ಮೂತ್ರದಲ್ಲಿ ರಕ್ತಸ್ರಾವ ಉಂಟಾಗುವುದು ಅಪಾಯಕಾರಿ ರೋಗದ ಚಿಹ್ನೆ!

Posted By: Divya Pandith
Subscribe to Boldsky

ಮಾನವನ ದೇಹವು ಹಲವಾರು ರೋಗಗಳಿಂದ ನರಳುತ್ತಿರುತ್ತದೆ. ಕೆಲವು ರೋಗಗಳು ಅಷ್ಟು ಗಂಭೀರವಾಗಿರದೆ ಇರಬಹುದು. ಇನ್ನೂ ಕೆಲವು ರೋಗಗಳಿಗೆ ಹೆಚ್ಚು ಚಿಂತಿಸಬೇಕಾಗುತ್ತದೆ. ಹಾಗೆಯೇ ಅದರ ಚಿಕಿತ್ಸೆಗೂ ಬಹಳಷ್ಟು ಕಷ್ಟಪಡಬೇಕಾಗುವುದು. ಇಲ್ಲವಾದರೆ ಅದು ನಿಮ್ಮ ಜೀವಕ್ಕೆ ಬೆದರಿಕೆ ಹಾಕುವ ಸಾಧ್ಯತೆಯೂ ಇರುತ್ತದೆ. ಯಾವುದೇ ರೋಗದ ಆರಂಭಿಕ ಹಂತದಲ್ಲಿ ವೈದ್ಯರ ಸಲಹೆ ಹಾಗೂ ಚಿಕಿತ್ಸೆಗೆ ಒಳಗಾದರೆ ಬಹುಬೇಗ ಗುಣಪಡಿಸಬಹುದು. ಇಲ್ಲವಾದರೆ ಗಂಭೀರ ಸ್ಥಿತಿ ತಲುಪುವುದು.

ಕೆಲವು ರೋಗಗಳನ್ನು ನಾವು ಆರಂಭದಲ್ಲಿ ನಿರ್ಲಕ್ಷಿಸಬಹುದು. ಆದರೆ ಅದು ಕ್ರಮೇಣ ಗಂಭೀರ ಅಸ್ವಸ್ಥತೆಗೆ ಕಾರಣವಾಗುತ್ತದೆ. ಅಂತಹ ಕಾಯಿಲೆಗಳಲ್ಲಿ ಮೂತ್ರದಲ್ಲಿ ರಕ್ತ ಸ್ರಾವ ಉಂಟಾಗುವುದು ಒಂದು. ಸಾಮಾನ್ಯವಾಗಿ ಮೂತ್ರದಲ್ಲಿ ರಕ್ತ ಸ್ರಾವ ಉಂಟಾಗುತ್ತದೆ ಎಂದರೆ ಇದು ಸೂಕ್ಷ್ಮ ಹಾಗೂ ಪರಿಶೀಲಿಸಲೇ ಬೇಕಾದ ಆರೋಗ್ಯ ಸಮಸ್ಯೆಯಾಗಿರುತ್ತದೆ. ಇದರ ಕುರಿತು ಹೆಚ್ಚು ಆರೈಕೆ ಹಾಗೂ ಕಾಳಜಿ ವಹಿಸಬೇಕಾಗುವುದು. ಕೆಲವು ಸಂದರ್ಭದಲ್ಲಿ ರಕ್ತಸ್ರಾವ ಉಂಟಾಗುವುದು ಬರಿಗಣ್ಣಿಗೆ ಕಾಣುವುದಿಲ್ಲ. ಆಗ ರೋಗವು ಹೆಚ್ಚು ಸಂಕೀರ್ಣವಾಗುವುದು. 

Blood in urine

ಮೂತ್ರದಲ್ಲಿ ಕೆಂಪು ಬಣ್ಣವನ್ನು ನೀವು ಗಮನಿಸಿದಾಗ, ಯಾವುದೇ ವಿಳಂಬವಿಲ್ಲದೆ ನೀವು ವೈದ್ಯರನ್ನು ನೋಡಬೇಕು. ಮೂತ್ರದಲ್ಲಿ ರಕ್ತದ ಕಾರಣಗಳನ್ನು ನೀವು ಹೊಂದಿರದಿದ್ದಲ್ಲಿ ರಕ್ತದಲ್ಲಿ ಮೂತ್ರದ ಸರಿಯಾದ ಚಿಕಿತ್ಸೆಯನ್ನು ಪಡೆಯುವುದು ಕಷ್ಟ. ಪುರುಷರು ಮತ್ತು ಮಹಿಳೆಯರಲ್ಲಿ ಈ ಸಮಸ್ಯೆಗಳು ಬಹಳ ಸಾಮಾನ್ಯವಾಗಿರುವುದರಿಂದ, ಮೂತ್ರದಲ್ಲಿ ಅಥವಾ ಮಲದಲ್ಲಿನ ರಕ್ತದ ಕಾರಣಗಳನ್ನು ತಿಳಿದುಕೊಳ್ಳುವುದಕ್ಕಿಂತ ಉತ್ತಮ ಪರಿಹಾರವಿಲ್ಲ. ಈ ಸಮಸ್ಯೆಗೆ ಕಾರಣ ಹಾಗೂ ಪರಿಹಾರದ ಬಗ್ಗೆ ಇನ್ನಷ್ಟು ತಿಳಿಯಲು ಮುಂದೆ ಓದಿ... 

