ಪಾಶ್ಚಿಮಾತ್ಯ ಆಹಾರ ಪದ್ಧತಿ ಉಂಟುಮಾಡಲಿದೆ ಯಕೃತ್ತಿಗೆ ಕುತ್ತು

By: jaya subramanya
Subscribe to Boldsky

ಪಾಶ್ಚಿಮಾತ್ಯ ಆಹಾರ ಪದ್ಧತಿಯನ್ನು ಅನುಸರಿಸುತ್ತಿರುವ ಪುರುಷರಲ್ಲಿ ಯಕೃತ್ತಿನ ತೀವ್ರವಾದ ಉರಿಯೂತ ಕಂಡುಬರಲಿದೆ ಎಂಬುದು ಇತ್ತೀಚಿನ ಅಧ್ಯಯನವೊಂದರಿಂದ ತಿಳಿದು ಬಂದಿದೆ. ಈ ಆಹಾರಗಳಲ್ಲಿ ಸಕ್ಕರೆ ಮತ್ತು ಕೊಬ್ಬಿನ ಅಂಶ ಹೆಚ್ಚು ಇರುವುದರಿಂದ ಯಕೃತ್ತಿನ ಉರಿಯೂತವನ್ನು ಇಂದು ಪುರುಷರು ಅನುಭವಿಸುತ್ತಿದ್ದಾರೆ.

ಈ ಅಧ್ಯಯನಕ್ಕಾಗಿ ಇಲಿಗಳನ್ನು ಬಳಸಿಕೊಂಡು ಅದರ ಮೇಲೆ ಪ್ರಯೋಗ ನಡೆಸಿದ ತಂಡವು, ಪಾಶ್ಚಿಮಾತ್ಯ ಆಹಾರ ಪದ್ಧತಿಯನ್ನು ಅನುಸರಿಸಿದ ಪುರುಷ ಇಲಿಗಳಲ್ಲಿ ಪಿತ್ತರಸದ ಉರಿಯೂತ ಹೆಚ್ಚು ಕಂಡುಬಂದಿದ್ದು, ಪಿತ್ತರಸ ಆಮ್ಲ ಗ್ರಾಹಿಯ ಕೊರತೆ ಈ ಇಲಿಗಳಲ್ಲಿ ಕಂಡುಬಂದಿದೆ. 

Liver

ಕರುಳಿನ ಮತ್ತು ಯಕೃತ್ತಿನ ಆರೋಗ್ಯವು ಒಂದಕ್ಕೊಂದು ಸಂಬಂಧವನ್ನು ಹೊಂದಿದೆ. ಸೂಕ್ಷ್ಮಜೀವಿಯ ಅಸಮತೋಲನ ಮತ್ತು ಅನಿಯಂತ್ರಿತ ಪಿತ್ತರಸದ ಆಮ್ಲ ಸಂಶ್ಲೇಷಣೆಯನ್ನು ಬೇರ್ಪಡಿಸಲಾಗದು, ಇವುಗಳು ಕರುಳಿನ ಯಕೃತ್ತಿನ ಅಕ್ಷದ ಮೂಲಕ ಹೆಪ್ಟಿಕ್ ಉರಿಯೂತಕ್ಕೆ ಜಂಟಿಯಾಗಿ ಕೊಡುಗೆ ನೀಡುತ್ತವೆ. ಎಂದು ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಯು ಜುಯಿ ಯೊವೆನ್ ವಾನ್ ತಿಳಿಸಿದ್ದಾರೆ.

ಅಂತೆಯೇ ಎಫ್‌ಎಕ್ಸ್‌ಆರ್ ಕೊರತೆಯು ಕೊಬ್ಬಿನ ಪಿತ್ತಜನಕಾಂಗವನ್ನು ಇಲಿಗಳಲ್ಲಿ ಅಭಿವೃದ್ಧಿಪಡಿಸಿದ್ದು, ಇದು ಹೆಣ್ಣು ಇಲಿಗಳಿಗಿಂತ ಗಂಡು ಇಲಿಗಳಲ್ಲಿ ಹೆಚ್ಚಿದೆ.

ಆಹಾರ, ಲಿಂಗ ಮತ್ತು ವಿಭಿನ್ನ ಪ್ರತಿಜೀವಕ ಚಿಕಿತ್ಸೆಗಳು ಕರುಳಿನ ಸೂಕ್ಷ್ಮಜೀವಿಯನ್ನು ಮತ್ತು ಪಿತ್ತರಸ ಆಮ್ಲವನ್ನು ಬದಲಾಯಿಸುತ್ತವೆ ಮತ್ತು ಯಕೃತ್ತಿನ ಉರಿಯೂತದ ಮೇಲೆ ವಿವಿಧ ಪರಿಣಾಮಗಳನ್ನು ಹೊಂದಿರುತ್ತವೆ ಎಂಬುದಾಗಿ ಡೇಟಾವು ತೋರಿಸುತ್ತಿದೆ ಎಂದು ವ್ಯಾನ್ ಹೇಳಿದ್ದಾರೆ.

