ಯಾವ್ಯಾವ ಜನರಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಿದೆ?

Posted By: Lekhaka
Subscribe to Boldsky

ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯವಿದ್ದರೆ ಎಲ್ಲವೂ ಇದ್ದಂತೆ ಎನ್ನುವುದು ಇದರ ಅರ್ಥ. ಹೆಚ್ಚಿನವರು ಇಂದಿನ ದಿನಗಳಲ್ಲಿ ಹಣದ ಹಿಂದೆ ಓಡಲು ಆರಂಭಿಸಿ ಆರೋಗ್ಯದ ಬಗ್ಗೆ ಗಮನಹರಿಸುವುದನ್ನೇ ಬಿಟ್ಟಿರುತ್ತಾರೆ. ಇದು ಮಾಡುವಂತಹ ದೊಡ್ಡ ತಪ್ಪು. ಯಾಕೆಂದರೆ ಆರೋಗ್ಯಕೈಕೊಟ್ಟರೆ ಮುಂದೆ ಎಲ್ಲವೂ ತಟಸ್ಥವಾಗಬಹುದು. ಕೆಲವೊಂದು ಸಲ ಸಣ್ಣ ತಲೆನೋವು ಕಾಣಿಸಿಕೊಂಡರೂ ನಮ್ಮ ದೈನಂದಿನ ಜೀವನದ ಮೇಲೆ ಅದು ಪರಿಣಾಮ ಬೀರುತ್ತದೆ.

ಯಾಕೆಂದರೆ ನಾವು ಮಾಡುವಂತಹ ಪ್ರತಿಯೊಂದು ಕೆಲಸಕ್ಕೂ ಅದು ಅಡ್ಡಿಯಾಗುತ್ತಾ ಇರುತ್ತದೆ. ಆದರೆ ದೊಡ್ಡ ಮಟ್ಟದ ರೋಗಗಳಿಂದ ಬಳಲುತ್ತಾ ಇರುವವರ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಲು ಕಷ್ಟವಾಗುವುದು. ಯಾಕೆಂದರೆ ಅವರಿಗೆ ದಿನನಿತ್ಯದ ಜೀವನವೇ ತುಂಬಾ ಕಷ್ಟವಾಗಿರುತ್ತದೆ.

ಉದಾಹರಣೆಗೆ ಕ್ಯಾನ್ಸರ್ ನಿಂದ ಬಳಲುತ್ತಾ ಇರುವವರಿಗೆ ಸರಿಯಾಗಿ ತಿನ್ನಲು ಆಗಲ್ಲ, ಯಾವುದೇ ದೈಹಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸಲು ಅವರಿಗೆ ಸಾಧ್ಯವಾಗಲ್ಲ. ಇದರಿಂದ ಕಾಯಿಲೆಗಳು ಬರದಂತೆ ತಡೆಯುವುದು ಅತೀ ಅಗತ್ಯ. ಬಂದ ಮೇಲೆ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಬರದೇ ಇರುವಂತೆ ನೋಡಿಕೊಂಡರೆ ತುಂಬಾ ಒಳ್ಳೆಯದು. ಪ್ರತಿಯೊಂದು ರೋಗ ಮತ್ತು ಅದರ ಲಕ್ಷಣಗಳು ಒಂದೇ ರೀತಿಯಾಗಿರುವುದಿಲ್ಲ.

ಮುಟ್ಟಿನ ಅವಧಿಯಲ್ಲಿ ಕಾಡುವ 'ಹೆಪ್ಪುಗಟ್ಟಿರುವ ರಕ್ತದ' ಸಮಸ್ಯೆ! ಯಾಕೆ ಹೀಗೆ?

ಒಂದೊಂದು ರೋಗಗಳು ಒಂದೊಂದು ರೀತಿಯಲ್ಲಿರುತ್ತದೆ. ಹೆಚ್ಚಿನವರಿಗೆ ಹೃದಯಾಘಾತ ಮತ್ತು ಪಾರ್ಶ್ವವಾಯು ಸಂಭವಿಸುತ್ತದೆ. ಇದು ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಉಂಟಾಗುತ್ತದೆ. ಅಪಧಮನಿಗಳಲ್ಲಿ ರಕ್ತವು ದಪ್ಪವಾಗಿ ಗಟ್ಟಿಯಾದಾಗ ರಕ್ತವು ಹೆಪ್ಪುಗಟ್ಟುವುದು. ಇದರಿಂದ ದೇಹದ ಇತರ ಭಾಗಗಳಿಗೆ ರಕ್ತ ಸರಬರಾಜು ಸರಿಯಾಗಿ ಆಗುವುದಿಲ್ಲ. ಯಾವೆಲ್ಲಾ ವ್ಯಕ್ತಿಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆಯು ಹೆಚ್ಚಾಗಿರುವುದು ಎಂದು ಇಲ್ಲಿ ನಾವು ತಿಳಿದುಕೊಳ್ಳುವ....

