For Quick Alerts
ALLOW NOTIFICATIONS  
For Daily Alerts

ತಿಂಗಳಿಗೆ ಎರಡು ಬಾರಿ ಕಾಡುವ ಮುಟ್ಟಿನ ಸಮಸ್ಯೆ! ಕಾರಣವೇನು?

By Hemanth
|

ಪ್ರಕೃತಿಯು ಹೆಣ್ಣು ಜೀವಕ್ಕೆ ವಿಶೇಷ ನೋವು ಹಾಗೂ ನಲಿವು ನೀಡಿದೆ ಎಂದರೆ ತಪ್ಪಾಗದು. ಪ್ರತೀ ತಿಂಗಳು ಮುಟ್ಟಾಗುವುದು ಒಂದು ನೋವಾದರೆ ಗರ್ಭಧರಿಸಿ ಮಗುವಿಗೆ ಜನ್ಮ ನೀಡುವುದು ತುಂಬಾ ಖುಷಿಯ ಸಂಕೇತ. ಮಹಿಳೆಯರು ಪ್ರತೀ 28 ದಿನಕ್ಕೊಮ್ಮೆ ಸಾಮಾನ್ಯವಾಗಿ ಮುಟ್ಟಾಗುವರು. ಕೆಲವು ಸಲ ಹಿಂದಿನ ಋತುಚಕ್ರದಿಂದ ಕೇವಲ 14 ದಿನದಲ್ಲೇ ಮುಟ್ಟಾಗಬಹುದು.

ಆದರೆ ಇದರಲ್ಲಿ ಯಾವುದೇ ರೀತಿಯ ಸಮಸ್ಯೆಯಿಲ್ಲ. ಕೆಲವು ಮಹಿಳೆಯರು ಎರಡು ವಾರಕ್ಕೊಮ್ಮೆ ಮುಟ್ಟಾಗುವರು. ಕೆಲವರಿಗೆ ಇದು ನಿಯಮಿತವಾಗಿದ್ದರೆ ಇನ್ನು ಕೆಲವರಿಗೆ ಇದು ತಾತ್ಕಾಲಿಕ, ನಿಮ್ಮ ಋತುಚಕ್ರದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೆ ವೈದ್ಯರನ್ನು ಭೇಟಿಯಾಗುವುದು ಅತೀ ಅಗತ್ಯ.

ಅಚ್ಚರಿ, ಕುತೂಹಲ ಕೆರಳಿಸುವ ಮುಟ್ಟಿನ ರಹಸ್ಯ!

ಮುಟ್ಟಿನ ಆರಂಭದಿಂದಲೂ ನೀವು ಪ್ರತೀ ತಿಂಗಳು ಎರಡು ವಾರಕ್ಕೊಮ್ಮೆ ಮುಟ್ಟಾಗುತ್ತಾ ಇದ್ದರೆ ಅದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಹಠಾತ್ ಆಗಿ ತಿಂಗಳಲ್ಲಿ ಎರಡು ಸಲ ನಿಮಗೆ ಮುಟ್ಟಾಗುತ್ತಿದ್ದರೆ ಬೋಲ್ಡ್ ಸ್ಕೈ ನೀಡಿರುವ ಈ ಲೇಖನ ಓದಲೇಬೇಕು. ತಿಂಗಳಲ್ಲಿ ಎರಡು ಸಲ ಮುಟ್ಟಾದರೆ ಏನಾಗುವುದು ಎಂದು ಮುಂದೆ ಓದುತ್ತಾ ತಿಳಿಯಿರಿ...

ತೂಕ ಏರುಪೇರು

ತೂಕ ಏರುಪೇರು

ಋತುಚಕ್ರದಲ್ಲಿ ವ್ಯತ್ಯಯವಾಗಲು ತೂಕ ಹೆಚ್ಚಳ ಮತ್ತು ತೂಕ ಕಳೆದುಕೊಳ್ಳುವುದು ಕಾರಣವಾಗಬಹುದು. ಕೆಲವು ಮಹಿಳೆಯರಿಗೆ ಇದು ತುಂಬಾ ದೀರ್ಘವಾಗಿರುವುದು. ಇತರರಿಗೆ ತುಂಬಾ ಕಡಿಮೆ ಸಮಯದಲ್ಲಿ ಅಂದರೆ ಎರಡು ವಾರದ ಅವಧಿಯಲ್ಲಿ ಮುಟ್ಟಾಗುವುದು.

ಥೈರಾಯ್ಡ್ ಸಮಸ್ಯೆ

ಥೈರಾಯ್ಡ್ ಸಮಸ್ಯೆ

ಥೈರಾಯ್ಡ್ ಕಡಿಮೆಯಾದರೆ ಅದರಿಂದ ಮುಟ್ಟಾಗುವ ನಡುವಿನ ಅವಧಿಯಲ್ಲಿ ಜನನಾಂಗದಲ್ಲಿ ರಕ್ತಸ್ರಾವವಾಗುವುದು. ಋತುಚಕ್ರ ನಿಯಂತ್ರದಲ್ಲಿ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಹಾರ್ಮೋನುಗಳು ಪ್ರಮುಖ ಪಾತ್ರ ನಿರ್ವಹಿಸುವುದು. ಥೈರಾಯ್ಡ್ ಗ್ರಂಥಿಗಳು ಈ ಹಾರ್ಮೋನುಗಳನ್ನು ಬಿಡುಗಡೆ ಮಾಡುವುದು. ಇದರಿಂದಾಗಿ ಋತುಚಕ್ರದ ಮೇಲೆ ಥೈರಾಯ್ಡ್ ಸಂಬಂಧ ಹೊಂದಿದೆ.

