ಚಳಿಗಾಲದಲ್ಲಿ ಉಂಟಾಗುವ ಕಿವಿನೋವಿನಿಂದ ಪಾರಾಗಲು ಸುಲಭ ಉಪಾಯ

By Divya Pandith
Subscribe to Boldsky

ಚಳಿಗಾಲ ಎಂದರೆ ಹೆಸರೇ ಹೇಳುವಂತೆ ವಾತಾವರಣವೆಲ್ಲಾ ತಂಪಾಗಿ ಇರುತ್ತದೆ. ತಂಪಾದ ಗಾಳಿ ಹಾಗೂ ಚಳಿಯ ನಡುವೆ ಬಿಸಿ ಬಿಸಿಯಾದ ತಿನಿಸು ಹಾಗೂ ಪಾನೀಯವನ್ನು ಸೇವಿಸಬೇಕು ಎಂದು ಮನಸ್ಸು ಬಯಸುವುದು ಸಹಜ. ತಂಪಾದ ವಾತಾವರಣದಿಂದ ನಮ್ಮ ಮನಸ್ಸು ಎಷ್ಟು ಸಂತೋಷಗೊಳ್ಳುತ್ತದೆಯೋ ಅಷ್ಟೇ ಅಪಾಯವನ್ನು ಸಹ ಚಳಿಗಾಲ ತಂದಿಡುತ್ತದೆ. ಹೌದು, ವಾತಾವರಣದಲ್ಲಿ ಚಳಿ ಹೆಚ್ಚಾದಂತೆ ಸೂಕ್ಷ್ಮ ಜೀವಿಗಳ ಉತ್ಪಾದನೆ ಹೆಚ್ಚಾಗುತ್ತದೆ. ರೋಗಾಣುಗಳ ಹರಡುವಿಕೆ ಅಧಿಕಗೊಳ್ಳುತ್ತದೆ. 

ಮನೆಮದ್ದು: ಕಿವಿನೋವಿಗೆ ಹಳ್ಳಿ ಮದ್ದು, ತ್ವರಿತ ಸಾಂತ್ವನ

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ನೆಗಡಿ, ಕೆಮ್ಮು, ಜ್ವರ, ಶೀತ, ಮೈಕೈ ನೋವು, ಉರಿಯೂತ ಹಾಗೂ ಕಿವಿ ಸೆಳೆತ. ತೇವಾಂಶದಿಂದ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುತ್ತವೆ. ಇವು ನಿಧಾನವಾಗಿ ವಿವಿಧ ಸಮಸ್ಯೆಗಳನ್ನು ಹುಟ್ಟಿಸುತ್ತವೆ. ಅದರಲ್ಲಿ ಕಿವಿನೋವು ಎನ್ನುವ ಸಮಸ್ಯೆಯು ಸಾಮಾನ್ಯವಾಗಿರುತ್ತದೆ. ಜೊತೆಗೆ ಸಹಿಸಲಾರದಷ್ಟು ನೋವನ್ನು ತಂದೊಡ್ಡುತ್ತದೆ. ಕಿವಿ ನೋವು ಎನ್ನುವ ಸಮಸ್ಯೆಯಿಂದ ನೀವು ಸಹ ಬಳಲುತ್ತಿದ್ದೀರಿ ಎಂದಾದರೆ ಅದಕ್ಕೆ ಸೂಕ್ತ ಪರಿಹಾರ ಕ್ರಮ ಹಾಗೂ ಮುನ್ನೆಚ್ಚರಿಕೆ ವಿಧಿಯನ್ನು ಈ ಮುಂದೆ ವಿವರಿಸಲಾಗಿದೆ.....

ಕಿವಿಯನ್ನು ಮುಚ್ಚಿಕೊಳ್ಳಿ

ಕಿವಿಯನ್ನು ಮುಚ್ಚಿಕೊಳ್ಳಿ

ಚಳಿಗಾಲದಲ್ಲಿ ತೇವಾಂಶ ಭರಿತವಾದ ಗಾಳಿ ಹೆಚ್ಚಾಗಿರುತ್ತವೆ. ಈ ಗಾಳಿಯು ಕಿವಿಯೊಳಗೆ ಸಿಕ್ಕಿಬಿದ್ದಾಗ ಬ್ಯಾಕ್ಟೀರಿಯಾಗಳು ಕಿರಿಕಿರಿಯನ್ನುಂಟು ಮಾಡುತ್ತವೆ. ಅಲ್ಲದೆ ವಿಪರೀತವಾದ ನೋವು ಉಂಟಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಚಳಿಗಾಲದಲ್ಲಿ ಆದಷ್ಟು ಕಿವಿಯನ್ನು ಬೆಚ್ಚಗಿಟ್ಟುಕೊಳ್ಳಲು ಮತ್ತು ಹತ್ತಿಯಿಂದ ಮುಚ್ಚಿಕೊಳ್ಳಲು ಸಲಹೆ ನೀಡಲಾಗುತ್ತದೆ.

