ಮಹಿಳೆಯರಿಗೆ ಸುಳಿವು ನೀಡದೇ ಕಾಡುವ ಸ್ತನದ ಸಮಸ್ಯೆ! ನಿರ್ಲಕ್ಷಿಸಬೇಡಿ..

By: Hemanth
Subscribe to Boldsky

ದೇಹವೆನ್ನುವುದು ದೇವರು ಎಂಬ ಇಂಜಿನಿಯರ್ ಮಾಡಿರುವ ಅಪೂರ್ವ ವಸ್ತು. ಇದಕ್ಕೆ ಸರಿಸಮನಾಗಿರುವುದು ಮತ್ತೊಂದಿಲ್ಲ. ದೇಹದ ಹೊರಗೆ ಹಾಗೂ ಒಳಗಡೆ ಹಲವಾರು ಅಂಗಗಳು ಇವೆ. ಈ ಅಂಗಾಂಗಳು ನಮ್ಮ ಆರೋಗ್ಯವನ್ನು ಅವಲಂಬಿಸಿಕೊಂಡಿರುವುದು. ದೇಹದ ಹೊರಗಿನ ಭಾಗದ ಕೆಲವೊಂದು ಅಂಗಾಂಗಳು ದೇಹದ ಒಳಗಿನ ಆರೋಗ್ಯ ಸೂಚಿಸಬಹುದು. ಇಷ್ಟು ಮಾತ್ರವಲ್ಲದೆ ಸಂಪೂರ್ಣ ಆರೋಗ್ಯ ಈ ಅಂಗಗಳನ್ನು ನೋಡಿಕೊಂಡು ತಿಳಿಯಬಹುದು.

ದೇಹದ ಒಳಗಡೆ ಏನಾದರೂ ಸಮಸ್ಯೆಯಾದರೆ ಹೊರಗಿನ ಅಂಗಗಳ ಮೇಲೆ ಅದರ ಪರಿಣಾಮ ಬೀರುವುದು. ಅದೇ ರೀತಿ ಸ್ತನವು ದೇಹದ ಒಳಗಡೆ ಏನು ಆಗುತ್ತಿದೆ ಎಂದು ತಿಳಿಸಿಕೊಡಲಿದೆ. ಸ್ತನವು ನಿಮ್ಮ ಆರೋಗ್ಯ ಹೇಳುವುದು. ಸ್ತನದಲ್ಲಿ ಯಾವುದೇ ರೀತಿಯ ಅಸಾಮಾನ್ಯ ಕ್ರಿಯೆ ಕಂಡುಬಂದರೆ ಅದರ ಬಗ್ಗೆ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಸೂಕ್ತ.

ಮಹಿಳೆಯರಲ್ಲಿ ಹೆಚ್ಚಾಗಿ ಸ್ತನದ ನೋವು ಅವರ ಜೀವಮಾನದ ಯಾವುದಾದರೂ ಒಂದು ಘಟ್ಟದಲ್ಲಿ ಕಂಡುಬರುವುದು. ಕೆಲವರಿಗೆ ಹಾರ್ಮೋನು ಬದಲಾವಣೆ ವೇಳೆ ಮತ್ತು ಋತುಚಕ್ರದ ಸಮಯದಲ್ಲಿ ನೋವು ಕಂಡುಬರುವುದು. ಕೆಲವರಿಗೆ ಋತುಚಕ್ರದ ವೇಳೆ ಸ್ತನದ ನೋವಿನೊಂದಿಗೆ ಅದರ ಗಾತ್ರದಲ್ಲಿಯೂ ಬದಲಾವಣೆ ಆಗುವುದು.

