For Quick Alerts
ALLOW NOTIFICATIONS  
For Daily Alerts

  ಉಪ್ಪು: ರುಚಿಗೆ ತಕ್ಕಷ್ಟೇ ಸಾಕೆ ಅಥವಾ ಇನ್ನೂ ಬೇಕೆ?

  By Anuradha Yogesh
  |

  'ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ' ಎಂಬ ಕನ್ನಡದ ನಾಣ್ಣುಡಿಯನ್ನು ಕೇಳದ ಕನ್ನಡಿಗರೇ ಇರಲಿಕ್ಕಿಲ್ಲ. ಆದರೆ ಈಗೀಗ ಉಪ್ಪು ಎಂದರೆ ಸಾಕು ಭಯಬೀಳುವ ಹಾಗಿದೆ. ಯಾವದೂ ಅತಿಯಾಗಿ ಸೇವಿಸಿದರೆ ವಿಷವೇ ಸರಿ. ಅನೇಕರಿಗೆ ಫಾಸ್ಟ್ ಫುಡ್ ಕಡೆಗೇ ಒಲವು ಬಹಳ. ಆದರೆ ಫಾಸ್ಟ್ ಫುಡ್ ನಲ್ಲಿರುವ ಎಮ್‌ಎಸ್‌ಜಿ ಅಂಶವು ಬಹಳ ಉಪ್ಪಿನಿಂದ ಕೂಡಿರುತ್ತದೆ. ಇದರಿಂದ ನಮಗರಿವಿಲ್ಲದೆ ಅಗತ್ಯಕ್ಕಿಂತ ಹೆಚ್ಚು ಉಪ್ಪನ್ನು ಸೇವಿಸಿ ಬಿಡುತ್ತೇವೆ.

  salt

  30 ವಯಸ್ಸಿನ ಆಸುಪಾಸಿನಲ್ಲಿರುವ ಯುವಜನರೇ ಅಧಿಕ ರಕ್ತದೊತ್ತಡದಿಂದ ಬಳಲುವಂತಾಗಿದೆ. ಈ ಸಮಸ್ಯೆಗೆ ವೈದ್ಯರ ಮೊದಲ ಸಲಹೆಯೆಂದರೆ ಉಪ್ಪಿನಂಶ ಕಡಿಮೆಗೊಳಿಸುವದು. ಅಧ್ಯಯನಗಳ ಪ್ರಕಾರ ಒಬ್ಬ ವಯಸ್ಕನ ದೇಹಕ್ಕೆ 2300 ಮಿ.ಗ್ರಾಂ. ನಷ್ಟು ಉಪ್ಪಿನಂಶ ಬೇಕು. ಆದರೆ ಕೆಲವು ಜನರ ದೈಹಿಕ ಸ್ಥಿತಿಗೆ ಅನುಸಾರವಾಗಿ ಹೆಚ್ಚಿನ ಉಪ್ಪಿನಂಶ ಬೇಕಾಗಬಹುದೆಂದರೆ ಆಶ್ಚರ್ಯವಾಗುತ್ತದೆಯೆ? ಈ ಕೆಳಗೆ ತಿಳಿಸಿದ ಒಂದಾದರು ದೈಹಿಕಿ ಸ್ಥಿತಿ ನಿಮಗೆ ಅನ್ವಯವಾಗುತ್ತಿದ್ದರೆ, ತಡಮಾಡದೆ ವೈದ್ಯರನ್ನು ಸಂಪರ್ಕಿಸಿ, ನಿಮಗೆ ಅಗತ್ಯವಿರುವ ಉಪ್ಪಿನಂಶದ ಬಗ್ಗೆ ಚರ್ಚಿಸುದರಲ್ಲಿ ಯಾವದೇ ಅಪಾಯವಿಲ್ಲ.

  When Should You Include More Salt?

  ಅತ್ಯಂತ ಕ್ಲಿಷ್ಟಕರವಾದ ದೈಹಿಕ ಚಟುವಟಿಕೆಯಲ್ಲಿ ತೊಡಗಿರುವ ಆಟಗಾರರು ಆಟೋಟಗಳಲ್ಲಿ ಭಾಗವಹಿಸುವವರು, ಮೇಲಿಂದ ಮೇಲೆ ಮ್ಯಾರಾಥಾನ್ ಓಡುವವರಿಗೆ ಸ್ವಲ್ಪ ಹೆಚ್ಚಿನಂಶದ ಉಪ್ಪು ಬೇಕಾಗುತ್ತದೆ. ಇಲ್ಲವಾದರೆ ಒಮ್ಮೆಲೆ ಉಪ್ಪಿನಂಶ ಕುಸಿದು 'ಹೈಪೋನಟ್ರೇಮಿಯ'(ದೇಹದಲ್ಲಿ ಹೆಚ್ಚಿನ ನೀರಿನಂಶ ಉಳಿದುಕೊಂಡು, ಸೋಡಿಯಂ ಅಂಶದಲ್ಲಿ ಕುಸಿತವಾಗುವದು) ಕಾಣಿಸಿಕೊಳ್ಳುತ್ತದೆ. ಇದರಿಂದ ವ್ಯಕ್ತಿಯು ಒಮ್ಮೆಲೆ ನಿಶ್ಯಕ್ತಿ ಅನುಭವಿಸಿ ತಲೆಸುತ್ತಿ ಬೀಳಬಹುದು.

