For Quick Alerts
ALLOW NOTIFICATIONS  
For Daily Alerts

ಮೂತ್ರ ನಾಳದ ಸೋಂಕಿನ ಸಮಸ್ಯೆ ನಿವಾರಣೆಗೆ 'ಕೊತ್ತಂಬರಿ ಬೀಜಗಳು'

By Arshad
|

ಮೂತ್ರವಿಸರ್ಜನೆಯ ವೇಳೆ ನಿಮಗೆ ದೇಹದೊಳಗೆ ಉರಿಯಾದಂತೆ ಅನ್ನಿಸುತ್ತಿದೆಯೇ? ಮೂತ್ರವನ್ನು ಹೆಚ್ಚು ಕಾಲ ತಡೆದಿಟ್ಟುಕೊಳ್ಳಲು ಆಗುತ್ತಿಲ್ಲವೇ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದಲ್ಲಿ ನೀವು ಮೂತ್ರನಾಳದ ಸೋಂಕಿನಿಂದ (Urinary Tract Infection (UTI)) ಬಳಲುತ್ತಿರಬಹುದು. ಈ ಸೋಂಕು ಕೇವಲ ಉರಿ ತರುವುದು ಮಾತ್ರವಲ್ಲ, ಬದಲಿಗೆ ಮೂತ್ರಕೋಶ, ಮೂತ್ರಪಿಂಡ, ಗರ್ಭಕೋಶ ಹಾಗೂ ಮೂತ್ರದ್ವಾರದಲ್ಲಿಯೂ ಸೋಂಕು ಹಾಗೂ ಇತರ ಪ್ರಭಾವ ಬೀರಬಹುದು.

ಈ ಸೋಂಕಿಗೆ ಪ್ರಮುಖ ಕಾರಣ ಈ ಕೊಲೈ (Escherichia coli) ಎಂಬ ಬ್ಯಾಕ್ಟೀರಿಯಾವಾಗಿದ್ದು ಮೈತುಂಬಾ ಮುಳ್ಳುಗಳನ್ನು ಹೊಂದಿರುವ ಸೌತೆಕಾಯಿಯಂತಿರುತ್ತದೆ. ಆಹಾರದ ಮೂಲಕ ಆಗಮಿಸಿದ ಈ ಬ್ಯಾಕ್ಟೀರಿಯಾ ಮೂತ್ರನಾಳದಲ್ಲಿ ಆಗಮಿಸಿ ಇಲ್ಲಿಯೇ ಆಶ್ರಯ ಪಡೆದುಬಿಡುತ್ತದೆ.

ಮೂತ್ರವನ್ನು ಹಿಡಿದಿಟ್ಟುಕೊಂಡರೆ, ಆರೋಗ್ಯಕ್ಕೇ ಅಪಾಯಕಾರಿ

ಮೂತ್ರದ್ವಾರವೂ ಮಲದ್ವಾರದ ಬಳಿಯೇ ಇರುವ ಕಾರಣ ಈ ಬ್ಯಾಕ್ಟೀರಿಯಾಗಳಿಗೆ ಮೂತ್ರಕೋಶದತ್ತ ಆಗಮಿಸುವುದು ತುಂಬಾ ಸುಲಭವಾಗುತ್ತದೆ. ಇದೇ ಕಾರಣಕ್ಕೆ ಪ್ರತಿ ಬಾರಿ ಶೌಚಾಲಯವನ್ನು ಬಳಸಿದ ಬಳಿಕ ಆಸನಸ್ಥಾನದ ಸ್ವಚ್ಛತೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಅದರಲ್ಲೂ ಸ್ವಚ್ಚಗೊಳಿಸುವ ದಿಕ್ಕು ಮುಂಭಾಗದಿಂದ ಹಿಂಭಾಗದತ್ತ ಇರಬೇಕು, ಇದರಿಂದ ಅಕಸ್ಮಾತ್ ಈ ಬ್ಯಾಕ್ಟೀರಿಯಾ ಆಸನದ್ವಾರದಲ್ಲಿದ್ದರೆ ಮೂತ್ರದ್ವಾರದತ್ತ ಬರದಂತೆ ತಡೆಯಬಹುದು.

ಕೊತ್ತಂಬರಿ ಸೊಪ್ಪಿನಲ್ಲಿರುವ 10 ಔಷಧೀಯ ಗುಣಗಳು

ಆದರೂ ಯಾವುದೋ ಮಾಯೆಯಲ್ಲಿ ಈ ಬ್ಯಾಕ್ಟೀರಿಯಾ ಮೂತ್ರದ್ವಾರದ ಸಮೀಪ ಬಂದೆಬಿಟ್ಟಿತೋ, ತಕ್ಷಣವೇ ಇದು ಮೂತ್ರನಾಳದ ತೇವದಲ್ಲಿ ಅತಿಶೀಘ್ರದಲ್ಲಿಯೇ ತನ್ನ ಸಂತತಿಯನ್ನು ವೃದ್ಧಿಸಿಕೊಂಡು ಕಾಲೋನಿಯೊಂದನ್ನು ನಿರ್ಮಿಸಿ ಸೋಂಕು ಹರಡುತ್ತದೆ...