ಅತಿಯಾದ ತೂಕ ಹೊಂದಿರುವವರಲ್ಲಿ

ಅತಿಯಾದ ತೂಕ ಹೊಂದಿರುವವರಲ್ಲಿ

ನಿಮ್ಮ ದೇಹದ ತೂಕ ನಿಗದಿಗಿಂತ ಹೆಚ್ಚಾಗಿದ್ದರೆ ದೇಹದಲ್ಲಿ ಕೊಬ್ಬು ಬೆಳೆದು ನೀವು ಅತಿಯಾದ ತೂಕ ಬೆಳೆಸಿಕೊಂಡಿದ್ದೀರಿ ಎಂದು ಹೇಳಬಹುದು. ಇಂತಹ ಜನರಲ್ಲಿ ರಕ್ತ ಹೆಪ್ಪುಗಟ್ಟುವಂತಹ ಸಮಸ್ಯೆಯು ಹೆಚ್ಚಾಗಿರುವುದು. ಕೊಬ್ಬಿನ ಕೋಶಗಳು ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುವುದು.

ಧೂಮಪಾನ ಮಾಡುವವರು

ಧೂಮಪಾನ ಮಾಡುವವರು

ನಿಯಮಿತವಾಗಿ ಧೂಮಪಾನ ಮಾಡುವುದರಿಂದ ಅದು ಅರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಆದರೆ ಇದರಿಂದ ಕೂಡ ರಕ್ತ ಹೆಪ್ಪುಗಟ್ಟುವುದು ಎಂದು ನಮಗೆ ತಿಳಿದಿಲ್ಲ. ಸಿಗರೇಟಿನಲ್ಲಿ ಇರುವಂತಹ ವಿಷಕಾರಿ ಅಂಶಗಳು ಮತ್ತು ನಿಕೋಟಿನ್ ರಕ್ತದ ಕೋಶಗಳನ್ನು ಗಟ್ಟಿಗೊಳಿಸುವುದು ಮತ್ತು ಅಪಧಮನಿಗಳಲ್ಲಿ ಸಂಕೋಚನ ಉಂಟುಮಾಡುವುದು. ಇದರಿಂದ ರಕ್ತ ಹೆಪ್ಪುಗಟ್ಟುವುದು.

ಗರ್ಭಿಣಿ ಮಹಿಳೆಯರಲ್ಲಿ

ಗರ್ಭಿಣಿ ಮಹಿಳೆಯರಲ್ಲಿ

ಗರ್ಭಧಾರಣೆಯ ವೇಳೆ ಮಹಿಳೆಯರಲ್ಲಿ ಹಲವಾರು ರೀತಿಯ ಹಾರ್ಮೋನು ಬದಲಾವಣೆಗಳು ಮತ್ತು ಏರುಪೇರುಗಳು ಉಂಟಾಗುತ್ತದೆ. ಗರ್ಭಿಣಿ ಮಹಿಳೆಯರಲ್ಲಿ ಒಸ್ಟ್ರೋಜನ್ ಹಾರ್ಮೋನು ಬಿಡುಗಡೆ ಹೆಚ್ಚಾಗಿರುವುದು. ಕೆಲವು ಮಹಿಳೆಯರಲ್ಲಿ ಒಸ್ಟ್ರೋಜನ್ ರಕ್ತ ಗಟ್ಟಿಯಾಗಲು ಕಾರಣವಾಗುವುದು ಮತ್ತು ಇದರಿಂದ ರಕ್ತ ಹೆಪ್ಪುಗಟ್ಟುವುದು.

ಅಸಹಜವಾದ ರಕ್ತಹೆಪ್ಪುಗಟ್ಟುವಿಕೆಯ ಬಗ್ಗೆ ಎಚ್ಚರವಿರಲಿ

ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುವವರು

ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುವವರು

ಕೆಲವು ಮಹಿಳೆಯರಿಗೆ ಮದುವೆಯಾದ ತಕ್ಷಣವೇ ಮಗು ಬೇಡವೆಂದಿರುತ್ತದೆ. ಇಂತಹ ಸಮಯದಲ್ಲಿ ಅವರು ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವರು. ಗರ್ಭ ನಿರೋಧಕ ಮಾತ್ರೆಗಳು ದೇಹದಲ್ಲಿ ಅಧಿಕ ಮಟ್ಟದ ಒಸ್ಟ್ರೋಜನ್ ಉಂಟು ಮಾಡುವುದು. ಇದರಿಂದ ರಕ್ತ ಘನೀಕರಿಸುವುದು.

