For Quick Alerts
ALLOW NOTIFICATIONS  
For Daily Alerts

ಮನೆ ಔಷಧಿ: ಈ ಏಳು ಸಮಸ್ಯೆಗೆ ಒಂದೇ ಮದ್ದು...'ಜೀರಿಗೆ ನೀರು'

By Hemanth
|

ಪ್ರತಿಯೊಂದು ಸಾಂಬಾರ ಪದಾರ್ಥಗಳಲ್ಲಿ ನಮ್ಮ ದೇಹಕ್ಕೆ ಬೇಕಾಗುವ ರೋಗನಿರೋಧಕ ಶಕ್ತಿ ಹಾಗೂ ಕಾಯಿಲೆಗಳನ್ನು ಬರದಂತೆ ತಡೆಗಟ್ಟುವ ಶಕ್ತಿಯಿದೆ. ಇದರಿಂದಾಗಿ ಹಿಂದಿನಿಂದಲೂ ಭಾರತೀಯರ ಅಡುಗೆ ತುಂಬಾ ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಪ್ರತಿಯೊಂದು ಸಾಂಬಾರ ಪದಾರ್ಥಗಳನ್ನು ಒಂದಲ್ಲಾ ಒಂದು ರೀತಿಯಿಂದ ದಿನನಿತ್ಯ ಸೇವಿಸುವ ಕಾರಣದಿಂದಾಗಿ ನಾವು ಕಾಯಿಲೆಗಳಿಂದ ದೂರ ಉಳಿಯುವುದು ಖಚಿತ. ಅಡುಗೆ ಮನೆಯಲ್ಲಿ ಹೆಚ್ಚಿನ ಎಲ್ಲಾ ಖಾದ್ಯಗಳಿಗೆ ಬಳಸುವಂತಹ ಜೀರಿಗೆಯು ತುಂಬಾ ಜನಪ್ರಿಯ.

ಜೀರಿಗೆ ಬೆರೆಸಿದ ಬೆಲ್ಲದ ನೀರು, ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ

ಜೀರಿಗೆಯು ಏಷ್ಯಾದ ಹೆಚ್ಚಿನ ದೇಶಗಳಲ್ಲಿ ಸಾಂಬಾರ ಪದಾರ್ಥವಾಗಿ ಬಳಕೆಯಾಗುತ್ತಿದೆ. ಇದರಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ. ಅದರಲ್ಲೂ ಜೀರಿಗೆ ನೀರು ಆರೋಗ್ಯಕ್ಕೆ ಅತ್ಯುತ್ತಮ. ಬಿಸಿ ನೀರಿಗೆ ಸ್ವಲ್ಪ ಜೀರಿಗೆ ಹಾಕಿಕೊಂಡು ಕುದಿಸಿ ಸೋಸಿಕೊಂಡು ನೀರನ್ನು ದಿನದಲ್ಲಿ ಒಂದು ಅಥವಾ ಮೂರು ಸಲ ಕುಡಿಯಬೇಕು. ಇದನ್ನು ಜಲ್ ಜೀರಾವೆಂದು ಕರೆಯಲಾಗುತ್ತದೆ. ಇದರಲ್ಲಿರುವ ಆರೋಗ್ಯ ಲಾಭಗಳ ಬಗ್ಗೆ ಮುಂದಕ್ಕೆ ಓದುತ್ತಾ ತಿಳಿಯಿರಿ....

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಸಹಕಾರಿ

ಜೀರಿಗೆ ನೀರು ಜೀರ್ಣಕ್ರಿಯೆಗೆ ತುಂಬಾ ಲಾಭಕಾರಿ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಜೀರಿಗೆ ನೀರು ಕೊಬ್ಬು ಮತ್ತು ಕಾರ್ಬ್ರೋಹೈಡ್ರೇಟ್ಸ್ ವಿಘಟಿಸುವ ಕಿಣ್ವಗಳ ಸ್ರವಿಸುವಿಕೆ ಹೆಚ್ಚಿಸುವುದು. ಹೊಟ್ಟೆಗೆ ಸಂಬಂಧಿಸಿದ ವಿವಿಧ ರೀತಿಯ ಸಮಸ್ಯೆಗಳಾದ ಅತಿಸಾರ, ಬೆಳಗ್ಗಿನ ನೋವು, ವಾಂತಿ ಮತ್ತು ಅಟೋನಿಕ್ ಡಿಸ್ಪೆಪ್ಸಿಯಾವನ್ನು ಕಡಿಮೆ ಮಾಡುವುದು.

ಕಲ್ಮಶ ಹೊರಹಾಕುವುದು

ಕಲ್ಮಶ ಹೊರಹಾಕುವುದು

ಜೀರಿಗೆ ನೀರು ಹೊಟ್ಟೆ ಹಾಗೂ ಯಕೃತ್ ಗೆ ಹಲವಾರು ರೀತಿಯ ಲಾಭ ಉಂಟು ಮಾಡಲಿದೆ. ಇದರಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಇದ್ದು, ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು.ದೇಹದ ವಿವಿಧ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಇದು ನೆರವಾಗುವುದು. ಜೀರಿಗೆ ನೀರಿನಲ್ಲಿ ಇರುವಂತಹ ಆಹಾರದ ನಾರಿನಾಂಸವು ದೇಹದಲ್ಲಿರುವ ಹಾನಿಕಾರಕ ಕಲ್ಮಶ ಹೊರಹಾಕಿ ಕರುಳಿನ ಕ್ರಿಯೆ ಸರಾಗವಾಗುವಂತೆ ಮಾಡುವುದು.

