Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
ಮಧ್ಯಾಹ್ನದ ಊಟವಾದ ಕೂಡಲೇ, ನಿದ್ದೆ ಬರಲು ಕಾರಣವೇನು?
ಸಾಮಾನ್ಯವಾಗಿ ಮಧ್ಯಾಹ್ನದ ಊಟದ ಬಳಿಕ ಬಹುತೇಕ ಎಲ್ಲರಿಗೂ ಕುಳಿತಲ್ಲಿಯೇ ತೂಕಡಿಕೆ ಬಂದೇ ಬರುತ್ತದೆ. ಮನೆಯಲ್ಲಿದ್ದರೆ ಮಲಗಿಯೇ ಬಿಡುತ್ತೇವೆ. ಆದರೆ ಕೆಲಸದ ಸಮಯದಲ್ಲಿದ್ದಾಗ ಹಾಗೆ ಮಾಡಲಿಕ್ಕಾಗುವುದಿಲ್ಲವಲ್ಲ? ಕೊಂಚ ಗಮನಿಸಿದರೆ ಅಕ್ಕಪಕ್ಕದವರು ಕುಳಿತಲ್ಲಿಯೇ ಕೊಂಚ ತೂಕಡಿಸುವುದನ್ನು ಕಾಣಬಹುದು.
ಸಾಮಾನ್ಯವಾಗಿ ಹೆಚ್ಚಿನ ವ್ಯಕ್ತಿಗಳ ಕಾರ್ಯಕ್ಷಮತೆ ಬೆಳಗ್ಗಿನ ಹೊತ್ತು ಅತಿ ಹೆಚ್ಚಿರುತ್ತದೆ. ಆದರೆ ಮಧ್ಯಾಹ್ನದ ಊಟದ ಬಳಿಕ, ಅಂದರೆ ಸುಮಾರು ಎರಡು ಗಂಟೆಯಿಂದ ನಾಲ್ಕು ಗಂಟೆಯವರೆಗೆ ಬೆಳಗ್ಗಿನ ಕಾರ್ಯಕ್ಷಮತೆ ಪಡೆಯಲು ಹೆಚ್ಚೇ ಕಷ್ಟ ಪಡಬೇಕಾಗುತ್ತದೆ.
ಇದಕ್ಕೆ ಮನೋಭಾವ ಕೊಂಚ ಮಂದವಾಗುವುದು ಮುಖ್ಯ ಕಾರಣ. ಒಂದು ವೇಳೆ ಅವಕಾಶವಿದ್ದರೆ ಅಥವಾ ನೋಡುವವರು ಯಾರೂ ಇಲ್ಲದ ಸ್ಥಳದಲ್ಲಿದ್ದರೆ ಮಲಗಿಯೇ ಬಿಡುತ್ತಾರೆ ಅಥವಾ ಕುಳಿತ ಮೇಜಿನ ಮೇಲೆಯೇ ತಲೆಯಿಟ್ಟು ಕೊಂಚ ಹೊತ್ತು ಮಲಗುತ್ತಾರೆ. ಈ ಪರಿ ಪುರುಷರಲ್ಲಿಯೇ ಹೆಚ್ಚು ಕಾಣಬರುತ್ತದೆ ಎಂಬುದನ್ನು ಗಮನಿಸಿದರೆ ಕೊಂಚ ಅಚ್ಚರಿಯಾಗಬಹುದಲ್ಲವೇ? ಏಕಾಗಿ ನಮಗೆ ಈ ತೂಕಡಿಕೆ ಬರುತ್ತದೆ? ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ....

ಮಧ್ಯಾಹ್ನದ ಹೊತ್ತೇಕೆ ತೂಕಡಿಕೆ ಹೆಚ್ಚು?
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ ಸಂಶೋಧಕರು ಕೆಲವು ಪುರುಷರನ್ನು ಪ್ರಯೋಗಕ್ಕಾಗಿ ಆಯ್ದುಕೊಂಡು ದಿನದ ವಿವಿಧ ಹೊತ್ತಿನಲ್ಲಿ ಇವರ ಮೆದುಳಿನ ಚಟುವಟಿಕೆಯನ್ನು ಸ್ಕ್ಯಾನ್ ಮೂಲಕ ಗಮನಿಸಿದರು. ಮಧ್ಯಾಹ್ನದ ಎರಡು ಗಂಟೆಯ ಬಳಿಕ ನಿಜಕ್ಕೂ ಇವರೆಲ್ಲರ ಮೆದುಳಿನ ಚಟುವಟಿಕೆ ಕಡಿಮೆಯಾಗುವುದನ್ನು ಯಂತ್ರಗಳು ದಾಖಲಿಸಿದವು.

ಇದಕ್ಕೆ ಕಾರಣವೇನಿರಬಹುದು?
ಮನೋಭಾವ ದಿನದ ವಿವಿಧ ಅವಧಿಯಲ್ಲಿ ಮೇಲೆ ಕೆಳಗಾಗಲು ಮೆದುಳಿನ ವಿವಿಧ ಭಾಗಗಳ ಚಟುವಟಿಕೆಗಳಲ್ಲಿ ಏರಿಕೆ ಇಳಿಕೆಯಾಗುವುದನ್ನು ಕಂಡುಕೊಳ್ಳಲಾಗಿದ್ದು ಇವುಗಳನ್ನು ಆಧರಿಸಿದ ಚಟುವಟಿಕೆಗಳೂ ಅದಕ್ಕನುಗುಣವಾಗಿ ಏರುಪೇರಾಗುತ್ತವೆ.