ಉರಿಯೂತದ ಕಾಯಿಲೆ ಇರುವವರು

ಉರಿಯೂತದ ಕಾಯಿಲೆ ಇರುವವರು

ಹೃದಯ, ಶ್ವಾಸಕೋಶ, ಕಿಡ್ನಿ ಮತ್ತು ಇತರ ಕೆಲವೊಂದು ಭಾಗದ ಉರಿಯೂತದ ಸಮಸ್ಯೆ ಇರುವಂತವರಲ್ಲಿ ಉರಿಯೂತ ರಕ್ತನಾಳಗಳಿಗೆ ತಲುಪಿ ಅದರಿಂದ ರಕ್ತವು ಹೆಪ್ಪುಗಟ್ಟಬಹುದು.

ಸೋಂಕು ಇರುವವರು

ಸೋಂಕು ಇರುವವರು

ದೇಹದೊಳಗಿನ ಯಾವುದೇ ಭಾಗದಲ್ಲಿ ಸೋಂಕು ಇದ್ದರೆ, ಸೋಂಕನ್ನು ಉಂಟು ಮಾಡುವಂತಹ ಸೂಕ್ಷ್ಮಾಣು ಜೀವಿಗಳು ರಕ್ತನಾಳದೊಳಗೆ ಪ್ರವೇಶ ಮಾಡಿ ರಕ್ತವನ್ನು ಗಟ್ಟಿಗೊಳಿಸಬಹುದು. ಇದರಿಂದ ರಕ್ತವು ಹೆಪ್ಪುಗಟ್ಟುವುದು.

ದೀರ್ಘ ಕಾಲ ಕುಳಿತು ಕೆಲಸ ಮಾಡುವವರು

ದೀರ್ಘ ಕಾಲ ಕುಳಿತು ಕೆಲಸ ಮಾಡುವವರು

ನೀವು ತುಂಬಾ ದೀರ್ಘ ಕಾಲ ಕಂಪ್ಯೂಟರ್ ಮುಂದೆ ಅಥವಾ ಬೇರೆ ಯಾವುದೇ ಕೆಲಸಕ್ಕೆ ಕುಳಿತುಕೊಂಡೇ ಇದ್ದರೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯು ಹೆಚ್ಚಾಗಿರುವುದು. ಯಾಕೆಂದರೆ ಇದು ರಕ್ತ ಪರಿಚಲನೆಯನ್ನು ನಿರ್ಬಂಧಿಸುವುದು ಮತ್ತು ರಕ್ತವು ಗಟ್ಟಿಯಾಗುವುದರಿಂದ ರಕ್ತ ಹೆಪ್ಪುಗಟ್ಟುವುದು.

ಅನುವಂಶೀಯ

ಅನುವಂಶೀಯ

ಯಾವುದೇ ಕಾರಣವಿಲ್ಲದೆಯೂ ರಕ್ತ ಹೆಪ್ಪುಗಟ್ಟುವ ಸಾಧ್ಯತೆಗಳು ಇವೆ. ನಿಮ್ಮ ಕುಟುಂಬದಲ್ಲಿ ಯಾರಾದರೂ ರಕ್ತ ಹೆಪ್ಪುಗಟ್ಟಿರುವಂತಹ ಸಮಸ್ಯೆಗೆ ಗುರಿಯಾಗಿದ್ದರೆ ಆಗ ಆ ಸಮಸ್ಯೆಯು ನಿಮಗೂ ಬರುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಹಿಂದಿನ ಇತಿಹಾಸ

ಹಿಂದಿನ ಇತಿಹಾಸ

ನಿಮಗೆ ಹಿಂದೆ ಯಾವತ್ತಾದರೂ ರಕ್ತ ಹೆಪ್ಪುಗಟ್ಟಿದಂತಹ ಸಮಸ್ಯೆಯಾಗಿ ಅದಕ್ಕೆ ನೀವು ಚಿಕಿತ್ಸೆ ಪಡೆದುಕೊಂಡಿದ್ದರೆ ಮತ್ತೆ ನಿಮಗೆ ಇದೇ ರೀತಿಯ ಸಮಸ್ಯೆ ಕಾಡುವುದರಲ್ಲಿ ಸಂಶಯವೇ ಇಲ್ಲ.