ಈ ಮಸಾಜ್ ಮಾಡಿದರೆ ಸ್ತನ ಗಾತ್ರ ಹೆಚ್ಚುವುದು

ಋತುಚಕ್ರ ಕಳೆದ ಬಳಿಕ ಇದು ಮತ್ತೆ ಸಹಜ ಸ್ಥಿತಿಗೆ ಬರುವುದು. ಪ್ರೌಢವಾಸ್ಥೆಗೆ ಬಂದಾಗ ಮಹಿಳೆಯರಲ್ಲಿ ಸ್ತನವು ಬೆಳವಣಿಗೆಯಾಗುವುದು. ಆದರೆ ಇದು ಸಮಯ ಕಳೆದಂತೆ ಬದಲಾಗುತ್ತಾ ಇರುವುದು. ಆಹಾರ ಕ್ರಮ, ವ್ಯಾಯಾಮ ಮತ್ತು ಜೀವನಶೈಲಿಯಿಂದ ಸ್ತನದ ಗಾತ್ರ ಬದಲಾಗುವುದು. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಸ್ತನದ ಮೂಲಕ ನಿಮ್ಮ ಆರೋಗ್ಯ ತಿಳಿಯುವುದು ಹೇಗೆ ಎಂದು ತಿಳಿಸಿಕೊಡಲಿದೆ.... 

ಸ್ತನದ ಗಾತ್ರದಲ್ಲಿ ಬದಲಾವಣೆ

ಸ್ತನದ ಗಾತ್ರದಲ್ಲಿ ಬದಲಾವಣೆ

ದೇಹದ ತೂಕ ಹೆಚ್ಚಳ, ಗರ್ಭನಿರೋಧಕ ಮಾತ್ರೆಗಳು ಮತ್ತು ಋತುಚಕ್ರದ ವೇಳೆ ಹಾರ್ಮೋನು ಬದಲಾವಣೆಯಿಂದ ಸ್ತನದ ಗಾತ್ರದಲ್ಲಿ ಬದಲಾವಣೆಯಾಗುವುದು. ಸ್ತನದ ಗಾತ್ರವು ದೊಡ್ಡದಾಗುವುದು ತೂಕ ಹೆಚ್ಚಳವಾಗಿರುವ ಸಂಕೇತ. ಗಾತ್ರ ಕುಗ್ಗುವುದು ತೂಕ ಕಳೆದುಕೊಂಡ ಸಂಕೇತ. ಋತುಚಕ್ರದ ಕೆಲವು ದಿನಗಳ ಮೊದಲು ಅಥವಾ ಗರ್ಭಧಾರಣೆ ವೇಳೆ ಸ್ತನದ ಗಾತ್ರವು ದೊಡ್ಡದಾಗುವುದು.

ಸ್ತನದ ಆಕಾರದಲ್ಲಿ ಬದಲಾವಣೆ

ಸ್ತನದ ಆಕಾರದಲ್ಲಿ ಬದಲಾವಣೆ

ಅತಿಯಾಗಿ ಆಹಾರ ಪಥ್ಯ ಮತ್ತು ತೂಕದಲ್ಲಿ ಏರುಪೇರಿನಿಂದಾಗಿ ಸ್ತನದ ಆಕಾರ ಬದಲಾಗುವ ಅಪಾಯವಿದೆ. ವಯಸ್ಸಾಗುತ್ತಾ ಇರುವಂತೆ ಸ್ತನವು ಜೋತುಬೀಳಲು ಆರಂಭವಾಗುವುದು. ಅಸ್ಥಿರಜ್ಜುಗಳು ವಿಸ್ತಾರಗೊಳ್ಳುವುದರಿಂದ ಮತ್ತು ಚರ್ಮವು ತನ್ನ ಸ್ಥಿತಿಸ್ಥಾಪಕತ್ವ ಕಳೆದುಕೊಳ್ಳುವ ಕಾರಣ ಹೀಗೆ ಆಗುವುದು.

ಸ್ತನದ ನೋವು

ಸ್ತನದ ನೋವು

ಋತುಚಕ್ರದ ಮೊದಲು ಸ್ತನದ ನೋವು ಕಾಣಿಸಿಕೊಳ್ಳುವುದು. ಇದನ್ನು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಅಥವಾ ಪಿಎಂಎಸ್ ಎಂದು ಕರೆಯುತ್ತಾರೆ. ಋತುಚಕ್ರಕ್ಕೆ ಮೊದಲು ಸ್ತನದಲ್ಲಿ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಇನ್ನು ಕೆಲವು ವರ್ಷಗಳ ಕಾಲ ನೀವು ಈ ನೋವನ್ನು ಅನುಭವಿಸಬೇಕು.

