For Quick Alerts
ALLOW NOTIFICATIONS  
For Daily Alerts

ಎಚ್ಚರ: ಮಣಿಕಟ್ಟಿನ ಬಳಿ ಮೂಡಿರುವ ಗಂಟುಗಳು-ಇದು ಬಹಳ ಡೇಂಜರ್!

By Arshad
|

ಸಾಮಾನ್ಯವಾಗಿ ಮೂವತ್ತು ಕಳೆದ ಬಳಿಕ ಕೆಲವರ ಮಣಿಕಟ್ಟಿನ ಬಳಿ ಅಂದರೆ ಬೆರಳುಗಳ ಹಿಂಭಾಗ, ಗಂಟಿನ ಮೇಲೆ, ಹಿಂಭಾಗದಲ್ಲಿ ಅಥವಾ ಪಕ್ಕದಲ್ಲಿ ಒಳಗಿನಿಂದ ಮೂಳೆಯೇ ಬೆಳವಣಿಗೆ ಪಡೆದು ಚರ್ಮವನ್ನು ಹೊರದೂಡುತ್ತಿರುವಂತೆ ಚಿಕ್ಕ ಚಿಕ್ಕ ಗಂಟುಗಳು ಕಂಡುಬರುತ್ತವೆ. ಒತ್ತಿ ನೋಡಿದರೆ ಮೂಳೆಯಷ್ಟು ಗಟ್ಟಿಯೂ ಅಲ್ಲದ, ಸ್ನಾಯುವಿನಷ್ಟು ಮೃದುವೂ ಅಲ್ಲದ ಭಾಗ ಇರುವಂತೆ ಅನ್ನಿಸುತ್ತದೆ. ಈ ಗಂಟುಗಳನ್ನು ಸಾಮಾನ್ಯವಾಗಿ ಗಾಂಗ್ಲಿಯಾನ್ (ganglion) ಎಂದು ಕರೆಯುತ್ತಾರೆ.

ಕೆಲವೊಮ್ಮೆ ಈ ಗಂಟುಗಳು ಮಣಿಕಟ್ಟಿನಿಂದ ಕೊಂಚ ದೂರಕ್ಕೂ ಅಂದರೆ ಮಣಿಕಟ್ಟಿನಿಂದ ಮೊಣಕೈವರೆಗೂ, ಬೆರಳುಗಳಲ್ಲಿಯೂ, ಬೆರಳುಗಳ ಗಂಟುಗಳ ಬಳಿಯೂ ಕಾಣಬರುತ್ತವೆ. ಕೆಲವೊಮ್ಮೆ ಹೆಬ್ಬೆರಳಿನ ಬುಡದಲ್ಲಿ ಕಂಡುಬರುತ್ತವೆ. ಇವುಗಳು ಹಿಂದಿನ ಯಾವುದೋ ಗಾಯ ಅಥವಾ ಕೀಟದ ಕಚ್ಚುವಿಕೆಯಿಂದ ಆಗಿರಬಹುದು ಎಂದು ಹೆಚ್ಚಿನವರು ಅನುಮಾನ ಪಡುತ್ತಾರೆ. ಆದರೆ ಇವುಗಳನ್ನು ಒತ್ತಿದಾಗ ನೋವಿನ ಅನುಭವವಾಗದ ಕಾರಣಕ್ಕೆ ಹೆಚ್ಚಿನವರು ಈ ಬಗ್ಗೆ ತಲೆಬಿಸಿ ಮಾಡಿಕೊಳ್ಳದೇ ವೈದ್ಯರಿಗೂ ತೋರಿಸದೇ 'ನೋವು ಇದ್ದರೆ ತೋರಿಸಿದರಾಯ್ತು' ಎಂಬ ಉದಾಸೀನ ಭಾವನೆ ತಳೆದಿರುತ್ತಾರೆ.


ಬೆರಳಿನಲ್ಲಿ ಮೂಡಿರುವ ಉಂಗುರದ ಗುರುತಿನ ನಿವಾರಣೆ ಹೇಗೆ?

