Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಕಿವಿ ನೋವೇ? ಬೆಳ್ಳುಳ್ಳಿ ರಸ-ಆಲಿವ್ ಎಣ್ಣೆ ಬೆರೆಸಿ, ಕಿವಿಗೆ ಬಿಡಿ!
ಅಂಕುಡೊಂಕಿನ ಬಾವಿ, ಒಳಗೆ ತೊಟ್ಟೂ ನೀರಿಲ್ಲ - ಕನ್ನಡದ ಈ ಒಗಟಿನ ಉತ್ತರ ಕಿವಿ. ಆದರೆ ಕಿವಿಯ ಒಳಗೆ ಸಂಪೂರ್ಣವಾಗಿ ಒಣಗಿರುವುದಿಲ್ಲ. ಬದಲಿಗೆ ಕಿವಿಯೊಳಗೆ ಇರುವ vestibular system ಎಂಬ ವ್ಯವಸ್ಥೆ ದೇಹ ಸಮತೋಲನ ಪಡೆಯಲು ನೆರವಾಗುತ್ತದೆ. ಅಲ್ಲದೇ ಕೆಲವೊಮ್ಮೆ ಕಿವಿಯೊಳಗೂ ಸೋಂಕು ಉಂಟಾಗುವ ಮೂಲಕ ದ್ರವ ತುಂಬುತ್ತದೆ. ವಿಶೇಷವಾಗಿ ಮಳೆಗಾಲ ಹಾಗೂ ತೇವಾಂಶ ಹೆಚ್ಚಿರುವಾಗ ಗಾಳಿಯಲ್ಲಿ ಹರಡುವ ಕೆಲವು ವೈರಸ್ಸುಗಳ ಮೂಲಕ ಹಲವರು ಈ ಸೋಂಕಿಗೆ ಒಳಗಾಗುತ್ತಾರೆ.
ಈ ಕೀವು ಕೊಂಚ ತುರಿಕೆಯುಂಟು ಮಾಡುವ ಕಾರಣ ಹೆಚ್ಚಿನವರು ಹತ್ತಿಸುತ್ತಿದ ಕಡ್ಡಿಯಿಂದ ಈ ತುರಿಕೆಯನ್ನು ನಿವಾರಿಸಲು ಯತ್ನಿಸುತ್ತಾರೆ. ಆದರೆ ಈ ಪ್ರಯತ್ನದಲ್ಲಿ ಈ ಕೀವನ್ನು ಇನ್ನೂ ಅಗಲವಾಗಿ ಹರಡಿಸಿ ಒಳಗಿವಿಯ ಇನ್ನೂ ಹೆಚ್ಚಿನ ಭಾಗದಲ್ಲಿ ಈ ಸೋಂಕನ್ನು ಅರಿವಿಲ್ಲದೇ ಹರಡಲು ಕಾರಣರಾಗುತ್ತಾರೆ. ಈ ಸೋಂಕನ್ನು ನಿವಾರಿಸಲು ಬೆಳ್ಳುಳ್ಳಿ ರಸ ಅತ್ಯುತ್ತಮ ಮನೆಮದ್ದಾಗಿದ್ದು ಇದರಲ್ಲಿರುವ ಉರಿಯೂತ ನಿವಾರಕ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣ ಈ ಸೋಂಕಿಗೆ ಕಾರಣವಾದ ವೈರಸ್ಸುಗಳನ್ನು ಕೊಲ್ಲಲು ಸಮರ್ಥವಾಗಿದೆ.
ಈ ಸೋಂಕಿಗೆ ಒಳಗಾಗುವವರಲ್ಲಿ ಮಕ್ಕಳು ಹಾಗೂ ಹದಿಹರೆಯದವರೇ ಹೆಚ್ಚು. ಏಕೆಂದರೆ ಈ ವೈರಸ್ಸು ಇವರ ದೇಹಕ್ಕೆ ಹೊಸದಾಗಿದ್ದು ಇದನ್ನು ಎದುರಿಸಲು ಇವರ ದೇಹದಲ್ಲಿ ಇನ್ನೂ ರೋಗ ನಿರೋಧಕ ಶಕ್ತಿ ರೂಪುಗೊಂಡಿರುವುದಿಲ್ಲ. ಸಾಮಾನ್ಯವಾಗಿ ವೈದ್ಯರು ಈ ಸೋಂಕಿಗೆ ಆಂಟಿ ಬಯಾಟಿಕ್ ಗಳನ್ನು ನೀಡುತ್ತಾರೆ. ಆದರೆ ಈ ಔಷಧಿಗಳು ವೈರಸ್ಸುಗಳನ್ನು ಕೊಲ್ಲುವ ಜೊತೆಜೊತೆಗೇ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳನ್ನೂ ಕೊಂದುಬಿಡುವ ಕಾರಣ ರೋಗ ನಿರೋಧಕ ಶಕ್ತಿ ಕೊಂಚ ಶಿಥಿಲವಾಗುತ್ತದೆ.
ಕಿವಿಯ ಸೋಂಕಿಗೆ ವೈರಸ್ಸು ಮಾತ್ರವಲ್ಲ, ಬ್ಯಾಕ್ಟೀರಿಯಾ, ಶಿಲೀಂಧ್ರಗಳೂ ಕಾರಣವಾಗಬಹುದು. ಕಾರಣ ಯಾವುದೇ ಇರಲಿ, ಎರಡೇ ತೊಟ್ಟು ಬೆಳ್ಳುಳ್ಳಿ ರಸವನ್ನು ಬಿಟ್ಟುಕೊಳ್ಳುವ ಮೂಲಕ ಈ ಸೋಂಕನ್ನು ಸಮರ್ಥವಾಗಿ ನಿವಾರಿಸಬಹುದು. ಬನ್ನಿ, ಈ ರಸವನ್ನು ಕೊಂಚ ಆಲಿವ್ ಎಣ್ಣೆಯ ಮೂಲಕ ಕಿವಿಯ ಸೋಂಕು ನಿವಾರಿಸಲು ಹೇಗೆ ಬಳಸಬಹುದು ಎಂಬುದನ್ನು ನೋಡೋಣ....