  ಅತಿಯಾದ ಉಷ್ಣ ಪ್ರದೇಶದಲ್ಲಿ (ಚೆನ್ನೈನಂತಹ) ವಾಸಿಸಿತ್ತಿದ್ದರೆ

  ಉಷ್ಣ ಜಾಸ್ತಿ ಇರುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಬಹಳ ಸೆಖೆಯಾಗಿ ಬೆವರು ಹರಿದು ಹೋಗುತ್ತದೆ. ಇದರಿಂದ ದೇಹದಲ್ಲಿನ ಸೋಡಿಯಂ ಅಂಶ ಕುಸಿದು ವ್ಯಕ್ತಿ 'ಹೈಪೋನಟ್ರೇಮಿಯ' ದಿಂದ ಬಳಲಬಹುದು.

  Kidney

  ನೆಫ್ರೋಪಥಿ ಎಂಬ ಕಿಡ್ನಿ ರೋಗದಿಂದ ಬಳಲುತ್ತಿದ್ದರೆ

  ನೆಫ್ರೋಪಥಿಯಿಂದ ಬಳಲುವ ರೋಗಿಗಳು ಪದೆ ಪದೆ ಮೂತ್ರ ವಿಸರ್ಜನೆ ಮಾಡುವದರಿಂದ ದೇಹದಲ್ಲಿನ ಸೋಡಿಯಂ ಅಂಶ ಕಡಿಮೆಯಾಗುತ್ತದೆ. ಈ ರೋಗಿಗಳು ತಮ್ಮ ಊಟದಲ್ಲಿ ಉಪ್ಪಿನಂಶವನ್ನು ಹೆಚ್ಚಿಸಿಕೊಳ್ಳಲೇಬೇಕು.

  tablets

  ಡೈಯುರೆಟಿಕ್ಸ್(ಮೂತ್ರವರ್ಧಕ) ಸೇವಿಸುತ್ತಿದ್ದರೆ

  ರಕ್ತದೊತ್ತಡ ನಿಭಾಯಿಸಲು ಕೆಲವು ರೋಗಿಗಳಿಗೆ ವೈದ್ಯರು ದೈಯುರೆಟಿಕ್ಸ್ ಕೊಡುತ್ತಾರೆ. ಇದರಿಂದ ದೇಹದಲ್ಲಿನ ಖನಿಜಾಂಶಗಳ ಮಟ್ಟದಲ್ಲಿ ಏರುಪೇರಾಗುವ ಸಂಭವನೆಗಳಿರುತ್ತವೆ. ಇಂಥ ವ್ಯಕ್ತಿಗಳು ವೈದ್ಯರ ಸಲಹೆಯ ಮೇರೆಗೆ ಊಟದಲ್ಲಿ ಉಪ್ಪಿನ ಅಂಶವನ್ನು ಹೆಚ್ಚಿಸಿಕೊಳ್ಳಬೇಕು.

  ನಿಮ್ಮ ವಯಸ್ಸು 80 ದಾಟುತ್ತಿದ್ದರೆ

  ಕೆಲವು ಅಧ್ಯಯನಗಳ ಪ್ರಕಾರ ೮೦ರ ಆಸುಪಾಸಿನಲ್ಲಿರುವವರು ಕಡಿಮೆ ಉಪ್ಪಿನಂಶ ಸೇವಿಸಿದರೆ ಮೆದುಳಿನ ಕ್ರಿಯಾಶೀಲತೆ ಕಡಿಮೆಯಾಗುತ್ತದೆ. ಆದ್ದರಿಂದ ವೈದ್ಯರನ್ನು ಕನ್ಸಲ್ಟ್ ಮಾಡಿ ಉಪ್ಪಿನಂಶವನ್ನು ನಿಭಾಯಿಸಬೇಕು.