ಕ್ಯಾನ್ಸರ್ ಸಮಸ್ಯೆಯಿಂದ ಬಳಲುವವರು

ಕ್ಯಾನ್ಸರ್ ಸಮಸ್ಯೆಯಿಂದ ಬಳಲುವವರು

ಮೆದುಳು, ಕಿಡ್ನಿ, ಲಂಗ್ಸ್, ಹೊಟ್ಟೆಯ ಕ್ಯಾನ್ಸರ್ ಇರುವವರಿಗೆ ಬ್ಲಡ್ ಕ್ಲಾಟ್ ಆಗುವ ಸಂದರ್ಬ ಹೆಚ್ಚು. ಕ್ಯಾನ್ಸರ್ ನಿಮ್ಮ ಬ್ಲಡ್ ವೆಸಲ್ಸ್ ಗಳನ್ನು ಡ್ಯಾಮೇಜ್ ಮಾಡುತ್ತೆ. ಬ್ಲಡ್ ಕ್ಲಾಟ್ ಆಗದಂತೆ ತಡೆಯುವ ಪ್ರೋಟೀನ್ ಗಳ ಉತ್ಪತ್ತಿಯನ್ನು ನಿಯಂತ್ರಿಸುತ್ತೆ.ಅದರಲ್ಲೂ ಬ್ಲಡ್ ಕ್ಯಾನ್ಸರ್ ಸಮಸ್ಯೆ ಇರುವವರಿಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅವರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿ ಕಂಡುಬಂದೇ ಬರುತ್ತೆ. ಇಂತಹ ಕೇಸ್ ಗಳಲ್ಲಿ ವೈದ್ಯರ ಮಾರ್ಗದರ್ಶನವಿಲ್ಲದೇ ಏನನ್ನೂ ಮಾಡಲು ಸಾಧ್ಯವಿಲ್ಲ.

ಹಳೆಯ ಆಪರೇಷನ್‌ಗಳು

ಹಳೆಯ ಆಪರೇಷನ್‌ಗಳು

ಕೆಲವು ಸಂದರ್ಭದಲ್ಲಿ, ಕೆಲವರಿಗೆ ಅವರ ಜೀವನದಲ್ಲಿ ನಡೆದ ಹಳೆಯ ಯಾವುದೋ ಆಪರೇಷನ್ ಕಾರಣವೇ ಇಲ್ಲದೇ ಬ್ಲಡ್ ಕ್ಲಾಟ್ ಸಮಸ್ಯೆಗೆ ಕಾರಣವಾಗಬಹುದು. ಉದಾಹರಣೆಗೆ ಮೂಳೆ ಪ್ರಾಕ್ಚರ್ ಆದಾಗ ನಡೆದ ಆಪರೇಷನ್ ಇತ್ಯಾದಿಗಳು ಭವಿಷ್ಯದಲ್ಲಿ ಸುಮ್ಮನೇ ಕೂತಿದ್ದಾಗ ರಕ್ತ ಹಿಡಿದುಹೊಂಡಂತ ಫೀಲಿಂಗ್ ನೀಡಬಹುದು.

ನಿಮ್ಮ ವಯಸ್ಸು ಕೂಡ ಪ್ರಮುಖ ಪಾತ್ರ ವಹಿಸುತ್ತೆ

ನಿಮ್ಮ ವಯಸ್ಸು ಕೂಡ ಪ್ರಮುಖ ಪಾತ್ರ ವಹಿಸುತ್ತೆ

ಯಾವ ವಯಸ್ಸಲ್ಲಿ ಬೇಕಾದ್ರೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದ್ರೆ 60 ರ ನಂತ್ರ ಈ ಸಮಸ್ಯೆ ಹೆಚ್ಚೆಂದು ಹೇಳ್ಬಹುದು. ಡಾಕ್ಟರ್ ಬಳಿ ಕಾಲಕಾಲಕ್ಕೆ ಸರಿಯಾಗಿ ಚೆಕ್ ಅಪ್ ಮಾಡಿಸಿಕೊಳುತ್ತಾ ಇರಬೇಕು, ನಿಮ್ಮ ಲೈಫ್ ಸ್ಟೈಲ್ ಮತ್ತು ನಿಮ್ಮ ಆಹಾರ ರಕ್ತಸಂಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತೆ.ಉತ್ತಮ ಆಹಾರ ಸೇವನೆಯಿಂದ ರಕ್ತದ ಪರಿಚಲನೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯಯುತವಾದ ಜೀವನ ನಡೆಸಲು ಸಾಧ್ಯವಾಗುತ್ತೆ.

