ಮಸಾಲೆ ಇಲ್ಲದ ಖಾದ್ಯಗಳು ಅತಿ ಕಡಿಮೆ. ಸಿಹಿಯಾದ ಹಾಲಿನಲ್ಲಿಯೂ ನಾವು ಕೆಲವು ಮಸಾಲೆಗಳನ್ನು ಕುಟ್ಟಿ ಪುಡಿ ಮಾಡಿ ಬೆರೆಸಿ ಕುಡಿಯುತ್ತೇವೆ. ನಾವು ಇದರಿಂದ ಹೆಚ್ಚುವ ರುಚಿಯನ್ನು ಮೆಚ್ಚಿ ಕುಡಿಯುತ್ತೇವೆಯೇ ವಿನಃ ಇದರ ಪ್ರಯೋಜನಗಳ ಬಗ್ಗೆ ಹೆಚ್ಚು ಅರಿತಿಲ್ಲ. ಈ ಮಸಾಲೆ ಹಾಲು ಸಹಾ ಆರೋಗ್ಯಕರವಗಿದ್ದು ನಮ್ಮ ಹಿರಿಯರು ಆರೋಗ್ಯಕ್ಕಾಗಿ ಮಸಾಲೆ ಹಾಲನ್ನು ಕುಡಿಯಲು ಸಾಧ್ಯವಾಗುವಂತೆ ಹಬ್ಬ ಮತ್ತು ವಿಶೇಷ ಸಂದರ್ಭಗಳಲ್ಲಿ ಕುಡಿಯುವಂತೆ ಒಂದು ಪದ್ಧತಿಯನ್ನಾಗಿಸಿದರು.
ಪ್ರತಿ ದಿನ ಹಾಲು ಕುಡಿಯಲು ಸಾಧ್ಯವಿಲ್ಲದ ಮನೆಗಳಲ್ಲಿ ವಿಶೇಷ ಸಂದರ್ಭದಲ್ಲಿ ತಯಾರಿಸಲ್ಪಟ್ಟರೆ ಕೆಲವು ಮನೆಗಳಲ್ಲಿ ಪ್ರತಿದಿನವೂ ಮಸಾಲೆ ಹಾಲು ತಯಾರಾಗುತ್ತದೆ. ಮಸಾಲೆ ಹಾಲಿನಲ್ಲಿ ಏನೇನು ಮಸಾಲೆ ಸೇರಿಸಲಾಗುತ್ತದೆ? ಸಾಮಾನ್ಯವಾಗಿ ಹುಡಿ ಮಾಡಿದ ಗೋಡಂಬಿ, ಚಿಕ್ಕದಾಗಿ ತುರಿದ ಬಾದಾಮಿ, ಏಲಕ್ಕಿ ಪುಡಿ, ಶುಂಠಿ ಪುಡಿ, ಹಳದಿ ಪುಡಿ, ಕೇಸರಿ, ಪುಡಿಮಾಡಿದ ಲವಂಗ, ಹಾಗೂ ಕೊಂಚ ಕಾಳುಮೆಣಸಿನ ಪುಡಿ ಇಷ್ಟನ್ನೂ ಕುದಿಯುತ್ತಿರುವ ಹಾಲಿಗೆ ಹಾಕಿ ಚಿಕ್ಕ ಉರಿಯಲ್ಲಿ ಇನ್ನೂ ಕೊಂಚ ಹೊತ್ತು ಕುದಿಸಿ ತಣಿಸಲಾಗುತ್ತದೆ. ಬನ್ನಿ, ಈ ಮಸಾಲೆ ಹಾಲು ಏಕೆ ಆರೋಗ್ಯಕರವಾಗಿದೆ ಎಂಬುದನ್ನು ನೋಡೋಣ.....

ಬಾದಾಮಿ
ಇದರಲ್ಲಿ ವಿಟಮಿನ್ ಇ ಅತಿ ಹೆಚ್ಚಿನ ಪ್ರಮಾಣದಲ್ಲಿದ್ದು ಚರ್ಮ ಮತ್ತು ಕೂದಲ ಆರೋಗ್ಯವನ್ನು ವೃದ್ದಿಸುತ್ತದೆ. ಇದರೊಂದಿಗೆ ಮೆಗ್ನೇಶಿಯಂ, ಪ್ರೋಟೀನುಗಳು, ಕರಗುವ ನಾರು ಮತ್ತು ಆರೋಗ್ಯಕರ ಕೊಬ್ಬುಗಳಿವೆ. ಇವು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಹಾಗೂ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸಂತುಲಿತ ಮಟ್ಟದಲ್ಲಿರಿಸಲು ನೆರವಾಗುತ್ತವೆ.

ಗೋಡಂಬಿ
ಮಸಾಲೆ ಹಾಲು ಕುಡಿದ ಬಳಿಕ ಗೋಡಂಬಿಯ ಚಿಕ್ಕ ಚಿಕ್ಕ ತುಂಡುಗಳನ್ನು ಜಗಿಯುವುದು ಎಲ್ಲರಿಗೂ ಇಷ್ಟ. ಇದರಲ್ಲಿ ಸೆಲೆನಿಯಂ, ಕಬ್ಬಿಣ, ಮೆಗ್ನೇಶಿಯಂ, ಸತು, ಗಂಧಕ, ತಾಮ್ರ, ವಿಟಮಿನ್ ಬಿ೬, ವಿಟಮಿನ್ ಕೆ ಮತ್ತು ಇ ಇವೆ. ಅಲ್ಲದೇ ಗೋಡಂಬಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಆರೋಗ್ಯವನ್ನು ಕಾಪಾಡುತ್ತವೆ.