  ಬಾರ್ಟರ್ ಎಂಬ ಅಪರೂಪದ ಸಿಂಡ್ರೋಮ್‌ನಿಂದ ಬಳಲುತ್ತಿದ್ದರೆ

  ಶೇ.90ರಷ್ಟು ಬಾರಿ ಈ ರೋಗವು ಸಣ್ಣ ಮಕ್ಕಳಲ್ಲೇ ಕಂಡುಬರುತ್ತದೆ. ಕೆಲವೊಮ್ಮೆ ದೊಡ್ಡವರಲ್ಲೂ ಕಾಣಿಸಿಕೊಂಡಿದೆ. ಈ ರೋಗಿಗಳಲ್ಲಿ ಅತಿಯಾದ ವಾಂತಿ ಮತ್ತು ನೀರಡಿಕೆ ಕಂಡು ಬರುತ್ತದೆ. ಕಿಡ್ನಿ ಕೂಡ ಸರಿಯಾಗಿ ಕಾರ್ಯ ನಿರ್ವಹಿಸುವದರಲ್ಲಿ ಅಸಫಲವಾಗುತ್ತದೆ. ಇವರು ವೈದ್ಯರ ಸಲಹೆ ಪಡೆದುಕೊಂದು ಉಪ್ಪಿನಂಶವನ್ನು ನಿಭಾಯಿಸಬೇಕು.

  ಅಧಿಕ ಉಪ್ಪು ಸೇವನೆ ಮಾಡುವ ತಾಪತ್ರಯಗಳು

  ಅಧಿಕವಾಗಿ ಉಪ್ಪು ಸೇವಿಸಿದ್ರೆ ಮೂಳೆಗಳು ದುರ್ಬಲಗೊಳ್ಳಬಹುದು, ಅಷ್ಟೇ ಅಲ್ಲ, ಅಧಿಕ ಉಪ್ಪಿನಿಂದ ಹೃದಯಕ್ಕೂ ತೊಂದರೆಯುಂಟಾಗುತ್ತೆ. ಜಾಸ್ತಿ ಉಪ್ಪಿನಿಂದ ದಣಿವೂ ಹೆಚ್ಚುತ್ತೆ. ಮುಖದ ಕಳೆಯೂ ಹಾಳಾಗುತ್ತೆ. ಸೋ ಉಪ್ಪು ಸೇವನೆಗೂ ಮುನ್ನ ಸ್ವಲ್ಪ ಕೇರ್ ಫುಲ್ ಆಗಿರಬೇಕು. ಅಧಿಕ ಉಪ್ಪು ಸೇವನೆಯೂ ತಪ್ಪು. ಕಡಿಮೆ ಉಪ್ಪು ತಿನ್ನೋದು ತಪ್ಪು.

  salt

  ನಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟು ಉಪ್ಪು ಸೇವನೆಯಿಂದ ಖಂಡಿತ ಆರೋಗ್ಯ ಕಾಪಾಡಿಕೊಳ್ಳಬಹುದು.. ಈ ಸೂತ್ರ ಕೇವಲ ಉಪ್ಪಿಗೆ ಮಾತ್ರವಲ್ಲ, ಪ್ರತಿ ಆಹಾರಕ್ಕೂ ಅನ್ವಯಿಸುತ್ತೆ. ನೀವು ಆರೋಗ್ಯವಂತರಾಗಿರಬೇಕು ಅಂದ್ರೆ ಸರಿಯಾದ ಪ್ರಮಾಣದ ಡಯಟ್ ಸೂತ್ರ ಅಳವಡಿಸಿಕೊಳ್ಳಬಹುದು. ಅದರಲ್ಲಿ ಉಪ್ಪಿಗೂ ಮಹತ್ವ ನೀಡಲೇಬೇಕು.

  salt

  ನಿಮ್ಮ ತೂಕದ ವಿಚಾರದಲ್ಲಿ ಉಪ್ಪು ಕೂಡ ಪ್ರಮುಖ ಪಾತ್ರ ವಹಿಸಿರುತ್ತೆ. ಕೇವಲ ತೂಕ ಮಾತ್ರವಲ್ಲ ನಿಮ್ಮ ಆಯಸ್ಸು ಕೂಡ ಉಪ್ಪು ಸೇವನೆಯ ಪ್ರಮಾಣದ ಮೇಲೆ ನಿಗದಿಯಾಗಿರುತ್ತೆ. ಅಡುಗೆಯಲ್ಲಿ ಸ್ವಲ್ಪ ಸಿಹಿ, ಹುಳಿ, ಖಾರ ಇಲ್ಲದೆ ಇದ್ದಾಗಲೂ ಸೇವಿಸಿಬಿಡಬಹುದೇನೋ ಆದ್ರೆ ಉಪ್ಪಿಲ್ಲದ ಅಡುಗೆ ತಿನ್ನೋಕೆ ಅಸಾಧ್ಯವೇ ಸರಿ. ಹಾಗಾಗಿಯೇ ಅಲ್ವೇ ಉಪ್ಪಿಗಿಂತ ರುಚಿ ಬೇರೆ ಇಲ್ಲ ಅಂತ ಹೇಳೋದು.. 

  English summary

  When Should You Include More Salt?

  Did you know that some scenarios or medical conditions actually do demand that you eat more salt? The current recommendation of salt intake per day is 2300 mg. Some people consume adequate amounts of sodium and some in greater amounts. In this article, we have mentioned the reasons on when a person needs to include more salt. So, read further to know more on why should we eat more salt under these conditions.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more