urine Infection

ಮೂತ್ರದ ಸೋಂಕು (ಯುಟಿಐ)

ಮಹಿಳೆಯರಿಗೆ ಹೆಚ್ಚು ಕಾಡಬಹುದಾದ ಒಂದು ಸಾಮಾನ್ಯ ಸಮಸ್ಯೆ. ಮೂತ್ರದಲ್ಲಿ ಕೆಂಪು ಬಣ್ಣವು ಇತರ ಕೆಲವು ರೋಗಲಕ್ಷಣಗಳೊಂದಿಗೆ ನೀವು ಗಮನಿಸಬಹುದು. ಇದು ಯುಟಿಐ ಎಂದು ಕರೆಯಲ್ಪಡುವ ಮೂತ್ರದ ಸೋಂಕಿನಿಂದ ಉಂಟಾಗುತ್ತದೆ. ಯಾವುದೇ ಅನುಮಾನವಿಲ್ಲದೆ ಇದು ಮೂತ್ರದಲ್ಲಿ ರಕ್ತದ ಅಪಾಯಕಾರಿ ಕಾರಣಗಳಲ್ಲಿ ಒಂದು.

ಮೂತ್ರಪಿಂಡದಲ್ಲಿ ಕಲ್ಲು

ಮೂತ್ರದಲ್ಲಿ ರಕ್ತ ಹೊಂದುವ ಇನ್ನೊಂದು ಪ್ರಮುಖ ಕಾರಣ ಮೂತ್ರಪಿಂಡದಲ್ಲಿ ಕಲ್ಲು. ಸಾಮಾನ್ಯವಾಗಿ ಮೂತ್ರಪಿಂಡದಲ್ಲಿ ಕಲ್ಲುಗಳು ಸಂಗ್ರಹಿಸಿದಾಗ ಮೂತ್ರದಲ್ಲಿ ರಕ್ತಸ್ರಾವ ಉಂಟಾಗುವುದು. ಮೂತ್ರವಿಸರ್ಜನೆಯ ನೈಸರ್ಗಿಕ ಪ್ರಕ್ರಿಯೆಯನ್ನು ಅಡ್ಡಿಪಡಿಸು ತ್ತದೆ. ಇದನ್ನು ಮೊದಲಿಗೆ ಔಷಧಿಗಳೊಂದಿಗೆ ಚಿಕಿತ್ಸೆ ನೀಡಬಹುದು. ಈ ಸಮಸ್ಯೆಗೆ ಅಂತಿಮವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಬೇಕಾಗುವುದು.

Kidney

ಕಿಡ್ನಿ ಅಥವಾ ಗಾಲ್ ಬಾರ್ಡ್ರ್ ಗಳಲ್ಲಿ ಗೆಡ್ಡೆಗಳು

ಇದು ಮೂತ್ರದಲ್ಲಿ ರಕ್ತದ ತೀವ್ರವಾದ ಕಾರಣಗಳಲ್ಲಿ ಒಂದಾಗಿದೆ. ಆಗಾಗ್ಗೆ, ಇದನ್ನು ಸೈಟೋಲಜಿಯನ್ನು ವೈದ್ಯಕೀಯವಾಗಿ ಕರೆಯಲಾಗುತ್ತದೆ. ಹೆಚ್ಚಿನ ಸಮಯದಲ್ಲಿ ಇದನ್ನು ಶಸ್ತ್ರ ಚಿಕಿತ್ಸೆಯ ಮೂಲಕವೇ ಗುಣಪಡಿಸಬೇಕಾಗುತ್ತದೆ.

urine Infection

ಗ್ಲೋಮೆರುಲೋನೆಫೆರಿಟಿಸ್ ಅಥವಾ ಗ್ಲೋಮೆರಲರ್ ನೆಫ್ರೈಟಿಸ್

ಮೂತ್ರ ಮತ್ತು ಮಲದಲ್ಲಿ ರಕ್ತ ಸ್ರಾವ ಉಂಟಾಗುತ್ತಿದೆ ಎಂದಾದರೆ ಗ್ಲೋಮೆರಲರ್ ನೆಫ್ರೈಟಿಸ್ ಸಮಸ್ಯೆ ಇದೆ ಎಂದು ಸಹ ಹೇಳಬಹುದು. ಇದು ಸಾಮಾಣ್ಯವಾಗಿ ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ಕಂಡು ಬರುತ್ತದೆ. ವೃದ್ಧರಿಗೆ ಹೆಚ್ಚು ಕಾಡುವ ಸಮಸ್ಯೆ ಇದು. ಇದಕ್ಕೆ ಸೂಕ್ತ ರೀತಿಯ ಚಿಕಿತ್ಸೆ ಪಡೆದುಕೊಳ್ಳಬೇಕಾಗುವುದು.