ಏಲಕ್ಕಿ
ಇದು ಸುಗಂಧಿತ ಮಸಾಲೆಯಾದರೂ ಪ್ರಮುಖವಾಗಿ ಔಷಧೀಯ ಗುಣಗಳನ್ನೇ ಹೊಂದಿದೆ. ಇದರ ಸೇವನೆಯಿಂದ ಮಲಬದ್ದತೆ, ಹಸಿವಿಲ್ಲದಿರುವುದು, ಎದೆಯುರಿ, ಹೊಟ್ಟೆಯುಬ್ಬರಿಕೆ, ಆಮ್ಲೀಯತೆ, ವಾಕರಿಕೆ ಮೊದಲಾದವು ಇಲ್ಲವಾಗುತ್ತವೆ.

ಕೇಸರಿ
ಅತ್ಯಂತ ದುಬಾರಿಯಾಗಿರುವ ಈ ಮಸಾಲೆ ಅತ್ಯಂತ ಆರೋಗ್ಯಕರವಾಗಿದೆ. ಇದರಲ್ಲಿ ಮೆಗ್ನೀಶಿಯಂ, ಸತು, ಸೆಲೆನಿಯಂ, ಕಬ್ಬಿಣ, ಮ್ಯಾಂಗನೀಸ್, ಕ್ಯಾಲ್ಸಿಯಂ, ಪೊಟ್ಯಾಶಿಯಂ ಹಾಗೂ ತಾಮ್ರ ಉತ್ತಮ ಪ್ರಮಾಣದಲ್ಲಿವೆ. ಅಲ್ಲದೇ ಇದರ ಪ್ರತಿಜೀವಕ, ಆಂಟಿ ಆಕ್ಸಿಡೆಂಟು ಹಾಗೂ ವಿಶೇಷವಾಗಿ ಸ್ನಾಯುಸೆಡೆತವನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಅಲ್ಲದೇ ಇದು ಅತ್ಯುತ್ತಮ ಖಿನ್ನತೆ-ಶಮನಕಾರಿಯೂ ಆಗಿದೆ.

ಶುಂಠಿ
ನಾವೆಲ್ಲಾ ತಿಳಿದಿರುವಂತೆ ಶುಂಠಿಯಲ್ಲಿ ಹಲವಾರು ಔಷಧೀಯ ಗುಣವಿದೆ. ಪ್ರಮುಖವಾಗಿ ಇದರಲ್ಲಿರುವ ಜಿಂಜೆರಾಲ್ ಎಂಬ ಪೋಷಕಾಂಶ ಉತ್ತಮ ಉರಿಯೂತ ನಿವಾರಕ ಗುಣ ಹೊಂದಿದೆ. ಶುಂಠಿಯ ಸೇವನೆಯಿಂದ ವಾಕರಿಕೆ, ಗಂಟಲ ಬೇನೆ, ಸ್ನಾಯುಗಳ ನೋವು, ಶೀತ ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ. ಈ ಎಲ್ಲಾ ಗುಣಗಳು ಒಂದೆಡೆ ಮೇಳೈಸಿದ ಪರಿಣಾಮವಾಗಿಯೇ ಮಸಾಲೆ ಹಾಲು ಅತ್ಯಂತ ಆರೋಗ್ಯಕರ ಪೇಯವಾಗಿದೆ.

ಅರಿಶಿನದ ಹಾಲು
ಶೀತ, ನೆಗಡಿ, ಜ್ವರ, ಹೊಟ್ಟೆನೋವು, ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆನೋವು ಮೊದಲಾದ ಎಲ್ಲಾ ಸಾಮಾನ್ಯ ತೊಂದರೆಗಳಿಗೆ ಅಜ್ಜಿ ನೀಡುವ ಔಷಧಿ ಒಂದೇ-ಅದೇ ಅರಿಶಿನ ಸೇರಿಸಿದ ಬಿಸಿ ಹಾಲು. ಹಾಲು ಮತ್ತು ಅರಿಸಿನ ಎರಡೂ ಉತ್ತಮವಾದ ಪ್ರತಿಜೀವಕ (antibiotic) ಗಳಾಗಿವೆ. ಇವೆರಡ ಜೋಡಿ ವಿವಿಧ ತೊಂದರೆಗಳನ್ನು ಯಶಸ್ವಿಯಾಗಿ ನಿವಾರಿಸುವುದು ಮಾತ್ರವಲ್ಲ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತವೆ. ಹಸಿಯಾಗಿರುವ ಅರಿಶಿನದ ಕೊಂಬಿನ ಸುಮಾರು ಒಂದು ಇಂಚಿನಷ್ಟು ತುಂಡನ್ನು ಜಜ್ಜಿ ಕುದಿಯುತ್ತಿರುವ ಹಾಲಿನಲ್ಲಿ ಸೇರಿಸಿ. ಈಗ ಉರಿಯನ್ನು ಅತಿಚಿಕ್ಕದಾಗಿ ಮಾಡಿ ಮುಚ್ಚಳ ಮುಚ್ಚದೇ ಸುಮಾರು ಹದಿನೈದು ನಿಮಿಷ ಕುದಿಸಿ. ಬಳಿಕ ಅರಿಶಿನದ ತುಂಡನ್ನು ಸೋಸಿ ತೆಗೆಯಿರಿ. ಈ ಹಾಲನ್ನು ತಣಿದ ಬಳಿಕವೇ ಕುಡಿಯಿರಿ. ಈ ಹಾಲನ್ನು ಮತ್ತೆ ಬಿಸಿ ಮಾಡಬಾರದು.



Click it and Unblock the Notifications