ಮೂತ್ರನಾಳದ ಸೋಂಕಿಗೆ ಈ ಕೆಳಗಿನವೂ ಕಾರಣವಾಗಿರಬಹುದು

ಮೂತ್ರನಾಳದ ಸೋಂಕಿಗೆ ಈ ಕೆಳಗಿನವೂ ಕಾರಣವಾಗಿರಬಹುದು

* ಮಲವಿಸರ್ಜನೆಯ ಬಳಿಕ ಸೂಕ್ತ ವಿಧಾನದಲ್ಲಿ ಅಥವಾ ಸಮರ್ಪಕವಾಗಿ ಸ್ವಚ್ಛಗೊಳಿಸದೇ ಇರುವುದು

* ಮಕ್ಕಳ ಡಯಾಪರ್ ಗಳನ್ನು ಸರಿಯಾದ ವಿಧಾನದಲ್ಲಿ ತೊಡಿಸದೇ ಇರುವುದು

* ಗರ್ಭನಿರೋಧಕ ಕ್ರಮಗಳಲ್ಲಿ ಪರದೆ ಅಥವಾ ಕಾಂಡೋಮುಗಳನ್ನು ಉಪಯೋಗಿಸುವುದು

* ಅಸುರಕ್ಷಿತ ಸಮಾಗಮ ಅಥವಾ ಸಮಾಗಮದ ಬಳಿಕ ಮೂತ್ರವಿಸರ್ಜಿಸದೇ ಇರುವುದು

* ಮೂತ್ರವನ್ನು ಬಹಳ ಹೊತ್ತಿನವರೆಗೆ ಹಿಡಿದಿಟ್ಟುಕೊಳ್ಳುವುದು

ಇಂತಹ ಸಮಸ್ಯೆಗೆ ಕೊತ್ತಂಬರಿ ಬೀಜಗಳೇ ಸಾಕು

ಇಂತಹ ಸಮಸ್ಯೆಗೆ ಕೊತ್ತಂಬರಿ ಬೀಜಗಳೇ ಸಾಕು

ಈ ಸೋಂಕನ್ನು ಸಮರ್ಥವಾಗಿ ಎದುರಿಸಲು ನಿಸರ್ಗ ಹಲವಾರು ಸಾಮಾಗ್ರಿಗಳನ್ನು ನೀಡಿದೆ. ಇವುಗಳಲ್ಲಿ ಪ್ರಥಮ ಸ್ಥಾನವನ್ನು ಕೊತ್ತಂಬರಿ ಅಥವಾ ಧನಿಯ ಬೀಜಗಳು ಪಡೆದಿವೆ. ಆಯುರ್ವೇದದ ಪ್ರಕಾರ ಧನಿಯಕಾಳುಗಳು ದೇಹಕ್ಕೆ ತಂಪುನೀಡುತ್ತದೆ ಹಾಗೂ ಮೂತ್ರದ ಉರಿಯನ್ನು ಕಡಿಮೆ ಮಾಡುತ್ತದೆ. ಈ ಉರಿಯನ್ನು ಕಡಿಮೆ ಮಾಡುವ ಫೈಟೋ ನ್ಯೂಟ್ರಿಯೆಂಟುಗಳು ಈ ಸೋಂಕು ಮತ್ತೆ ಆಗದಿರಲೂ ನೆರವಾಗುತ್ತವೆ. ಈ ಬೀಜಗಳನ್ನು ಹೇಗೆ ಬಳಸಬಹುದು ಎಂಬ ಮಾಹಿತಿಯನ್ನು

ಆಯುರ್ವೇದ ಒದಗಿಸಿದ್ದು ಇವುಗಳಲ್ಲಿ ಪ್ರಮುಖವಾದುವನ್ನು ಇಲ್ಲಿ ವಿವರಿಸಲಾಗಿದೆ...

ಕೊತ್ತಂಬರಿ ಬೀಜ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು...

ಕೊತ್ತಂಬರಿ ಬೀಜದ ಟೀ

ಕೊತ್ತಂಬರಿ ಬೀಜದ ಟೀ

ಅಗತ್ಯವಿರುವ ಸಾಮಾಗ್ರಿಗಳು: ಕೊತ್ತಂಬರಿ ಬೀಜ- ಮೂರು ದೊಡ್ಡ ಚಮಚ

ಮೂರು ಲೋಟ ನೀರು.