ಆದರೆ ವಾಸ್ತವವಾಗಿ ಈ ಗಂಟುಗಳು ದೇಹದ ಬೇರಾವುದೋ ತೊಂದರೆಯ ಲಕ್ಷಣವಾಗಿದೆ ಎಂದು ನಿಮಗೆ ಗೊತ್ತೇ? ಆದ್ದರಿಂದ ಈ ಗಂಟು ಮೂಡಲು ಕಾರಣವಾದ ತೊಂದರೆಯನ್ನು ಮೊದಲು ಕಂಡುಕೊಂಡು ತಕ್ಷಣವೇ ಚಿಕಿತ್ಸೆ ಪಡೆಯುವುದರಿಂದ ಮುಂದಾಗುವ ದೊಡ್ಡ ಅನಾಹುತದಿಂದ ಪಾರಾಗಬಹುದು.

ಈ ಗಂಟುಗಳನ್ನು ವೈದ್ಯಕೀಯ ಭಾಷೆಯಲ್ಲಿ ಹೈಗ್ರೋಮಾ ಅಥವಾ ಗ್ಯಾಂಗ್ಲಿಯಾನ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಇವು ಚಿಕ್ಕ ಸಾಸಿವೆ ಕಾಳಿನ ಗಾತ್ರದಲ್ಲಿ ಪ್ರಾರಂಭವಾಗಿ ದಿನೇ ದಿನೇ ಬೆಳೆಯುತ್ತಾ ಕೆಲವಾರು ವರ್ಷಗಳ ಬಳಿಕ ಚಿಕ್ಕ ಮಾವಿನ ಕಾಯಿಯ ಗೊರಟಿನ ಗಾತ್ರ ಪಡೆಯುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಇವುಗಳನ್ನು ಒತ್ತಿದರೆ ನೋವಾಗುವುದಿಲ್ಲ. ಇದೇ ಕಾರಣಕ್ಕೆ ಹೆಚ್ಚಿನವರು ತಲೆಬಿಸಿ ಮಾಡಿಕೊಳ್ಳುವುದಿಲ್ಲ.

ಕೆಲವು ಗಂಟುಗಳು ಮಾತ್ರ ಮುಖ್ಯ ನರಗಳ ಮೇಲೆ ಅಥವಾ ಪಕ್ಕದಲ್ಲಿ ಬೆಳೆದು ರಕ್ತಪರಿಲಚನೆಗೆ ಅಡ್ಡಿಯಾವುಗ ಹಾಗೂ ಇವುಗಳನ್ನು ಒತ್ತಿದಾಗ ನೋವುಂಟಾಗುವುದರಿಂದ ಅನಿವಾರ್ಯವಾಗಿ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದಿರುತ್ತಾರೆ. ಆದರ ಅಲಕ್ಷ್ಯಕ್ಕೊಳಗಾದ ಗಂಟುಗಳು ದಿನೇ ದಿನೇ ಬೆಳೆಯುತ್ತಾ ದೊಡ್ಡ ಗಂಟುಗಳಾಗಿ ಸೌಂದರ್ಯವನ್ನು ಕೆಡಿಸುತ್ತವೆ ಹಾಗೂ ನೋಡಿದವರೆಲ್ಲಾ ಇದೇನು ಇದೇನು ಎಂದು ಕೇಳಿದವರಿಗೆ ಉತ್ತರ ಹೇಳುತ್ತಾ ಹೋಗುವುದಕ್ಕಿಂತ ಪೂರ್ಣತೋಳಿಸ ಶರ್ಟ್ ಧರಿಸುವುದೇ ಉತ್ತಮ ಎಂದು ತಮ್ಮ ಕೈಗಳನ್ನು ಪ್ರದರ್ಶಿಸದೇ ಇರುವ ನಿರಾಶಾವಾದಕ್ಕೆ ಶರಣಾಗುತ್ತಾರೆ. ಬನ್ನಿ, ಈ ಗಂಟುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ...

 ಚಲನೆಗೆ ಅಡ್ಡಿ

ಚಲನೆಗೆ ಅಡ್ಡಿ

ಎಲ್ಲಿಯವರೆಗೆ ಈ ಗಂಟುಗಳು ಮುಖ್ಯ ನರಗಳನ್ನು ತಟ್ಟುವುದಿಲ್ಲವೋ ಅಲ್ಲಿಯವರೆಗೆ ಯಾವುದೇ ನೋವು ಕಾಣಬರುವುದಿಲ್ಲ. ಆದರೆ ವಿಶೇಷವಾಗಿ ಮಣಿಕಟ್ಟು ಮಡಚುವಲ್ಲಿ ಅಥವಾ ಬೆರಳುಗಳು ಮಡಚುವಲ್ಲಿ ಈ ಗಂಟುಗಳು ಮೂಡಿದ್ದರೆ ಕೈ ಮಡಚುವಾಗ ಅಥವಾ ತೆರೆಯುವಾಗ, ಬೆರಳುಗಳನ್ನು ಮಡಚುವಾಗ ಈ ಗಂಟುಗಳು ಅಡ್ಡಿಯಾಗಿ ಪೂರ್ಣವಾಗಿ ಮಡಚಲು ಅಸಾಧ್ಯವಾಗಿಸುತ್ತವೆ ಅಥವಾ ಕೊಂಚ ನೋವನ್ನೂ ಉಂಟುಮಾಡುತ್ತವೆ.