ಹಾಗಾದರೆ ಮಧ್ಯಾಹ್ನದ ಹೊತ್ತಿನಲ್ಲಿ ಏನಾಗುತ್ತದೆ?
ಮೆದುಳಿನ ಕೆಲವು ಭಾಗಗಳಲ್ಲಿ ಚಟುವಟಿಕೆ ಬೆಳಗ್ಗಿನ ಹೊತ್ತು ಅತಿ ಹೆಚ್ಚಾಗಿರುತ್ತದೆ. ಅಂತೆಯೇ ಸಂಜೆಯ ಹೊತ್ತಿನಲ್ಲಿಯೂ ಸಹಾ. ಆದರೆ ಮಧ್ಯಾಹ್ನ ಎರಡರಿಂದ ನಾಲ್ಕು ಗಂಟೆಗಳವರೆಗೆ ಈ ಭಾಗಗಳ ಚಟುವಟಿಕೆ ಕಡಿಮೆಯಾಗುತ್ತದೆ.

ಈ ಮಾಹಿತಿಯನ್ನು ಪಡೆದ ಸಂಶೋಧಕರು ಏನು ಮಾಡಿದರು?
ಈ ಪರೀಕ್ಷೆಯನ್ನು ಸಂಶೋಧಕರು ಹಲವಾರು ಪುರುಷರ ಮೇಲೆ ಪ್ರಯೋಗಿಸಿದರು. ಇವರೆಲ್ಲರಿಗೂ ಜೂಜಾಟಕ್ಕೆ ಸಂಬಂಧಿಸಿದ ಕೆಲವು ಕೆಲಸಗಳನ್ನು ನಿರ್ವಹಿಸಲು ಕೇಳಿಕೊಳ್ಳಲಾಗಿತ್ತು. ಈ ಕೆಲಸವನ್ನು ಮೊದಲಿಗೆ ಬೆಳಿಗ್ಗೆ ಹತ್ತು ಘಂಟೆಗೆ, ಬಳಿಕ ಮಧ್ಯಾಹ್ನ ಎರಡು ಘಂಟೆಗೆ ನಂತರ ಸಂಜೆ ಏಳು ಗಂಟೆಗೆ ಪುನರಾವರ್ತಿಸಲು ತಿಳಿಸಲಾಗಿತ್ತು.

ಈ ಪ್ರಯೋಗದಿಂದ ಏನು ಕಂಡುಕೊಂಡರು?
ಈ ಪ್ರಯೋಗದ ಮಾಹಿತಿಗಳನ್ನು ಪಡೆದಾಗ ಬೆಳಗ್ಗಿನ ಮತ್ತು ಸಂಜೆಯ ಹೊತ್ತಿನ ಮೆದುಳಿನ ಕ್ಷಮತೆ ಹೆಚ್ಚಾಗಿದ್ದು ಮಧ್ಯಾಹ್ನದ ಹೊತ್ತು ಕಡಿಮೆಯಾಗಿತ್ತು.

ಇದಕ್ಕೇ ಏನು ಮಧಾಹ್ನ ಎರಡು ಗಂಟೆಗೆ ಪುರುಷರು ತೂಕಡಿಸುವುದು?
ಹೌದು, ಇದೇ ಕಾರಣಕ್ಕೆ ಪುರುಷರು ಮಧ್ಯಾಹ್ನ ಎರಡು ಗಂಟೆಗೆ ತೂಕಡಿಸಲು ಅಥವಾ ಸೋಮಾರಿತನ ಅನುಭವಿಸಲು ಕಾರಣವಿರಬಹುದು. ಮೆದುಳಿನ ಈ ಭಾಗದ ಚಟುವಟಿಕೆ ಕಡಿಮೆಯಾಗಿರುವ ಕಾರಣ ಎಚ್ಚರಿಕೆ ಅಥವಾ ಜಾಗರೂಕತೆ ವಹಿಸುವ ಪ್ರಮಾಣವೂ ಕಡಿಮೆಯಾಗಿರುತ್ತದೆ. ಅಲ್ಲದೇ ಗ್ರಹಣಶಕ್ತಿಯೂ ಕಡಿಮೆಯಾಗುವ ಕಾರಣ ತೂಕಡಿಕೆ ತಾನೇತಾನಾಗಿ ಆವರಿಸುತ್ತದೆ.

ಈ ಪ್ರಯೋಗದಿಂದ ಯಾವ ಸಹಾಯ ದೊರಕಿದಂತಾಯಿತು?
ಸಂಶೋಧಕರ ಮುಖ್ಯ ಉದ್ದೇಶ ನಿದ್ದೆಯ ಕೊರತೆ ಅಥವಾ ಅಸಮರ್ಪಕ ನಿದ್ದೆಯಿಂದ ಅಥವಾ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವುದೇ ಆಗಿತ್ತು. ಅಲ್ಲದೇ ಉಳಿದವರು ತಮ್ಮ ಕೆಲಸಗಳಲ್ಲಿ ಗರಿಷ್ಠ ಉತ್ಪಾದನೆಯನ್ನು ಪಡೆಯಲು ತಮ್ಮ ಮುಖ್ಯ ಕೆಲಸಗಳನ್ನು ಮಧ್ಯಾಹ್ನ ಒಂದು ಗಂಟೆಗೂ ಮುನ್ನ ಅಥವಾ ಮೂರು ಗಂಟೆಯ ಬಳಿಕ ನಿರ್ವಹಿಸುವಂತೆ ಬದಲಿಸಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು.



Click it and Unblock the Notifications