For Quick Alerts
ALLOW NOTIFICATIONS  
For Daily Alerts

ಆ ದಿನಗಳಲ್ಲಿ ಕುಳಿತುಕೊಳ್ಳುವಾಗ ಕಾಡುವ ವಿಪರೀತ ನೋವು! ಯಾಕೆ?

By Arshad
|

ಕೆಲವು ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಕುಳಿತುಕೊಳ್ಳಲು ಕಷ್ಟವಾಗಬಹುದು. ವಿಶೇಷವಾಗಿ ಬಹಿರ್ದೆಶೆಯ ಸಮಯದಲ್ಲಿ ಹೆಚ್ಚು ನೋವು ಕಾಡಬಹುದು. ಇದಕ್ಕೇನು ಕಾರಣ? ಮಾಸಿಕ ದಿನಗಳಲ್ಲಿ ಬಹುತೇಕ ಎಲ್ಲಾ ಮಹಿಳೆಯರಿಗೆ ಕೆಳಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಆದರೆ ಕೆಲವರಿಗೆ ಮಾತ್ರವೇ ಬಹಿರ್ದೆಸೆ ಸಾಧ್ಯವೇ ಇಲ್ಲವೆನ್ನುವಷ್ಟು ನೋವು ಏಕೆ ಆವರಿಸುತ್ತದೆ? ಇದಕ್ಕೇನು ಕಾರಣ? ಈ ಪ್ರಶ್ನೆಗೆ ಆರೋಗ್ಯ ತಜ್ಞರು ನೀಡುವ ಉತ್ತರಗಳನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ.....

ಇದು ಮಾಂಸಖಂಡಗಳ ಸೆಳೆತವೇ?

ಇದು ಮಾಂಸಖಂಡಗಳ ಸೆಳೆತವೇ?

ನಿತಂಬಗಳ ಮಾಂಸಖಂಡಗಳು ಗರ್ಭಾಶಯ ಹಾಗೂ ಇತರ ಪ್ರಮುಖ ಅಂಗಗಳನ್ನು ಸುತ್ತುವರೆದಿದ್ದು ಈ ಅಂಗಗಳಲ್ಲಿ ಆಗುವ ಯಾವುದೇ ಬದಲಾವಣೆ ಈ ಮಾಂಸಖಂಡಗಳ ಮೇಲೆ ಬೀಳುತ್ತದೆ. ಇದು ನೋವಿಗೆ ಕಾರಣವಾಗಬಹುದು. ಹೊಟ್ಟೆ ಉಬ್ಬಿಕೊಳ್ಳುವುದು, ಗರ್ಭಾಶಯದಲ್ಲಿ ಊತ, ಗರ್ಭಾಶಯದ ಸೆಳೆತ ಮೊದಲಾದವು ಹಿಂಭಾಗದಲ್ಲಿ ಅಪಾರ ನೋವುಂಟು ಮಾಡಬಹುದು.

ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?

ಇದು ಸ್ನಾಯುಗಳ ಸ್ನಾಯುಗಳ-ಹಠಾತ್ ಸಂಕುಚನವೇ?

ಇದು ಸ್ನಾಯುಗಳ ಸ್ನಾಯುಗಳ-ಹಠಾತ್ ಸಂಕುಚನವೇ?

ಒಂದು ವೇಳೆ ಸ್ನಾಯುಗಳ ಸೆಳೆತ ಹೆಚ್ಚಾದರೆ ಇದು ಹಠಾತ್ ಸಂಕುಚನ ಅಥವಾ ತೀವ್ರ ಸೆಳವಿಗೆ (spasm) ಕಾರಣವಾಗಬಹುದು. ಪರಿಣಾಮವಾಗಿ ಕಿಬ್ಬೊಟ್ಟೆ, ಹಿಂಭಾಗ ಹಾಗೂ ಕೆಳಬೆನ್ನಿನ್ನಲ್ಲಿ ತೀವ್ರ ನೋವು ಕಾಣಿಸಿಕೊಳ್ಳಬಹುದು.

ಇದು ಗರ್ಭಾಶಯಕ್ಕೆ ಸಂಬಂಧಿಸಿದೆಯೇ?

ಇದು ಗರ್ಭಾಶಯಕ್ಕೆ ಸಂಬಂಧಿಸಿದೆಯೇ?

ಕೆಲವು ತಜ್ಞರ ಪ್ರಕಾರ ಮಾಸಿಕ ದಿನಗಳಲ್ಲಿ ಎದುರಾಗುವ ನೋವಿಗೆ ಈ ಸಮಯದಲ್ಲಿ ಗರ್ಭಾಶಯ ಕೊಂಚ ವಾಲಿಕೊಳ್ಳುವುದೇ ಕಾರಣವಾಗಿದೆ. ಆದರೆ ಈ ಸ್ಥಿತಿ ಅಪರೂಪವಾಗಿದೆ. ಆದರೆ ಈ ಪರಿಸ್ಥಿತಿ ಎದುರಾದರೆ ಇದರ ಪರಿಣಾಮವಾಗಿ ದೇಹದ ಹಿಂಭಾಗ ಅಪಾರವಾಗಿ ನೋಯುತ್ತದೆ.

ಇದು ಆತಂಕಕಾರಿಯೇ?

ಇದು ಆತಂಕಕಾರಿಯೇ?