ಚರ್ಮ ಸುಲಿಯುವುದು

ಚರ್ಮ ಸುಲಿಯುವುದು

ಒಳಗಿನ ಗಂಟು ಚರ್ಮವನ್ನು ದೂಡುವುದರಿಂದ ಚರ್ಮ ಹೆಚ್ಚಿನ ಸೆಳೆತಕ್ಕೆ ಒಳಗಾಗುತ್ತದೆ. ಆಗ ಹೊರಚರ್ಮ ಅತಿ ಹೆಚ್ಚು ಸೆಳೆಯುತ್ತದೆ ಹಾಗೂ ಒಳಚರ್ಮಕ್ಕೆ ಹೆಚ್ಚೂ ಕಡಿಮೆ ತಾಕುವಂತಿರುತ್ತದೆ. ಪರಿಣಾಮವಾಗಿ ಹೊರಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳು ದೊರಕದೇ ಕಳಾಹೀನವಾಗುತ್ತದೆ. ಈ ಚರ್ಮ ನಿಧಾನವಾಗಿ ತನ್ನ ಬಿಗಿತನವನ್ನು ಕಳೆದುಕೊಂಡು ಸಿಪ್ಪೆ ಸುಲಿದಂತೆ ಕಳಸಿ ಕೊಳ್ಳಲಾರಂಭಿಸುತ್ತದೆ. ಈ ಚರ್ಮ ಸುಲಿಯುವಿಕೆ ಒಳಗೆ ಗಂಟುಗಳಿರುವ ಸ್ಪಷ್ಟ ಲಕ್ಷಣಗಳಾಗಿವೆ.

ಚುಚ್ಚಿದಂತಹ ನೋವು

ಚುಚ್ಚಿದಂತಹ ನೋವು

ಒಂದು ವೇಳೆ ಈ ಗಂಟು ಮುಖ್ಯ ನರಗಳಿಗೆ ತಾಕಿದಂತಿದ್ದರೆ ಇಲ್ಲಿ ನೋವು ಕಾಣಬರುತ್ತದೆ. ವಿಶೇಷವಾಗಿ ಗಂಟುಗಳು ಅಕ್ಕಪಕ್ಕದ ಅಂಗಾಂಶಗಳಲ್ಲಿ ಉರಿ ತರಿಸುವ ಮೂಲಕ ಗಂಟುಗಳಿರುವಲ್ಲಿ ಚಿಕ್ಕದಾಗಿ ಉರಿಯುತ್ತಿರುತ್ತದೆ.

ಚರ್ಮದ ಸಂವೇದನೆ

ಚರ್ಮದ ಸಂವೇದನೆ

ಸಾಮಾನ್ಯ ಗಾತ್ರದ ಗಂಟುಗಳಿಂದ ಚರ್ಮದ ಸಂವೇದನೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಾಣಬರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಗಂಟುಗಳು ರಕ್ತಪರಿಚಲನೆಗೆ ಅಡ್ಡಿಯಾಗಿಸುವ ಮೂಲಕ ಚರ್ಮದ ಸಂವೇದನೆಯನ್ನು ಕಡಿಮೆಯಾಗಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಸಂವೇದನೆ ಹೆಚ್ಚಲೂಬಹುದು. ಯಾವಾಗ ಚರ್ಮದ ಸಂವೇದನೆಯಲ್ಲಿ ವ್ಯತ್ಯಾಸ ಕಂಡುಬಂದಿತೋ ಆಗ ಚರ್ಮದಡಿಯಲ್ಲಿ ಗಂಟು ಇದೆ ಎಂದು ತಿಳಿದುಕೊಳ್ಳಬಹುದು.