ರೋಗನಿರೋಧಕ ಶಕ್ತಿ ಹೆಚ್ಚಳ

ರೋಗನಿರೋಧಕ ಶಕ್ತಿ ಹೆಚ್ಚಳ

ಜೀರಿಗೆಯಲ್ಲಿ ಕಬ್ಬಿನಾಂಶವು ಸಮೃದ್ಧವಾಗಿದೆ. ಇದರಿಂದಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಒಂದು ಚಮಚ ಜೀರಿಗೆಯಿಂದ ಮಾಡಿರುವಂತಹ ನೀರಿನಲ್ಲಿ 1.3 ಮಿ.ಗ್ರಾಂ ಕಬ್ಬಿನಾಂಶವಿದೆ. ವಿಟಮಿನ್ ಎ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಕಾರಣ ಇದು ಆ್ಯಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುವುದು. ನಿಯಮಿತವಾಗಿ ಜೀರಿಗೆ ನೀರಿನ ಸೇವನೆಯಿಂದ ಹಲವಾರು ರೀತಿಯ ಕಾಯಿಲೆಗಳು ದೂರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ರಕ್ತಹೀನತೆ ನಿವಾರಣೆ

ರಕ್ತಹೀನತೆ ನಿವಾರಣೆ

ಜೀರಿಗೆಯಲ್ಲಿ ಇರುವಂತಹ ಕಬ್ಬಿನಾಂಶವು ರಕ್ತಹೀನತೆಯ ನಿವಾರಣೆ ಮಾಡುವುದು. ಕಬ್ಬಿನಾಂಶವು ದೇಹದಲ್ಲಿ ಹಲವಾರು ರೀತಿಯ ಕೆಲಸಗಳನ್ನು ನಿರ್ಹಿಸುವುದು. ಇದು ಕೆಂಪು ರಕ್ತ ಕಣಗಳನ್ನು ನಿರ್ಮಿಸುವುದು ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುವುದು. ದೇಹದಲ್ಲಿ ಕಬ್ಬಿನಾಂಶ ಕಡಿಮೆಯಿದ್ದರೆ ನಿವಾರಣೆ ಮಾಡಿ ರಕ್ತಹೀನತೆ ಸಮಸ್ಯೆ ಬಗೆಹರಿಸಬಹುದು.

'ಕಪ್ಪು ಜೀರಿಗೆ' ನೋಡಲು ಕಪ್ಪಗಿದ್ದರೂ, ಸಿಕ್ಕಾಪಟ್ಟೆ ಔಷಧೀಯ ಗುಣವಿದೆ

ನೆನಪಿನ ಶಕ್ತಿ ಹೆಚ್ಚಳ

ನೆನಪಿನ ಶಕ್ತಿ ಹೆಚ್ಚಳ

ಜೀರಿಗೆ ನೀರು ಮೆದುಳಿನ ಆರೋಗ್ಯ ವೃದ್ಧಿಸಿ ನೆನಪಿನ ಶಕ್ತಿ ಹೆಚ್ಚಿಸುವುದು. ಬಾಲ್ಯದಿಂದಲೇ ಮಕ್ಕಳಿಗೆ ಜೀರಿಗೆ ನೀರು ಕುಡಿಸುತ್ತಾ ಬಂದರೆ ಅವರ ಜ್ಞಾಪಕ ಶಕ್ತಿಯು ಹೆಚ್ಚುವುದನ್ನು ನೀವು ಕಾಣಬಹುದು.

ಒಳ್ಳೆಯ ಗುಣಮಟ್ಟದ ನಿದ್ರೆಗೆ

ಒಳ್ಳೆಯ ಗುಣಮಟ್ಟದ ನಿದ್ರೆಗೆ

ನಿದ್ರಾಹೀನತೆ ಸಮಸ್ಯೆ ನಿವಾರಣೆ ಮಾಡುವಲ್ಲಿ ಜೀರಿಗೆ ನೀರು ಪ್ರಮುಖ ಪಾತ್ರ ನಿರ್ವಹಿಸುವುದು. ಜೀರಿಗೆ ನೀರು ದಿನನಿತ್ಯ ಸೇವನೆ ಮಾಡುತ್ತಲಿದ್ದರೆ ನೀವು ಒಳ್ಳೆಯ ನಿದ್ರೆ ಪಡೆಯಬಹುದು.

ಮಹಿಳೆಯರ ಆರೋಗ್ಯ ವೃದ್ಧಿ

ಮಹಿಳೆಯರ ಆರೋಗ್ಯ ವೃದ್ಧಿ

ಜೀರಿಗೆ ನೀರು ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿ ಮಹಿಳೆಯರಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಭ್ರೂಣದ ಬೆಳವಣಿಗೆಗೆ ಅಗತ್ಯವಾಗಿರುವಂತಹ ಕಬ್ಬಿನಾಂಶವನ್ನು ಇದು ಒದಗಿಸುವುದು. ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿ ಮಹಿಳೆಯರ ಆರೋಗ್ಯಕ್ಕೆ ಜೀರಿಗೆ ನೀರು ತುಂಬಾ ಆರೋಗ್ಯಕಾರಿ.

ಗರ್ಭಿಣಿಯರ ಸಮಸ್ಯೆಗಳಿಗೆ ದಿವ್ಯೌಷಧ ಜೀರಿಗೆ ನೀರು

English summary

Why consuming Cumin Seeds water is a great way to health

Jal Jeera or cumin seeds water is a popular drink that has amazing health benefits. Jal Jeera is prepared by boiling a handful of jeera in water and straining the decoction. A glass full of cumin seeds water can be drunk once or thrice a day. Read on to know how this simple drink can help in maintaining good health.
X
Desktop Bottom Promotion