ಯಾವ ಕಪ್‍ನಲ್ಲಿ ಚಹಾ ಕುಡಿಯುತ್ತೀರಿ? ಮಣ್ಣಿನ ಕಪ್‍ನಲ್ಲೇ ಕುಡಿಯಿರಿ ಒಳ್ಳೆಯದು

Posted By: Divya
Subscribe to Boldsky

ಭಾರತದಾದ್ಯಂತ ಚಹಾ ಕುಡಿಯಲು ಮಣ್ಣಿನ ಬಟ್ಟಲು(ಕಪ್)ನ್ನು ಉಪಯೋಗಿಸುತ್ತಾರೆ. ಉತ್ತರ ಭಾರತದಲ್ಲಿ ಇದರ ಬಳಕೆ ಹೆಚ್ಚೆಂದು ಹೇಳಬಹುದು. ಈ ಕಪ್‍ನಲ್ಲಿ ಒಮ್ಮೆ ಕುಡಿದ ಮೇಲೆ ಪುನಃ ಅದರ ಬಳಕೆ ಮಾಡುವುದಿಲ್ಲ. ಒಂದು ಬಾರಿ ಮಣ್ಣಿನ ಕಪ್‍ನಲ್ಲಿ ಚಹಾವನ್ನು ಕುಡಿದರೆ ಅದರ ರುಚಿ ಬೇರೆ ಎನಿಸುತ್ತದೆ. ಜೊತೆಗೆ ವಿಶಿಷ್ಟವಾದ ಪರಿಮಳದ ಅನುಭವಕ್ಕೆ ಒಳಗಾಗುತ್ತೇವೆ.

ಟೀ, ಕಾಫಿ ಕುಡಿಯುವ ಮುಂಚೆ, ಒಂದು ಗ್ಲಾಸ್ ನೀರು ಕುಡಿಯಿರಿ!

ಈ ಕಪ್‍ಗಳು ಹೆಚ್ಚು ಹೊಳಪಿಲ್ಲದೆ, ನಿಮ್ಮನ್ನು ಆಕರ್ಷಿಸದೆ ಇರಬಹುದು. ಆದರೆ ರುಚಿ ಮಾತ್ರ ಅದ್ಭುತವಾಗಿರುತ್ತದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಚಹಾ ಕುಡಿದು ಬಿಸಾಕಬಹುದಾದಂತಹ ಅನೇಕ್ ಕಪ್‍ಗಳಿವೆ. ಗಾಜಿನ ಕಪ್, ಪಿಂಗಾಣಿಯ ಕಪ್, ಉಕ್ಕಿನ ಕಪ್, ಪ್ಲಾಸ್ಟಿಕ್ ಕಪ್ ಸೇರಿದಂತೆ ವಿವಿಧ ಬಗೆಯ ಕಪ್‍ಗಳು ಕಡಿಮೆ ಬೆಲೆಯಲ್ಲೇ ದೊರೆಯುತ್ತವೆ. ಆದರೂ ಮಣ್ಣಿನ ಕಪ್ ಯಾಕೆ ಬಳಸಬೇಕು? ಎನ್ನುವ ಗೊಂದಲ ನಿಮ್ಮನ್ನು ಕಾಡಬಹುದು. ಈ ಗೊಂದಲಕ್ಕೆ ಸರಳ ರೀತಿಯ ವಿವರಣೆಯ ಉತ್ತರ ಈ ಲೇಖನದಲ್ಲಿದೆ ಓದಿ.... 

ಸ್ಟೈರೋಫೋಮ್ ಕಪ್

ಸ್ಟೈರೋಫೋಮ್ ಕಪ್

ಕೆಲವೆಡೆ ಬಿಸಿಯಾದ ಚಹಾವನ್ನು ಸ್ಟೈರೋಫೋಮ್ ಕಪ್‍ನಲ್ಲಿ ಹಾಕಿಕೊಡುತ್ತಾರೆ. ಇದು ತುಂಬಾ ಅಪಾಯಕಾರಿ. ಪಾಲಿಸ್ಟೈರೀನ್ ನಿಂದ ಆ ಕಪ್‍ಗಳನ್ನು ತಯಾರಿಸುತ್ತಾರೆ. ಇಂತಹ ಕಪ್‍ನಲ್ಲಿ ಬಿಸಿಯ ಪಾನೀಯ ಹಾಕುವುದರಿಂದ, ಅವುಗಳ ಜೊತೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಸ್ಟೈರೋಫೋಮ್ ಕಪ್

ಸ್ಟೈರೋಫೋಮ್ ಕಪ್

ಕೆಲವೆಡೆ ಬಿಸಿಯಾದ ಚಹಾವನ್ನು ಸ್ಟೈರೋಫೋಮ್ ಕಪ್‍ನಲ್ಲಿ ಹಾಕಿಕೊಡುತ್ತಾರೆ. ಇದು ತುಂಬಾ ಅಪಾಯಕಾರಿ. ಪಾಲಿಸ್ಟೈರೀನ್ ನಿಂದ ಆ ಕಪ್‍ಗಳನ್ನು ತಯಾರಿಸುತ್ತಾರೆ. ಇಂತಹ ಕಪ್‍ನಲ್ಲಿ ಬಿಸಿಯ ಪಾನೀಯ ಹಾಕುವುದರಿಂದ, ಅವುಗಳ ಜೊತೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಸ್ಟೈರೋಫೋಮ್ ಸಮಸ್ಯೆ

ಸ್ಟೈರೋಫೋಮ್ ಸಮಸ್ಯೆ

ರಾಸಾಯನಿಕ ವಸ್ತುಗಳಿಂದ ಕೂಡಿರುವ ಇದು ಆಯಾಸ, ಹಾರ್ಮೋನ್‍ಗಳ ಸಮಸ್ಯೆ, ಏಕಾಗ್ರತೆಯ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಅದೇ ಮಣ್ಣಿನ ಕಪ್ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ.

