For Quick Alerts
ALLOW NOTIFICATIONS  
For Daily Alerts

  ಶ್! ಇದು ಕೊಬ್ಬು ಕರಗಿಸುವ ಸಿಂಪಲ್ ಟ್ರಿಕ್ಸ್-ಪ್ರಯತ್ನಿಸಿ ನೋಡಿ....

  By Manu
  |

  ನಿಮ್ಮ ಹೊಟ್ಟೆಯ ಸುತ್ತಲೂ ಸೇರಿಕೊ೦ಡಿರುವ ಕೊಬ್ಬನ್ನು ಹತ್ತು ದಿನಗಳಲ್ಲಿ ಕರಗಿಸಲು ನಮ್ಮಲ್ಲಿ ಕೆಲವೊ೦ದು ಚಮತ್ಕಾರಿಕ ಸಲಹೆಗಳಿದ್ದು, ನೀವು ಬೇಕಾದರೆ, ಅವುಗಳನ್ನೊಮ್ಮೆ ಪ್ರಯತ್ನಿಸಿ ನೋಡಬಹುದು. ಅತೀ ಶೀಘ್ರವಾದ ತೂಕನಷ್ಟಕ್ಕೆ ದಾರಿಮಾಡಿ ಕೊಡುವ ಈ ಸಲಹೆಗಳನ್ನು ಅನುಸರಿಸಲು ನಿಮ್ಮಲ್ಲಿರಬೇಕಾದುದು ನಂಬಿಕೆಯಷ್ಟೇ. ಹೊಟ್ಟೆಯ ಸುತ್ತಲಿನ ಕೊಬ್ಬು ಮಹಿಳೆಯರ ಪಾಲಿಗ೦ತೂ ಒ೦ದು ಬಹು ದೊಡ್ಡ ಸಮಸ್ಯೆಯಾಗಿರುತ್ತದೆ. ಹೊಟ್ಟೆಯ ಸುತ್ತಲಿನ ಈ ಕೊಬ್ಬು ಮುಜುಗರದಾಯಕವಾಗಿರುತ್ತದೆ.

  ಬರೀ ಒಂದೇ ವಾರದಲ್ಲಿ ಹೊಟ್ಟೆಯ ಕೊಬ್ಬು ಕರಗಿಸಿಕೊಳ್ಳಿ!

  ಸರಿಯಾದ ಆಹಾರಪದಾರ್ಥಗಳ ಸೇವನೆಯ ಮೂಲಕ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ದಹಿಸಲು ಸಾಧ್ಯವಿದೆ. ಈ ವಿಚಾರದಲ್ಲಿ ಅತ್ಯ೦ತ ಪ್ರಮುಖವಾದ ಅ೦ಶವೇನೆ೦ದರೆ, ಅ೦ತಹ ಸರಿಯಾದ ಆಹಾರಪದಾರ್ಥಗಳನ್ನು ಸೂಕ್ತವಾದ ಸಮಯದಲ್ಲಿ ಸೇವಿಸುವುದು. ಅಸಹ್ಯವಾಗಿ ಕಾಣಿಸುವ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕರಗಿಸಲು ನೀವು ಸ್ವಲ್ಪ ದೈಹಿಕವಾಗಿಯೂ ಶ್ರಮಪಡಬೇಕಾದ ಅಗತ್ಯವಿದೆ.

  ದಿನಕ್ಕೆ ಮೂರು ಚಮಚ ಇದನ್ನು ಸೇವಿಸಿ ಖಂಡಿತ ಬೊಜ್ಜು ಕರಗುವುದು!

