For Quick Alerts
ALLOW NOTIFICATIONS  
For Daily Alerts

ನೆನಪಿಡಿ... ಅತಿಯಾದ ಜೇನುತುಪ್ಪದ ಸೇವನೆ ಆರೋಗ್ಯಕ್ಕೆ ಹಾನಿಕರ

By Divya
|

ಜೇನು ತುಪ್ಪವನ್ನು ಶತಮಾನಗಳಿಂದ ನಾವು ಔಷಧಗಳ ಉದ್ದೇಶಕ್ಕಾಗಿ ಬಳಸಿಕೊಂಡು ಬರುತ್ತಿದ್ದೇವೆ. ಇದು ತನ್ನ ಉಪಶಮನಕಾರಿ ಗುಣಗಳಿಂದಾಗಿ ಮತ್ತು ಗಾಯಗಳನ್ನು ಇನ್‍ಫೆಕ್ಷನ್ ಆಗದೆ ತಡೆಯುವ ಗುಣಗಳಿಂದಾಗಿ ಖ್ಯಾತಿ ಪಡೆದಿದೆ. ಜೇನಿನ ಸವಿಯ ಜೊತೆಗೆ ಅದರಲ್ಲಿರುವ ಔಷಧ ಗುಣಗಳು ಇದನ್ನು ಜನಪ್ರಿಯಗೊಳಿಸಿವೆ. ಆದರೆ ಅತಿಯಾಗಿ ಸೇವಿಸಿದರೆ ಅಮೃತವು ವಿಷವಾಗುವಂತೆ, ಜೇನನ್ನು ಅತಿಯಾಗಿ ಸೇವಿಸಿದರೆ ಅಡ್ಡ ಪರಿಣಾಮಗಳಿಗೆ ಗುರಿಯಾಗಬೇಕಾಗುತ್ತದೆ.

ಜೇನು ಅಪ್ಪಟವೇ ಅಥವಾ ಕಲಬೆರಕೆಯೇ? ಹೀಗೆ ಪರೀಕ್ಷಿಸಿ

ಹೌದು ಜೇನು ತುಪ್ಪದ ಅತಿಯಾದ ಸೇವನೆಯಿಂದ ಆರೋಗ್ಯದಲ್ಲಿ ಅನೇಕ ಅಡ್ಡ ಪರಿಣಾಮಗಳು ಉಂಟಾಗುತ್ತದೆ. ಜೇನು ತುಪ್ಪದ ಒಂದು ಟೀ ಚಮಚ 5.8ಗ್ರಾಂ ಕಾರ್ಬೋಹೈಡ್ರೇಟ್‍ಗಳನ್ನು ಹೊಂದಿರುತ್ತದೆ. ಇದರಲ್ಲಿರುವ ಎಲ್ಲಾ ಕಾರ್ಬೋಹೈಡ್ರೇಟ್‍ಗಳು ಸಕ್ಕರೆಯ ರೂಪದಲ್ಲಿರುತ್ತವೆ. ಜೇನು ತುಪ್ಪದಲ್ಲಿರುವ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿ ಅಂಶವು ನಾವು ಬಳಕೆ ಮಾಡುವ ಸಕ್ಕರೆಯ ಪ್ರಭಾವವನ್ನೇ ಬೀರುತ್ತದೆ ಎನ್ನಲಾಗುತ್ತದೆ.....

ಮಧುಮೇಹಿಗಳು ಜೇನು ತುಪ್ಪವನ್ನು ಸೇವಿಸಬಾರದು...

ಮಧುಮೇಹಿಗಳು ಜೇನು ತುಪ್ಪವನ್ನು ಸೇವಿಸಬಾರದು...