ಚಿಕಿತ್ಸೆ

ಚಿಕಿತ್ಸೆ

ಯಾವಾಗ ಈ ಗಂಟು ಕಂಡುಬಂದಿತೋ, ಮೊದಲಿನ ಪುರುಸೊತ್ತಿನಲ್ಲಿ ನಿಮ್ಮ ಕುಟುಂಬ ವೈದ್ಯರಿಗೆ ಇವನ್ನು ತೋರಿಸಿ ಸಲಹೆ ಪಡೆಯಿರಿ. ಈ ಗಂಟು ಮೂಡಿರುವ ಸ್ಥಾನ, ನೋವಿನ ಅನುಭವ ಮೊದಲಾದವುಗಳನ್ನು ಪರಿಗಣಿಸಿ ಇವನ್ನು ಹಾಗೇ ಬಿಡುವುದು ಮೇಲೋ, ಅಥವಾ ಇದಕ್ಕೆ ಚಿಕಿತ್ಸೆ ಅಗತ್ಯವಿದೆಯೋ ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ಗ್ಯಾಂಗ್ಲಿಯಾನ್ ಗಳು ಚಿಕ್ಕದಾಗಿದ್ದು ನರಗಳಿಗೆ ಹಾನಿಯೊಡ್ಡುವ ಸಂಭವವಿದ್ದರೆ ಹೈಗ್ರೋಮಾಗಳು ದೊಡ್ಡ ಗಾತ್ರದಲ್ಲಿದ್ದರೂ ಸಾಮಾನ್ಯವಾಗಿ ನಿರಪಾಯಕಾರಿಯಾಗಿವೆ. ಹಾಗಾಗಿ ಇವು ದೊಡ್ಡದಾಗಿ ಕ್ಯಾನ್ಸರ್ ಗಡ್ಡೆಯಾಗುತ್ತವೆ ಎಂಬ ಆತಂಕ ಬೇಡ.

ಚಿಕಿತ್ಸೆ

ಚಿಕಿತ್ಸೆ

ಆದರೆ ಈ ಗಂಟುಗಳು ಮೂಡಲು ಕಾರಣವೇನೆಂಬುದನ್ನು ತಕ್ಷಣಕ್ಕೆ ವಿವರಿಸಲು ಸಾಧ್ಯವಿಲ್ಲ. ವೈದ್ಯರು ಕೆಲವು ಪರೀಕ್ಷೆಗಳಿಗೆ ಸಲಹೆ ಮಾಡಿ ಇವುಗಳ ಫಲಿತಾಂಶವನ್ನು ಆಧರಿಸಿ ಈ ಗಂಟುಗಳನ್ನು ಶಸ್ತ್ರಕ್ರಿಯೆಯ ಮೂಲಕ ನಿವಾರಿಸುವುದು ಒಳ್ಳೆಯದೋ ಅಥವಾ ಹಾಗೇ ಬಿಟ್ಟರೆ ತೊಂದರೆ ಇಲ್ಲವೋ ಎಂಬುದನ್ನು ನಿರ್ಧರಿಸುತ್ತಾರೆ. ಒಂದು ವೇಳೆ ಗಂಭೀರ ಸಮಸ್ಯೆಯ ಮೂಲಕ ಈ ಗಂಟುಗಳು ಮೂಡಿದ್ದರೆ ಮಾತ್ರ ಈ ಸಮಸ್ಯೆಯ ಇರುವಿಕೆಯನ್ನು ಸೂಕ್ತಕಾಲದಲ್ಲಿ ಗಮನಿಸಿ ತಕ್ಷಣ ಚಿಕಿತ್ಸೆ ಪಡೆದರೆ ಆ ಸಮಸ್ಯೆ ಇಲ್ಲವಾಗುತ್ತಿದ್ದಂತೆಯೇ ಈ ಗಂಟು ಸಹಾ ಇಲ್ಲವಾಗುತ್ತದೆ.

English summary

Why a Bump on Your Wrist May Be a Cause for Concern

symptoms of cyst on wrist, causes for bump on wrist, symptoms of ganglion on wrist, bump on wrist, hard lump on wrist feels like bone, causes for lump on wrist, causes of small lump on wrist,Have you noticed these lesions or bumps that appear on the palms, wrists or fingers? We usually tend to blame it on an injury, an insect bite or work-related blisters. But did you know that this bump can actually indicate a serious health problem? You need to treat this issue with the utmost seriousness at the earliest!
X
Desktop Bottom Promotion