ವಿಧಾನ

1) ಮೊದಲು ಕೊತ್ತಂಬರಿ ಬೀಜಗಳನ್ನು ಕುಟ್ಟಿ ಪುಡಿಮಾಡಿ (ಸಿದ್ಧ ರೂಪದ ಕೊತ್ತಂಬರಿ ಪುಡಿ ಯೋಗ್ಯವಲ್ಲ)

2) ನೀರನ್ನು ಕುದಿಸಿ ಈ ಪುಡಿಯನ್ನು ನೀರಿಗೆ ಹಾಕಿ ಕಲಕಿ

3) ಈ ಪಾತ್ರೆಯ ಮುಚ್ಚಳ ಮುಚ್ಚಿ ಅತಿ ಚಿಕ್ಕ ಉರಿಯಲ್ಲಿ ಮುಂದಿನ ಎರಡು ಗಂಟೆ ಕಾಲ ಕುದಿಯಲು ಬಿಡಿ

4) ಬಳಿಕ ಈ ನೀರನ್ನು ಸೋಸಿ ಉಗುರುಬೆಚ್ಚಗಿದ್ದಂತೆ ಕುಡಿಯಿರಿ.

ಧನಿಯ ಬೀಜದ ಜ್ಯೂಸ್

ಧನಿಯ ಬೀಜದ ಜ್ಯೂಸ್

ಅಗತ್ಯವಿರುವ ಸಾಮಾಗ್ರಿಗಳು

*ಮೂರು ದೊಡ್ಡ ಚಮಚ ಧನಿಯ ಪುಡಿ

*ಒಂದು ದೊಡ್ಡಚಮಚ ಕಂದು ಸಕ್ಕರೆ (ಅಥವಾ ಬೆಲ್ಲ)

*ಮೂರು ಲೋಟ ನೀರು

ವಿಧಾನ

1) ಮೊದಲು ನೀರಿನಲ್ಲಿ ಧನಿಯ ಪುಡಿ ಮತ್ತು ಸಕ್ಕರೆ ಬೆರೆಸಿ.

2) ಈ ನೀರನ್ನು ಇಡಿಯ ರಾತ್ರಿ ಹಾಗೇ ಬಿಡಿ.

3) ಮರುದಿನ ಬೆಳಿಗ್ಗೆ ಈ ನೀರನ್ನು ಕಲಕಿ ಒಂದು ಲೋಟದಷ್ಟು ನೀರನ್ನು ಖಾಲಿಹೊಟ್ಟೆಯಲ್ಲಿ ಕುಡಿಯಿರಿ.

4) ಉಳಿದ ಎರಡು ಲೋಟ ನೀರನ್ನು ಮಧ್ಯಾಹ್ನ ಹಾಗೂ ರಾತ್ರಿ ಕುಡಿಯಿರಿ.

ಕುರಿಯ ಹಾಲು ಹಾಗೂ ಕೊತ್ತಂಬರಿ

ಕುರಿಯ ಹಾಲು ಹಾಗೂ ಕೊತ್ತಂಬರಿ

ಅಗತ್ಯವಿರುವ ಸಾಮಾಗ್ರಿಗಳು

ಒಂದು ಚಿಕ್ಕಚಮಚ ಧನಿಯ

ಒಂದು ಲೋಟ ಕುರಿಯ ಹಾಲು

ಒಂದು ಲೋಟ ನೀರು

ಅಗತ್ಯಕ್ಕೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ

ವಿಧಾನ:

1)ಮೊದಲು ಈ ಬೀಜಗಳನ್ನು ನೀರಿನಲ್ಲಿ ಮಧ್ಯಮ ಉರಿಯಲ್ಲಿ ಅರ್ಧಘಂಟೆಯ ಕಾಲ ಕುದಿಸಿ. ನೀರು ಅರ್ಧದಷ್ಟು ಆದ ಬಳಿಕ ಕೆಳಗಿಳಿಸಿ.

2) ಬಳಿಕ ಈ ನೀರಿಗೆ ಕುರಿಯ ಹಾಲು ಮತ್ತು ಸಕ್ಕರೆ ಬೆರೆಸಿ

3) ಈ ನೀರನ್ನು ದಿನಕ್ಕೆರಡು ಬಾರಿಯಂತೆ ಮುಂದಿನ ಮೂರು ದಿನಗಳ ಕಾಲ ಸೇವಿಸಿ.