ಧೂಮಪಾನವನ್ನು ತಪ್ಪಿಸಿ

ಧೂಮಪಾನವನ್ನು ತಪ್ಪಿಸಿ

ಧೂಮಪಾನವು ಆರೋಗ್ಯಕ್ಕೆ ಹಾನಿಕಾರಕ. ಚಳಿಗಾಲದಲ್ಲಿ ಧೂಮಪಾನ ಮಾಡುವುದರಿಂದ ಯುಸ್ಟಾಚಿಯನ್ ಟ್ಯೂಬ್‌ಗೆ ಉರಿಯೂತ ಉಂಟಾಗುವ ಸಾಧ್ಯತೆಗಳಿರುತ್ತವೆ. ಇದು ನಿಮ್ಮ ಕೇಳುವಿಕೆಯ ಮೇಲೆ ಪರಿಣಾಮ ಬೀರಬಹುದು. ಸಮಯಕ್ಕೆ ಕಾಳಜಿ ವಹಿಸದಿದ್ದಲ್ಲಿ ಇದು ಶಾಶ್ವತ ಕಿವುಡುತನಕ್ಕೆ ಕಾರಣವಾಗಬಹುದು.

ಆರೋಗ್ಯಕರ ಆಹಾರ

ಆರೋಗ್ಯಕರ ಆಹಾರ

ಆರೋಗ್ಯಕರ ಆಹಾರ ಸೇವನೆಯು ಬಹಳ ಮುಖ್ಯ. ವಿಶೇಷವಾಗಿ ಚಳಿಗಾಲದಲ್ಲಿ ಸೂಕ್ತ ಆಹಾರ ಸೇವನೆಯ ವಿಧಾನವನ್ನು ನಾವು ಅರಿತಿರಬೇಕು. ಆಹಾರದ ಆಯ್ಕೆಯಿಂದ ಸೋಂಕನ್ನು ತಡೆಗಟ್ಟಬಹುದು. ಒಂದು ಆರೋಗ್ಯಕರ ಆಹಾರವು ಸ್ಥಿರವಾದ ರಕ್ತಪರಿಚಲನೆಯು ಖಾತರಿಪಡಿಸುತ್ತದೆ ಮತ್ತು ಸೋಂಕಿನಿಂದ ನಿಮ್ಮನ್ನು ದೂರವಿರಿಸುತ್ತದೆ.

ನಿಯಮಿತ ವ್ಯಾಯಾಮ

ನಿಯಮಿತ ವ್ಯಾಯಾಮ

ಚಳಿಗಾಲದ ಸಮಯದಲ್ಲಿ ಆರೋಗ್ಯಕರ ಆಹಾರದ ಜೊತೆಗೆ ನಿಯಮಿತವಾದ ವ್ಯಾಯಾಮ ವಿಶೇಷವಾಗಿ ಅತ್ಯಗತ್ಯವಾಗಿರುತ್ತದೆ. ಇದು ಉತ್ತಮ ರಕ್ತ ಪರಿಚಲನೆಯನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ಆರೋಗ್ಯ ಪೂರ್ಣರನ್ನಾಗಿ ಇರಿಸುತ್ತದೆ. ವ್ಯಾಯಾಮ ಜಿಮ್, ವಾಕಿಂಗ್, ಜಾಗಿಂಗ್, ಸೈಕ್ಲಿಂಗ್ ಗಳನ್ನು ದಿನದಲ್ಲಿ 30 ನಿಮಿಷಗಳಕಾಲ ಮಾಡುವುದರಿಂದ ಆರೋಗ್ಯಕರವಾಗಿ ಇರಬಹುದು.

