Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಲೈಂಗಿಕ ಕ್ರಿಯೆ ನಡೆಸಿದ ಮೇಲೆ ಮೂತ್ರ ವಿಸರ್ಜನೆ ಮಾಡಲೇಬೇಕು!
ಮಹಿಳೆಯರು ಹೆಚ್ಚಾಗಿ ಸ್ವಚ್ಛತೆ ಬಗ್ಗೆ ಗಮನಹರಿಸುವವರು. ಮನೆಯಿಂದ ಹಿಡಿದು, ಮಕ್ಕಳು, ಕಚೇರಿ ಹೀಗೆ ಪ್ರತಿಯೊಂದು ಸ್ಥಳದಲ್ಲಿ ಮಹಿಳೆಯರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವರು. ಅದೇ ಅವರು ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಲೈಂಗಿಕ ಕ್ರಿಯೆಗೆ ಮೊದಲು ಅಥವಾ ಬಳಿಕ ಎಷ್ಟು ಸ್ವಚ್ಛವಾಗಿರುವರು ಎನ್ನುವುದು ಕೂಡ ಅತೀ ಅಗತ್ಯವಾಗಿದೆ. ಸ್ವಚ್ಛತೆ ಇಲ್ಲದೆ ಇರುವ ಕಾರಣದಿಂದಾಗಿ ಹೆಚ್ಚಿನ ಸಲ ಸೋಂಕು ಹರಡುವುದು.
ಲೈಂಗಿಕ ಕ್ರಿಯೆ ಬಳಿಕ ನೀವು ಪಾಲಿಸಬೇಕಾದ ಕೆಲವು ಸ್ವಚ್ಛತಾ ಕ್ರಮಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಲೈಂಗಿಕ ಕ್ರಿಯೆ ವೇಳೆ ಯೋನಿಯ ಅಂಗಾಂಶಗಳು ಊತಗೊಂಡಿರುವುದು. ಇದು ಹೊರಗಿವ ಹವಾಮಾನಕ್ಕೆ ಹೇಗೆ ಹೊಂದಿಕೊಳ್ಳುವುದು ಎಂದು ತಿಳಿಸಲಿದೆ. ಕೆಲವು ವಿಷಯಗಳನ್ನು ನೀವು ಲೈಂಗಿಕ ಕ್ರಿಯೆ ಬಳಿಕ ಮಾಡಲೇಬಾರದು. ಯಾಕೆಂದರೆ ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವುದು. ಆದರೆ ಲೈಂಗಿಕ ಕ್ರಿಯೆ ಬಳಿಕ ತಕ್ಷಣ ಮಾಡಲೇಬೇಕಾದ ಕೆಲವು ವಿಚಾರಗಳನ್ನು ನೀವಿಲ್ಲಿ ತಿಳಿಯಿರಿ....
ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜನೆ
ಸಂಭೋಗದ ನಂತರ ಮಹಿಳೆಯರು ತಪ್ಪದೆ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ. ಏಕೆಂದರೆ ಇದು ನಿಮ್ಮ ಸಂತಾನೋತ್ಪತ್ತಿ ವ್ಯವಸ್ಥೆಯೊಳಗೆ ಸಂಭೋಗದ ಸಮಯದಲ್ಲಿ ಪ್ರವೇಶಿಸಿರುವ ಯಾವುದಾದರೂ ಸೋಂಕನ್ನು ಹೊರದೂಡುತ್ತದೆ.
ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜನೆ
ಪುರುಷರಲ್ಲಿ ಮೂತ್ರ ಹಾಗೂ ವೀರ್ಯ ಎರಡೂ ಒಂದೇ ನಾಳದ ಮೂಲಕ ಹೊರಬರುವುದರಿಂದಾಗಿ, ಮೂತ್ರ ನಾಳದ ಸೋಂಕು ಮಹಿಳೆಯರಿಗೆ ತಲುಪಬಹುದು.
ಸಂಭೋಗದ ನಂತರ ಯೋನಿಯನ್ನು ಸ್ವಚ್ಛಗೊಳಿಸುವಿಕೆ
ಲೈಂಗಿಕ ಕ್ರಿಯೆಯ ನಂತರ ನಿಮ್ಮನ್ನು ನೀವು ಸೋಂಕುಗಳಿಂದ ಕಾಪಾಡಿಕೊಳ್ಳಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ.
ಸಂಭೋಗದ ನಂತರ ಯೋನಿಯನ್ನು ಸ್ವಚ್ಛಗೊಳಿಸುವಿಕೆ
ಮೂತ್ರ ನಾಳದ ಸೋಂಕುಗಳನ್ನು ಮಾತ್ರ ತಡೆಯಬೇಕು ಎಂದು ನಾವು ಹೇಳುತ್ತಿಲ್ಲ. ಜೊತೆಗೆ ಸಂಭೋಗದಿಂದ ಕೆಲವು ಗಂಭೀರ ಸ್ವರೂಪದ ಸೋಂಕುಗಳು ಸಹ ತಲುಪುತ್ತವೆ.
ಕಾಂಡೋಮ್‌ಗಳನ್ನು ಬಳಸುವುದು ಒಳ್ಳೆಯದು
ಅದಕ್ಕಾಗಿ ಸುರಕ್ಷತೆಯ ದೃಷ್ಟಿಯಿಂದ ಕಾಂಡೋಮ್‌ಗಳನ್ನು ಬಳಸುವುದು ಒಳ್ಳೆಯದು. ಇದು ನಿಮ್ಮ ಸಂಗಾತಿಯು ಲೈಂಗಿಕವಾಗಿ ಹರಡುವ ರೋಗಗಳಿಗೆ ತುತ್ತಾಗದಂತೆ ತಡೆಯುತ್ತದೆ. ಒಂದು ವೇಳೆ ನೀವು ಕಾಂಡೋಮ್ ಅನ್ನು ಬಳಸುತ್ತಿದ್ದರೂ ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಿ.
ಪುರುಷರು ಮಹಿಳೆಯರಿಗಿಂತ ಕಡಿಮೆ ಪ್ರಮಾಣದಲ್ಲಿ ಸೋಂಕು ಪೀಡಿತರಾಗುತ್ತಾರೆ
ಮಹಿಳೆಯರಲ್ಲಿ ಯುರೆತ್ರಾ ಮತ್ತು ಸಂತಾನೋತ್ಪತ್ತಿ ನಾಳವು ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಪುರುಷರಿಗೆ ಮಹಿಳೆಯರಿಂದ ಸೋಂಕು ರವಾನೆಯಾಗುವ ಸಾಧ್ಯತೆ ಕಡಿಮೆ ಇರುತ್ತದೆ.
ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ...
ದಂಪತಿಗಳು ಲೈಂಗಿಕ ಕ್ರಿಯೆಗೆ ಮೊದಲು ಮತ್ತು ನಂತರ ಜನನಾಂಗಗಳನ್ನು ಸ್ವಚ್ಛಗೊಳಿಸಿಕೊಂಡು ತಮ್ಮನ್ನು ತಾವು ಸೋಂಕುಗಳಿಂದ ಕಾಪಾಡಿಕೊಳ್ಳುವುದು ಅತ್ಯಗತ್ಯ. ಮಹಿಳೆಯರು ಸಹ ಸಂಭೋಗದ ನಂತರ ಮೂತ್ರ ವಿಸರ್ಜನೆ ಮಾಡಿ, ತಮ್ಮ ಜನನಾಂಗದಲ್ಲಿರುವ ಸೋಂಕನ್ನು ಹೊರ ಹಾಕುವ ಪ್ರಯತ್ನ ಮಾಡಬೇಕು.