ಅಗತ್ಯವಿರುವ ಸಾಮಾಗ್ರಿಗಳು
*ಬೆಳ್ಳುಳ್ಳಿ ರಸ
*ಆಲಿವ್ ಎಣ್ಣೆ

ತಯಾರಿಕಾ ವಿಧಾನ
#1 ಎರಡು ತೊಟ್ಟು ಬೆಳ್ಳುಳ್ಳಿ ರಸಕ್ಕೆ ಒಂದು ತೊಟ್ಟು ಆಲಿವ್ ಎಣ್ಣೆ ಬೆರೆಸಿ ಮಿಶ್ರಣ ಮಾಡಿ

#2
ಇವೆರಡೂ ದ್ರವಗಳ ಮಿಶ್ರಣ ಅತಿ ಹೆಚ್ಚಿನ ಸೂಕ್ಷ್ಮಜೀವಿ ನಿವಾರಕ ಗುಣವನ್ನು ಹೊಂದಿದ್ದು ವೈರಸ್ಸು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಮರ್ಥವಾಗಿದೆ.

#3
ಒಂದು ಚಿಕ್ಕ ಹತ್ತಿಯುಂಡೆಯನ್ನು ಈ ಮಿಶ್ರಣದಲ್ಲಿ ತೋಯಿಸಿ.

#4
ಈ ಉಂಡೆಯನ್ನು ನಿಧಾನವಾಗಿ ಕಿವಿಯೊಳಗೆ ತೂರಿಸಿ ಸೋಂಕಿನ ಭಾಗಕ್ಕೆ ತಗಲುವಂತೆ ಮಾಡಿ. ಕೆಲವೇ ನಿಮಿಷಗಳಲ್ಲಿ ಈ ದ್ರವ ಕೆಲಸ ಮಾಡತೊಡಗುತ್ತದೆ.

#5
ಮರುದಿನ ಈ ಉಂಡೆಯನ್ನು ನಿವಾರಿಸಿ.ಬೆಳ್ಳುಳ್ಳಿ ರಸವನ್ನು ಕಿವಿಯ ಸೋಂಕಿಗೆ ಮಾತ್ರವಲ್ಲ, ಬದಲಿಗೆ ಚರ್ಮದ ತುರಿಕೆ, ಹೊಟ್ಟೆನೋವು, ವಿವರಿಸಲಾಗದ ರಕ್ತಸ್ರಾವ, ಜಜ್ಜಿದ ಭಾಗ, ವಾಕರಿಕೆ, ವಾಂತಿ, ಮಹಿಳೆಯರಿಗೆ ಎದುರಾಗುವ ಬಿಳಿಸೆರಗು, ತುರಿಕೆ ಮೊದಲಾದವುಗಳನ್ನು ನಿಗ್ರಹಿಸಲೂ ಉಪಯೋಗಿಸಬಹುದು.



Click it and Unblock the Notifications