For Quick Alerts
ALLOW NOTIFICATIONS  
For Daily Alerts

ಪುದೀನಾ ಎಲೆಗಳ ಆರೋಗ್ಯ ಲಾಭಗಳು ಒಂದೇ, ಎರಡೇ?

By Lekhaka
|

ಹಿಂದಿನ ಕಾಲದಿಂದಲೂ ಪುದೀನಾವನ್ನು ನಮ್ಮ ಆರೋಗ್ಯ ರಕ್ಷಣೆಗಾಗಿ ಬಳಸಲಾಗುತ್ತಿತ್ತು. ಇದನ್ನು ಆಹಾರ ಮತ್ತು ಇತರ ಕೆಲವು ರೂಪದಲ್ಲಿ ಬಳಸಿಕೊಳ್ಳಲಾಗುತ್ತಾ ಇತ್ತು. ಇದನ್ನು ಚಹಾ, ಜ್ಯೂಸ್, ಸಲಾಡ್ ಮತ್ತು ಸೂಪ್ ಗಳಿಗೆ ಬಳಸುತ್ತಾರೆ. ಇದು ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಒಳ್ಳೆಯ ಸುವಾಸನೆ ನೀಡುವುದು. ಇಂದಿನ ದಿನಗಳಲ್ಲಿ ಪುದೀನಾವನ್ನು ಹಲವಾರು ರೀತಿಯ ಟೂಥ್ ಪೇಸ್ಟ್ ಮತ್ತು ಚೂಯಿಂಗ್ ಗಮ್ ಗಳಲ್ಲಿ ಬಳಸಿಕೊಳ್ಳುವರು.

ಇದರಲ್ಲಿ ಕೀಟಾಣು ವಿರೋಧಿ ಗುಣಗಳಿವೆ. ಇಷ್ಟು ಮಾತ್ರವಲ್ಲದೆ ಪುದೀನಾ ಎಲೆಗಳು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಿ ಕೆಟ್ಟ ಉಸಿರನ್ನು ತಡೆಯುವುದು. ಪುದೀನಾವನ್ನು ಏಶ್ಯಾ, ಯುರೋಪ್ ಮತ್ತು ಮಧ್ಯಪೂರ್ವ ದೇಶಗಳಲ್ಲಿ ಬೆಳೆಸಲಾಗುತ್ತದೆ. ಇದನ್ನು ತಾಜಾ, ಒಣಗಿಸಿ ಹಾಗೂ ಸಾರಭೂತ ತೈಲವಾಗಿ ಬಳಸಿಕೊಳ್ಳಲಾಗುವುದು.
ಒಂದು ಲೋಟ 'ಪುದೀನಾ ಜ್ಯೂಸ್‌'ನಲ್ಲಿದೆ ಔಷಧೀಯ ಶಕ್ತಿ!

ಯಾವುದೇ ರೂಪದಲ್ಲಿ ಬಳಸಿದರೂ ಪುದೀನಾವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆರೋಗ್ಯ ಗುಣಗಳನ್ನು ಹೊರತುಪಡಿಸಿ ಪುದೀನಾ ಎಲೆಗಳು ಸೊಳ್ಳೆ ಮತ್ತು ಕೀಟಗಳನ್ನು ಓಡಿಸುವಲ್ಲಿ ಪರಿಣಾಮಕಾರಿ. ಪುದೀನಾ ಎಲೆಗಳಿಂದ ಆಗುವಂತಹ ಲಾಭಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಇದನ್ನು ಓದಿಕೊಂಡು ಪುದೀನಾ ನಿಮ್ಮ ಆಹಾರ ಕ್ರಮದಲ್ಲಿ ಬಳಸಿ....

ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಪುದೀನಾ ಎಲೆಗಳು ಪ್ರತಿರೊಧಕ ಶಕ್ತಿ ಹೆಚ್ಚಿಸುವುದು. ನೀವು ಸೇವಿಸುವ ಆಹಾರದಲ್ಲಿ ಪುದೀನಾದ ಕೆಲವು ಎಲೆಗಳನ್ನು ಹಾಕಿದರೆ ಒಳ್ಳೆಯ ಫಲಿತಾಂಶ ಸಿಗುವುದು.