ಜೇನು ತುಪ್ಪವು ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಹೊಂದಿರುತ್ತದೆ. ಅತಿಯಾಗಿ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಒಬ್ಬ ಆರೋಗ್ಯವಂತ ವ್ಯಕ್ತಿಯಲ್ಲಿ ಇನ್ಸುಲಿನ್ ಉತ್ಪಾದನೆಯು ಸಕ್ಕರೆ ಮಟ್ಟದಲ್ಲಿ ಹೆಚ್ಚಳವನ್ನು ಪ್ರತಿರೋಧಿಸುತ್ತದೆ. ಹಾಗಾಗಿ ಮಧುಮೇಹಿಗಳು ಜೇನು ತುಪ್ಪವನ್ನು ಸೇವಿಸಬಾರದು.

ದಂತ ಸಮಸ್ಯೆ

ದಂತ ಸಮಸ್ಯೆ

ಯುಎಸ್‍ಡಿಎ ನ್ಯಾಷನಲ್ ನ್ಯೂಟ್ರಿಯೆಂಟ್ ಡಾಟಾಬೇಸ್‍ನ ಪ್ರಕಾರ ಸುಮಾರು 82 ಪ್ರತಿಶತದಷ್ಟು ಜೇನುತುಪ್ಪವನ್ನು ಸಕ್ಕರೆ ಒಳಗೊಂಡಿರುತ್ತದೆ. ಇದು ಸುಲಭವಾಗಿ ದಂತಕ್ಷಯವನ್ನು ಉತ್ತೇಜಿಸುತ್ತದೆ. ಬಾಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ಟೀರಿಯ ಹುಟ್ಟುವಂತೆ ಮಾಡುತ್ತದೆ. ಜೊತೆಗೆ ದಂತ ಕವಚದ ಸವೆತ ಉಂಟಾಗುವುದು. ಹಲ್ಲಿನಲ್ಲೂ ಸಹ ಕೊಳೆತ ಉಂಟಾಗುವುದು.

ತೂಕ ಹೆಚ್ಚಿಸುವುದು

ತೂಕ ಹೆಚ್ಚಿಸುವುದು

ಅತಿಯಾದ ಜೇನು ತುಪ್ಪದ ಸೇವನೆಯಿಂದ ತೂಕದಲ್ಲೂ ಹೆಚ್ಚಳ ಉಂಟಾಗುವುದು. ಅತಿಯಾದ ಸಕ್ಕರೆ ಪ್ರಮಾಣದಿಂದ ಬೊಜ್ಜು ಹೆಚ್ಚುವುದಲ್ಲದೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದು.

ಜೀರ್ಣಾಂಗ ವ್ಯವಸ್ಥೆಯಲ್ಲಿ ವ್ಯತ್ಯಾಸ

ಜೀರ್ಣಾಂಗ ವ್ಯವಸ್ಥೆಯಲ್ಲಿ ವ್ಯತ್ಯಾಸ

ಜೇನು ತುಪ್ಪವನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಅಸಮರ್ಪಕ ಕಾರ್ಯಕ್ಕೆ ಕಾರಣವಾಗುವುದು. ಆಸಿಡ್ ರಿಫ್ಲಕ್ಸ್ ಎಂಬ ರೋಗದ ಉದಯವಾಗುವುದು.

ಮಲಬದ್ಧತೆ ಮತ್ತು ಹೊಟ್ಟೆ ತೊಂದರೆ

ಮಲಬದ್ಧತೆ ಮತ್ತು ಹೊಟ್ಟೆ ತೊಂದರೆ

ಜೇನುತುಪ್ಪದ ಅತಿಯಾದ ಸೇವನೆಯಿಂದ ಮಲಬದ್ಧತೆ ಉಂಟಾಗುವುದು. ಇದರಲ್ಲಿ ಫ್ರಕ್ಟೋಸ್ ಪ್ರಮಾಣ ಹೆಚ್ಚಿರುವುದರಿಂದ ಹೊಟ್ಟೆ ಉಬ್ಬುವುದು ಮತ್ತು ಅತಿಸಾರ ಉಂಟಾಗುವುದು. ಅಸಮರ್ಪಕ ಜೀರ್ಣಕ್ರಿಯೆಯಿಂದ ಅನೇಕ ತೊಂದರೆ ಉಂಟಾಗುವುದು.