Liver

ಉರಿಯೂತವನ್ನು ಕಡಿಮೆ ಮಾಡಲು ಇಲಿಗಳ ಮೇಲೆ ಪ್ರತಿಜೀವಕಗಳನ್ನು ಪರಿಚಯಿಸಿದ್ದರಿಂದ ಇಲಿಗಳು ಸ್ವೀಕರಿಸಿದ ಆಹಾರದ ಮೇಲೆ ಇವುಗಳು ಪರಿಣಾಮವನ್ನು ಬೀರಿತ್ತು ಎಂಬುದಾಗಿ ವಿಜ್ಞಾನಿ ಹೇಳಿದ್ದಾರೆ.

ಅಮೇರಿಕನ್‌ನ ಪ್ಯಾಥಲೋಜಿ ಪತ್ರಿಕೆಯೊಂದರಲ್ಲಿ ಬಿತ್ತರವಾಗಿರುವ ಸುದ್ದಿಯಂತೆ, ಅಧ್ಯಯನಕ್ಕಾಗಿ ತಂಡವು ಎಫ್‌ಎಕ್ಸ್ಆರ್ ಕೊರತೆ ಇರುವ ಇಲಿಗಳ ಮಾದರಿಯನ್ನು ಬಳಸಿತ್ತು, ಏಕೆಂದರೆ ಸಿರೋಸಿಸ್ ಅಥವಾ ಲಿವರ್ ಕ್ಯಾನ್ಸರ್ ರೋಗಿಗಳಿಗೆ ಎಫ್‌ಎಕ್ಸ್‌ಆರ್ ಕಡಿಮೆ ಮಟ್ಟದಲ್ಲಿರುತ್ತವೆ. 

fast foods

ಪಾಶ್ಚಿಮಾತ್ಯ ಆಹಾರ ಪದ್ಧತಿ ಮತ್ತು ಎಫ್‌ಎಕ್ಸ್‌ಆರ್ ಕಡಿಮೆ ಇರುವುದರ ನಡುವೆ ಅವರುಗಳು ಹೊಂದಿಕೆಗಳನ್ನು ಕಂಡುಕೊಂಡಿದ್ದಾರೆ.

ಕರುಳಿನ ಮೇಲೆ ಪರಿಣಾಮ ಬೀರಿರುವ ಪಾಶ್ಚಿಮಾತ್ಯ ಆಹಾರ ಪದ್ಧತಿಯಿಂದ ಉರಿಯೂತ ನಿರಂತರ ಬ್ಯಾಕ್ಟೀರಿಯಾವನ್ನು ಕಂಡುಕೊಳ್ಳಲಾಗಿದೆ. ಕರುಳಿನ ಉರಿಯೂತದ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುವ ಮೂಲಕ ಭಾಗಶಃ ಯಕೃತ್ತಿನ ಉರಿಯೂತವನ್ನು ನಿವಾರಿಸಿಕೊಳ್ಳಬಹುದಾಗಿದೆ.

ಯಕೃತ್ತು ಶೇಕಡಾ ಎಪ್ಪತ್ತರಷ್ಟು ರಕ್ತಪೂರೈಕೆಯನ್ನು ಕರುಳಿನಿಂದ ಪಡೆದುಕೊಳ್ಳುತ್ತದೆ. ಇದರಿಂದ ಕರುಳಿನಲ್ಲಿರುವ ರೋಗವು ಯಕೃತ್ತಿನ ಮೇಲೂ ಉಂಟಾಗಲಿದೆ ಎಂದಾಗಿದೆ. ಆದ್ದರಿಂದ ಒಂದರ ಮೇಲೆ ಶ್ರದ್ಧೆಯನ್ನಿರಿಸಿದರೆ ಇನ್ನೊಂದರ ಅಪಾಯವನ್ನು ತಗ್ಗಿಸಬಹುದಾಗಿದೆ.

English summary

Western Diet: How It Affects The Liver In Men

Males who regularly consume a western diet high in fat and sugar may be at risk of developing chronic inflammation of the liver, a study cautioned. The study, conducted in mice, revealed that liver inflammation was most pronounced in Western diet-fed male mice that also lacked farnesoid x receptor (FXR), a bile acid receptor.
Story first published: Monday, July 17, 2017, 23:48 [IST]
Subscribe Newsletter