ಬಾಯಿಯ ಕೆಟ್ಟ ವಾಸನೆ ತಡೆಯುವುದು

ಬಾಯಿಯ ಕೆಟ್ಟ ವಾಸನೆ ತಡೆಯುವುದು

ಪುದೀನಾದಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಪುದೀನಾದ ಪ್ರಮುಖ ಆರೋಗ್ಯ ಗುಣಗಳಲ್ಲಿ ಒಂದಾಗಿದೆ. ಕೆಲವು ಪುದೀನಾ ಎಲೆಗಳನ್ನು ತೆಗೆದುಕೊಂಡು ಜಗಿಯಿರಿ. ಇದು ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾದ ನಿವಾರಣೆ ಮಾಡುವುದು.

ಅಜೀರ್ಣ ನಿವಾರಣೆ

ಅಜೀರ್ಣ ನಿವಾರಣೆ

ನೀವು ಅಜೀರ್ಣದಿಂದ ಬಳಲುತ್ತಾ ಇದ್ದರೆ ಪುದೀನಾ ಎಲೆಗಳು ನಿಮ್ಮ ನೆರವಿಗೆ ಬರಲಿದೆ. ಪುದೀನಾ ಎಲೆಗಳು ಜೊಲ್ಲುರಸದ ಗ್ರಂಥಿಗಳನ್ನು ಕ್ರಿಯಾತ್ಮಕಗೊಳಿಸುವುದು ಮತ್ತು ಕಿಣ್ವಗಳನ್ನು ಪ್ರೇರೇಪಿಸುವ ಮೂಲಕ ಜೀರ್ಣಕ್ರಿಯೆಗೆ ಶಕ್ತಿ ನೀಡುವುದು. ಕೆಲವು ತಾಜಾ ಪುದೀನಾ ಎಲೆಗಳನ್ನು ತೆಗೆದುಕೊಂಡು ಅದನ್ನು ಒಂದು ಲೋಟ ನೀರಿಗೆ ಹಾಕಿ ಮತ್ತು ಐದು ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀರನ್ನು ಕುಡಿಯಿರಿ. ನಿಮ್ಮ ಸಮಸ್ಯೆ ನಿವಾರಣೆಯಾಗುವ ತನಕ ನಿಯಮಿತವಾಗಿ ಹೀಗೆ ಮಾಡಿ.

ತಲೆನೋವು ಮತ್ತು ವಾಕರಿಕೆ ನಿವಾರಣೆ

ತಲೆನೋವು ಮತ್ತು ವಾಕರಿಕೆ ನಿವಾರಣೆ

ಪುದೀನಾ ಎಲೆಗಳಲ್ಲಿ ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಇವೆ. ಪುದೀನಾ ಎಣ್ಣೆ ತೆಗೆದುಕೊಂಡು ಅದನ್ನು ಹಣೆಗೆ ಹಚ್ಚಿಕೊಳ್ಳಿ ಇದರಿಂದ ತಲೆನೋವು ಮತ್ತು ವಾಕರಿಕೆ ನಿವಾರಣೆಯಾಗುವುದು.

ಶ್ವಾಸಕೋಶದ ರೋಗ ತಡೆಯುವುದು

ಶ್ವಾಸಕೋಶದ ರೋಗ ತಡೆಯುವುದು

ನಿಮಗೆ ಕೆಲವೊಮ್ಮೆ ಉಸಿರಾಡಲು ತುಂಬಾ ಕಷ್ಟವಾಗುತ್ತಿದೆ ಎಂದಾದರೆ ನೀವು ಕೆಲವು ಪುದೀನಾ ಎಲೆಗಳನ್ನು ತೆಗೆದುಕೊಳ್ಳಿ. ಪುದೀನಾ ಎಲೆಗಳಲ್ಲಿ ರೊಸ್ಮರಿನಿಕ್ ಆಮ್ಲವಿದೆ. ಇದು ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿದೆ. ಇದು ಫ್ರೀ ರ್ಯಾಡಿಕಲ್ ಅನ್ನು ತಟಸ್ಥಗೊಳಿಸುವುದು ಮತ್ತು ಉರಿಯೂತದ ರಾಸಾಯನಿಕವನ್ನು ನಿರ್ಬಂಧಿಸುವುದು. ಇದರಿಂದ ಉಸಿರಾಟದ ವ್ಯವಸ್ಥೆಗೆ ಪರಿಣಾಮವಾಗುವುದು. ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಪುದೀನಾವನ್ನು ಬಳಸಿಕೊಂಡರೆ ಉಸಿರಾಟದ ಸಮಸ್ಯೆ ನಿವಾರಣೆಯಾಗುವುದು.

