For Quick Alerts
ALLOW NOTIFICATIONS  
For Daily Alerts

ನಿಮಗೆ ಗೊತ್ತಾ? ಗೋಮೂತ್ರದಿಂದ ಹಲವು ರೋಗಗಳನ್ನು ಓಡಿಸಬಹುದು

By Manu
|

ಗವ್ಯಮ್ ಪವಿತ್ರಮ್ ಚ ರಸಯನಮ್ ಕ ಪಥ್ಯಮ್ ಚ ಹೃದ್ಯಮ್ ಬಲಮ್ ಬುದ್ಧಿ ಸ್ಯತ ಆಯುಹ್ ಪ್ರದಮ್ ರಕ್ತ್ ವಿಕರ್ ಹರಿ ತ್ರಿದೋಶ್ ಹೃದ್ರೊಗ್ ವಿಶಪಹಮ್ ಸ್ಯತ ಈ ಶ್ಲೋಕದ ಮೂಲಕ ಗೋಮೂತ್ರದ ಪ್ರಾಮುಖ್ಯತೆಯ ಬಗ್ಗೆ ವೇದಗಳಲ್ಲಿ ತಿಳಿಸಲಾಗಿದೆ. ಇದರ ಅರ್ಥ ಹೀಗಿದೆ:

ಗೋಮೂತ್ರ ಪಂಚಗವ್ಯ ಒಂದು ಉತ್ತಮ ಸಿದ್ಧರಸ, ಉತ್ತಮ ಆಹಾರ, ಹೃದಯಕ್ಕೆ ಉತ್ತಮವಾದ, ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಿಸುವ, ಆಯಸ್ಸು ಹೆಚ್ಚಿಸುವ, ಪಿತ್ತವನ್ನು ಸಮತೋಲನದಲ್ಲಿರಿಸುವ, ಶ್ವಾಸ ಮತ್ತು ಮೂಗಿನೊಳಗಣ ಲೋಳೆಯನ್ನು ಉತ್ತಮವಾಗಿಸುವ, ಹೃದಯತೊಂದರೆಗಳನ್ನು ನಿವಾರಿಸುವ ಮತ್ತು ವಿಷದ ಪರಿಣಾಮವನ್ನು ಕಡಿಮೆಗೊಳಿಸುವ ಶಕ್ತಿಯುಳ್ಳದ್ದಾಗಿದೆ.

ಇಂದು ಏಡ್ಸ್ ರೋಗಕ್ಕೆ ಒಳಗಾದವರು ಪಂಚಗವ್ಯದ ಚಿಕಿತ್ಸೆಯನ್ನು ಪಡೆದು ಉತ್ತಮ ಪರಿಣಾಮವನ್ನು ಪಡೆಯುತ್ತಿದ್ದಾರೆ. ಮೈಗ್ರೇನ್ ತಲೆನೋವು ಮತ್ತು ಇತರ ಪ್ರಕಾರದ ತಲೆನೋವುಗಳಿಂದ ಸುಮಾರು ಹದಿನೈದು ವರ್ಷಗಳಿಂದ ಬಳಲುತ್ತಿದ್ದವರಿಗೆ ಗೋಮೂತ್ರದ ಚಿಕಿತ್ಸೆಯಿಂದ ಆರು ತಿಂಗಳಲ್ಲಿಯೇ ಉತ್ತಮ ಪರಿಹಾರ ದೊರಕಿದೆ. ಮಾನಸಿಕ ಒತ್ತಡ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸುವ ಶಕ್ತಿಯನ್ನೂ ಹೊಂದಿದೆ. ಕೆಲವು ವರ್ಷಗಳಿಂದ ಮಧ್ಯಪ್ರದೇಶದ ಇಂದೋರ್ ನಗರದಲ್ಲಿರುವ ಗೋಮೂತ್ರ ಚಿಕಿತ್ಸಾ ಮತ್ತು ಸಂಶೋಧನಾ ಕೇಂದ್ರದ ನೆರವಿನಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ.

ಹಿಂದೂ ಧರ್ಮದಲ್ಲಿ ಗೋಮಾತೆಯ ಸಗಣಿಯ ಪ್ರಾಮುಖ್ಯತೆಯೇನು?

ಪುರಾತನ ಕಾಲದಿಂದಲೂ ಟಿಬಿ, ಕ್ಯಾನ್ಸರ್, ಮಧುಮೇಹ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಔಷಧವಾಗಿ ಬಳಸುತ್ತಾ ಬಂದಿದ್ದಾರೆ. ಇದಕ್ಕೆ "ಗೋಮೂತ್ರ' ಎಂದು ಕರೆಯುತ್ತಾರೆ. ಗರ್ಭಿಣಿ ಹಸುವಿನಿಂದ ಸಂಗ್ರಹಿಸಲ್ಪಟ್ಟ ಮೂತ್ರಗಳಲ್ಲಿ ಕೆಲವು ಹಾರ್ಮೋನ್ ಮತ್ತು ಖನಿಜಗಳು ಇರುವುದು ಪತ್ತೆಯಾಗಿದೆ. ಹಾಗಾಗಿ ಇದನ್ನು ಒಂದು ಪರಿಣಾಮಕಾರಿ ಚಿಕಿತ್ಸಕ ಎಂದು ಪರಿಗಣಿಸುತ್ತಾರೆ.