ಗರ್ಭನಿರೋಧಕಗಳಲ್ಲಿ ಬದಲಾವಣೆ

ಗರ್ಭನಿರೋಧಕಗಳಲ್ಲಿ ಬದಲಾವಣೆ

ಗರ್ಭನಿರೋಧಕಗಳಲ್ಲಿ ಬದಲಾವಣೆಯಿಂದ ಹಿಂದಿನ ಋತುಚಕ್ರದ ಅವಧಿಯಿಂದ ಎರಡು ವಾರದಲ್ಲಿ ರಕ್ತಸ್ರಾವವಾಗುವುದು. ಹಠಾತ್ ಆಗಿ ಗರ್ಭನಿರೋಧಕ ಮಾತ್ರೆ ನಿಲ್ಲಿಸುವುದು ಅಥವಾ ಗರ್ಭನಿರೋಧಕ ಮಾತ್ರೆ ಬದಲಾವಣೆ ಮಾಡುವುದರಿಂದ ಎರಡು ಋತುಚಕ್ರದ ಮಧ್ಯೆ ರಕ್ತಸ್ರಾವವಾಗುವುದು. ಈ ಕಾರಣದಿಂದ ತಿಂಗಳಲ್ಲಿ ಎರಡು ಸಲ ಮುಟ್ಟಾಗಬಹುದು.

ಗರ್ಭಾಶಯದ ಚೀಲಗಳು

ಗರ್ಭಾಶಯದ ಚೀಲಗಳು

ಎರಡು ಮುಟ್ಟಿನ ಮಧ್ಯೆ ಹೆಪ್ಪುಗಟ್ಟಿರುವ ರಕ್ತದೊಂದಿಗೆ ರಕ್ತಸ್ರಾವವಾಗಲು ಗರ್ಬಾಶಯದ ಚೀಲವು ಪ್ರಮುಖ ಕಾರಣವಾಗಿದೆ. ಮುಟ್ಟಿನ ರಕ್ತಸ್ರಾವದಷ್ಟೇ ದಿನ ಈ ರಕ್ತಸ್ರಾವಿರುವುದು. ಇದನ್ನು ಸಾಮಾನ್ಯವಾಗಿ ಮುಟ್ಟಾಗುವುದು ಎಂದು ಭಾವಿಸಲಾಗುವುದು.

ಒತ್ತಡ

ಒತ್ತಡ

ಹೆಚ್ಚಿನ ಮಟ್ಟದ ಒತ್ತಡದಿಂದಾಗಿ ಋತುಚಕ್ರದಲ್ಲಿ ವ್ಯತ್ಯಯವಾಗಬಹುದು. ಅತಿಯಾದ ಒತ್ತಡವಿರುವುದರಿಂದ ಎರಡು ವಾರದಲ್ಲಿ ಮುಟ್ಟಾಗಬಹುದು. ಋತುಚಕ್ರದಲ್ಲಿ ವ್ಯತ್ಯವಾಗಲು ಇದು ಕಾರಣವಾಗಿದೆ. ಇದರಿಂದ ತಿಂಗಳಲ್ಲಿ ಎರಡು ಸಲ ಮುಟ್ಟಾಗಬಹುದು.

ಎಸ್ ಐಟಿ (ಲೈಂಗಿಕವಾಗಿ ಹರಡುವ ಸೋಂಕುಗಳು)

ಎಸ್ ಐಟಿ (ಲೈಂಗಿಕವಾಗಿ ಹರಡುವ ಸೋಂಕುಗಳು)

ಲೈಂಗಿಕವಾಗಿ ಹರಡುವಂತಹ ಸೋಂಕುಗಳಾದ ಕ್ಲಮೈಡಿಯಾ ಮತ್ತು ಗೊನೊರಿಯಾ ಗರ್ಭಾಶಯದಲ್ಲಿ ಸೋಂಕು ಉಂಟು ಮಾಡಬಹುದು. ಇದು ಋತುಚಕ್ರದಲ್ಲಿನ ವ್ಯತ್ಯಯಕ್ಕೆ ಪ್ರಮುಖ ಕಾರಣವಾಗಿದೆ.

English summary

What Could Be Causing Periods To Appear Twice In A Month

If you have had two periods twice in a month, right from the time you hit your puberty, then this is not at all an issue. But if all of a sudden you start getting two periods in a month, then this can indicate the reasons that we have mentioned in this article. In this article, we have listed the causes on why periods can occur twice in a month. So, read further to know what it means when you have 2 periods in one month.
X
Desktop Bottom Promotion