Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅಧ್ಯಯನ ವರದಿ: ವಯಸ್ಕರು ಕೂಡ ಚಾಕೊಲೇಟ್ ತಿನ್ನಬೇಕು
ಚಾಕೊಲೇಟ್ ಎಂದರೆ ಅದು ಮಕ್ಕಳಿಗಾಗಿ ಮಾಡಿರುವಂತಹದ್ದು, ಇದನ್ನು ದೊಡ್ಡವರಿಗೆ ತಿನ್ನಲು ಹಿಂಜರಿಕೆ. ಸಾಮಾನ್ಯವಾಗಿ ನಿಯಮಿತವಾಗಿ ಚಾಕೊಲೇಟ್ ತಿಂದರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಿಳಿದಿದೆ, ಆದರೆ ಮಕ್ಕಳ ಹಲ್ಲುಗಳು ಚಾಕೊಲೇಟ್ ತಿನ್ನುವುದರಿಂದ ಹಾಳಾಗುವುದರಿಂದ ಹೆಚ್ಚಾಗಿ ಮಕ್ಕಳಿಗೆ ಚಾಕೊಲೇಟ್ ನೀಡುವುದಿಲ್ಲ.
ಆದರೆ ಚಾಕೊಲೇಟ್ ತಿನ್ನುವುದರಿಂದ ವಯಸ್ಕರಲ್ಲಿ ಅರಿವಿನ ಶಕ್ತಿಯು ಹೆಚ್ಚಾಗುತ್ತದೆ. ಕೆಲಸ ಮಾಡುವ ಜ್ಞಾನ, ದೃಶ್ಯ ಪ್ರಕ್ರಿಯೆ ವೇಗ ಮತ್ತು ಮಾನಸಿಕ ದುರ್ಬಲತೆಗಳು ಚಾಕೊಲೇಟ್ ತಿನ್ನುವುದರಿಂದ ಕಡಿಮೆಯಾಗುವುದು ಎಂದು ಅಧ್ಯಯನಗಳು ಹೇಳಿವೆ...

ಕೆಲಸ ಮಾಡುವ ಜ್ಞಾನ ಹೆಚ್ಚುತ್ತದೆಯಂತೆ!
ಚಾಕೊಲೇಟ್‌ನಲ್ಲಿರುವಂತಹ ಕೋಕಾ ಬೀನ್ ಮತ್ತು ಫ್ಲಾವನಾಲ್‌ಗಳು ನರರೋಗದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ವಯಸ್ಕರನ್ನು ಈ ಅಧ್ಯಯನಕ್ಕೆ ಒಳಪಡಿಸಿದಾಗ ಕಂಡುಕೊಂಡಿರುವ ಸತ್ಯವೆಂದರೆ ಪ್ರತಿದಿನವೂ ಕೋಕಾ ಫ್ಲಾವನಾಲ್ ಸೇವನೆ ಮಾಡುವುದರಿಂದ ಅವರ ಕೆಲಸ ಮಾಡುವ ಜ್ಞಾನ, ಪ್ರಕ್ರಿಯೆ ವೇಗ ಹೆಚ್ಚಾಗಿದೆ ಮತ್ತು ಮಾನಸಿಕ ದುರ್ಬಲತೆಗಳು ಕಡಿಮೆಯಾಗಿದೆ ಎಂದು ಅಧ್ಯಯನಗಳು ಹೇಳಿವೆ.