ಇರ್ರೆಗ್ಯುಲರ್ ಹಾರ್ಟ್ ಬೀಟ್

ಇರ್ರೆಗ್ಯುಲರ್ ಹಾರ್ಟ್ ಬೀಟ್

ಹುಟ್ಟಿದಾಗಿನಿಂದ ಸಾಯೋತನಕ ಹೃದಯ ಲಬ್ ಡಬ್ ಅಂತ ಬಡ್ಕೊಳ್ತಾನೆ ಇರುತ್ತಲ್ಲ ಅಂತ ನೀವು ಹೇಳ್ಬಹುದು. ನಿಜ ನೀವು ಹೇಳೋದು ಕರೆಕ್ಟ್ ಬಡ್ಕೊಳ್ತಾನೆ ಇರುತ್ತೆ. ಇರ್ರೆಗ್ಯುಲರ್ ಹಾರ್ಟ್ ಬೀಟ್ ಅಂದ್ರೆ ಸಿಂಪಲ್ ಭಾಷೆಯಲ್ಲಿ ಹೇಳೋದಾದ್ರೆ ಒಮ್ಮೊಮ್ಮೆ ಸ್ಲೋ, ಒಮ್ಮೊಮ್ಮೆ ಫಾಸ್ಟ್ ಆಗಿ ರಕ್ತಪಂಪಾಗುವಿಕೆ ಅಂತ ಹೇಳಬಹುದು. ಹೈ ಬ್ಲಡ್ ಪ್ರೆಷರ್, ಲೋ ಬ್ಲಡ್ ಪ್ರಷರ್ ಸಮಸ್ಯೆ ಅಂತಲೂ ಹೇಳ್ಬಹುದು. ಯಾರಲ್ಲಿ ಈ ಸಮಸ್ಯೆ ಇರುತ್ತೋ ಅಂತವರಿಗೆ ಆಗಾಗ ರಕ್ತ ಸಂಚಾರದಲ್ಲಿ ವ್ಯತ್ಯಯ ಕಾಣಿಸಿಕೊಳ್ಳಬಹುದು. ಬ್ಲಡ್ ಕ್ಲಾಟ್ ಆಗಿರಬಹುದು.

ಒಂದೇ ಪೊಸಿಷನ್‌ನಲ್ಲಿ ತುಂಬಾ ಸಮಯದವರೆಗೆ ಕುಳಿತುಕೊಳ್ಳೋದು

ಒಂದೇ ಪೊಸಿಷನ್‌ನಲ್ಲಿ ತುಂಬಾ ಸಮಯದವರೆಗೆ ಕುಳಿತುಕೊಳ್ಳೋದು

ಯಾರು ಒಂದೇ ಪೊಸಿಷನ್ ನಲ್ಲಿ ಗಂಟೆಗಳ ಕಾಲ ಕುಳಿತುಕೊಂಡಿರ್ತಾರೋ ಅಂತವರಿಗೆ ರಕ್ತ ಸಂಚಾರ ವ್ಯತ್ಯಯವಾಗುತ್ತೆ. ಹಾಗಾಗಿ ಕುಳಿತುಕೊಂಡಾಗ ಅಥವಾ ನೀವೇನೇ ಕೆಲಸ ನಿರ್ವಹಿಸುತ್ತಿರುವಾಗ ಆದಷ್ಟು ಒಂದೇ ಪೊಸಿಷನ್‌ನಲ್ಲಿ ತುಂಬಾ ಸಮಯದವರೆಗೆ ಇರಬೇಡಿ. ಕಾಲು ಮರಗಟ್ಟುವುದು, ಝುಮ್ ಅನ್ನುವ ಸಮಸ್ಯೆಗೆ ಕಾರಣವೇ ಈ ಬ್ಲಡ್ ಕ್ಲಾಟಿಂಗ್.. ರಕ್ತಸಂಚಾರದಲ್ಲಿ ವ್ಯತ್ಯಯವಾದಾಗ ಹೀಗಾಗುವುದು ಸಹಜ.

English summary

Types Of People Who Are Prone To Blood Clots

Imagine this, you have a viral fever which requires you to get a blood test done, but you also have an important presentation to prepare for work. Now, most of us would definitely go in for the blood test and leave the presentation for later, right? That is because we prioritise our health over many other things in life! Making health one of your priorities is a good thing because without good health, it is very hard to enjoy a quality life.
Please Wait while comments are loading...
Subscribe Newsletter