ಕುರಿಯ ಹಾಲು ಹಾಗೂ ಕೊತ್ತಂಬರಿ

ಕುರಿಯ ಹಾಲು ಹಾಗೂ ಕೊತ್ತಂಬರಿ

ಮೂತ್ರನಾಳದ ಸೋಂಕು ಉಂಟಾದರೆ ಮೇಲಿನ ವಿಧಾನಗಳು ಅತ್ಯುತ್ತಮ ಪರಿಹಾರ ನೀಡುತ್ತವೆ. ಆದರೆ ಯಾವುದೇ ಕಾಯಿಲೆ ಬಂದ ಬಳಿಕ ಚಿಕಿತ್ಸೆ ಪಡೆದುಕೊಳ್ಳುವ ಬದಲು ಕಾಯಿಲೆ ಬರದೇ ಇರದಂತೆ ಮುನ್ನೆಚ್ಚರಿಕೆ ವಹಿಸುವುದೇ ಜಾಣತದನ ಕ್ರಮವಾಗಿದೆ. ಬನ್ನಿ, ಈ ಬಗ್ಗೆ ಕೆಲವು ಸಲಹೆಗಳನ್ನು ನೋಡೋಣ:

* ದಿನವಿಡೀ ಸಾಕಷ್ಟು ನೀರನ್ನು ಆಗಾಗ ಕುಡಿಯುತ್ತಿರಿ

* ಸುರಕ್ಷಿತ ಸಮಾಗಮದ ವಿಧಾನ ಅನುಸರಿಸಿ

* ಸಮಾಗಮದ ಬಳಿಕ ತಪ್ಪದೇ ಮೂತ್ರವಿಸರ್ಜಿಸಲು ಮರೆಯದಿರಿ.

* ಮಲವಿಸರ್ಜನೆಯ ಬಳಿಕ ಎಂದಿಗೂ ಹಿಂದಿನಿಂದ ಮುಂದಕ್ಕೆ ಒರೆಸಿಕೊಳ್ಳಬೇಡಿ.

* ಆಸನ ಹಾಗೂ ಇತರ ಸೂಕ್ಷ್ಮಪ್ರದೇಶಗಳ ಸ್ವಚ್ಛತೆಗೆ ಪ್ರಬಲ ಮಾರ್ಜಕ ಅಥವಾ ಸ್ವಚ್ಛಗೊಳಿಸುವ ದ್ರಾವಣಗಳನ್ನು ಬಳಸದಿರಿ. ಸೌಮ್ಯ ಉತ್ಪನ್ನಗಳನ್ನೇ ಬಳಸಿ

* ಕೊನೆಯದಾಗಿ ಮತ್ತು ಅತಿ ಮುಖ್ಯವಾಗಿ ಮೂತ್ರವನ್ನು ಹಿಡಿದಿಟ್ಟುಕೊಳ್ಳದಿರಿ. ಮೂತ್ರವಿಸರ್ಜನೆಗೆ ಅವಸರವಾಗದೇ ಇದ್ದರೂ ಪ್ರತಿ ಎರಡು ಘಂಟೆಗೊಮ್ಮೆಯಾದರೂ ವಿಸರ್ಜಿಸುವುದು ಆರೋಗ್ಯಕರ ಅಭ್ಯಾಸ. ಮೂತ್ರ ಹಿಡಿದಿಟ್ಟುಕೊಳ್ಳುವುದು ಈ ಸೋಂಕಿಗೆ ಪ್ರಮುಖ ಕಾರಣವಾಗಿದೆ.

ಮೂತ್ರ ಹೆಚ್ಚಿಸಲು ಕೆಳಗಿನ ಆಹಾರಗಳು ಸಹಕಾರಿ

ಮೂತ್ರ ಹೆಚ್ಚಿಸಲು ಕೆಳಗಿನ ಆಹಾರಗಳು ಸಹಕಾರಿ

* ಗಂಟೆಗೊಂದು ಲೋಟ ಸಾಮಾನ್ಯ ತಾಪಮಾನದ ಸ್ವಚ್ಛನೀರು

* ಎಳನೀರು

* ಬಾರ್ಲಿಯ ನೀರು

* ಹಾಲು ಬೆರೆಸದ ಟೀ

* ಸೌತೆಕಾಯಿ

* ಕಲ್ಲಂಗಡಿ ಹಣ್ಣು

* ಲಿಂಬೆ ಬೆರೆಸಿದ ಉಗುರುಬೆಚ್ಚನೆಯ ನೀರು

English summary

Ways To Treat Urinary Tract Infection Using Coriander Seeds

Do you feel a burning sensation while peeing? Are you not able to hold your pee for long? If your answer to the above questions is yes, then you may be suffering from Urinary Tract Infection (UTI). Urinary tract infection affects the kidneys, urinary bladder, ureters and urethra, responsible for transporting the urine out of the body. The infection is caused by the Escherichia coli bacteria which resides in the digestive tract but causes infection when it finds its way into the urinary tract. Due to the location of the anus, which is very close to the urethra, it is easier for them to enter into the urinary tract.
X
Desktop Bottom Promotion