ತೂಕ ಕಳೆದುಕೊಳ್ಳಲು

ತೂಕ ಕಳೆದುಕೊಳ್ಳಲು

ಪುದೀನಾ ತುಂಬಾ ಕಡಿಮೆ ಕ್ಯಾಲರಿಗಳನ್ನು ಒಳಗೊಂಡಿರುವಂತಹ ಗಿಡಮೂಲಿಕೆ ಮತ್ತು ಇದರಲ್ಲಿ ನಾರಿನಾಂಶವು ಅಧಿಕವಾಗಿದೆ. ಪುದೀನಾ ಎಲೆಗಳು ಜೀರ್ಣಕ್ರಿಯೆ ಕಿಣ್ವಗಳನ್ನು ಉತ್ತೇಜಿಸುವುದು. ಇದರಿಂದ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುವುದು. ಕೊಬ್ಬು ದಹಿಸುವ ಮೂಲಕ ಶಕ್ತಿ ಬಿಡುಗಡೆಯಾಗುವುದು. ನಿಮಗೆ ತೂಕ ಕಳೆದುಕೊಳ್ಳಬೇಕೆಂದು ಮನಸ್ಸಿದ್ದರೆ ಪುದೀನಾವನ್ನು ದೈನಂದಿನ ಆಹಾರದಲ್ಲಿ ಬಳಸಿ.

ಕ್ಯಾನ್ಸರ್ ತಡೆಯುವುದು

ಕ್ಯಾನ್ಸರ್ ತಡೆಯುವುದು

ಪುದೀನಾ ಎಲೆಗಳಲ್ಲಿ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಗಳಿವೆ. ಈ ಗುಣಗಳಿಂದಾಗಿ ಪುದೀನಾವು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಹೀಗೆ ಮಾಡುವುದರಿಂದ ಕ್ಯಾನ್ಸರ್ ಬರದಂತೆ ತಡೆಯುವುದು. ಪುದೀನಾವನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಸಿದರೆ ಕ್ಯಾನ್ಸರ್ ನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು

ವಿಟಮಿನ್ ಎ ಮತ್ತು ಬೆಟಾ ಕ್ಯಾರೋಟಿನ್ ಅಂಶದಿಂದ ಸಮೃದ್ಧವಾಗಿರುವ ಪುದೀನಾದ ಸೇವನೆ ಮಾಡಿದರೆ ಕಣ್ಣಿನ ಆರೋಗ್ಯವು ಒಳ್ಳೆಯದಾಗಿರುವುದು. ಖಾದ್ಯ, ಸೂಪ್, ಸಲಾಡ್ ಮತ್ತು ಜ್ಯೂಸ್ ಗೆ ಪುದೀನಾ ಹಾಕಿದರೆ ಅದರಿಂದ ಕಣ್ಣಿನ ಆರೋಗ್ಯ ವೃದ್ಧಿಯಾಗುವುದು.

ನಿಶ್ಯಕ್ತಿ ನಿವಾರಣೆ

ನಿಶ್ಯಕ್ತಿ ನಿವಾರಣೆ

ನೀವು ತುಂಬಾ ಆಯಾಸಗೊಂಡಿದ್ದರೆ ಅಥವಾ ಬಳಲಿದ್ದರೆ ಆಗ ನೀವು ಕೆಲವು ಪುದೀನಾ ಎಲೆಗಳನ್ನು ಸೇವಿಸಬೇಕು ಅಥವಾ ಒಂದೆರಡು ಹನಿ ಪುದೀನಾ ತೈಲವನ್ನು ಹಣೆಗೆ ಹಾಕುವುದರಿಂದ ನರಗಳಿಗೆ ಆರಾಮ ಸಿಗುವುದು. ಕೆಲವು ಹನಿ ಪುದೀನಾ ಎಣ್ಣೆಯನ್ನು ತಲೆದಿಂಬಿನ ಮೇಲೆ ಹಾಕಿಕೊಂಡು ಮಲಗಿದರೆ ಆಗ ನಿಮಗೆ ನಿಶ್ಯಕ್ತಿಯಿಂದ ಆರಾಮ ಸಿಗುವುದು ಮತ್ತು ಒಳ್ಳೆಯ ನಿದ್ರೆ ಬರುವುದು.

ಸ್ನಾಯು ಸೆಳೆತ ತಡೆಯುವುದು

ಸ್ನಾಯು ಸೆಳೆತ ತಡೆಯುವುದು

ನೀವು ಸ್ನಾಯು ಸೆಳೆತಕ್ಕೆ ಒಳಗಾಗಿದ್ದರೆ ಕೆಲವು ಹನಿ ಪುದೀನಾ ಎಣ್ಣೆಯನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಂಡರೆ ನಿಮಗೆ ತಕ್ಷಣ ಆರಾಮ ಸಿಗುವುದು. ಪುದೀನಾದಲ್ಲಿ ಆ್ಯಂಟಿಸ್ಪಾಸ್ಮೊಡಿಕ್ ಗುಣಗಳು ಇವೆ. ಪುದೀನಾ ಎಣ್ಣೆ ಹಚ್ಚುವುದರಿಂದ ಸ್ನಾಯುಗಳು ಸಡಿಲವಾಗುವುದು ಮತ್ತು ಯಾವುದೇ ರೀತಿಯ ನೋವಿನಿಂದ ಆರಾಮ ನೀಡುವುದು.