ಕಡಿಮೆ ರಕ್ತದೊತ್ತಡ

ಕಡಿಮೆ ರಕ್ತದೊತ್ತಡ

ಕಡಿಮೆ ರಕ್ತದೊತ್ತಡ ಇರುವ ವ್ಯಕ್ತಿಗಳು ಜೇನುತುಪ್ಪವನ್ನು ಸೂಕ್ತ ರೀತಿಯಲ್ಲಿ ಸೇವಿಸಬೇಕು. ಇಲ್ಲವಾದರೆ ಆರೋಗ್ಯದಲ್ಲಿ ಅನೇಕ ತೊಂದರೆಗಳುಂಟಾಗಬಹುದು. ಅತಿಯಾದ ಸೇವನೆಯಿಂದ ಹೃದಯದ ಗಂಭೀರ ಸಮಸ್ಯೆಗೆ ಕಾರಣವಾಗುವುದು.

 ಜೇನು ತುಪ್ಪದ ಸೇವನೆಯ ಪ್ರಮಾಣ

ಜೇನು ತುಪ್ಪದ ಸೇವನೆಯ ಪ್ರಮಾಣ

ಜೇನು ತುಪ್ಪದ ಸೇವನೆ ಮಾಡುವಾಗ ಸೂಕ್ತ ಪ್ರಮಾಣದ ಅಳತೆ ಹೊಂದಿರಬೇಕು. ದಿನ ನಿತ್ಯ ಸರಿಸುಮಾರು 10 ಟೀಚಮಚ, ಅಂದರೆ 50 ಮಿ.ಲೀ. ಜೇನುತುಪ್ಪವನ್ನು ಸೇವಿಸಬಹುದು.

ಸಲಹೆ

ಸಲಹೆ

ಒಂದು ದಿನಕ್ಕೆ ಎಷ್ಟು ಜೇನು ತುಪ್ಪವನ್ನು ಸೇವಿಸಬಹುದು ಎಂಬ ಕುರಿತು ಯಾವುದೇ ಮಿತಿಗಳು ಇಲ್ಲ. ಆದರೆ ಇದನ್ನು ಪ್ರತಿನಿತ್ಯ ಹೆಚ್ಚಾಗಿ ಸೇವಿಸಬೇಡಿ ಎಂದು ಹೇಳಲಾಗುತ್ತದೆ. ಒಂದು ವೇಳೆ ನೀವು ಅಧಿಕ ಪ್ರಮಾಣದ ಸಿಹಿ ತಿನಿಸುಗಳನ್ನು ಸೇವಿಸಿದ ದಿನ ಜೇನು ತುಪ್ಪವನ್ನು ಸೇವಿಸಲು ಹೋಗಬೇಡಿ. ಸೇವಿಸಲೇ ಬೇಕಾದಲ್ಲಿ ಸ್ವಲ್ಪ ಮಾತ್ರ ಸೇವಿಸಿ. ನಿಮ್ಮ ಸಕ್ಕರೆಯ ಸೇವನೆಯ ಪ್ರಮಾಣವನ್ನು ಯಾವುದೇ ಕಾರಣಕ್ಕು 100 ಕ್ಯಾಲೋರಿಗಳಿಗಿಂತ ಹೆಚ್ಚಿಗೆ ಮಾಡಿಕೊಳ್ಳಬೇಡಿ. ಅಂದರೆ ಪ್ರತಿ ದಿನ 6 ಟೀ ಚಮಚ ಪ್ರಮಾಣದ ಒಳಗೆ ನಿಮ್ಮ ಸಕ್ಕರೆಯ ಸೇವನೆ ಮಿತಿಯಿರಲಿ.

English summary

What Happens When You Eat Too Much Of Honey?

We all know that consuming honey has its own positive effects on our health. It has been used as a natural remedy for thousands of years. But what happens when you consume too much of it? You guessed it right! It is a well-known fact that consuming too much of anything is bad and honey is no exception. Come on readers, let us explore some of the adverse effects of consuming too much of honey on our human system.
Story first published: Thursday, July 13, 2017, 20:47 [IST]
X
Desktop Bottom Promotion