  ನಿಮ್ಮ ಆ ಹೊಟ್ಟೆಯ ಕೊಬ್ಬನ್ನು ಹತ್ತಿಕ್ಕಿ, ಹೊಟ್ಟೆಯನ್ನು ಬಲಯುತಗೊಳಿಸಲು ನೆರವಾಗುವ೦ತಹ ವ್ಯಾಯಾಮಗಳ೦ತೂ ಟನ್‌ಗಳಷ್ಟಿವೆ. ಇವು ನೀವು ಚಪ್ಪಟೆಯಾದ ಹೊಟ್ಟೆಯನ್ನು ಸಾಧಿಸಲು ಸಹಕರಿಸುತ್ತವೆ. ಸರಿಯಾದ ತೂಕನಷ್ಟ ಸಲಹೆಗಳು ಮತ್ತು ಅಚಲವಾದ ನಂಬಿಕೆಯಷ್ಟೇ, ಇವುಗಳ ಸ೦ಯೋಜನೆಯು ನೀವು ಹತ್ತು ದಿನಗಳಲ್ಲಿ ತೂಕ ನಷ್ಟವನ್ನು ಸಾಧಿಸಲು ನೆರವಾಗಬಲ್ಲವು. ಹಾಗಾದರೆ, ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ಕೆಳಗೆ ನೀಡಲಾಗಿರುವ ಸಲಹೆಗಳತ್ತ ಒಮ್ಮೆ ಗಮನಿಸಿ....

  ಎಂಟು ಲೋಟ ನೀರು ಕುಡಿಯಿರಿ

  ಎಂಟು ಲೋಟ ನೀರು ಕುಡಿಯಿರಿ

  ದಿನಕ್ಕೆ ಎಂಟು ಲೋಟ ನೀರು ಕುಡಿಯಬೇಕು ಎಂಬ ಕಟ್ಟುಪಾಡುಗಳನ್ನೆಲ್ಲಬಿಟ್ಟುಬಿಡಿ. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಇಲ್ಲದ ಕಾರಣ ಹೊಟ್ಟೆಯಿಂದ "ಬೇಕೇ ಬೇಕು ಊಟ ಬೇಕು" ಎಂಬ ಘೋಷಣೆಗಳು ಬರುತ್ತಲೇ ಇರುತ್ತವೆ. ಹೀಗೆ ಬಂದಾಗಲೆಲ್ಲಾ ಒಂದು ಲೋಟ ತಣ್ಣೀರು ಕುಡಿಯಿರಿ, ಇಡಿಯ ದಿನ ಕುಡಿಯುತ್ತಿರಿ. ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ನೀರು ಕುಡಿಯಿರಿ.

  ಮುಂಜಾನೆ ಎದ್ದು ಶುಂಠಿ ಸೇರಿಸಿದ ಟೀ ಕುಡಿಯಿರಿ

  ಮುಂಜಾನೆ ಎದ್ದು ಶುಂಠಿ ಸೇರಿಸಿದ ಟೀ ಕುಡಿಯಿರಿ

  ಹಸಿಶುಂಠಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದು ಸರಿ, ಆದರೆ ಇದು ದೇಹದ ಬಿಸಿಯನ್ನೂ ಹೆಚ್ಚಿಸುತ್ತದೆಂದು (thermogenic) ನಿಮಗೆ ಗೊತ್ತಿತ್ತೇ ? ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ. ಸೊಂಟದ ಸುತ್ತ ಈಗಾಗಲೇ ಸಂಗ್ರಹವಾಗಿರುವ ಕೊಬ್ಬು ಎಷ್ಟೋ ವರ್ಷಗಳ ಹಿಂದಿನಿಂದ ಸಂಗ್ರಹವಾಗುತ್ತಾ ಬಂದಿರಬಹುದಾಗಿದ್ದು ಶುಂಠಿಯ ನಿಯಮಿತ ಸೇವನೆಯಿಂದ ನಿಧಾನವಾಗಿ ಕರಗತೊಡಗುತ್ತದೆ. ಜೊತೆಗೇ ಶುಂಠಿಯ ಸೇವನೆಯಿಂದ ದೇಹದಲ್ಲಿ ಒತ್ತಡದ ಕಾರಣ ಉತ್ಪತ್ತಿಯಾಗುವ ಕಾರ್ಟಿಸೋಲ್ (cortisol) ಎಂಬ ಹಾರ್ಮೋನು ಉತ್ಪತ್ತಿಯನ್ನು ತಡೆಯಬಹುದು. ಇದರಿಂದ ರಕ್ತದಲ್ಲಿ ಹೆಚ್ಚಬಹುದಾಗಿದ್ದ ಸಕ್ಕರೆಯ ಪ್ರಮಾಣವನ್ನು ಮಿತಿಗೊಳಿಸಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ.

  ಬಳಕೆಯ ವಿಧಾನ

  *ಒಂದು ಲೋಟಕ್ಕಿಂತ ಕೊಂಚ ಹೆಚ್ಚು ನೀರನ್ನು ಕುದಿಸಿ.

  *ಈ ನೀರಿನಲ್ಲಿ ಒಂದು ಇಂಚು ಹಸಿಶುಂಠಿಯನ್ನು ಜಜ್ಜಿ ಸುಮಾರು ಹತ್ತು ನಿಮಿಷಗಳವೆರೆಗೆ ಚಿಕ್ಕ ಉರಿಯಲ್ಲಿ ಕುದಿಸಿ.

  *ಈಗ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ ಒಂದು ಚಮಚ ಈಗತಾನೇ ಹಿಂಡಿದ *ಲಿಂಬೆರಸ ಮತ್ತು ಒಂದು ಚಮಚ ಜೇನು ಸೇರಿಸಿ.

  *ಈ ಚಹಾ ಅನ್ನು ಸೋಸಿ ಬಿಸಿಬಿಸಿ ಇರುವಂತೆಯೇ ಸೇವಿಸಿ. ಒಂದು ದಿನಕ್ಕೆ ಕನಿಷ್ಟ ಎರಡು ಕಪ್ ಈ ಟೀ ಸೇವಿಸಿ ಕೊಬ್ಬಿನಿಂದ ಮುಕ್ತಿಪಡೆಯಿರಿ.

  ಹಾಲಿನ ಟೀ ಬದಲಿಗೆ ಪೆಪ್ಪರ್ ಮಿಂಟ್ ಟೀ

  ಹಾಲಿನ ಟೀ ಬದಲಿಗೆ ಪೆಪ್ಪರ್ ಮಿಂಟ್ ಟೀ

  ಪುದೀನಾ ಬೆರೆಸಿದ ಹಾಲಿಲ್ಲದ ಟೀ ಸಹಾ ತೂಕ ಇಳಿಕೆಗೆ ಸಹಕಾರಿ. ಅಲ್ಲದೇ ಇದು ಹೊಟ್ಟೆಯುಬ್ಬರವನ್ನು ತಡೆಯುವ ಸಮರ್ಥ ಔಷಧಿಯೂ ಆಗಿದೆ. ನಿತ್ಯವೂ ಕೆಲವಾರು ಕಪ್ ಪುದೀನಾ ಎಲೆ ಹಾಕಿ ಕುದಿಸಿದ ಅಥವಾ ಪುದೀನಾ ಒಣಪುಡಿಯನ್ನು ಬೆರೆಸಿ ತಯಾರಿಸಿದ ಟೀ ಕುಡಿಯುವ ಮೂಲಕ ಹಾಲಿರುವ ಟೀ ಕುಡಿಯುವ ಸಂಭವವನ್ನು ಕಡಿಮೆ ಮಾಡಿ ಈ ಮೂಲಕ ತೂಕ ಇಳಿಸಲು ನೆರವಾಗಬಹುದು. ಅಲ್ಲದೇ ಇದರ ರುಚಿ ಹಾಲಿನ ಟೀ ತ್ಯಜಿಸಿದ್ದನ್ನೂ ಮರೆಯಲು ಸಾಧ್ಯವಾಗಿಸುತ್ತದೆ.

  ಮೆಂತೆ ನೀರು

  ಮೆಂತೆ ನೀರು

  ಮೆಂತೆಯು ತುಂಬಾ ಕಹಿಯಾಗಿರುವುದು. ಆದರೆ ಇದು ಕೊಬ್ಬು ಕರಗಿಸಲು ತುಂಬಾ ಪರಿಣಾಮಕಾರಿ. ಇದರಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶವಿದ್ದು, ಕಾರ್ಬ್ರ್ಸ್ ಮತ್ತು ಕೊಲೆಸ್ಟ್ರಾಲ್ ಕಡಿಮೆಯಿದೆ. ಇದು ಕೊಬ್ಬು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೊಟ್ಟೆಯ ಕೊಬ್ಬು ಕರಗಿಸಲು ಇದು ತುಂಬಾ ಪರಿಣಾಮಕಾರಿ. ಒಂದು ಚಮಚ ಮೆಂತ್ಯೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದು ಈ ನೀರನ್ನು ಬಿಸಿ ಮಾಡಿಕೊಂಡು ಕುಡಿಯಿರಿ.

  ಲೋಳೆಸರ ಮತ್ತು ಜೇನಿನ ಪಾನೀಯ

  ಲೋಳೆಸರ ಮತ್ತು ಜೇನಿನ ಪಾನೀಯ

  ಹೊಟ್ಟೆಯ ಕೊಬ್ಬು ಕರಗಿಸಲು ಲೋಳೆಸರವೂ ಉತ್ತಮವಾಗಿದೆ. ಒಂದು ವೇಳೆ ಹೊಟ್ಟೆಯಲ್ಲಿ ಆಮ್ಲೀಯತೆ, ಅಜೀರ್ಣ, ಹೊಟ್ಟೆ ಉಬ್ಬರಿಕೆ ಮೊದಲಾದ ತೊಂದರೆಗಳಿದ್ದರೆ ಈ ವಿಧಾನ ಸೂಕ್ತವಾಗಿದೆ. ಇದಕ್ಕಾಗಿ ಎರಡು ದೊಡ್ಡಚಮಚ ಲೋಳೆಸರದ ರಸ ಮತ್ತು ಒಂದು ದೊಡ್ಡಚಮಚ ಜೇನು ಸೇರಿಸಿ ಮಿಶ್ರಣ ಮಾಡಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಕೊಂಚವೇ ಬಿಸಿ ಮಾಡಿಕೊಂಡು ಪ್ರಥಮ ಆಹಾರವಾಗಿ ಸೇವಿಸಿ. ಒಂದು ಘಂಟೆಯ ಬಳಿಕವೇ ಉಪಾಹಾರ ಸೇವಿಸಿ.

  ಬೆಳ್ಳುಳ್ಳಿ+ಲಿಂಬೆ ರಸ

  ಬೆಳ್ಳುಳ್ಳಿ+ಲಿಂಬೆ ರಸ

  *ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ

  *ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ.

  *ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.

  *ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.

  ಕಲ್ಲಂಗಡಿ ಸ್ಮೂಥಿ

  ಕಲ್ಲಂಗಡಿ ಸ್ಮೂಥಿ

  ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಎರಡು ಪ್ರಯೋಜನಗಳಿವೆ. ಮೊದಲನೆಯದು ನೀರಿನ ಪೂರೈಕೆ. ಈ ಹಣ್ಣಿನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ನೀರು ಮತ್ತು ತೂಕ ಇಳಿಸಲು ನೆರವಾಗುವ ಹಲವಾರು ಪೋಷಕಾಂಶಗಳಿವೆ. ಪ್ರತಿದಿನ ಕಲ್ಲಂಗಡಿ ಹಣ್ಣಿನ ತಿರುಳಿನಿಂದ ಬೀಜಗಳನ್ನು ನಿವಾರಿಸಿ, ಸಕ್ಕರೆ ಬೆರೆಸದೇ ತಯಾರಿಸಿದ ಸ್ಮೂಥಿಯನ್ನು ಕುಡಿಯುವ ಮೂಲಕ ತೂಕ ಇಳಿಸುವ ಜೊತೆಗೇ ಆರೋಗ್ಯವನ್ನೂ ವೃದ್ಧಿಸಿಕೊಳ್ಳಬಹುದು.

  ಪಾಲಕ್ ಸೊಪ್ಪು ಮತ್ತು ಲಿಂಬೆ ಜ್ಯೂಸ್

  ಪಾಲಕ್ ಸೊಪ್ಪು ಮತ್ತು ಲಿಂಬೆ ಜ್ಯೂಸ್

  ಈ ರಸದಲ್ಲಿ ದಪ್ಪನೆಯ ಪಾಲಕ್ ಸೊಪ್ಪು ಮತ್ತು ಲಿಂಬೆಯನ್ನು ಪ್ರಮುಖವಾಗಿ ಬಳಸಲಾಗಿದೆ. ಒಂದು ಪ್ರಮಾಣಕ್ಕೆ ನಾಲ್ಕು ಪಾಲಕ್ ಸೊಪ್ಪು ಮತ್ತು ಒಂದು ಲಿಂಬೆಹಣ್ಣಿನ ರಸವನ್ನು ಸೇರಿಸಿ. ಕೊಂಚ ನೀರು ಸೇರಿಸಿ ನಿಮಗೆ ಅಗತ್ಯವಿದ್ದಷ್ಟು ಗಾಢವಾಗಿಸಿಕೊಳ್ಳಿ. ರುಚಿಯಲ್ಲಿ ಹುಳಿ,ಒಗರು ಇರುವ ಈ ಜ್ಯೂಸ್ ಕೊಬ್ಬು ಕರಗಿಸಲು ಅತ್ಯುತ್ತಮವಾಗಿದೆ. ಆದರೆ ಕ್ರೀಡಾಪಟುಗಳಿಗೆ ಇದು ಸೂಕ್ತವಲ್ಲ, ಏಕೆಂದರೆ ಇದರಲ್ಲಿ ತಕ್ಷಣವೇ ರಕ್ತಕ್ಕೆ ಬಿಡುಗಡೆಯಾಗುವಂತಹ ಪೋಷಕಾಂಶಗಳಿಲ್ಲ. ಆದ್ದರಿಂದ ಕೇವಲ ಸ್ಥೂಲಕಾಯ ಕರಗಿಸಲು ರಾತ್ರಿ ಮಲಗುವ ಮುನ್ನ ಸೇವಿಸುವುದು ಉತ್ತಮ. ಲಿಂಬೆ ಹಣ್ಣು ಸಿಗದಿದ್ದರೆ ಸಿದ್ಧರೂಪದಲ್ಲಿ ದೊರಕುವ ಲಿಂಬೆಯ ಗಾಢರಸವನ್ನೂ ಬಳಸಬಹುದು.

  ಕೊಬ್ಬನ್ನು ಕರಗಿಸುವ ಆಹಾರಗಳು

  ಕೊಬ್ಬನ್ನು ಕರಗಿಸುವ ಆಹಾರಗಳು

  ಬೆಳ್ಳುಳ್ಳಿ, ಈರುಳ್ಳಿ, ಶುಂಠಿ, ಮೆಣಸಿನ ಪುಡಿ, ಎಲೆಕೋಸು, ಟೊಮೆಟೊ ಮತ್ತು ದಾಲ್ಚಿನಿ ಮತ್ತು ಸಾಸಿವೆಯಂತಹ ಸಂಬಾರ ಪದಾರ್ಥಗಳು ಕೊಬ್ಬನ್ನು ಕರಗಿಸಲು ಬಹಳ ಉಪಯುಕ್ತ. ಇವುಗಳಲ್ಲಿ ನಿಮ್ಮ ಇಷ್ಟದ ವಸ್ತುಗಳ ನಿಯಮಿತ ಬಳಕೆ ಬಹಳ ಪ್ರಭಾವಶಾಲಿ. ಬಿಸಿ ನೀರಿನ ಜೊತೆಗೆ ಲಿಂಬೆ ಮತ್ತು ಜೇನು ತುಪ್ಪವನ್ನು ಹಾಕಿ ಸೇವಿಸುವುದು ಕೂಡ ಬಹಳ ಪ್ರಭಾವಶಾಲಿ ಅಂಶವಾಗಿದೆ.

  ಹೆಚ್ಚು ನೀರು ಕುಡಿಯಿರಿ

  ಹೆಚ್ಚು ನೀರು ಕುಡಿಯಿರಿ

  ಬಹಳಷ್ಟು ಮಂದಿಗೆ ಹಸಿವು, ಬಾಯಾರಿಕೆ ಮತ್ತು ದಣಿವಿನ ನಡುವೆ ಇರುವ ವ್ಯತ್ಯಾಸದ ಗೊಂದಲದಿಂದಾಗಿ ಏನಾದರೂ ತಿಂಡಿ ತಿನ್ನುತ್ತಾರೆ. ಆದರೆ ಹಾಗಾಗಬಾರದು. ನಿಮ್ಮ ಜೊತೆ ಯಾವಾಗಲೂ ನೀರಿನ ಬಾಟಲಿ ಇದ್ದರೆ ಒಳಿತು. ಸಾಮಾನ್ಯ ಮನುಷ್ಯನೊಬ್ಬನಿಗೆ ದಿನಕ್ಕೆ ಆರರಿಂದ ಎಂಟು ಗ್ಲಾಸ್ ಗಳಷ್ಟು ನೀರು ಬೇಕು. ಇದು ನಮ್ಮ ದೇಹ ತೂಕ ಮತ್ತು ಜೀವನ ಶೈಲಿಯ ಮೇಲೆ ಅವಲಂಬಿತವಾಗಿದೆ. ಹೀಗಾಗಿ ನಿಮ್ಮ ದೇಹಕ್ಕೆ ತಕ್ಕಂತೆ ನೀರು ಕುಡಿಯಿರಿ.

  ಆದಷ್ಟು ಮಸಾಲೆ ಟೀ ಸೇವಿಸಿ

  ಆದಷ್ಟು ಮಸಾಲೆ ಟೀ ಸೇವಿಸಿ

  ಮಸಾಲೆಗಳು ದೇಹದತೂಕವನ್ನು ನೈಸರ್ಗಿಕವಾಗಿ ಹಾಗು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಬಹು ಉತ್ತಮ. ತ್ವರಿತ ಹಾಗು ಉತ್ತಮವಾಗಿ ತೂಕ ತಗ್ಗಿಸಲು ಎರಡು ಮೂರು ಶುಂಠಿ ಚೂರು, ಕರಿಮೆಣಸು, ಏಲಕ್ಕಿ, ಲವಂಗ ಮತ್ತು ಚಕ್ಕೆಗಳನ್ನೂ ನಿಮ್ಮ ಹಸಿರು ಚಹಾಗೆ ಬೆರಸಿ ಸೇವಿಸಿ. ಈ ಮಸಾಲೆ ಚಹಾವನ್ನು ದಿನಕ್ಕೆ ಎರಡು ಮೂರು ಬಾರಿ ಪ್ರತಿನಿತ್ಯ ಸೇವಿಸಿದರೆ ಒಂದೇ ತಿಂಗಳಲ್ಲಿ ಪರಿಣಾಮ ಕಾಣಬಹುದು.

  ಜೀರಿಗೆ ನೀರು

  ಜೀರಿಗೆ ನೀರು

  ದೊಡ್ಡ ಜೀರಿಗೆ (ಸೋಂಪು): ದೊಡ್ಡ ಜೀರಿಗೆ ಹಸಿವನ್ನು ಕಡಿಮೆಯಾಗಿಸಲು ಬಹು ಪ್ರಸಿದ್ಧ ಪುರಾತನ ಗೃಹ ಪರಿಹಾರ. 6 ರಿಂದ 8 ದೊಡ್ಡ ಜೀರಿಗೆ ಬೀಜಗಳನ್ನು ನೀರಿನಲ್ಲಿ ಕೆಲ ನಿಮಿಷಗಳ ಕಾಲ ಕುದಿಸಿ. ನಂತರ ಬೇಜಗಳನ್ನು ತೆಗೆದು ನೀರನ್ನು ಮಾತ್ರ ಪ್ರತಿದಿನ ಬೆಳಗ್ಗೆ ಬರಿಹೊಟ್ಟೆಯಲ್ಲಿ ಸೇವಿಸಿ. ಇದರಿಂದ ಹಸಿವು ಕಡಿಮೆಯಾಗುವುದು.

  ಜೇನುತುಪ್ಪ ಸೇವಿಸಿ

  ಜೇನುತುಪ್ಪ ಸೇವಿಸಿ

  ಜೇನುತುಪ್ಪದಿಂದ ನಿಮ್ಮ ದಿನವನ್ನು ಪ್ರಾರಂಭಿಸಿ ಒಂದು ಚಹಾಚಮಚದಷ್ಟು ಜೇನನ್ನು ಬಿಸಿನೀರಿನಲ್ಲಿ ಮಿಶ್ರಣಮಾಡಿ ಇದಕ್ಕೆ ಒಂದು ಚಹಾ ಚಮಚದಷ್ಟು ನಿಂಬೆ ರಸವನ್ನು ಸೇರಿಸಿ. ಇದನ್ನು ಬೆಳಗ್ಗೆ ಇದ್ದಿದ ತಕ್ಷಣ ಬರಿಹೊಟ್ಟೆಯಲ್ಲಿ ಸೇವಿಸಿ. ಪರಿಣಾಮಕಾರಿಯಾಗಿ ತೂಕ ತಗ್ಗಿಸಲು ಪ್ರತಿದಿನ ಎರಡು ಮೂರು ತಿಂಗಳವರೆಗೂ ಸೇವಿಸಿ.

  ಹಸಿರು ಚಹಾ

  ಹಸಿರು ಚಹಾ

  ಹಸಿರು ಚಹಾ ತೂಕ ತಗ್ಗಿಸಲು ಬಹಳ ಪರಿಣಾಮಕಾರಿ ಎಂದು ತಿಳಿದುಕೊಳ್ಳಲಾಗಿದೆ ಹಾಗು ಇದು ಯಾವುದೇ ರೀತಿಯ ಡಯಟಿಂಗ್ ಅಥವಾ ತೂಕ ತಗ್ಗಿಸುವ ಮಾತ್ರೆಗಳ ಸಹಾಯವಿಲ್ಲದೆ ದೇಹದ ತೂಕ ತಗ್ಗಿಸಲು ಸಹಾಯವಾಗಿರುತ್ತದೆ. ಉತ್ತಮ ಗುಣಮಟ್ಟದ ಹಸಿರು ಚಹಾ ಎಲೆಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಒಂದೆರಡು ನಿಮಿಷ ಕುದಿಸಬೇಕು. ನಂತರ ಈ ಹಸಿರು ಚಹಾವನ್ನು ಸೇವಿಸುವುದು. ಹೀಗೆ ಪ್ರತಿ ದಿನ ಎರಡು ಮೂರು ಸಲ ಮಾಡಿದಲ್ಲಿ ಕೆಲವೇ ದಿನಗಳಲ್ಲಿ ಪರಿಣಾಮವನ್ನು ಕಾಣಬಹುದು.

  English summary

  Ways to Lose 2 inches of Belly Fat in 2 Weeks

  Watching that extra junk around your trunk turn your body into a full-blown Buddha belly puts you at an increased risk for heart disease, diabetes, and early death. Luckily, losing the weight doesn’t have to take forever; with these belly fat-fighting tips, you can shave two inches off your waistline in as little as two weeks.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more