 ಜ್ವರವನ್ನು ಕಡಿಮೆಗೊಳಿಸುತ್ತದೆ

ಜ್ವರವನ್ನು ಕಡಿಮೆಗೊಳಿಸುತ್ತದೆ

ಯಾವುದೋ ವೈರಸ್ ಧಾಳಿಗೆ ದೇಹ ತುತ್ತಾದಾಗ ರಕ್ಷಣಾ ವ್ಯವಸ್ಥೆ ದೇಹವನ್ನು ಬಿಸಿ ಮಾಡುವ ಮೂಲಕ ವೈರಸ್ಸುಗಳ ವಿರುದ್ಧ ಹೋರಾಡುತ್ತದೆ. ಪೆಪ್ಪರ್ಮೆಂಟ್ ಚಹಾದಲ್ಲಿರುವ ಮೆಂಥಾಲ್ ಹಲವು ವೈರಸ್ಸುಗಳನ್ನು ಹೊಡೆದೋಡಿಸುವ ನೈಸರ್ಗಿಕ ಔಷಧಿಯಾಗಿರುವುದರಿಂದ ಜ್ವರಕ್ಕೆ ಕಾರಣವಾದ ವೈರಸ್ ಇಲ್ಲವಾಗಿ ಜ್ವರ ಇಳಿಯುತ್ತದೆ. ಇದಕ್ಕಾಗಿ ಪೆಪ್ಪರ್ಮೆಂಟ್ ಎಲೆಗಳನ್ನು ಕುದಿಯುವ ನೀರಿನಲ್ಲಿಟ್ಟು ಒಂದು ನಿಮಿಷ ಹಾಗೇ ಬಿಡಿ (ಮತ್ತೆ ಕುದಿಸಬಾರದು). ಜ್ವರ ಹೆಚ್ಚಿದ್ದರೆ ಮೂರು ನಿಮಿಷಗಳವರೆಗೂ ಇರಿಸಬಹುದು. ಬಳಿಕ ಸೋಸಿ ಬಿಸಿಬಿಸಿ ಇರುವಂತೆಯೇ ಕುಡಿಯಿರಿ. ಟೀ ಸೇವನೆಯ ಬಳಿಕ ಬೆವರೂ ಹೆಚ್ಚಾಗಿ ದೇಹದ ಶಾಖ ಕಡಿಮೆಯಾಗಲು ನೆರವಾಗುತ್ತದೆ.

ವಾಂತಿ ಮತ್ತು ವಾಕರಿಕೆಯನ್ನು ನಿವಾರಿಸುತ್ತದೆ

ವಾಂತಿ ಮತ್ತು ವಾಕರಿಕೆಯನ್ನು ನಿವಾರಿಸುತ್ತದೆ

ಕೆಲವು ಆಹಾರಗಳು ಹೊಟ್ಟೆಯಲ್ಲಿ ಪೂರ್ಣವಾಗಿ ಜೀರ್ಣವಾಗದೇ ಅಥವಾ ಅಲರ್ಜಿಕರವಾಗಿದ್ದರೆ ಹೊಟ್ಟೆಯಲ್ಲಿ ತುರಿಕೆ ಅಥವಾ ಸಂವೇದನೆಯುಂಟುಮಾಡಿ ವಾಂತಿಯ ಮೂಲಕ ಹೊರಹೋಗುವಂತೆ ಪ್ರಚೋದಿಸುತ್ತದೆ. ಇದೇ ವಾಕರಿಕೆ. ವಾಕರಿಕೆ ಹೆಚ್ಚಾದರೆ ವಾಂತಿಯೂ ಆಗುತ್ತದೆ. ಹಲವರಿಗೆ ಬಸ್ಸಿನಲ್ಲಿ ಕುಳಿತಾಕ್ಷಣ ಬಸ್ಸಿನ ಕುಲುಕುವಿಕೆಯಿಂದ ವಾಂತಿಯಾಗುವುದೂ ಇದೇ ಕಾರಣಕ್ಕೆ. ಚಿಕ್ಕ ಮಕ್ಕಳಲ್ಲಿ ಈ ತೊಂದರೆ ಹೆಚ್ಚು. ಸೆಳೆತನಿವಾರಕ ವಾಗಿರುವ (antispasmodic) ಈ ಚಹಾ ಹೊಟ್ಟೆಯ ಸ್ನಾಯುಗಳ ಸೆಳೆತವನ್ನು ಕಡಿಮೆಗೊಳಿಸಿ ವಾಂತಿಯಾಗದಂತೆ ತಡೆಯುತ್ತದೆ. ಇದಕ್ಕಾಗಿ ಆಹಾರ ಸೇವಿಸಿದ ಬಳಿಕ ಒಂದು ಕಪ್ ಪೆಪ್ಪರ್ಮಿಂಟ್ ಚಹಾ ಸೇವಿಸುವುದು ಉತ್ತಮ.