ನರರೋಗದ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ
ಕೋಕಾ ಫ್ಲಾವನಾಲ್‍ಗಳ ಸೇವನೆಯಿಂದ ಅರಿವಿನ ಕಾರ್ಯಕ್ಷಮತೆಯು ಹೆಚ್ಚಾಗಿ ಕಾಲಾನಂತರವು ಇದು ದುರ್ಬಲತೆಯನ್ನು ನಿವಾರಣೆ ಮಾಡುತ್ತದೆ ಎಂದು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ ಎಂದು ಇಟಲಿಯ ಅಕ್ವಿಲಾ ವಿಶ್ವವಿದ್ಯಾನಿಲಯದ ವ್ಯಾಲೆಂಟಿನಾ ಸೋಕಿ ಕೋಕಾ ಫ್ಲಾವನಾಲ್ ನರರೋಗದ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ರಕ್ತಸಂಚಾರವನ್ನು ಉತ್ತಮ ಪಡಿಸುತ್ತದೆ
ಇದು ರಕ್ತಸಂಚಾರವನ್ನು ಉತ್ತಮ ಪಡಿಸುವ ಕಾರಣದಿಂದಾಗಿ ನರವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಣೆ ಮಾಡಿ ನರಕ್ಕೆ ಸಂಬಂಧಿಸಿದ ದೌರ್ಬಲ್ಯಗಳನ್ನು ನಿವಾರಣೆ ಮಾಡುತ್ತದೆ. ವಯಸ್ಸಾಗುತ್ತಾ ಇರುವಂತೆ ಜ್ಞಾಪಕ ಶಕ್ತಿಯು ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ವಯಸ್ಸಾದವರಿಗೆ ಇದು ತುಂಬಾ ಪರಿಣಾಮಕಾರಿಯಾಗಿದೆ ಎಂದು ಸೋಕಿ ಹೇಳಿದರು.

ಕೋಕಾ ಫ್ಲಾವನಾಲ್
ನಿದ್ರಾಹೀನತೆ ಹಾಗೂ ಕೆಲಸದ ಸಮಯದಲ್ಲಿ ಬದಲಾವಣೆಯಾಗುವಂತಹ ಮಹಿಳೆಯರಿಗೆ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದು ಕೋಕಾ ಫ್ಲಾವನಾಲ್ ಅವರಿಗೆ ನೆರವಾಗುತ್ತದೆ. ಕೋಕಾ ಫ್ಲಾವನಾಲ್ ನ ಪರಿಣಾಮವು ದೀರ್ಘ ಕಾಲದ ತನಕ ಉಳಿಯುತ್ತದೆ. ಇದು ಸುಮಾರು ಐದು ದಿನದಿಂದ ಮೂರು ತಿಂಗಳ ಕಾಲ ಉಳಿಯುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿದೆ ಎಂದು ಜರ್ನಲ್ ಫ್ರಂಟೈರ್ಸ್ ಇನ್ ನ್ಯೂಟ್ರಿಷನ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನವು ಹೇಳಿದೆ.

ಮೈಕಲ್ ಫೆರ್ರಾರ ಪ್ರಕಾರ...
ನಿಯಮಿತವಾಗಿ ಕೋಕಾ ಫ್ಲಾವನಾಲ್ ಅನ್ನು ಸೇವಿಸುವುದರಿಂದ ನರವ್ಯವಸ್ಥೆಗೆ ತುಂಬಾ ಲಾಭಕಾರಿ ಪರಿಣಾಮಗಳು ಉಂಟಾಗುವುದು. ಆದರೆ ಇದರಿಂದ ಕೆಲವೊಂದು ಅಡ್ಡಪರಿಣಾಮಗಳು ಕೂಡ ಇದೆ ಎಂದು ಇಟಲಿಯ ಅಕ್ವಿಲಾ ವಿಶ್ವವಿದ್ಯಾನಿಲಯದ ಮೈಕಲ್ ಫೆರ್ರಾರ ತಿಳಿಸಿದರು.

ಮೈಕಲ್ ಫೆರ್ರಾರ ಪ್ರಕಾರ...
ಚಾಕೊಲೇಟಿನಲ್ಲಿರುವ ಹೆಚ್ಚಿನ ಕ್ಯಾಲರಿ, ಅದರಲ್ಲಿ ಇರುವಂತಹ ಕೆಲವೊಂದು ರಾಸಾಯನಿಕಗಳು ಹಾಗೂ ಕೆಫಿನ್ ಮತ್ತು ಥೇಬ್ರೊಮಿನೆ ಯಂತಹ ಅಂಶಗಳು ಹಾಗೂ ಚಾಕೊಲೇಟಿಗೆ ಸೇರಿಸುವಂತಹ ಸಕ್ಕರೆ ಮತ್ತು ಹಾಲಿನಂತಹ ಇತರ ಕೆಲವೊಂದು ಅಂಶಗಳು ಅಡ್ಡಪರಿಣಾಮ ಉಂಟು ಮಾಡಬಹುದು ಎಂದು ಫೆರ್ರಾರ ಅಭಿಪ್ರಾಯಪಟ್ಟಿದ್ದಾರೆ.



Click it and Unblock the Notifications