ಒಂದು ವೇಳೆ ಈ ನೋವು ತಾತ್ಕಾಲಿಕವಾಗಿದ್ದು ಮಾಸಿಕ ದಿನಗಳು ಕಳೆದ ಬಳಿಕ ತನ್ನಿಂತಾನೇ ಮಾಯವಾಗುತ್ತದೆ. ಆದರೆ ಈ ನೋವು ತಾಳಿಕೊಳ್ಳದಷ್ಟು ಹೆಚ್ಚಾಗಿದ್ದರೆ ತಕ್ಷಣವೇ ವೈದ್ಯರನ್ನು ಕಾಣಬೇಕು.

ಮನೆ ಔಷಧ: ಮಾಸಿಕ ಋತುಚಕ್ರದ ನೋವಿಗೆ ಶೀಘ್ರ ಪರಿಹಾರ...

ಈ ನೋವನ್ನು ನಿಯಂತ್ರಿಸಬಹುದೇ?

ಈ ನೋವನ್ನು ನಿಯಂತ್ರಿಸಬಹುದೇ?

ಈ ನೋವು ಕೆಲವರಿಗೆ ಹೆಚ್ಚು, ಕೆಲವರಿಗೆ ಕಡಿಮೆ ಆವರಿಸುತ್ತದೆ. ಸರಳ ವ್ಯಾಯಾಮ, ಯೋಗಾಭ್ಯಾಸ, ಮಸಾಜ್, ಉಗುರುಬೆಚ್ಚನೆಯ ನೀರಿನ ಸಿಂಚನ ಮೊದಲಾದವು ಈ ನೋವನ್ನು ಕಡಿಮೆಯಾಗುತ್ತದೆ. ಆದರೆ ನೋವು ನಿವಾರಕಗಳನ್ನು ಸ್ವತಃ ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಿರಿ. ಒಂದು ವೇಳೆ ನೋವು ಕಡಿಮೆಯಾಗದೇ ಇದ್ದರೆ ಇದು endometriosis ಎಂಬ ಸ್ಥಿತಿ ಇರಬಹುದೇ ಎಂಬ ಪರೀಕ್ಷೆಗೆ ವೈದ್ಯರ ಸಲಹೆ ಪಡೆದು ಒಳಗಾಗಿರಿ.

ಇದಕ್ಕೆ ಫೈಬ್ರಾಯ್ಡ್ ಕಾರಣವೇ?

ಇದಕ್ಕೆ ಫೈಬ್ರಾಯ್ಡ್ ಕಾರಣವೇ?

ಗರ್ಭಾಶಯ ಹಾಗೂ ಜನನಾಂಗದ ಒಳಭಾಗದಲ್ಲಿ ಚಿಕ್ಕ ಚಿಕ್ಕ ದ್ರಾಕ್ಷಿಗೊಂಚಲಿನಂತಹ ಗಡ್ಡೆಗಳು ಮೂಡುವ ಮೂಲಕ (Fibroid) ಗರ್ಭಾಶಯದ ಗಾತ್ರ ಹೆಚ್ಚುತ್ತದೆ ಹಾಗು ಪರಿಣಾಮವಾಗಿ ನಿತಂಬಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಮಲಬದ್ಧತೆಯೂ ಕಾರಣವಾಗಿರಬಹುದೇ?

ಮಲಬದ್ಧತೆಯೂ ಕಾರಣವಾಗಿರಬಹುದೇ?

ಕೆಲವು ಸಂದರ್ಭಗಳಲ್ಲಿ ಮಲಬದ್ದತೆಯೂ ನಿತಂಬಗಳ ನೋವಿಗೆ ಕಾರಣವಾಗಬಹುದು. ಹೀಗಾಗದಿರಲು ಸಾಕಷ್ಟು ನೀರು ಕುಡಿಯಬೇಕು ಹಾಗೂ ನಾರುಸಹಿತ ಇರುವ ಆಹಾರಗಳನ್ನೇ ಹೆಚ್ಚು ಹೆಚ್ಚಾಗಿ ಸೇವಿಸಬೇಕು.

ಮಾಸಿಕ ದಿನಗಳ ಬಳಿಕವೂ ನೋವು ಕಡಿಮೆಯಾಗದಿದ್ದರೆ?

ಮಾಸಿಕ ದಿನಗಳ ಬಳಿಕವೂ ನೋವು ಕಡಿಮೆಯಾಗದಿದ್ದರೆ?

ಇದಕ್ಕೆ irritable bowel syndrome ಅಥವಾ ಹೊಟ್ಟೆಯ ಒಳಭಾಗದ ಉರಿಯೂತವೂ ಕಾರಣವಾಗಿರಬಹುದು. ಈ ಸ್ಥಿತಿ ಸಾಮಾನ್ಯವಾಗಿ ಇತರ ದಿನಗಳಲ್ಲಿ ಕಡಿಮೆ ಇದ್ದು ಮಾಸಿಕ ದಿನಗಳಲ್ಲಿ ಗರಿಷ್ಠವಾಗುತ್ತದೆ. ತಕ್ಷಣವೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆದುಕೊಳ್ಳಬೇಕು.

English summary

Why It Hurts To Sit Down During Period?

For some women, it hurts to sit down during period. Some women experience pain passing stool during period. Why is it so? During periods, experiencing pain at the back side is not uncommon. It occurs in some women, say health experts. What could be the reason the behind such a pain in the rear? Well, health experts suspect muscle tension. Here are some other reasons.
X
Desktop Bottom Promotion