ಅಸಾಮಾನ್ಯ ಸ್ತನ ಬದಲಾವಣೆ

ಅಸಾಮಾನ್ಯ ಸ್ತನ ಬದಲಾವಣೆ

ಹಠಾತ್ ಅಥವಾ ಯಾವುದೇ ಕಾರಣವಿಲ್ಲದೆ ಸ್ತನದಲ್ಲಿ ಬದಲಾವಣೆ ಕಂಡುಬಂದರೆ ಇದು ಯಾವುದಾದರೂ ಗಂಭೀರ ಆರೋಗ್ಯದ ಸಮಸ್ಯೆ ಎಂದು ತಿಳಿದುಕೊಳ್ಳಿ. ಹಠಾತ್ ಉಂಡೆಗಳು ಅಥವಾ ಉಬ್ಬುಗಳು, ತೊಟ್ಟುವಿನಿಂದ ಸೋರುವಿಕೆ ಇತ್ಯಾದಿ ಇದರ ಲಕ್ಷಣಗಳು. ಈ ಪರಿಸ್ಥಿತಿಯಿದ್ದರೆ ನೀವು ತಡಮಾಡದೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು.

ತಿರುಗುಮುರುಗಾದ ಸ್ತನ ತೊಟ್ಟುಗಳು

ತಿರುಗುಮುರುಗಾದ ಸ್ತನ ತೊಟ್ಟುಗಳು

ಸ್ತನದ ತೊಟ್ಟುಗಳು ಯಾವಾಗಲೂ ಇದೇ ರೀತಿ ತಿರುಗುಮುರುಗಾಗಿದ್ದರೆ ಯಾವುದೇ ರೀತಿಯ ಸಮಸ್ಯೆಯಿಲ್ಲ. ಆದರೆ ಹೊಸತಾಗಿ ಸ್ತನ ತೊಟ್ಟುಗಳು ತಿರುಗುಮುರುಗಾದರೆ ಇದರಲ್ಲಿ ಏನೋ ಸಮಸ್ಯೆಯಿದೆ ಎಂದು ಅರ್ಥ. ನೀವು ತಕ್ಷಣ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳಿ. ಈ ರೀತಿ ಸ್ತನದ ತೊಟ್ಟು ತಿರುಗುಮುರುಗಾಗಲು ಸ್ತನದ ಕ್ಯಾನ್ಸರ್ ಮುಖ್ಯ ಕಾರಣವಾಗಿದೆ. ನಿಮ್ಮ ಆರೋಗ್ಯದ ಬಗ್ಗೆ ಸ್ತನಗಳು ಹೇಳುವ ರೀತಿಯಿದು.

ಬಣ್ಣ ಬದಲಾಗುವುದು

ಬಣ್ಣ ಬದಲಾಗುವುದು

ಹೆಚ್ಚಿನ ಸ್ತನದ ಕ್ಯಾನ್ಸರ್ ನಿಂದ ಸ್ತನದ ಬಣ್ಣವು ಬದಲಾಗುವುದು ಮತ್ತು ಗುಳಿ ಬೀಳುವುದು. ಆದರೆ ಬಣ್ಣ ಬದಲಾವಣೆಯು ಗರ್ಭಧಾರಣೆಯ ಸೂಚನೆಯು ಆಗಿದೆ. ಈ ವೇಳೆ ಸ್ತನದ ತೊಟ್ಟುಗಳು ಮತ್ತು ಅದರ ಸುತ್ತಲಿನ ಭಾಗವು ವಿಸ್ತಾರಗೊಂಡು ಕಡುಬಣ್ಣಕ್ಕೆ ತಿರುಗುವುದು.

ಸ್ತನ ಗಾತ್ರವನ್ನು ಹಿಗ್ಗಿಸುವ ನೈಸರ್ಗಿಕ ಟಾಪ್ 5 ಗಿಡ ಮೂಲಿಕೆಗಳು

English summary

What Your Breasts Can Tell You About Your Health

Breasts develop when we hit puberty, but they keep changing over time. Changes in the diet, exercise and lifestyle can cause subtle changes in the breasts too. In this article, we'll let you know what your breasts say about your health. Read further to know about the things that your breasts can reveal about your health.
Subscribe Newsletter