For Quick Alerts
ALLOW NOTIFICATIONS  
For Daily Alerts

  ಬೆಣ್ಣೆ ಹಣ್ಣಿನ ಎಲೆಗಳ ಚಹಾ ಕುಡಿಯಿರಿ- ತಲೆ ನೋವಿನಿಂದ ಮುಕ್ತಿ ಪಡೆಯಿರಿ

  By Arshad
  |

  ಬೆಣ್ಣೆಹಣ್ಣು (avocado), ಬಟರ್ ಫ್ರುಟ್ ಎಂದೇ ನಾವೆಲ್ಲಾ ಹೆಚ್ಚಾಗಿ ಗುರುತಿಸುತ್ತೇವೆ. ಇದರಲ್ಲಿರುವ ತಿರುಳು ಬೆಣ್ಣೆಯನ್ನೇ ಹೋಲುವ ಹಾಗೂ ಇದರ ಸೇವನೆಯಿಂದ ತೂಕ ಹೆಚ್ಚುವ ಕಾರಣ ಇದಕ್ಕೆ ಬೆಣ್ಣೆಯ ಅನ್ವರ್ಥನಾಮ ಲಭಿಸಿದೆ. ವಿಶ್ವದಾದ್ಯಂತ ಈ ಹಣ್ಣನ್ನು ಆರೋಗ್ಯ ವೃದ್ದಿಗಾಗಿ ಸೇವಿಸಲಾಗುತ್ತದೆ. ಈ ಬಗ್ಗೆ ನಡೆಸಿದ ಸಂಶೋಧನೆಗಳ ಮೂಲಕ ಬೆಣ್ಣೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ನುಗಳು, ಆಂಟಿ ಆಕ್ಸಿಡೆಂಟುಗಳು ಹಾಗೂ ಇತರ ಖನಿಜಗಳಿದ್ದು ಆರೋಗ್ಯ ವರ್ಧಕವಾಗಿವೆ.

  ಅಲ್ಲದೇ ಇದರಲ್ಲಿರುವ ಒಮೆಗಾ 3 ಕೊಬ್ಬಿನ ಆಮ್ಲಗಳು ದೇಹದ ಹಲವಾರು ಅಗತ್ಯ ಕಾರ್ಯಗಳನ್ನು ನಿರ್ವಹಿಸಲು ನೆರವಾಗುತ್ತದೆ. ಬೆಣ್ಣೆಹಣ್ಣು ನೀಡುವ ನೂರಾರು ಪ್ರಯೋಜನಗಳಲ್ಲಿ ಪ್ರಮುಖವಾದುದೆಂದರೆ ಸ್ನಾಯುಗಳ ಬೆಳವಣಿಗೆ, ತೂಕದಲ್ಲಿ ಇಳಿಕೆ, ಘಾಸಿಗೊಂಡ ಜೀವಕೋಶಗಳ ಮರುಹುಟ್ಟು, ಹಾರ್ಮೋನುಗಳ ಅಸಮತೋಲನವನ್ನು ಸರಿಪಡಿಸುವುದು ಇತ್ಯಾದಿ. ಇವೆಲ್ಲಾ ಬೆಣ್ಣೆಹಣ್ಣಿನ ತಿರುಳಿನ ಸೇವನೆಯಿಂದ ಪಡೆಯಬಹುದಾದ ಪ್ರಯೋಜನಗಳಾದರೆ ಇದರ ಎಲೆಗಳಲ್ಲಿಯೂ ಹಲವಾರು ಪ್ರಯೋಜನಗಳಿವೆ ಎಂದು ಇದಕ್ಕೂ ಮೊದಲು ನಿಮಗೆ ತಿಳಿದಿತ್ತೇ? 

  ಆವಕಾಡೊ-ಸೌತೆಕಾಯಿ ಜ್ಯೂಸ್‌ನ ಶ್ರೀಮಂತ ಗುಣಗಳು...