ಸಿಸ್ಟಿಕ್ ಬೆಳವಣಿಗೆ

ಸಿಸ್ಟಿಕ್ ಬೆಳವಣಿಗೆ ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಇದು ಅವರಿಗೆ ಸಾಮಾನ್ಯ ಅಸ್ವಸ್ಥತೆಯಲ್ಲಿ ಒಂದಾಗಿರುತ್ತದೆ. ಮೂತ್ರದ ರಕ್ತಸ್ರಾವ ಉಂಟಾಗುವಾಗ ಬಹಳ ನೋವು ಕಾಣಿಸಿಕೊಳ್ಳುವುದು. ಸಾಮಾನ್ಯವಾಗಿ ಮೂತ್ರ ಹಾದುಹೋಗುವಾಗ ತೊಂದರೆ ಉಂಟುಮಾಡುತ್ತವೆ. ಪರಿಣಾಮವಾಗಿ ಆಗ ಮೂತ್ರದಲ್ಲಿ ರಕ್ತಸ್ರಾವವಾಗುತ್ತದೆ. ಮೂತ್ರ ಮತ್ತು ಸ್ಟೂಲ್ನಲ್ಲಿ ರಕ್ತದ ಸಾಮಾನ್ಯ ಕಾರಣಗಳು ಇವು.

ರಕ್ತದ ಕಲೆಗಳು ಗಡ್ಡೆಕಟ್ಟದೇ ದ್ರವರೂಪದಲ್ಲಿಯೇ ಇದ್ದಂತೆ ತೋರಿದರೆ

ಮೂತ್ರದಲ್ಲಿ ರಕ್ತದ ಕಲೆಗಳು ಗಡ್ಡೆಕಟ್ಟದೇ ದ್ರವರೂಪದಲ್ಲಿಯೇ ಇದ್ದಂತೆ ತೋರಿದರೆ (ಇದನ್ನೂ ಪರೀಕ್ಷೆಗಳಿಂದ ಮಾತ್ರ ಕಂಡುಕೊಳ್ಳಲು ಸಾಧ್ಯ) ಇದು ಮೂತ್ರಕೋಶ ಮತ್ತು ಮೂತ್ರನಾಳಗಳ ಒಳಗಣ ಸೋಂಕಿನ ಸಂಕೇತವಾಗಿದೆ. ಇದಕ್ಕೆ ಮದ್ಯಪಾನ ನೇರವಾಗಿ ಕಾರಣವಾಗಿದ್ದು ಈ ಸ್ಥಿತಿ ಬಂದ ತಕ್ಷಣ ಅನಿವಾರ್ಯವಾಗಿ ಮದ್ಯಪಾನವನ್ನು ನಿಲ್ಲಿಸಲೇಬೇಕಾಗುತ್ತದೆ. ಅಷ್ಟೇ ಅಲ್ಲ, ಆಮ್ಲೀಯವಾದ ಯಾವುದೇ ಪಾನೀಯವಾದ ಕಾಫಿ, ಟೀ, ಲಿಂಬೆ ಜಾತಿಯ ಹಣ್ಣುಗಳ ರಸ ಮೊದಲಾದವೆಲ್ಲಾ ವರ್ಜಿತವಾಗುತ್ತವೆ. ಕೇವಲ ನೀರು ಮಾತ್ರ ಈ ಸ್ಥಿತಿಯಿಂದ ಹೊರತರಬಲ್ಲುದು. ಆದರೂ ವೈದ್ಯರ ಬಳಿ ಸಲಹೆ ಪಡೆದು ಚಿಕಿತ್ಸೆ ಪಡೆಯುವುದು ಅನಿವಾರ್ಯ.

urine infection

ನೆನಪಿರಲಿ

ನಿಮಗೆ ಸಾಮಾನ್ಯವಾಗಿ ಆನುವಂಶಿಯವಾಗಿ ಈ ಕಾಯಿಲೆಗಳು ಬರಬಹುದು. ಈ ಸಮಸ್ಯೆಗಳು ಉಂಟಾದಾಗ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು. ಕುಡಗೋಲು ಕಣ ರೋಗ, ಹೆಮಟುರಿಯಾ ಮತ್ತು ಅಸಹಜ ಮುಟ್ಟಿನ ಚಕ್ರಗಳನ್ನು ಮೂತ್ರದಲ್ಲಿ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದಕ್ಕೆ ಇತರ ಕಾರಣಗಳು ಆಗಿರಬಹುದು. ಹಾಗಾಗಿ ಮೂತ್ರದಲ್ಲಿ ರಕ್ತ ಕಂಡು ಬಂದಾಗ ಸರಿಯಾದ ಚಿಕಿತ್ಸೆಯನ್ನು ಪಡೆಯಲು ನೀವು ಎಂದಿಗೂ ನಿರ್ಲಕ್ಷಿಸಬಾರದು

English summary

What does blood in the urine mean? Here are the reason

Blood In Urines are very common among both men and women, there can be no better remedy than knowing about the reasons for blood in urine or stool. Following are some of the reasons for blood in urine and stool, which you should be aware about: