For Quick Alerts
ALLOW NOTIFICATIONS  
For Daily Alerts

  ನಿಮಗೆ ಗೊತ್ತೇ ಆಗದ ಹಾಗೆ ಕಿಡ್ನಿ ಸಮಸ್ಯೆ ಬರಬಹುದು! ಜಾಗ್ರತೆ ವಹಿಸಿ...

  By Arshad
  |

  ನಮ್ಮ ಮೂತ್ರಪಿಂಡಗಳೂ ನಮ್ಮ ದೇಹದ ಪ್ರಮುಖ ಅಂಗಗಳಲ್ಲೊಂದಾಗಿದ್ದು ಅತಿ ಹೆಚ್ಚಿನ ಕಾಳಜಿಯ ಅಗತ್ಯವಿದೆ. ನಮ್ಮ ದೇಹದಲ್ಲಿರುವ ದ್ರವಗಳನ್ನು ಶೋಧಿಸಿ ಕಲ್ಮಶಗಳನ್ನು ಸತತವಾಗಿ ಮೂತ್ರದ ರೂಪದಲ್ಲಿ ದೇಹದಿಂದ ಹೊರಹಾಕುತ್ತಾ ಆರೋಗ್ಯವನ್ನು ಕಾಪಾಡುತ್ತದೆ. ಮೂತ್ರಪಿಂಡಗಳ ಕಾರ್ಯಕ್ಷಮತೆಯಲ್ಲಿ ಏರುಪೇರಾದರೂ ಇದರ ಸೂಚನೆಗಳನ್ನು ದೇಹವೇ ಕೆಲವು ಸೂಕ್ಷ್ಮರೂಪದಲ್ಲಿ ಪ್ರಕಟಿಸುತ್ತದೆ.

  ಇಂತಹ ಲಕ್ಷಣಗಳು ಕಂಡುಬಂದರೆ 'ಕಿಡ್ನಿ' ಯ ಸಮಸ್ಯೆಯಿದೆ ಎಂದರ್ಥ!

  ಮೂತ್ರವಿಸರ್ಜಿಸುವ ಕ್ರಮ ಏರುಪೇರಾಗುವುದು, ಅತಿ ಹೆಚ್ಚಿನ ಸುಸ್ತು, ಉಸಿರಿನಲ್ಲಿ ದುರ್ವಾಸನೆ, ಚರ್ಮ ಒಣಗುವುದು ಮತ್ತು ಪಕಳೆ ಏಳುವುದು, ತುರಿಕೆ, ವಾಕರಿಕೆ, ತಲೆಸುತ್ತುವುದು, ಸಾಮಾನ್ಯ ಸ್ಥಿತಿಯಲ್ಲಿಯೂ ಬೆವರುವುದು ಇತ್ಯಾದಿಗಳಾಗಿವೆ. ಮೂತ್ರಪಿಂಡಗಳ ಸ್ಥಿತಿಯನ್ನು ಸತತವಾಗಿ ಅರಿತುಕೊಳ್ಳುತ್ತಾ ಇರುವ ಮೂಲಕ ಮೂತ್ರಪಿಂಡಗಳು ವೈಫಲ್ಯದತ್ತ ವಾಲುತ್ತಿರುವುದನ್ನು ಮುಂಚಿತವಾಗಿ ತಿಳಿದುಕೊಳ್ಳುವುದೇ ಜಾಣತನ. ವಿಶೇಷವಾಗಿ ಮೂತ್ರಪಿಂಡಗಳಲ್ಲಿರುವ ಕಲ್ಲುಗಳು.

  ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ, ದಿನಕ್ಕೆ ಒಂದು ಲೋಟ ಲಿಂಬೆ ಜ್ಯೂಸ್ ಕುಡಿಯಿರಿ

  ಈ ಕಲ್ಲುಗಳು ಸಾಮಾನ್ಯವಾಗಿ ನಮ್ಮೆಲ್ಲರಲ್ಲಿಯೂ ಚಿಕ್ಕದಾಗಿ ಮೂಡುತ್ತಲೇ ಇರುತ್ತವೆ ಹಾಗೂ ಕರಗುತ್ತಲೇ ಇರುತ್ತವೆ. ಆದರೆ ನಮಗೆ ಅರಿವೇ ಇಲ್ಲದೇ ನಮ್ಮ ಕೆಲವು ಅಭ್ಯಾಸಗಳಿಂದ ಮೂತ್ರಪಿಂಡಗಳು ಘಾಸಿಗೊಳ್ಳುತ್ತಿರಬಹುದು. ಬನ್ನಿ, ಈ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ...

  ಸೋಡಿಯಂ ಸೇವನೆ

  ಸೋಡಿಯಂ ಸೇವನೆ

  ಆಹಾರದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಿದ್ದರೆ ಮೂತ್ರಪಿಂಡಗಳಲ್ಲಿರುವ ಕಲ್ಲುಗಳು ನಿಧಾನವಾಗಿ ದೊಡ್ಡದಾಗುತ್ತಾ ಹೋಗುತ್ತವೆ. ಅಲ್ಲದೇ ರಕ್ತದೊತ್ತಡವೂ ಹೆಚ್ಚುತ್ತಾ ಹೋಗುತ್ತದೆ. ಯಾವಾಗ ಈ ಕಲ್ಲುಗಳು ಒಂದು ಹಂತಕ್ಕೂ ಮೀರಿ ಬೆಳೆಯುತ್ತವೆಯೋ ಆಗ ಮೂತ್ರಪಿಂಡಗಳ ಒಳಗಿನ ಗೋಡೆಗಳನ್ನು ಒತ್ತುವ ಮೂಲಕ ಭಾರೀ ನೋವನ್ನುಂಟುಮಾಡುತ್ತವೆ.

  ಸೋಡಿಯಂ ಸೇವನೆ

  ಸೋಡಿಯಂ ಸೇವನೆ

  ಪರಿಣಾಮವಾಗಿ ತೀವ್ರಹೊಟ್ಟೆನೋವು, ಮೂತ್ರ ವಿಸರ್ಜಿಸಲು ತೊಂದರೆಯಾಗುವುದು, ವಾಕರಿಕೆ ಮೊದಲಾದವು ಎದುರಾಗುತ್ತವೆ. ಆದ್ದರಿಂದ ನಿಮ್ಮ ಊಟದಲ್ಲಿ ಉಪ್ಪಿನ ಪ್ರಮಾಣ ಸಂತುಲಿತವಾಗಿರುವಂತೆ ನೋಡಿಕೊಳ್ಳಬೇಕು

  ನೋವು ನಿವಾರಕಗಳನ್ನು ಹೆಚ್ಚು ಅವಧಿಗೆ ಬಳಸುವುದು

  ನೋವು ನಿವಾರಕಗಳನ್ನು ಹೆಚ್ಚು ಅವಧಿಗೆ ಬಳಸುವುದು

  ಸ್ಟೆರಾಯ್ಡುರಹಿತವಾಗಿರುವ ಕೆಲವು ನೋವು ನಿವಾರಕ ಔಷಧಿಗಳು ಸಹಾ ಮೂತ್ರಪಿಂಡಗಳಿಗೆ ಹಾನಿ ಎಸಗಬಲ್ಲವು. ಒಂದು ವೇಳೆ ಇವುಗಳ ಸೇವನೆ ಸತತವಾಗಿದ್ದು ಹೆಚ್ಚು ಅವಧಿಗೆ ಬಳಸಿದರೆ ಇದರ ನೇರ ಪರಿಣಾಮ ಮೂತ್ರಪಿಂಡಗಳ ಮೇಲೆ ಆಗುವ ಮೂಲಕ ಮೂತ್ರಪಿಂಡಗಳು ವಿಫಲಗೊಳ್ಳಲೂಬಹುದು.

   ನಿಯಮಿತವಾಗಿ ಕೆಂಪು ಮಾಂಸವನ್ನು ಸೇವಿಸುವುದು

  ನಿಯಮಿತವಾಗಿ ಕೆಂಪು ಮಾಂಸವನ್ನು ಸೇವಿಸುವುದು

  ಒಂದು ವೇಳೆ ನಿಯಮಿತವಾಗಿ ಮಾಂಸಾಹಾರವನ್ನು ಸೇವಿಸುವ ಅಭ್ಯಾಸವಿದ್ದರೆ ಈ ಅಭ್ಯಾಸವೂ ಮೂತ್ರಪಿಂಡಗಳನ್ನು ಘಾಸಿಗೊಳಿಸಬಹುದು. ಮಾಂಸಾಹಾರದಲ್ಲಿ ಪ್ರೋಟೀನಿನ ಪ್ರಮಾಣ ಅಧಿಕವಾಗಿದ್ದು ಅಗತ್ಯಕ್ಕೂ ಹೆಚ್ಚಿನ ಪ್ರೋಟೀನು ಲಭ್ಯವಾದರೆ ಇದು ನಮ್ಮ ಶರೀರದಲ್ಲಿ ಅತಿ ಹೆಚ್ಚು ಆಮ್ಲೀಯತೆಯುಂಟಾಗಲು ಕಾರಣವಾಗಬಹುದು. ಈ ಸ್ಥಿತಿಗೆ acidosis ಎಂದು ಕರೆಯುತ್ತಾರೆ.

  ನಿಯಮಿತವಾಗಿ ಕೆಂಪು ಮಾಂಸವನ್ನು ಸೇವಿಸುವುದು

  ನಿಯಮಿತವಾಗಿ ಕೆಂಪು ಮಾಂಸವನ್ನು ಸೇವಿಸುವುದು

  ಈ ಸ್ಥಿತಿಯಲ್ಲಿ ಮುತ್ರಪಿಂಡಗಳು ಈ ಭಾರೀ ಪ್ರಮಾಣದ ಆಮ್ಲವನ್ನು ಶೋಧಿಸಲು ವಿಫಲಗೊಳ್ಳುತ್ತವೆ. ಇದೇ ರೀತಿ ಮುಂದುವರೆದರೆ ನಿಧಾನವಾಗಿ ಮೂತ್ರಪಿಂಡಗಳು ಕ್ಷಮತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ. ನಮ್ಮ ದೇಹ ನೈಸರ್ಗಿಕವಾಗಿ ಮಿಶ್ರಾಹಾರಕ್ಕಾಗಿ ತಯಾರಾಗಿದ್ದು ಮಾಂಸಾಹಾರವನ್ನು ಅಲ್ಪವಾಗಿ ಮತ್ತು ಸಸ್ಯಾಹಾರವನ್ನು ಹೆಚ್ಚಾಗಿಯೇ ಸೇವಿಸುವ ಮೂಲಕ ಆರೋಗ್ಯ ಉತ್ತಮವಾಗಿರುತ್ತದೆ.

  ಡಯೆಟ್ ಸೋಡಾ ಸೇವಿಸುವುದು

  ಡಯೆಟ್ ಸೋಡಾ ಸೇವಿಸುವುದು

  ಬಲವಂತವಾಗಿ ನಮಗೆ ಬೇಡದ ಇಂಗಾಲದ ಡೈ ಆಕ್ಸೈಡ್ ಅನ್ನು ದ್ರವದಲ್ಲಿ ಕರಗಿಸಿ ಬುರುಗು ಬರಿಸುವ ಯಾವುದೇ ಪೇಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಇತ್ತೀಚೆಗೆ ಬರುತ್ತಿರುವ ಡಯೆಟ್ ಸೋಡಾ ಎಂಬ ಪೇಯ ಮೂತ್ರಪಿಂಡಗಳಿಗೆ ವಿಷರೂಪವಾಗಿದೆ. ಸತತ ಎರಡು ವಾರಗಳ ಕಾಲ ಡಯೆಟ್ ಸೋಡಾ ಕುಡಿದವರ ಮೂತ್ರಪಿಂಡಗಳು ವಿಫಲಗೊಳ್ಳುವ ಅಥವಾ ಮೂತ್ರಪಿಂಡಗಳಲ್ಲಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಉಳಿದವರಿಗಿಂತ 30% ಹೆಚ್ಚಾಗಿರುತ್ತದೆ.

  ಸಾಕಷ್ಟು ನೀರು ಕುಡಿಯದೇ ಇರುವುದು

  ಸಾಕಷ್ಟು ನೀರು ಕುಡಿಯದೇ ಇರುವುದು

  ನೀರು ಕುಡಿದರೆ ಮೂತ್ರಕ್ಕೆ ಅವಸರವಾಗುತ್ತದೆ, ಮೂತ್ರವಿಸರ್ಜನೆಗೆ ಸೂಕ್ತ ಅವಕಾಶವಿಲ್ಲ ಎಂಬ ದುಗುಡದಲ್ಲಿಯೇ ಕೆಲವರು ನೀರನ್ನೇ ಕುಡಿಯುವುದಿಲ್ಲ. ವಿಶೇಷವಾಗಿ ಪ್ರಯಾಣದ ಮತ್ತು ಕಛೇರಿ ಮೊದಲಾದ ಕಡೆ ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲದಿದ್ದರೆ ಈ ಮುಜುಗರದಿಂದ ತಪ್ಪಿಸಿಕೊಳ್ಳಲು ಹೆಚ್ಚಿನವರು ನೀರು ಕುಡಿಯದೇ ಇರುವ ತಪ್ಪು ತೀರ್ಮಾನವನ್ನು ಕೈಗೊಳ್ಳುತ್ತಾರೆ.

  ಸಾಕಷ್ಟು ನೀರು ಕುಡಿಯದೇ ಇರುವುದು

  ಸಾಕಷ್ಟು ನೀರು ಕುಡಿಯದೇ ಇರುವುದು

  ಆದರೆ ನಮ್ಮ ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡಲು ದೇಹಕ್ಕೆ ಸತತವಾಗಿ ಸ್ವಚ್ಛ ನೀರಿನ ಸರಬರಾಜು ಆಗುತ್ತಲೇ ಇರಬೇಕು. ಅಲ್ಲದೇ ಉತ್ತಮ ಪ್ರಮಾಣದ ನೀರಿದ್ದಾಗ ಮಾತ್ರವೇ ದೇಹದಿಂದ ಕಲ್ಮಶಗಳು ಪೂರ್ಣವಾಗಿ ಹೊರಹಾಕಲ್ಪಡುತ್ತವೆ.

  English summary

  ways-in-which-you-can-be-damaging-kidneys-without-knowing

  It is essential to be aware of the condition of the kidneys and also ensure their well being. There are some unhealthy habits that you might be doing that can lead to the damage of the kidneys. Read further to know the habits that damage your kidneys.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more