ಮೊದ ಮೊದಲು ಕೆಲವು ಆರೋಗ್ಯ ತಜ್ಞರು ಗೋಮೂತ್ರದ ಚಿಕಿತ್ಸಾ ವಿಧಾನವನ್ನು ವಿರೋಧಿಸುತ್ತಿದ್ದರು. ಇತ್ತೀಚೆಗೆ ನಡೆಸಿದ ಪ್ರಯೋಗ ಹಾಗೂ ಸಂಶೋಧನೆಯ ಪರಿಣಾಮವಾಗಿ ಹೌದೆಂದು ಒಪ್ಪಿಕೊಂಡಿದ್ದಾರೆ. ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ತಗ್ಗಿಸುವ ಈ ಗೋಮೂತ್ರದ ಇನ್ನಿತರ ಪ್ರಯೋಜನಗಳ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ....

ಆಯುರ್ವೇದದ ಪ್ರಕಾರ

ಆಯುರ್ವೇದದ ಪ್ರಕಾರ

ಆಯುರ್ವೇದದ ಪ್ರಕಾರ ಎಲ್ಲಾ ರೋಗಗಳಿಗೆ ತ್ರಿದೋಶಗಳ ಸಂತುಲತೆ ಏರುಪೇರಾಗುವುದೇ ಕಾರಣ. ವಾತ ಪಿತ್ತ ಕಫ ಗಳೆಂದ ಈ ತ್ರಿದೋಷಗಳನ್ನು ಗೋಮೂತ್ರ ಸಂತುಲಿತವಾಗಿರಿಸಲು ನೆರವಾಗುವ ಮೂಲಕ ಆರೋಗ್ಯ ಉತ್ತಮವಾಗಿರಲು ನೆರವಾಗುತ್ತದೆ.

ಹೃದಯ ಮತ್ತು ಮೆದುಳಿನ ತೊಂದರೆಗೆ ರಾಮಬಾಣ

ಹೃದಯ ಮತ್ತು ಮೆದುಳಿನ ತೊಂದರೆಗೆ ರಾಮಬಾಣ

ಮಾನಸಿಕ ಒತ್ತಡದಿಂದ ನರವ್ಯವಸ್ಥೆ ಬಾಧೆಗೊಳ್ಳುತ್ತದೆ. ಗೋಮೂತ್ರವನ್ನು ಮೇಧ್ಯ ಮತ್ತು ಹೃದ್ಯ ಎಂದೂ ಕರೆಯಲಾಗುತ್ತದೆ. ಇದರ ಅರ್ಥ ಇದು ಮೆದುಳಿಗೆ ಮತ್ತು ಹೃದಯಕ್ಕೆ ಬಲ ನೀಡುವ ದ್ರವವಾಗಿದೆ. ಆ ಪ್ರಕಾರ ಗೋಮೂತ್ರ ಹೃದಯ ಮತ್ತು ಮೆದುಳಿನ ತೊಂದರೆಗಳನ್ನು ಮತ್ತು ಹೆಚ್ಚಿನ ಮಾನಸಿಕ ಒತ್ತಡದಿಂದ ಆಗುವ ಮೆದುಳಿನ ಹಾನಿಯನ್ನು ತಡೆಗಟ್ಟುತ್ತದೆ.

ಲಿವರ್ ರಕ್ಷಕ

ಲಿವರ್ ರಕ್ಷಕ

ಗೋಮೂತ್ರ ಯಕೃತ್ತಿನ (ಲಿವರ್) ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದ ಶುದ್ದೀಕರಣ ಉತ್ತಮಗೊಳ್ಳುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!

ಖನಿಜಾಂಶಗಳ ಪೂರೈಕೆ....

ಖನಿಜಾಂಶಗಳ ಪೂರೈಕೆ....

ದೇಹಕ್ಕೆ ಬೇಕಾದ ಖನಿಜಾಂಶಗಳ ಪೂರೈಕೆಯನ್ನು ಗೋಮೂತ್ರ ಮಾಡುತ್ತದೆ. ಇದರಿಂದ ಅನೇಕ ಕಾಯಿಲೆಗಳನ್ನು ತಡೆಯಬಹುದು ಎಂದು ಹೇಳಲಾಗುತ್ತದೆ.

ಮೆದುಳಿಗೆ ಒಳ್ಳೆಯದು

ಮೆದುಳಿಗೆ ಒಳ್ಳೆಯದು

ಗೋಮೂತ್ರ ಹೃದಯ ಮತ್ತು ಮೆದುಳಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಅಲ್ಲದೆ ಒತ್ತಡದಿಂದ ಉಂಟಾದ ಹಾನಿಯನ್ನು ತಡೆಯುತ್ತದೆ.

ವಿಷಗಳ ನಿರ್ಮೂಲನೆ

ವಿಷಗಳ ನಿರ್ಮೂಲನೆ

ದೇಹದಲ್ಲಿ ಸಂಗ್ರಹವಾದ ಕೆಲವು ವಿಷಕಾರಿ ಅಂಶಗಳನ್ನು ಗೋಮೂತ್ರ ತೆರವುಗೊಳಿಸುತ್ತದೆ. ಅಲ್ಲದೆ ರೋಗ ನೀರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಔಷಧೀಯ ಗುಣ

ಔಷಧೀಯ ಗುಣ

ರುಚಿಯಲ್ಲಿ ಸ್ವಲ್ಪ ಕಹಿ ಮತ್ತು ಒಗರಾಗಿದ್ದರು ಅನೇಕ ಔಷಧೀಯ ಗುಣವನ್ನು ಒಳಗೊಂಡಿದೆ. ಚುಚ್ಚು ಮದ್ದಿನ ಕ್ರಿಯೆ, ಪೌಷ್ಠಿಕಾಂಶದ ವೃದ್ಧಿ ಹಾಗೂ ಔಷಧೀಯ ಗುಣಗಳನ್ನು ಒಳಗೊಂಡಿದೆ.

ತಜ್ಞರ ಸಲಹೆ

ತಜ್ಞರ ಸಲಹೆ

ಕೇವಲ ಆರು ತಿಂಗಳುಗಳ ಕಾಲ ಗೋಮೂತ್ರ ಚಿಕಿತ್ಸೆ ಪಡೆಯುವುದರಿಂದ ಮೈಗ್ರೇನ್ ಸಮಸ್ಯೆಯನ್ನು ಪರಿಹರಿಸಬಹುದು. ಆದರೆ ಆಯುರ್ವೇದಕ್ಕೆ ಸಂಬಂಧಿಸಿದ ತಜ್ಞರು ಅಧವಾ ಆರೋಗ್ಯ ಪರಿಣಿತರ ಸಲಹೆ ಪಡೆದು ಚಿಕಿತ್ಸೆಗೆ ಒಳಗಾಗಬೇಕು... ನೆನಪಿಡಿ ಯಾವುದಕ್ಕೂ ಒಮ್ಮೆ ವೈದ್ಯರ ಸಲಹೆ ಪಡೆದುಕೊಳ್ಳಿ...

ಗೋಮೂತ್ರವನ್ನು ಸೇವಿಸುವ ಬಗೆ

ಗೋಮೂತ್ರವನ್ನು ಸೇವಿಸುವ ಬಗೆ

ಗೋಮೂತ್ರವನ್ನು ಈ ಕೆಳಗೆ ನೀಡಿರುವ ಪ್ರಕಾರ ಸೇವಿಸಿದರೆ ದಿವ್ಯರೂಪದ ರೋಗನಿವಾರಕ ಶಕ್ತಿ ಲಭ್ಯವಾಗುತ್ತದೆ.

*ಗೋಮೂತ್ರದಲ್ಲಿರುವ ನೀರಿನ ಅಂಶವನ್ನು ನಿವಾರಿಸಿ ಸಾಂದ್ರತೆಯನ್ನು ಹೆಚ್ಚಿಸಿ ನೋವಿರುವ ಭಾಗಕ್ಕೆ ನೇರವಾಗಿ ಹಚ್ಚುವ ಮೂಲಕ ಉತ್ತಮ ಪರಿಣಾಮ

ದೊರಕುತ್ತದೆ.

*ದಿನಕ್ಕೆ ಕೆಲವೇ ಸಿಸಿ ಗಳಷ್ಟು ಗೋಮೂತ್ರದ ನೇರ ಸೇವನೆಯೂ ದಿವ್ಯರೂಪದ ರೋಗನಿವಾರಕ ಶಕ್ತಿ ಲಭಿಸಲು ನೆರವಾಗುತ್ತದೆ.

*ಒಂದು ಲೋಟ ಕುಡಿಯುವ ನೀರಿಗೆ ಕೆಲವೇ ಬಿಂದುಗಳಷ್ಟು ಗೋಮೂತ್ರ ಸೇರಿಸಿ ಮನೆಯ ಸುತ್ತಲೂ ಪ್ರೋಕ್ಷಳಿಸುವ ಮೂಲಕ ಮನೆಯ ಒಳಗೆ ದುಷ್ಟಶಕ್ತಿಗಳ ಪ್ರವೇಶ ತಡೆಯಲು ಸಾಧ್ಯ. ಪರ್ಯಾಯವಾಗಿ ಒಂದು ಬಕೆಟ್ ನೀರಿಗೆ ಕೊಂಚ ಗೋಮೂತ್ರ ಸೇರಿಸಿ ಸ್ನಾನ ಮಾಡಲು ಬಳಸಬಹುದು.

English summary

Why Indians Drink Cow Urine? Health Benefits Of Cow Urine

Though it may sound a bit strange to us, ancient Indians used cow urine to treat many diseases like TB, cancer and diabetes! There is another name for cow urine. It is known as 'gomutra'. Only the urine that is collected from a pregnant cow is said to have certain hormones and minerals in it and therefore is seen as therapeutic. It is believed to have a cleanse effect.
Story first published: Monday, July 10, 2017, 9:57 [IST]
X
Desktop Bottom Promotion