ವೈಯಕ್ತಿಕ ನೈರ್ಮಲ್ಯ

ವೈಯಕ್ತಿಕ ನೈರ್ಮಲ್ಯ

ನೀವು ಆರೋಗ್ಯಕರವಾಗಿ ಉಳಿಯಲು ಮತ್ತು ಸೋಂಕಿನಿಂದ ಪಾರಾಗಲು ಬಯಸಿದರೆ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ತಿನ್ನುವ ಮೊದಲು ನಿಮ್ಮ ಕೈಗಳನ್ನು ತೊಳೆಯುವ ಪರಿ ಶೀತ ಮತ್ತು ಅಲರ್ಜಿಯನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಶೀತ ಮತ್ತು ಅಲರ್ಜಿಯ ಕಾರಣದಿಂದಾಗಿ ದ್ರವಗಳು ಕಿವಿಗೆ ಸಿಕ್ಕಿಬೀಳುತ್ತವೆ ಮತ್ತು ಕಿವಿ ಸೋಂಕುಗಳಿಗೆ ಕಾರಣವಾಗಬಹುದು. ಇದು ಕಿವಿಯ ನೋವಿಗೆ ಕಾರಣವಾಗಬಹುದು ಮತ್ತು ಕೇಳುವಲ್ಲಿ ತೊಂದರೆ ಉಂಟುಮಾಡಬಹುದು.

ಉತ್ತಮ ನಿದ್ರೆ

ಉತ್ತಮ ನಿದ್ರೆ

ಆರೋಗ್ಯಕರ ಆಹಾರದ ಜೊತೆಗೆ ಉತ್ತಮ ನಿದ್ರೆ ಅತ್ಯಗತ್ಯ. ನಿಮ್ಮ ನಿರೋಧಕ ವ್ಯವಸ್ಥೆಯನ್ನು ನಿರ್ಮಿಸಲು ಮತ್ತು ಸೋಂಕನ್ನು ತಡೆಗಟ್ಟಲು ಒಳ್ಳೆಯ ನಿದ್ರೆ ಸಹಾಯ ಮಾಡುತ್ತದೆ. ಕಿವಿ ಮತ್ತು ಸೋಂಕುಗಳಿಗೆ ಯಾವುದೇ ರೀತಿಯ ಕಿರಿಕಿರಿಯನ್ನು ತಡೆಗಟ್ಟಲು ಶೀತ, ಕೆಮ್ಮು, ಅಲರ್ಜಿಗಳು ಮತ್ತು ಜ್ವರವನ್ನು ದೂರವಿರಿಸಲು ಇದು ಬಹಳ ಮುಖ್ಯ.

ಅನಾರೋಗ್ಯದಿಂದ ಬಳಲುತ್ತಿರುವ ಜನರನ್ನು ದೂರವಿಡಿ

ಅನಾರೋಗ್ಯದಿಂದ ಬಳಲುತ್ತಿರುವ ಜನರನ್ನು ದೂರವಿಡಿ

ಜ್ವರವು ಸಾಂಕ್ರಾಮಿಕವಾಗಿದ್ದು, ಶೀತ ಮತ್ತು ಇತರ ವೈರಲ್ ಸೋಂಕುಗಳಿಂದ ಬಳಲುತ್ತಿರುವ ಜನರಿಂದ ದೂರವಿರಬೇಕು. ಏಕೆಂದರೆ ಜ್ವರವನ್ನು ನಿಭಾಯಿಸಲು ನಿಮಗೆ ಸಾಧ್ಯತೆಗಳಿವೆ. ಇದರಿಂದಾಗಿ ಕಿವಿ ಸೋಂಕುಗಳು ಉಂಟಾಗಬಹುದು.

ವೈದ್ಯರನ್ನು ಸಂಪರ್ಕಿಸಿ

ವೈದ್ಯರನ್ನು ಸಂಪರ್ಕಿಸಿ

ಕಿವಿಗಳಲ್ಲಿನ ನೋವು ಮತ್ತು ಕಿರಿಕಿರಿಯು ದೀರ್ಘಕಾಲದವರೆಗೆ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಿ ಮತ್ತು ಅಗತ್ಯವಿರುವ ವೈದ್ಯಕೀಯ ಮಧ್ಯಸ್ಥಿಕೆ ತೆಗೆದುಕೊಳ್ಳುವುದು ಉತ್ತಮ. ಅದನ್ನು ಪರಿಶೀಲಿಸದೆ ಬಿಟ್ಟರೆ ಇತರ ಗಂಭೀರ ಕಿವಿ ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ಕಿವುಡುತನವನ್ನು ಉಂಟುಮಾಡಬಹುದು.

For Quick Alerts
ALLOW NOTIFICATIONS
For Daily Alerts

    English summary

    Ultimate Ways To Prevent Ear Infections This Winter

    Winter might bring that much-needed respite and chill to have that cozy coffee time, but, this isn't all. Along with the chill, it brings with it a host of infections and diseases as well. If not taken care of on time, then it might lead to serious health issues. Firstly, let us understand why ear infections increase during winters.Listed here are a few of the best ways to prevent an ear infection during the winters. Take a look.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more