ಊಟದ ಬಳಿಕ ಟೀ ಕುಡಿಯುವುದು, ಒಳ್ಳೆಯದಲ್ಲ ಹೇಳುತ್ತಾರೆ! ಹೌದೇ?

ಪರಿಸರ ಸ್ನೇಹಿ ಕಪ್

ಪರಿಸರ ಸ್ನೇಹಿ ಕಪ್

ಮಣ್ಣಿನ ಕಪ್ ಪರಿಸರ ಪ್ರೇಮಿ. ಇದನ್ನು ಬಳಸಿ ಒಮ್ಮೆ ಮಣ್ಣಿನಲ್ಲಿ ಎಸೆದರೆ ಮಣ್ಣಿನ ಜೊತೆ ಬೆರೆತು ಹೋಗುತ್ತದೆ. ಅದೇ ಸ್ಟೈರೊಫ್ಲೋಮ್ ಕಪ್‍ಗಳು ಮಣ್ಣಿನಲ್ಲಿ ಕರಗಲು 500 ವರ್ಷಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ.

ಇತರ ಕಪ್‍ಗಳ ಬಳಕೆ

ಇತರ ಕಪ್‍ಗಳ ಬಳಕೆ

ಉಕ್ಕು, ಗ್ಲಾಸ್, ಸ್ಟೀಲ್‍ಗಳ ಕಪ್ ನಿಂದ ಚಹಾ ಕುಡಿಯಬಹುದು. ಆದರೆ ರಸ್ತೆ ಬದಿಯ ಅಂಗಡಿಗಳಲ್ಲಿ ಕೊಡುವಾಗ ಸ್ವಚ್ಛವಾದ ನೀರಿನಲ್ಲಿ ಸ್ವಚ್ಛಗೊಳಿಸದಿದ್ದರೆ, ಕಪ್‍ಗಳಲ್ಲಿ ಬ್ಯಾಕ್ಟೀರಿಯಾಗಳು ಹಾಗೇ ಕುಳಿತುಕೊಳ್ಳುವ ಸಾಧ್ಯತೆ ಇರುತ್ತದೆ. ಇವು ಕೆಲವೊಮ್ಮೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ.

ಗಾಜಿನ ಕಪ್ ಸ್ವಚ್ಛವಾಗಿಲ್ಲದಿದ್ದರೆ ಏನಾಗುವುದು?

ಗಾಜಿನ ಕಪ್ ಸ್ವಚ್ಛವಾಗಿಲ್ಲದಿದ್ದರೆ ಏನಾಗುವುದು?

ರಸ್ತೆ ಬದಿಯಲ್ಲಿ ಚಹಾವನ್ನು ಸೇವಿಸುವಾಗ ಗಾಜಿನ ಕಪ್ ಸ್ವಚ್ಛವಾಗದಿದ್ದರೆ ಅತಿಸಾರ, ಅಸಮಧಾನ ಮತ್ತು ಜೀರ್ಣಕಾರಿ ಸಮಸ್ಯೆಗಳು ಕಾಡುವುದು. ಅದೇ ಮಣ್ಣಿನ ಕಪ್‍ಗಳಲ್ಲಿ ಈ ತೊಂದರೆ ಉಂಟಾಗದು.

ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ

ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ

ಮಣ್ಣಿನ ಕಪ್‍ನಲ್ಲಿ ಚಹಾ ಕುಡಿಯುವುದರಿಂದ ದೇಹದಲ್ಲಿ ಆಮ್ಲೀಯ ಗುಣವನ್ನು ತಗ್ಗಿಸುತ್ತದೆ. ಜೀರ್ಣ ಕ್ರಿಯೆಯು ಸರಾಗವಾಗಿ ಆಗುವುದು.

ಮಣ್ಣಿನ ಕಪ್ ಸುರಕ್ಷಿತವಾದದ್ದು

ಮಣ್ಣಿನ ಕಪ್ ಸುರಕ್ಷಿತವಾದದ್ದು

ಮಣ್ಣಿನ ಕಪ್‍ಗಳಲ್ಲಿ ಚಹಾ, ಹಾಲು, ಲಸ್ಸಿ ಮತ್ತು ನೀರು ಎಲ್ಲವನ್ನೂ ಸೇವಿಸಬಹುದು. ಪ್ಲಾಸ್ಟಿಕ್ ಕಪ್‍ಗಳ ಹಾಗೆ ಅಡ್ಡ ಪರಿಣಾಮವನ್ನು ಬೀರುವುದಿಲ್ಲ..

For Quick Alerts
ALLOW NOTIFICATIONS
For Daily Alerts

    English summary

    Why Indians Use Clay Cups For Chai? Are They Healthy?

    When you relish tea in a clay cup (kulhar), it is totally a different experience. The aroma of the tea changes and you will enjoy its distinct flavour too. As the surface is not glazed, the earthy feel and scent enhances your tea drinking experience. Here are some reasons why you must prefer clay cups over other types of cups.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more