  ಹೌದು, ಈ ಎಲೆಗಳನ್ನು ಒಣಗಿಸಿ ಮಾಡಿದ ಪುಡಿಯನ್ನು ಟೀಪುಡಿಯಂತೆಯೇ ಕುದಿಸಿ ಈ ಟೀ ಕುಡಿಯುವ ಮೂಲಕ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಇಂದಿನ ದಿನಗಳಲ್ಲಿ ನೈಸರ್ಗಿಕ ಆಹಾರಗಳನ್ನೇ ಔಷಧಿಯ ರೂಪದಲ್ಲಿ ಬಳಸುವ ಮೂಲಕ ಆರೋಗ್ಯವನ್ನು ಕಾಪಾಡುವುದು ವಿಶ್ವದೆಲ್ಲೆಡೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ತರಕಾರಿ, ಹಣ್ಣುಗಳಲ್ಲಿರುವ ಪೋಷಕಾಂಶಗಳು ನಿಜವಾಗಿಯೂ ಪರಿಣಾಮಕಾರಿ ಎಂದುಬನ್ನು ಜನರು ಮನಗಾಣುತ್ತಿದ್ದಾರೆ.

  ಬೆಣ್ಣೆ ಹಣ್ಣಿನಲ್ಲಿ ಅಡಗಿದೆ-ಬೆಣ್ಣೆಯಂತಹ ಸೌಂದರ್ಯ!

  ತರಕಾರಿ ಮತ್ತು ಹಣ್ಣುಗಳಲ್ಲಿರುವ ಔಷಧೀಯ ಗುಣಗಳು ಹಲವಾರು ವ್ಯಾಧಿಗಳು ಬರದಂತೆ ರಕ್ಷಣೆ ಒದಗಿಸುತ್ತವೆ ಹಾಗೂ ಈಗಿರುವ ವ್ಯಾಧಿಗಳನ್ನು ಗುಣಪಡಿಸಲೂ ನೆರವಾಗುತ್ತವೆ. ಅಲ್ಲದೇ ಇದರಲ್ಲಿರುವ ಇನ್ನೊಂದು ಅನುಕೂಲತೆ ಎಂದರೆ ಇವುಗಳ ಸೇವನೆಯಿಂದ ಯಾವುದೇ ಅಡ್ಡಪರಿಣಾಮಗಳಾಗದೇ ಇರುವುದು. ಹಣ್ಣು ತರಕಾರಿಗಳ ನಿಯಮಿತ ಸೇವನೆಯಿಂದ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬಹುದು ಹಾಗೂ ಕೆಲವಾರು ವ್ಯಾಧಿಗಳನ್ನು ಗುಣಪಡಿಸಲೂಬಹುದು.....

  ಬೆಣ್ಣೆಹಣ್ಣಿನ ಎಲೆಗಳ ಚಹಾ ಮಾಡುವ ವಿಧಾನ

  ಬೆಣ್ಣೆಹಣ್ಣಿನ ಎಲೆಗಳ ಚಹಾ ಮಾಡುವ ವಿಧಾನ

  ಇದಕ್ಕಾಗಿ ಸುಮಾರು ಮೂರರಿಂದ ನಾಲ್ಕು ಚೆನ್ನಾಗಿ ಒಣಗಿದ ಬೆಣ್ಣೆಹಣ್ಣಿನ ಮರದ ಎಲೆಗಳನ್ನು ಪುಡಿಮಾಡಿ ಕೊಂಚ ಒಂದು ಲೋಟ ನೀರಿನಲ್ಲಿ ಕುದಿಸಿ ಇಪ್ಪತ್ತು ನಿಮಿಷಗಳವರೆಗೆ ಚಿಕ್ಕ ಉರಿಯಲ್ಲಿರುವಂತೆ ಮಾಡಿ ಬಳಿಕ ಸೋಸಿ ಈ ನೀರಿಗೆ ಒಂದು ಚಿಕ್ಕ ಚಮಚ ಜೇನು ಬೆರೆಸಿ ವಾರದಲ್ಲಿ ಮೂರು ದಿನ (ಅಂದರೆ ದಿನ ಬಿಟ್ಟು ದಿನ) ಬೆಳಗ್ಗಿನ ಉಪಾಹಾರದ ಬಳಿಕ ಸೇವಿಸುತ್ತಾ ಬನ್ನಿ.