ಮೂಗು ಕಟ್ಟಿರುವುದನ್ನು ತೆರವುಗೊಳಿಸುತ್ತದೆ

ಮೂಗು ಕಟ್ಟಿರುವುದನ್ನು ತೆರವುಗೊಳಿಸುತ್ತದೆ

ಹಲವು ಕಾರಣಗಳಿಂದ ಮೂಗು ಕಟ್ಟುತ್ತದೆ. ವಾಸ್ತವವಾಗಿ ಇದೊಂದು ದೇಹದ ರಕ್ಷಣಾ ವ್ಯವಸ್ಥೆ. ಒಂದು ವೇಳೆ ಎಡಹೊಳ್ಳೆಯಲ್ಲಿ ಸೋಂಕು ತಗುಲಿದ್ದರೆ ಎಡಹೊಳ್ಳೆ ಮುಚ್ಚಿದ್ದು ಬಲಹೊಳ್ಳೆ ತೆರೆದಿರುತ್ತದೆ. ಅಂತೆಯೇ ಬಲಹೊಳ್ಳೆಯೂ ಸಹಾ. ಕೆಲವೊಮ್ಮೆ ಚಿಕ್ಕಪುಟ್ಟ ಧೂಳಿನ ಕಣವನ್ನೂ ವೈರಸ್ ಎಂದೇ ತಿಳಿದು ದೇಹ ಮೂಗನ್ನು ಮುಚ್ಚಿಬಿಡುತ್ತದೆ. ಇದಕ್ಕಾಗಿ ಪುದಿನ ಚಹಾ ಎಲೆಗಳನ್ನು ಕುದಿಯುವ ನೀರಿನಲ್ಲಿ ಕಲಕಿ ಈ ನೀರಿನಿಂದ ಹೊರಬರುವ ಹಬೆಯನ್ನು ಮೂಗಿನ ಮೂಲಕ ಎಳೆದುಕೊಳ್ಳಿ. ಮುಚ್ಚಿದ್ದ ಹೊಳ್ಳೆ ನಿಧಾನವಾಗಿ ತೆರೆಯಲು ಪ್ರಾರಂಭವಾಗುತ್ತದೆ.

ಗರ್ಭಿಣಿ ಸ್ತ್ರೀಯರಿಗೆ ಒಳ್ಳೆಯದು

ಗರ್ಭಿಣಿ ಸ್ತ್ರೀಯರಿಗೆ ಒಳ್ಳೆಯದು

ಮು೦ಜಾವಿನ ಆರೋಗ್ಯ ತೊ೦ದರೆಯಾದ ವಾಕರಿಕೆಯನ್ನು ಹೋಗಲಾಡಿಸುವಲ್ಲಿ ಪುದೀನಾಎಲೆಗಳು ಸಹಕರಿಸುತ್ತವೆ. ಜೀರ್ಣಕ್ರಿಯೆಗೆ ಅವಶ್ಯವಾಗಿರುವ ಕಿಣ್ವಗಳನ್ನು ಸಕ್ರಿಯಗೊಳಿಸುವುದರ ಮೂಲಕ ಪುದೀನಾ ಎಲೆಗಳು ವಾಕರಿಕೆಯನ್ನು ಹೋಗಲಾಡಿಸುತ್ತವೆ.

English summary

unusual-health-benefits-of-peppermint-leaves

Peppermint leaves are used in the form of fresh leaves, in dried form and even in the form of an essential oil. Using peppermint leaves in each of the forms can have its own benefits. Apart from the health benefits, peppermint leaves are known as an excellent mosquito and insect repellent. Listed here are a few of the major health benefits of peppermint leaves that you might not be aware of. Check them out.
X
Desktop Bottom Promotion