  ತಲೆನೋವು ಗುಣಪಡಿಸುತ್ತದೆ

  ತಲೆನೋವು ಗುಣಪಡಿಸುತ್ತದೆ

  ಈ ಟೀ ಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮೆದುಳಿಗೆ ಧಾವಿಸುವ ರಕ್ತದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ತಲೆನೋವನ್ನು ಕಡಿಮೆ ಮಾಡುತ್ತವೆ. ವಿಶೇಷವಾಗಿ ಮೈಗ್ರೇನ್ ತಲೆನೋವಿಗೆ ಈ ವಿಧಾನ ಅತಿ ಸೂಕ್ತವಾಗಿದೆ. ಅಲ್ಲದೇ ಸುಸ್ತು, ಕುಹರ ಅಥವಾ ಸೈನಸ್ ನ ಸೋಂಕಿನಿಂದ ಎದುರಾದ ತಲೆನೋವನ್ನೂ ಈ ಟೀ ಕಡಿಮೆ ಮಾಡುತ್ತದೆ.

  ಮಲಬದ್ಧತೆ ಕಡಿಮೆ ಮಾಡುತ್ತದೆ

  ಮಲಬದ್ಧತೆ ಕಡಿಮೆ ಮಾಡುತ್ತದೆ

  ಈ ಟೀಯಲ್ಲಿ ಹೆಚ್ಚಿನ ಪ್ರಮಾಣದ ಕರಗುವ ನಾರು ಇದೆ. ಇದು ಆಹಾರ ಜೀರ್ಣಗೊಂಡ ಬಳಿಕ ತ್ಯಾಜ್ಯವನ್ನು ವಿಸರ್ಜಿಸುವ ಮುನ್ನ ಗಟ್ಟಿಯಾಗದಂತೆ ತಡೆಯುತ್ತದೆ ಹಾಗೂ ಕರುಳುಗಳ ಒಳಭಾಗದಲ್ಲಿ ಜಾರುಕದಂತೆ ಕೆಲಸ ಮಾಡುತ್ತದೆ. ತನ್ಮೂಲಕ ಮಲವಿಸರ್ಜನೆ ಅತಿ ಸುಲಭವಾಗುತ್ತದೆ ಹಾಗೂ ಮಲಬದ್ದತೆಯ ತೊಂದರೆ ಇಲ್ಲವಾಗಿಸುತ್ತದೆ.

  ಒತ್ತಡವನ್ನು ಕಡಿಮೆ ಮಾಡುತ್ತದೆ

  ಒತ್ತಡವನ್ನು ಕಡಿಮೆ ಮಾಡುತ್ತದೆ

  ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮೆದುಳಿನ ಹರಿಸುವ ರಕ್ತವನ್ನು ಹೆಚ್ಚಿಸುವ ಮೂಲಕ ಮೆದುಳಿನಲ್ಲಿ ಕಾರ್ಟಿಸೋಲ್ ಎಂಬ ರಸದೂತದ ಪ್ರಮಾಣವನ್ನು ಕ್ರಮಬದ್ದಗೊಳಿಸುವ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ.

  ಹಲ್ಲುನೋವನ್ನು ಕಡಿಮೆ ಮಾಡುತ್ತದೆ

  ಹಲ್ಲುನೋವನ್ನು ಕಡಿಮೆ ಮಾಡುತ್ತದೆ

  ಹಲ್ಲುನೋವಿಗೆ ಕೆಲವಾರು ಕಾರಣಗಳಿದ್ದು ಒಸಡುಗಳ ಒಳಭಾಗದಲ್ಲಿ ಆಗಿರುವ ಸೋಂಕು ಇದರಲ್ಲಿ ಪ್ರಮುಖವಾಗಿದೆ. ಈ ಟೀಯಲ್ಲಿರುವ ಪೋಷಕಾಂಶಗಳು ಒಸಡಿನ ಸೋಂಕನ್ನು ನಿವಾರಿಸಿ ಉರಿಯೂತವನ್ನು ತಪ್ಪಿಸುತ್ತದೆ. ಪರಿಣಾಮವಾಗಿ ಹಲ್ಲುನೋವು ಕಡಿಮೆಯಾಗುತ್ತದೆ.

  ಪವರ್‌ಫುಲ್ ಮನೆಔಷಧಿಗಳು-ಹತ್ತೇ ನಿಮಿಷದಲ್ಲಿ ಹಲ್ಲು ನೋವು ನಿಯಂತ್ರಣಕ್ಕೆ

  ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

  ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

  ಈ ಟೀಯಲ್ಲಿರುವ ಕರಗುವ ನಾರು ಹಾಗೂ ಜೇನಿನಲ್ಲಿರುವ ಆಂಟಿಆಕ್ಸಿಡೆಂಟುಗಳು ಜೀರ್ಣಾಂಗಗಳಲ್ಲಿ ಆರೋಗ್ಯಕರ ಪ್ರಮಾಣದ ಜೀರ್ಣರಸ ಸ್ರವಿಸಲು ಪ್ರಚೋದನೆ ನೀಡುತ್ತವೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತವೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳಾದ ವಾಯುಪ್ರಕೋಪ, ಹೊಟ್ಟೆಯುರಿ, ಹುಳಿತೇಗು ಮೊದಲದವುಗಳನ್ನು ನಿವಾರಿಸುತ್ತದೆ.

  ಮೂತ್ರಕೋಶದ ಸೋಂಕನ್ನು ನಿವಾರಿಸುತ್ತದೆ

  ಮೂತ್ರಕೋಶದ ಸೋಂಕನ್ನು ನಿವಾರಿಸುತ್ತದೆ

  ದೇಹದಲ್ಲಿ ಸಂಗ್ರಹವಾದ ಬ್ಯಾಕ್ಟೀರಿಯಾಗಳು ಮೂತ್ರಕೋಶದಲ್ಲಿ ಸಂಗ್ರಹಗೊಂಡಾಗ ಇಲ್ಲಿಯೂ ಸೋಂಕು ಉಂಟುಮಾಡಬಹುದು. ಈ ಸೋಂಕು ಭಾರೀ ಉರಿಯಿಂದ ಕೂಡಿದ್ದು ತಡೆಯಲಾಗದಂತಿರುತ್ತದೆ. ಈ ಸಂದರ್ಭದಲ್ಲಿ ಒಂದು ಲೋಟ ಈ ಟೀ ಕುಡಿಯುವ ಮೂಲಕ ಸೋಂಕನ್ನು ನಿವಾರಿಸಿ ಉರಿಯಿಂದ ಉಪಶಮನ ನೀಡುತ್ತದೆ.

  ಮೂತ್ರಪಿಂಡಗಳ ಕಲ್ಲುಗಳನ್ನು ಕರಗಿಸುತ್ತದೆ

  ಮೂತ್ರಪಿಂಡಗಳ ಕಲ್ಲುಗಳನ್ನು ಕರಗಿಸುತ್ತದೆ

  ಈ ಟೀಯನ್ನು ನಿಯಮಿತವಾಗಿ ಕುಡಿಯುತ್ತ ಬರುವ ಮೂಲಕ ಮೂತ್ರಪಿಂಡಗಳಲ್ಲಿರುವ ವಿಷಕಾರಿ ವಸ್ತುಗಳನ್ನು ನಿವಾರಿಸಬಹುದು ಹಾಗೂ ಈಗಾಗಲೇ ಗಟ್ಟಿಗೊಳ್ಳಲು ಪ್ರಾರಂಭವಾಗಿರುವ ಕಲ್ಲುಗಳನ್ನು ಕರಗಿಸಿ ನಿವಾರಿಸಲೂ ನೆರವಾಗುತ್ತದೆ.

  English summary

  What Happens To Your Body When You Drink Avocado Leaf Tea?

  As you may already know, avocado, also known as butter fruit has become a very popular health food these days, globally. Just a few years ago, researchers found that the avocado fruit is rich in vitamins and antioxidants that have numerous health benefits. More importantly, the avocado fruit is rich in omega-3 fatty acids, which are healthy fats, required for various body functions. Some of the most significant health benefits of the avocado fruit aremuscle-building, weight loss, cell regeneration, treating hormone imbalance, etc
  Story first published: Sunday, July 9, 2017, 7:01 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more